ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಈಗಾಗಲೇ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು ಮೂರ್ನಾಲ್ಕು ದಿನದೊಳಗೆ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಆ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರುಗಳೂ ಇರಲಿವೆ. ಇತ್ತ ಕಾಂಗ್ರೆಸ್‌ನಲ್ಲಿ ಸಹ ಈಗ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಸಮಿತಿ ಸಭೆಯನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯಲಿದೆ. ಈಗಾಗಲೇ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಒಂದೆರಡು ಸುತ್ತಿನ ಸಭೆ ನಡೆಸಿ ಒಂದು ಹಂತದಲ್ಲಿ ಕಾಂಗ್ರೆಸ್ (Congress Karnataka) ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ. ಹೀಗಾಗಿ 28ಕ್ಕೆ 28 ಕ್ಷೇತ್ರಗಳಲ್ಲಿಯೂ ಯಾರನ್ನು ಅಭ್ಯರ್ಥಿಗಳನ್ನಾಗಿ ಮಾಡಬಹುದು ಎಂಬ ಲಿಸ್ಟ್ ಈಗ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಟಿಕೆಟ್ ಆಕಾಂಕ್ಷಿಗಳ ಹೆಸರಿನ ಪಟ್ಟಿ ಹಿಡಿದು ಇಂದು (ಗುರುವಾರ – ಮಾ. 7) ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಎರಡು- ಮೂರು ಸುತ್ತಿನ ಸಭೆ ನಡೆಸಿರುವ ಸಿಎಂ, ಡಿಸಿಎಂ ಆಕಾಂಕ್ಷಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದ್ದಾರೆ. ಅಲ್ಲದೆ, ಎರಡು, ಮೂರು ಹಂತಗಳಲ್ಲಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಗೊಂದಲವಿಲ್ಲದ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುವುದು. ಮೊದಲ ಹಂತದಲ್ಲಿ ರಾಜ್ಯದ 10-15 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
10-13 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯೇ ತಲೆ ನೋವಾಗಿ ಪರಿಣಮಿಸಿದೆ. ಕೆಲ ಕ್ಷೇತ್ರಗಳಲ್ಲಿ ತೀವ್ರವಾದ ಪೈಪೋಟಿ ಇದೆ. ಇನ್ನು ಕೆಲವು ಕಡೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ.
ಲೋಕಸಭೆ ಸಂಭಾವ್ಯರು ಮತ್ತು ಆಯ್ಕೆ ಲೆಕ್ಕಚಾರವೇನು?
1. ಚಿಕ್ಕೋಡಿ – (ಸಾಮಾನ್ಯ ಕ್ಷೇತ್ರ)
ಪ್ರಕಾಶ್ ಹುಕ್ಕೇರಿ / ಲಕ್ಷಣರಾವ್ ಚಿಂಗಳೆ
- ಜಾತಿ ಸಮೀಕರಣದ ಲೆಕ್ಕಚಾರದಲ್ಲಿರುವ ನಾಯಕರು
- ಲಿಂಗಾಯತ, ಕುರುಬ ಕಾಂಬಿನೇಷನ್ ಲೆಕ್ಕಾಚಾರ
- ಚಿಕ್ಕೋಡಿಗೆ ಲಿಂಗಾಯತರು ಎಂದಾದರೆ, ಬೆಳಗಾವಿಯಲ್ಲಿ ಅನ್ಯ ಜಾತಿಗೆ ಟಿಕೆಟ್
- ಕುರುಬರಿಗೆ ಎಂದಾದರೆ ಲಕ್ಷಣರಾವ್ ಚಿಂಗಳೆ ಅವರನ್ನು ಪರಿಗಣಸುವ ಸಾಧ್ಯತೆ
- ಬಹುತೇಕ ಪ್ರಕಾಶ್ ಹುಕ್ಕೇರಿಗೆ ಟಿಕೆಟ್ ಫೈನಲ್ ಆಗುವ ಸಾಧ್ಯತೆ
