Site icon Vistara News

Lok Sabha Election 2024: ದಕ್ಷಿಣ ಕನ್ನಡ ಕಾಂಗ್ರೆಸ್‌ ಅಭ್ಯರ್ಥಿಗೆ ಮೈತುಂಬಾ ಸಾಲ!

Lok Sabha Election 2024 Congress candidate from Dakshina Kannada Lok Sabha constituency is in huge debt

ಮಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಶುರುವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ (Dakshina Kannada Lok Sabha constituency) ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ (Padmaraj Ramayya) ಅವರು ಬುಧವಾರ (ಮಾ. 3) ನಾಮಪತ್ರವನ್ನು ಸಲ್ಲಿಸಿದ್ದಾರೆ. ಇವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾಲವಿದೆ. ಪದ್ಮರಾಜ್‌ ಅವರು ತಮ್ಮ ಆಸ್ತಿ ಮೌಲ್ಯದ ಶೇ. 75ರಷ್ಟು ಸಾಲವನ್ನು ಮಾಡಿಕೊಂಡಿದ್ದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಪದ್ಮರಾಜ್ ರಾಮಯ್ಯ ಒಬ್ಬರದ್ದೇ ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೊತ್ತ 1,48,01,445 ರೂಪಾಯಿ ಇದೆ. ಇವರ ಸ್ಥಿರ ಆಸ್ತಿಯ ಒಟ್ಟು ಮೊತ್ತ 83,10,000 ರೂಪಾಯಿ ಇದ್ದರೆ, ಚರಾಸ್ತಿಯ ಒಟ್ಟು ಮೊತ್ತ 64,91,045 ರೂಪಾಯಿ ಇದೆ. ಆದರೆ, ಇವರು 1,26,50,000 ರೂ. ಸಾಲವನ್ನು ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. 30 ಲಕ್ಷ ರೂಪಾಯಿ ಮೌಲ್ಯದ ಕಾರು ಲೋನ್ ಸೇರಿ ಇತರೆ ಸಾಲಗಳ ಮೌಲ್ಯ ಕೋಟಿ ರೂಪಾಯಿ ದಾಟುತ್ತದೆ. ಅಂದರೆ ಸ್ಥಿರ ಮತ್ತು ಚರಾಸ್ತಿ ಮೌಲ್ಯದ ಶೇ. 75ರಷ್ಟು ಸಾಲ ಹೊಂದಿದ್ದಾರೆ.

ಇನ್ನು ಪದ್ಮರಾಜ್ ರಾಮಯ್ಯ ಅವರ ಪತ್ನಿಯ ಚರಾಸ್ತಿಯ ಒಟ್ಟು ಮೊತ್ತ 35,36,141 ರೂಪಾಯಿ ಇದ್ದು, ಒಟ್ಟಾರೆ ಆಸ್ತಿ ಮೌಲ್ಯ 1,83,37,586 ರೂಪಾಯಿ ಇದೆ. ಪದ್ಮರಾಜ್‌ ಅವರು ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಬಿ.ಎ, ಎಲ್‌ಎಲ್‌ಬಿ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ.

ನಾಪಪತ್ರ ಸಲ್ಲಿಕೆ

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಅವರು ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು. ಸಚಿವ ದಿನೇಶ್ ಗುಂಡೂರಾವ್, ಬಿ.ಕೆ. ಹರಿಪ್ರಸಾದ್, ಮಂಜುನಾಥ್ ಭಂಡಾರಿ, ರಮಾನಾಥ್ ರೈ, ಅಭಯಚಂದ್ರ ಜೈನ್ ಸಾಥ್ ನೀಡಿದರು.

ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಪದ್ಮರಾಜ್ ಉಮೇದುವಾರಿಕೆಯನ್ನು ಸಲ್ಲಿಸಿದರು. ಪೂಜೆ ಮುಗಿಸಿ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಪದ್ಮರಾಜ್ ಅವರಿಗೆ ನಾಮಪತ್ರ ಸಲ್ಲಿಕೆ ವೇಳ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಸಾಥ್ ನೀಡಿದರು.

ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್ ಗೌಡರಿಗಿಂತ ಪತ್ನಿಯೇ ಶ್ರೀಮಂತೆ!

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ (Bengaluru North constituency) ಕಾಂಗ್ರೆಸ್‌ ಅಭ್ಯರ್ಥಿ ಪ್ರೊ. ಎಂ.ವಿ. ರಾಜೀವ್‌ ಗೌಡ (Prof MV Rajeev Gowda) ಅವರು ಬುಧವಾರ (ಮಾ. 4) ನಾಮಪತ್ರ ಸಲ್ಲಿಸಿದ್ದಾರೆ. ಇವರು ಈ ವೇಳೆ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ರಾಜೀವ್‌ ಗೌಡ ಅವರಿಗೆ 7,84,83,163 ರೂಪಾಯಿ ಚರಾಸ್ತಿ ಇದ್ದರೆ, 26,74,40,000 ರೂಪಾಯಿ ಸ್ಥಿರಾಸ್ತಿ ಇದೆ. ಒಟ್ಟು ಇವರ ಬಳಿ 34,59,23,163 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಆದರೆ, ಇವರಿಗಿಂತ ಪತ್ನಿಯೇ ಶ್ರೀಮಂತೆಯಾಗಿದ್ದು, ಒಟ್ಟು 99,43,11,229.32 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಭ್ಯರ್ಥಿ ರಾಜೀವ್‌ ಗೌಡ ಅವರು ಬುಧವಾರ ನಾಮಪತ್ರವನ್ನು ನೀಡಿದ್ದು, ಅವರ ಆಸ್ತಿ ವಿವರ ಲಭ್ಯವಾಗಿದೆ. ರಾಜೀವ್‌ ಗೌಡರ ಕೈಯಲ್ಲಿ 4 ಲಕ್ಷ ರೂಪಾಯಿ ನಗದು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ನಗದು 54 ಲಕ್ಷ ರೂಪಾಯಿ ಇದೆ ಎಂದು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಇದನ್ನೂ ಓದಿ: Lok Sabha Election 2024: ದೇಶವನ್ನು ಬಲಿಷ್ಠಗೊಳಿಸಿದ ಮೋದಿಗೆ ನನ್ನ ಬೆಂಬಲ ಎಂದ ಸುಮಲತಾ; ಏ. 5 ಅಥವಾ 6ಕ್ಕೆ ಬಿಜೆಪಿ ಸೇರ್ಪಡೆ

