ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರಗಳು ಶುರುವಾಗತೊಡಗಿವೆ. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Udupi Chikkamagaluru Lok Sabha constituency) ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (Jayaprakash Hegde) ಆಡಿದ ಮಾತು ಈಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಅವರಿಗೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ. ಹೀಗಾಗಿ ಅವರಿಗೆ ಮತ ಹಾಕಬೇಡಿ ಎಂದು ಹೇಳಿದ್ದನ್ನು ಖಂಡಿಸಿರುವ ಬಿಜೆಪಿ, ಕನ್ನಡ ಮಾತ್ರ ಬರುವುದು ತಪ್ಪೇ? ಎಂದು ಪ್ರಶ್ನೆ ಮಾಡಿದೆ. ಅಲ್ಲದೆ, ಇದರಿಂದ Lok Sabha Election 2024 BJP slams Jayaprakash Hegde for Anti Kannada remarksಕಾಂಗ್ರೆಸ್‌ನ ಅಸಲಿ ಮುಖ ಅನಾವರಣಗೊಂಡಿದೆ ಎಂದು ಹೇಳಿದೆ.
ಜಯಪ್ರಕಾಶ್ ಹೆಗ್ಡೆ ಅವರನ್ನು ಚುನಾವಣಾ ಕಣದಿಂದಲೇ ಮುಂದುವರಿಸಬಾರದು ಎಂದು ಬಿಜೆಪಿ ಕಿಡಿಕಾರಿದೆ. ಕನ್ನಡ ವಿರೋಧಿ ಜಯಪ್ರಕಾಶ್ ಹೆಗ್ಡೆ ಎಂದು ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ನಲ್ಲೀಗ ‘ಕೋ ಆಪರೇಷನ್’ ಪಾಲಿಟಿಕ್ಸ್! ಇದು ಡಿಕೆಶಿ ಮಾಸ್ಟರ್ ಸ್ಟ್ರೋಕ್
ಬಿಜೆಪಿ ಟ್ವೀಟ್‌ನಲ್ಲೇನಿದೆ?
“ಕನ್ನಡ ವಿರೋಧಿ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್‌ನ ಅಸಲಿ ಮುಖ ಅನಾವರಣಗೊಂಡಿದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯವೆಂದು ಉಸಿರಾಗಿಸಿಕೊಂಡ ಕೋಟಿ ಕೋಟಿ ಕನ್ನಡಿಗರಿಗೆ ಕಾಂಗ್ರೆಸ್ ಮಾಡಿದ ಅಪಮಾನವಿದು. ಮಾನ್ಯ ನಕಲಿ ಕನ್ನಡ ಪಂಡಿತರಾದ ಸಿಎಂ ಸಿದ್ದರಾಮಯ್ಯ ಸಾಹೇಬರೇ, ಇನ್ನೂ ಇಂತಹ ಕನ್ನಡ ವಿರೋಧಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯನ್ನು ಕಣದಲ್ಲಿ ಮುಂದುವರಿಸುತ್ತೀರಾ?
ಮಾತೃ ಭಾಷೆ ಕನ್ನಡವಾಗಿದ್ದರೆ, ಬೇರೆ ಭಾಷೆ ಬಾರದೆ ಇದ್ದರೆ ಸಂಸದರಾಗಲು ಯೋಗ್ಯರಲ್ಲ ಎನ್ನುವುದು ಕಾಂಗ್ರೆಸ್‌ನ ಮೊಂಡುವಾದವಾಗಿದೆ” ಎಂದು ಪೋಸ್ಟ್ ಮಾಡಿರುವ ಕರ್ನಾಟಕ ರಾಜ್ಯ ಬಿಜೆಪಿ ಘಟಕವು ನಮ್ಮ ಕನ್ನಡ ನಮ್ಮ ಹೆಮ್ಮೆ (NammaKannadaNammaHemme) ಎಂಬ ಟ್ಯಾಗ್‌ಲೈನ್ ಅನ್ನು ಸಹ ಹಾಕಿದೆ.
ಕನ್ನಡ ವಿರೋಧಿ ನಾಡ ದ್ರೋಹಿ @INCKarnataka ದ ಅಸಲಿ ಮುಖ ಅನಾವರಣಗೊಂಡಿದೆ.
— BJP Karnataka (@BJP4Karnataka) March 23, 2024
ಕನ್ನಡವೇ ಸತ್ಯ ಕನ್ನಡವೇ ನಿತ್ಯವೆಂದು ಉಸಿರಾಗಿಸಿಕೊಂಡ ಕೋಟಿ ಕೋಟಿ ಕನ್ನಡಿಗರಿಗೆ ಕಾಂಗ್ರೆಸ್ ಮಾಡಿದ ಅಪಮಾನವಿದು.
ಮಾನ್ಯ ನಕಲಿ ಕನ್ನಡ ಪಂಡಿತರಾದ @siddaramaiah ಸಾಹೇಬರೇ, ಇನ್ನೂ ಇಂತಹ ಕನ್ನಡ ವಿರೋಧಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯನ್ನು… pic.twitter.com/1ooQ7oC7LU
ಇದನ್ನೂ ಓದಿ: Lok Sabha Election 2024: ಐವರು ಕಾಂಗ್ರೆಸ್ ಕಾರ್ಯಾಧ್ಯಕ್ಷರ ನೇಮಕ; ಯಾರು ಔಟ್? ಯಾರು ಇನ್?
ಜಯಪ್ರಕಾಶ್ ಹೆಗ್ಡೆ ಹೇಳಿದ್ದೇನು?
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಪ್ರಚಾರ ಭಾಷಣದ ವೇಳೆ, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಗೆ ಹಿಂದಿ, ಇಂಗ್ಲಿಷ್ ಬರಲ್ಲ. ಹಾಗಾಗಿ ಅವರಿಗೆ ಮತ ಹಾಕಬೇಡಿ ಎಂದು ವಾಗ್ದಾಳಿ ನಡೆಸಿದ್ದರು. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.