2. ಬೆಳಗಾವಿ (ಸಾಮಾನ್ಯ)
- ಕಿರಣ್ ಸಾಧುನವರ, ಮೃಣಾಲ್ ಹೆಬ್ಬಾಳ್ಕರ್, ಡಾ. ಗಿರೀಶ್ ಸೋನವಾಲ್ಕರ್, ಸಚಿವ ಸತೀಶ್ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ ಅವರ ಹೆಸರುಗಳು ಶಾರ್ಟ್ ಲಿಸ್ಟ್ನಲ್ಲಿದೆ
- ಮೃಣಾಲ್ ಹೆಬ್ಬಾಳ್ಕರ್, ಗಿರೀಶ್ ನಡುವೆ ಪೈಪೋಟಿ
- ಪುತ್ರನಿಗೆ ಟಿಕೆಟ್ ಪಡೆಯಲು ಲಕ್ಷ್ಮಿ ಹೆಬ್ಬಾಳ್ಕರ್ ಲಾಬಿ
- ಡಾ. ಗಿರೀಶ್ ಬೆನ್ನಿಗೆ ನಿಂತಿರುವ ಸತೀಶ್ ಜಾರಕಿಹೊಳಿ
3. ಉತ್ತರ ಕನ್ನಡ
- ಅಂಜಲಿ ನಿಂಬಾಳ್ಕರ್, ಆರ್.ವಿ. ದೇಶಪಾಂಡೆ
- ಅಂಜಲಿ ನಿಂಬಾಳ್ಕರ್ ಅವರು ಸ್ಪರ್ಧೆಗೆ ಉತ್ಸಾಹ ತೋರಿದ್ದಾರೆ. ಆದರೆ, ಆರ್.ವಿ. ದೇಶಪಾಂಡೆ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ
4. ಬಾಗಲಕೋಟೆ (ಸಾಮಾನ್ಯ)
- ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸರ್ನಾಯಕ್, ಆನಂದ್ ನ್ಯಾಮಗೌಡರ್ ನಡುವೆ ಪೈಪೋಟಿ
- ಪೈಪೋಟಿ ಹೆಚ್ಚಾಗಿರುವ ಕಾರಣಕ್ಕೆ ಹೈಕಮಾಂಡ್ ಅಂಗಳದಲ್ಲಿ ತೀರ್ಮಾನ ಆಗಲಿ ಎಂಬ ಅಭಿಪ್ರಾಯ
5. ವಿಜಯಪುರ (ಪರಿಶಿಷ್ಟ ಜಾತಿ ಮೀಸಲು)
- ರಾಜು ಆಲಗೂರ, ಕಾಂತಾ ನಾಯಕ್ ಹೆಸರು ಶಿಫಾರಸು
- ಕಾಂತಾ ನಾಯಕ್ಗೆ ಈಗಾಗಲೇ ನಿಗಮ ಮಂಡಳಿ ನೀಡಲಾಗಿದೆ
- ಆದ್ದರಿಂದ ಬಹುತೇಕ ರಾಜು ಆಲಗೂರುಗೆ ಟಿಕೆಟ್ ಸಾಧ್ಯತೆ
- ಹಾಲಿ ಸಂಸದ ರಮೇಶ್ ಜಿಗಜಿಣಗಿ ಕಾಂಗ್ರೆಸ್ ಅಭ್ಯರ್ಥಿ ಆಗಬಹುದು ಎಂಬ ಚರ್ಚೆಯೂ ಇದೆ
6. ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
- ಡಾ. ರಾಧಾಕೃಷ್ಣ ಹೆಸರು ಶಿಫಾರಸು
- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಲ್ಲ
- ಆದ್ದರಿಂದ ಕಲಬುರಗಿಯಿಂದ ಇವರೊಬ್ಬರ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿದೆ
7.. ರಾಯಚೂರು (ಪರಿಶಿಷ್ಟ ಪಂಗಡ ಮೀಸಲು)
- ರವಿಕುಮಾರ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕುಮಾರ ನಾಯಕ ನಡುವೆ ಪೈಪೋಟಿ
- ರವಿಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅಳಿಯ
- ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ಚರ್ಚೆ ನಡೆದಿದೆ.
- ಬಿ.ವಿ. ನಾಯಕ್ ಪ್ರಸ್ತುತ ಬಿಜೆಪಿಯಲ್ಲಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ ಎಂದರೆ ಕಾಂಗ್ರೆಸ್ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ ಎಂಬ ಚರ್ಚೆ ಇದೆ
8. ಬೀದರ್ (ಸಾಮಾನ್ಯ)
- ಮಾಜಿ ಶಾಸಕ ರಾಜಶೇಖರ್ ಪಾಟೀಲ್ (ಬಹುತೇಕ ಟಿಕೆಟ್ ಸಾಧ್ಯತೆ)
- ಸಾಗರ ಖಂಡ್ರೆ ಹೆಸರನ್ನೂ ಶಿಫಾರಸು ಮಾಡಲಾಗಿದೆ.
