Site icon Vistara News

Lok Sabha Election 2024: ಸಿದ್ದರಾಮಯ್ಯ ಹಿಂದೆ ಏನಿದೆ? ಹಿಂದೆಲ್ಲ ನೋಡಬೇಡ ಅಂದ್ರಾ ಸಿಎಂ?

Lok Sabha Election 2024 BJP posts cartoon against Siddaramaiah over Centre grant

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಎದುರಾಳಿಗಳ ಮೇಲೆ ವಾಗ್ಬಾಣವನ್ನೇ ಸುರಿಸುತ್ತಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಅವರ ಸಚಿವ ಸಂಪುಟ ಸದಸ್ಯರು ಪ್ರತಿ ಭಾಷಣದ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿದೆ. ಅದೇ ರೀತಿ ರಾಜ್ಯ ಬಿಜೆಪಿ (BJP Karnataka) ನಾಯಕರು, ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ಎದುರಿಡುತ್ತಿದ್ದಾರೆ. ಇದೇ ವೇಳೆ ರಾಜ್ಯ ಬಿಜೆಪಿ ಘಟಕವು ಸಿಎಂ ಸಿದ್ದರಾಮಯ್ಯ ವಿರುದ್ಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್‌ ಮಾಡಿ ಕಾಲೆಳೆದಿದೆ. ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಸಿಎಂಗೆ ಕಾರ್ಟೂನ್‌ ಮೂಲಕ ತಿರುಗೇಟು ನೀಡಿದೆ.

ಸುಳ್ಳು ಹೇಳುವುದರಲ್ಲಿ ಸದಾ ಸಿದ್ದ “ಹಸ್ತ”ರು”

“ಸುಳ್ಳು ಹೇಳಿ ಜನರನ್ನು ವಂಚಿಸುವುದರಲ್ಲಿ ಸದಾ ಸಿದ್ದ “ಹಸ್ತ”ರು” ಎಂಬ ಶೀರ್ಷಿಕೆಯಡಿ ಕಾರ್ಟೂನ್‌ ಅನ್ನು ಪೋಸ್ಟ್‌ ಮಾಡಲಾಗಿದೆ. ಇದರಲ್ಲಿ “ಸುಳ್ಳು ಕಾಂಗ್ರೆಸ್‌ನ ಮನೆ ದೇವರು ಎಂದು ಹೇಳಲಾಗಿದೆ. ಜತೆಗೆ ಕೇಂದ್ರದಿಂದ ಅನುದಾನ ಬಂದಿಲ್ಲ ಎಂಬ ಬೋರ್ಡ್‌ವೊಂದನ್ನು ಸಿಎಂ ಸಿದ್ದರಾಮಯ್ಯ ಬಗ್ಗಿ ಹಿಡಿದು ನಿಂತಿರುವಂತೆ ಚಿತ್ರ ಬಿಡಿಸಲಾಗಿದೆ. ಅವರ ಇನ್ನೊಂದು ಕೈಯಲ್ಲಿ ಕೇಂದ್ರ ಅನುದಾನದ ಮೂಟೆಯನ್ನು ಹೊತ್ತಿದ್ದು, ಬೆನ್ನ ಹಿಂದೆ ಇರುವಂತೆ ಚಿತ್ರಿಸಲಾಗಿದೆ. ಅದಕ್ಕೆ ಜನಸಾಮಾನ್ಯನೊಬ್ಬ ಹಿಂದಗಡೆ ಏನೋ ಇದೆಯಲ್ಲಾ? ಎಂದು ಪ್ರಶ್ನೆ ಮಾಡುತ್ತಾನೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡುವ ಸಿಎಂ ಸಿದ್ದರಾಮಯ್ಯ, ಕೇವಲ ಈ ಬೋರ್ಡ್‌ ಮಾತ್ರ ಓದು, ಹಿಂದಗಡೆ ನೋಡಬೇಡ…” ಎಂದು ಹೇಳುವಂತೆ ವ್ಯಂಗ್ಯಚಿತ್ರವನ್ನು ಬಿಡಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ರೆಸಾರ್ಟ್‌ನಲ್ಲಿ ಮೂರು ರಾತ್ರಿ, ಎರಡು ಹಗಲು ಸಿಎಂ ಸಿದ್ದರಾಮಯ್ಯ ಮಾಡಿದ್ದೇನು?

Lok Sabha Election 2024 BJP posts cartoon against Siddaramaiah over Centre grant

ಆರೋಪ – ತಿರುಗೇಟು

ಕೇಂದ್ರದಿಂದ ಎನ್‌ಡಿಆರ್‌ಎಫ್‌ ನಿಧಿ ಬಂದಿಲ್ಲ. ಇದು ರಾಜ್ಯದ ಹಕ್ಕಾಗಿದೆ ಎಂದು ಪದೇ ಪದೆ ಆರೋಪ ಮಾಡುತ್ತಾ ಬಂದಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಇಡೀ ಸಂಪುಟ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರನ್ನು ನವ ದೆಹಲಿಗೆ ಕರೆದೊಯ್ದು ಈಚೆಗೆ ಕೇಂದ್ರದ ವಿರುದ್ಧ ಪ್ರತಿಭಟನೆಯನ್ನು ಮಾಡಿದ್ದರು.

ಇದಲ್ಲದೆ, ಪ್ರತಿ ಭಾಷಣದ ವೇಳೆಯೂ ಕೇಂದ್ರದಿಂದ ಅನುದಾನ ತಾರತಮ್ಯವಾಗಿದೆ ಎಂದು ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬರುತ್ತಿದ್ದಾರೆ. ಅದಲ್ಲದೆ, ಈಗ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರಕ್ಕೂ ಇಳಿದಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ ಪಾತಿವ್ರತ್ಯ ನಮಗೆ ಗೊತ್ತಿರೋದೇ: ಸಿ.ಟಿ. ರವಿ

ಕಾರ್ಟೂನ್‌ ಬರೆದು ಕುಹುಕ

ಯುಪಿಎ ಹಾಗೂ ಎನ್‌ಡಿಎ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬಿಡುಗಡೆಯಾದ ಅನುದಾನಗಳ ಪಟ್ಟಿ ಸಹಿತ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮೇಲೆ ಕಾರ್ಟೂನ್‌ ಬರೆದು ಬಿಜೆಪಿ ಕುಹುಕವಾಡಿದೆ.

Exit mobile version