32 ಲಕ್ಷ ರೂಪಾಯಿ ಬೆಲೆಯ ಒಂದು ಕಾರನ್ನು ರಾಜೀವ್‌ ಗೌಡ ಹೊಂದಿದ್ದಾರೆ. ಷೇರು ಬಂಡವಾಳ ಹೂಡಿಕೆ, ಮ್ಯೂಚುವಲ್‌ ಫಂಡ್ ಹೂಡಿಕೆ ಸೇರಿದಂತೆ ಒಟ್ಟಾರೆ 7 ಕೋಟಿ 84 ಲಕ್ಷ ರೂಪಾಯಿ ಮೊತ್ತವನ್ನು ಅವರು ಹೂಡಿಕೆ ಮಾಡಿದ್ದಾರೆ. ರಾಜೀವ್‌ ಗೌಡರ ಬಳಿ ಚಿನ್ನ, ಬೆಳ್ಳಿ ಇಲ್ಲ. ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಕಟ್ಟಡ, ವಸತಿ ಕಟ್ಟಡ ಒಟ್ಟು 26.74 ಕೋಟಿ‌ ರೂಪಾಯಿ ಸ್ಥಿರಾಸ್ತಿಯನ್ನು 74 ಲಕ್ಷ ಆಸ್ತಿ ಹೊಂದಿರುವುದಾಗಿ ರಾಜೀವ್‌ ಗೌಡ ಹೇಳಿಕೊಂಡಿದ್ದಾರೆ.

ಯಾವುದೇ ಸಾಲ ಹೊಂದಿಲ್ಲ

ಇನ್ನು ರಾಜೀವ್‌ ಗೌಡ ಅವರು ತಾವು ಯಾವುದೇ ಸಾಲವನ್ನು ಹೊಂದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ, ಅರೆಕಾಲಿಕ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವುದಾಗಿಯೂ ಅವರು ಅಫಿಡವಿಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಚರಾಸ್ತಿ – 9,23,66,909 ರೂಪಾಯಿ ಮೌಲ್ಯ ಹಾಗೂ ಸ್ಥಿರಾಸ್ತಿ – 6,78,97,000 ರೂಪಾಯಿ ಮೌಲ್ಯ ಆಗಿದೆ ಎಂದು ಶೋಭಾ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಒಟ್ಟು 16.02 ಕೋಟಿ ಆಸ್ತಿಯು ಅವರ ಬಳಿ ಇದೆ.

4 ಕೋಟಿ ರೂಪಾಯಿ ಸಾಲವೂ ಇದೆ!

ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾಡಿದ ಸಾಲ ಮಾಡಿರುವ ಶೋಭಾ ಕರಂದ್ಲಾಜೆ ಅವರು ಒಟ್ಟು 4.06 ಕೋಟಿ ರೂಪಾಯಿ ಲೋನ್‌ ಮಾಡಿಕೊಂಡಿದ್ದಾರೆ. ಇವರ ಬಳಿ 1,71,000 ರೂಪಾಯಿ ನಗದು ಹಣವಿದೆ. ಇವರ ವಾರ್ಷಿಕ ಆದಾಯವು 2022-23ರ ಸಾಲಿನಲ್ಲಿ 24.90 ಲಕ್ಷ ರೂಪಾಯಿ ಇದೆ.

ಇದನ್ನೂ ಓದಿ: Lok Sabha Election 2024: ಎಚ್‌.ಡಿ. ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ತಾರಾ ದರ್ಶನ್?‌ ಏನಂದ್ರು ಸುಮಲತಾ?

1 ಕೆಜಿ ಚಿನ್ನದ ಬಿಸ್ಕೆಟ್‌ ಇದೆ!

ಶೋಭಾ ಕರಂದ್ಲಾಜೆ ಅವರ ಬಳಿ 1 ಕೆಜಿ ಚಿನ್ನದ ಬಿಸ್ಕಟ್ ಇದ್ದು, ಇದು ಸರಿಸುಮಾರು 68.40 ಲಕ್ಷ ರೂಪಾಯಿ ಮೌಲ್ಯವುಳ್ಳದ್ದಾಗಾಗಿದೆ. 650‌ ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ‌ಹಾಗೂ ಬೆಳ್ಳಿ ವಸ್ತುಗಳು ಇವೆ.

ಶೋಭಾ ಮೇಲಿದೆ 4 ಕೇಸ್‌

ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇದುವರೆಗೆ ದಾಖಲಾಗಿವೆ. ಇದರಲ್ಲಿ ಎರಡು ಕ್ರಿಮಿನಲ್ ಕೇಸ್‌ ಆಗಿದ್ದರೆ, 1 ಮಾನನಷ್ಟ ಮೊಕದ್ದಮೆಯಾಗಿದೆ.

Exit mobile version