- ಪುತ್ರನಿಗೆ ಟಿಕೆಟ್ ಪಡೆಯಲು ಸಚಿವ ಈಶ್ವರ್ ಖಂಡ್ರೆ ಕಸರತ್ತು
- ನೀವೇ ಸ್ಪರ್ಧೆ ಮಾಡಿ ಎಂದು ಈಶ್ವರ್ ಖಂಡ್ರೆಗೆ ಹೈಕಮಾಂಡ್ ಸೂಚನೆ
- ಮತ್ತೊಂದೆಡೆ ರಾಜಶೇಖರ್ ಪಾಟೀಲ್ಗೆ ಸಿಎಂ, ಡಿಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ
9. ಕೊಪ್ಪಳ (ಸಾಮಾನ್ಯ)
- ರಾಜಶೇಖರ್ ಹಿಟ್ನಾಳ್, ಅಮರೇಗೌಡ ಭಯ್ಯಾಪುರ ಹೆಸರು ಶಿಫಾರಸುಗೊಂಡಿದೆ,
- ಕಳೆದ ಬಾರಿ ಸೋತರೂ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ
- ನನಗೆ ಟಿಕೆಟ್ ಬೇಕೆ ಬೇಕು ಎಂದು ರಾಜಶೇಖರ್ ಪಟ್ಟು
- ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಸಹೋದರನ ಬೆನ್ನಿಗೆ ನಿಂತಿದ್ದಾರೆ
- ನಾನು ಹಿರಿಯ ,ಕಳೆದ ವಿಧಾನಸಭೆಯಲ್ಲಿ ಸೋಲು ಆಗಿದೆ
- ಈ ಬಾರಿ ಅವಕಾಶ ಮಾಡಿಕೊಡಿ ಎಂದಿರುವ ಭಯ್ಯಾಪುರ
- ಸಿಎಂ, ಡಿಸಿಎಂ, ಪ್ರಭಾವಿ ಸಚಿವರ ಜೊತೆಗೆ ಮಾತುಕತೆ ನಡೆಸಿರುವ ಭಯ್ಯಾಪುರ
10. ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)
- ವೆಂಕಟೇಶ್ ಪ್ರಸಾದ್, ವಿ.ಎಸ್, ಉಗ್ರಪ್ಪ ಹೆಸರು ಶಿಫಾರಸು (ಇವರು ಸಚಿವ ನಾಗೇಂದ್ರ ಅವರ ಸಹೋದರ)
- ಸಹೋದರನಿಗೆ ಟಿಕೆಟ್ ಕೊಡಿಸಲು ಸಚಿವರ ಪ್ರಯತ್ನ ಕಸರತ್ತು
- ಕಳೆದ ಬಾರಿ ಸ್ಪರ್ಧೆ ಮಾಡಿ ಸೋತಿದ್ದೇನೆ ಅವಕಾಶ ಕೊಡಿ ಎಂದು ವಿ.ಎಸ್. ಉಗ್ರಪ್ಪ ಕೇಳುತ್ತಿದ್ದಾರೆ
11. ಹಾವೇರಿ (ಸಾಮಾನ್ಯ)
- ಶಾಸಕ ಬಸವರಾಜ ಶಿವಣ್ಣನವರ್, ಆನಂದ್ ಗಡ್ಡದೇವರಮಠ, ಸಲೀಂ ಅಹ್ಮದ್ ಹೆಸರು ಚರ್ಚೆಯಲ್ಲಿ
- ಸ್ಪರ್ಧೆಗೆ ನಿರಾಕರಿಸಿರುವ ಶಾಸಕ ಬಸವರಾಜ್ ಶಿವಣ್ಣನವರ್,
- ಮುಸ್ಲಿಂ ಕೋಟಾ ನೀಡಬೇಕು ಎಂದಾದರೆ ಸಲೀಂ ಅಹ್ಮದ್ಗೆ ಟಿಕೆಟ್
- ಇಲ್ಲವಾದಲ್ಲಿ ಆನಂದ್ ಗಡ್ಡದೇವರಮಠ್ಗೆ ಟಿಕೆಟ್ ಸಾಧ್ಯತೆ
12. ಧಾರವಾಡ (ಸಾಮಾನ್ಯ)
- ರಜತ್ ಉಳ್ಳಾಗಡ್ಡಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
- ಶಿವಲೀಲಾ ಕುಲಕರ್ಣಿ, ವಿನಯ್ ಕುಲಕರ್ಣಿ ಪತ್ನಿ
