Site icon Vistara News

Lok Sabha Election 2024: ಈಗ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಚೊಂಬು v/s ಚಿಪ್ಪು ಫೈಟ್ !

lok sabha election 2024 bjp vs congress

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರ ಕಣದಲ್ಲಿ ದೋಷಾರೋಪಣೆಗಳು ರಂಗೇರುತ್ತಿರುವಂತೆ, ಕಾಂಗ್ರೆಸ್‌ (congress) ಹಾಗೂ ಬಿಜೆಪಿ (BJP) ನಡುವೆ ಚೊಂಬು v/s ಚಿಪ್ಪು ಫೈಟ್ ಜೋರಾಗಿದೆ. ನಿನ್ನೆ ಹಾಗೂ ಮೊನ್ನೆ, ಕೇಂದ್ರದ ನರೇಂದ್ರ ಮೋದಿ (PM Narendra Modi) ಸರಕಾರ ಕರ್ನಾಟಕಕ್ಕೆ ʼಚೊಂಬು ನೀಡಿದೆʼ ಎಂದು ಕಾಂಗ್ರೆಸ್‌ ಲೇವಡಿ ಮಾಡಿತ್ತು.

ಕಾಂಗ್ರೆಸ್ ʼಚೊಂಬಿʼಗೆ, ಬಿಜೆಪಿ ʼಚಿಪ್ಪುʼ ಕೌಂಟರ್ ನೀಡಿದೆ. Xನಲ್ಲಿ ಕಾಂಗ್ರೆಸ್‌ಗೆ ಕೌಂಟರ್ ಕೊಟ್ಟಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ಹಲವು ಕಾರಣ ನೀಡಿ ಗುಡುಗಿದೆ:

“@INCKarnataka ಜನರ ಕೈಗೆ ಕೊಡುತ್ತಿರುವುದು ಖಾಲಿ ಚಿಪ್ಪು!
ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಜನರ ಕೈಗೆ ಚಿಪ್ಪು.
ಬರದಿಂದ ತತ್ತರಿಸಿದ ರೈತರಿಗೆ ಚಿಪ್ಪು ಕೊಟ್ಟ ಕಾಂಗ್ರೆಸ್.
ಆಟೋ, ಟ್ಯಾಕ್ಸಿ ಚಾಲಕರ ಕೈಗೆ ಚಿಪ್ಪು.
ದಲಿತರ ಕೈಗೆ 11 ಸಾವಿರ ಕೋಟಿ ಚಿಪ್ಪು.
ಕಾವೇರಿ ನೀರು ಬಿಟ್ಟು ಬೆಂಗಳೂರು ಜನತೆಗೆ ಚಿಪ್ಪು”

ಹೀಗೆ ಹಲವು ವಿಚಾರ ಉಲ್ಲೇಖ ಮಾಡಿ ʼಚಿಪ್ಪು ಕೊಟ್ಟ ಕಾಂಗ್ರೆಸ್ʼ ಎಂದು ಬಿಜೆಪಿ ಆಕ್ರೋಶ ತೋರಿಸಿದೆ. ಕಾಂಗ್ರೆಸ್‌ನ ಜಾಹೀರಾತು ತಂತ್ರಕ್ಕೆ ಬಿಜೆಪಿಯಿಂದ ಪೋಸ್ಟರ್ ವಾರ್ ಶುರು ಮಾಡಲಾಗಿದೆ.

ಚೊಂಬು ಚಿತ್ರ ಇರುವ ಪೋಸ್ಟರ್‌ನಲ್ಲಿ ಯುಪಿಎ ಹಗರಣಗಳು, ರಾಜ್ಯ ಸರ್ಕಾರದ ವೈಫಲ್ಯಗಳ‌ ವಿವರ ನೀಡಲಾಗಿದೆ. ಜನತೆಗೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್ ಎಂದು ಬಿಂಬಿಸುವ ಪೋಸ್ಟರ್‌ಗಳನ್ನು ಬಿಜೆಪಿ ಥರ್ಡ್ ಪಾರ್ಟಿ ಪ್ರಚಾರಕರಿಂದ ರಿಲೀಸ್ ಮಾಡಲಾಗಿದೆ.

ಜೊತೆಗೆ “ಕಾಂಗ್ರೆಸ್ ಡೇಂಜರ್” ಹೆಸರಲ್ಲಿ ಕೂಡ ಜಾಹೀರಾತು ನೀಡಿ ತಿರುಗೇಟು ನೀಡಲಾಗಿದೆ. ರಾಜ್ಯದಲ್ಲಿ ಆಗಿರುವ ಹಲವು ಘಟನೆಗಳ ಉಲ್ಲೇಖ ಮಾಡಿ ಜಾಹೀರಾತು ನೀಡಲಾಗಿದೆ.

ಹೀಗೆ ಹಲವು ಪ್ರಶ್ನೆಗಳನ್ನು ಬಿಜೆಪಿ ಎತ್ತಿದೆ. ʼದೇಶದ ಭದ್ರತೆಗಾಗಿ ಬಿಜೆಪಿಗೆ ಬೆಂಬಲಿಸಿʼ ಎಂದು ಪ್ರತಿಪಾದಿಸುವ ಜೊತೆಗೆ, ಕಾಂಗ್ರೆಸ್‌ ಅಧಿಕಾರದಿಂದ ಹಿಂದೂಗಳಿಗೆ ಅಪಾಯ ಎಂದು ಬಿಂಬಿಸುವ ಜಾಹೀರಾತುಗಳನ್ನು ಬಿಜೆಪಿ ನೀಡಿದೆ.

ಇದು ಸರಿಯಲ್ಲ: ಪರಮೇಶ್ವರ್‌

ಬಿಜೆಪಿ- ಕಾಂಗ್ರೆಸ್ ಜಾಹಿರಾತು ವಾರ್ ವಿಚಾರದಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವ ಪರಮೇಶ್ವರ್, “ಚುನಾವಣೆ ಅನ್ನೋದು ಯಾವತ್ತೂ ಈ ಮಟ್ಟಕ್ಕೆ ಹೋಗಬಾರದು” ಎಂದಿದ್ದಾರೆ. “ನಾವು ಇಲ್ಲಿಯವರೆಗೆ ಪರಸ್ಪರ ದ್ವೇಷ ಮಾಡೋದನ್ನ ನೋಡಿರಲಿಲ್ಲ. ಪ್ರಧಾನ ಮಂತ್ರಿಗಳೇ ಧರ್ಮದ ಆಧಾರದ ಮೇಲೆ ಮಾತಾಡ್ತಾ ಇದ್ದಾರೆ. ಒಂದು ದೇಶದ ಪ್ರಧಾನಿ ಈ ರೀತಿ ಮಾತನಾಡುವುದನ್ನ ನೋಡಿರಲಿಲ್ಲ. ಮತಕ್ಕಾಗಿ ಈ ರೀತಿ ದ್ವೇಷ ಭಾಷಣ ಮಾತಾನಾಡಿರೋದು ಸರಿಯಲ್ಲ. ಜನ ಯಾವ ರೀತಿ ಇದನ್ನ ತೆಗೆದುಕೊಳ್ತಾರೆ ನೋಡಬೇಕು. ಈ ಚುನಾವಣೆಯಲ್ಲಿ ಗೊತ್ತಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: Lok Sabha Election: ಮೋದಿಯಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು, ನಾವು ಗ್ಯಾರಂಟಿ ಮೂಲಕ ಸ್ಪಂದಿಸಿದ್ದೇವೆ: ಸಿಎಂ

Exit mobile version