- ಶಾಕಿರ್ ಸನದಿ
13. ದಾವಣಗೆರೆ (ಸಾಮಾನ್ಯ)
- ಜಿಬಿ ವಿನಯ್ ಕುಮಾರ್, ಕೆಪಿಸಿಸಿ ಸದಸ್ಯ
- ಪ್ರಭಾ ಮಲ್ಲಿಕಾರ್ಜುನ್, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ
14. ಶಿವಮೊಗ್ಗ (ಸಾಮಾನ್ಯ)
- ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಸಹೋದರಿ
- ಕಿಮ್ಮನೆ ರತ್ನಾಕರ್, ಮಾಜಿ ಸಚಿವ
15. ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)
- ಅಂಶುಮನ್, ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ
- ಜಯಪ್ರಕಾಶ್ ಹೆಗ್ಡೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
16. ಹಾಸನ (ಸಾಮಾನ್ಯ)
- ಗೋಪಾಲಸ್ವಾಮಿ, ಮಾಜಿ ಎಂಎಲ್‌ಸಿ
- ಶ್ರೇಯಸ್ ಪಟೇಲ್, ಹೊಳೆನರಸೀಪುರ ಪರಾಜಿತ ಅಭ್ಯರ್ಥಿ
17. ದಕ್ಷಿಣ ಕನ್ನಡ (ಸಾಮಾನ್ಯ)
- ವಿನಯದ ಕುಮಾರ್ ಸೊರಕೆ (ಬಹುತೇಕ ಟಿಕೆಟ್ ಸಿಗುವ ಸಾಧ್ಯತೆ)
- ರಮಾನಾಥ್ ರೈ
- ಪದ್ಮರಾಜ್
18. ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
- ಬಿ.ಎನ್. ಚಂದ್ರಪ್ಪ, ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ (ಬಹುತೇಕ ಟಿಕೆಟ್ ಸಾಧ್ಯತೆ)
- ವಿನಯ್ ತಿಮ್ಮಾಪುರ, ಸಚಿವ ಆರ್.ಬಿ ತಿಮ್ಮಾಪುರ ಪುತ್ರ
19. ತುಮಕೂರು (ಸಾಮಾನ್ಯ)
- ಮುದ್ದಹನುಮೇಗೌಡ (ಬಹುತೇಕ ಟಿಕೆಟ್ ಸಾಧ್ಯತೆ)
- ಮುರಳೀಧರ್ ಹಾಲಪ್ಪ, ಕೌಶಲ್ಯಾಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ
20. ಮಂಡ್ಯ (ಸಾಮಾನ್ಯ)
- ಸ್ಟಾರ್ ಚಂದ್ರು (ಬಹುತೇಕ್ ಟಿಕೆಟ್ ಸಾಧ್ಯತೆ)
- ಸಚಿವ ಚಲುವರಾಯಸ್ವಾಮಿ ಪತ್ನಿ ಹೆಸರು ಕೇಳಿ ಬಂದಿತ್ತು
21. ಮೈಸೂರು-ಕೊಡಗು (ಸಾಮಾನ್ಯ)
- ಯತೀಂದ್ರ, ಸಿಎಂ ಸಿದ್ದರಾಮಯ್ಯ ಪುತ್ರ
- ವಿಜಯ್ ಕುಮಾರ್, ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ
- ಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರ (ಬಹುತೇಕ ಟಿಕೆಟ್ ಸಾಧ್ಯತೆ)
22. ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
- ಎಚ್.ಸಿ ಮಹದೇವಪ್ಪ, ಹಾಲಿ ಸಚಿವ
- ಸುನಿಲ್ ಬೋಸ್, ಸಚಿವ ಮಹದೇವಪ್ಪ ಪುತ್ರ
- ನಂಜುಂಡಸ್ವಾಮಿ, ಮಾಜಿ ಶಾಸಕ
- ದರ್ಶನ್ ಧ್ರುವನಾರಾಯಣ್
- ನೀವೇ ಸ್ಪರ್ಧೆ ಮಾಡಿ ಎಂದು ಮಹದೇವಪ್ಪಗೆ ಹೈಕಮಾಂಡ್ ಸೂಚನೆ. ಆದರೆ, ಸ್ಪರ್ಧೆಗೆ ನಿರಾಕರಣೆ
23. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
- ಡಿಕೆ ಸುರೇಶ್, ಹಾಲಿ ಸಂಸದ, ಕಾಂಗ್ರೆಸ್
24. ಬೆಂಗಳೂರು ಉತ್ತರ (ಸಾಮಾನ್ಯ)
- ನಾರಾಯಣಸ್ವಾಮಿ, ಮಾಜಿ ಎಂಎಲ್‌ಸಿ
- ಪೂರ್ಣಿಮಾ ಶ್ರೀನಿವಾಸ್, ಮಾಜಿ ಎಂಎಲ್‌ಸಿ
- ಕುಸುಮ ಹನುಮಂತರಾಯಪ್ಪ (ಟಿಕೆಟ್ ಸಿಗುವ ಸಾಧ್ಯತೆ)
25. ಬೆಂಗಳೂರು ಕೇಂದ್ರ (ಸಾಮಾನ್ಯ)
- ಶಾಸಕ ಎನ್.ಎ ಹ್ಯಾರಿಸ್ (ಬಹುತೇಕ ಟಿಕೆಟ್ ಸಾಧ್ಯತೆ)
- ಎಸ್.ಎ ಹುಸೇನ್, ಕೆಪಿಸಿಸಿ ಕಾರ್ಯದರ್ಶಿ
- ನಲಪಾಡ್, ಯೂತ್ ಕಾಂಗ್ರೆಸ್
26. ಬೆಂಗಳೂರು ದಕ್ಷಿಣ (ಸಾಮಾನ್ಯ)
- ಸೌಮ್ಯ ರೆಡ್ಡಿ, ಮಾಜಿ ಶಾಸಕಿ
27. ಚಿಕ್ಕಬಳ್ಳಾಪುರ (ಸಾಮಾನ್ಯ)
- ವೀರಪ್ಪ ಮೊಯ್ಲಿ, ಮಾಜಿ ಸಿಎಂ
- ರಕ್ಷಾ ರಾಮಯ್ಯ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಎಂ.ಆರ್ ಸೀತಾರಾಂ ಪುತ್ರ (ಬಹುತೇಕ ಟಿಕೆಟ್ ಸಾಧ್ಯತೆ)
- ಶಿವಶಂಕರ ರೆಡ್ಡಿ, ಮಾಜಿ ಸಚಿವ
ಇದನ್ನೂ ಓದಿ: Lok Sabha Election 2024: ಹಾಲಿ ಸಂಸದರಿಗೆ ಟಿಕೆಟ್; ಡಿಸೈಡ್ ಆಗಿದ್ದಾರಾ ಶಾ? ರಾಜ್ಯ ನಾಯಕರಿಗೆ ಹೇಳಿದ್ದೇನು?
28. ಕೋಲಾರ (ಪರಿಶಿಷ್ಟ ಜಾತಿ ಮೀಸಲು)
- ಕೆ.ಎಚ್ ಮುನಿಯಪ್ಪ, ಹಾಲಿ ಸಚಿವ (ಬಹುತೇಕ ಟಿಕೆಟ್ ಸಾಧ್ಯತೆ)
- ಚಿಕ್ಕಪೆದ್ದಣ್ಣ
- ಮಾಜಿ ಶಾಸಕ ನಾಗೇಶ್
- ಎಲ್.ಹನುಮಂತಯ್ಯ
- ಮುದ್ದಗಂಗಾಧರ್
- ಕೆ.ಎಚ್. ಮುನಿಯಪ್ಪ ದಲಿತ ಮುಖಂಡರಾಗಿದ್ದು, ಈ ಹಿನ್ನೆಲೆಯಲ್ಲಿ ಇವರಿಗೆ ಟಿಕೆಟ್ನೀಡುವ ಸಾಧ್ಯತೆ ಹೆಚ್ಚಿದೆ