Site icon Vistara News

Lok Sabha Election 2024: ಜೆಡಿಎಸ್‌ ನಾಯಕನೆಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷನನ್ನೇ ಪಕ್ಷಕ್ಕೆ ಸೇರಿಸಿಕೊಂಡರೇ ಡಿಕೆಶಿ?

Lok Sabha Election 2024 DK Shivakumar inducts District Youth Congress President as JDS leader

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಅಲ್ಲದೆ, ಪಕ್ಷಾಂತರ ಪರ್ವ ಸಹ ನಡೆಯುತ್ತಿವೆ. ವಿವಿಧ ಪಕ್ಷಗಳ ಮುಖಂಡರನ್ನು, ಯುವ ನಾಯಕರನ್ನು ಸೆಳೆದು ಎದುರಾಳಿ ಸ್ಪರ್ಧಿಗಳಿಗೆ ಟಕ್ಕರ್‌ ಕೊಡಲು ಪ್ಲ್ಯಾನ್‌ಗಳನ್ನು ರೂಪಿಸಿಕೊಳ್ಳಲಾಗುತ್ತಿದೆ. ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bangalore Rural Lok Sabha constituency) ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಇದರ ಭಾಗವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಆಪರೇಷನ್‌ ಹಸ್ತ ನಡೆಯುತ್ತಿದೆ. ಈ ಹೊತ್ತಿನಲ್ಲಿ ಗುರುವಾರ ಜೆಡಿಎಸ್‌ನಿಂದ ಯುವ ಮುಖಂಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಾಗಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಜೆಡಿಎಸ್‌ (JDS Karnataka) ತಿರುಗೇಟು ನೀಡಿದ್ದು, ತನ್ನ ಪಕ್ಷದವರನ್ನೇ ಜೆಡಿಎಸ್‌ ಕಾರ್ಯಕರ್ತನೆಂದು ಸೇರಿಸಿಕೊಳ್ಳಲಾಗಿದೆ ಎಂದು ಕಾಲೆಳೆದಿದೆ. ಈಗ ಕಾಂಗ್ರೆಸ್‌ ಈ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಜೆಡಿಎಸ್‌, ಸಾಕ್ಷಿಗಾಗಿ ಕೆಲವೊಂದಿಷ್ಟು ಫೋಟೊಗಳನ್ನು ಹಾಕಿ ಕಾಂಗ್ರೆಸ್‌ಗೆ ಪ್ರಶ್ನೆಗಳನ್ನು ಕೇಳಿದೆ. ತಮ್ಮ ಪಕ್ಷದ ಕಾರ್ಯಕರ್ತರಿಗೇ ಕಾಂಗ್ರೆಸ್‌ ಶಾಲು ಹಾಕಿ ಜೆಡಿಎಸ್‌ ಕಾರ್ಯಕರ್ತರು ಎಂದು ಬಿಂಬಿಸಲು ಹೊರಟಿದೆ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: Lok Sabha Election 2024: ಸೋಲಿಸಿದರೆ ಸಮಸ್ಯೆಗಳಿಗೆ ನೀವೇ ಕಾರಣರಾಗುತ್ತೀರಿ; ಅಪಾರ್ಟ್‌ಮೆಂಟ್‌ನಲ್ಲಿ ಡಿಕೆಶಿ ಮತಯಾಚನೆ

ಜೆಡಿಎಸ್‌ ಪೋಸ್ಟ್‌ನಲ್ಲೇನಿದೆ?

“ಕಾಂಗ್ರೆಸಿಗರಿಗೆ, ಅದರಲ್ಲೂ ಡೂಪ್ಲಿಕೇಟ್ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸೋಲಿನ ಭೀತಿ ಎಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೇ ಕಾಂಗ್ರೆಸ್ ಶಾಲು ಹಾಕಿ, ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರೆಲ್ಲ ಕಾಂಗ್ರೆಸ್ ಸೇರಿದ್ದಾರೆ ಎಂದು ಪ್ರಚಾರ ಪಡೆಯುತ್ತಿದ್ದಾರೆ.ಸೋಲಿನ ಭೀತಿ, ಹತಾಶೆ ಎಂತೆಂತಹ ಗಿಮಿಕ್‌ಗಳನ್ನು ಮಾಡಿಸುತ್ತದೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ” ಎಂದು ಜೆಡಿಎಸ್‌ ದಾಖಲೆ ಸಹಿತ ಪೋಸ್ಟ್‌ ಮಾಡಿದೆ.

ಏನಿದು ಮಿಡ್‌ನೈಟ್‌ ಆಪರೇಷನ್?

ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ‌ಮಿಡ್ ನೈಟ್ ಆಪರೇಷನ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ ಎನ್ನಲಾಗಿದೆ. ತನ್ನ ಪಕ್ಷದ ಕಾರ್ಯಕರ್ತರಿಗೇ ಪಕ್ಷದ ಶಾಲು ಹಾಕಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಇನ್ನು ರಾಜ್ಯದಲ್ಲಿ ಜೆಡಿಎಸ್‌ ಕಥೆ ಮುಗಿಯಿತು. ಹೀಗಾಗಿ ಸಾಲು ಸಾಲಾಗಿ ಆ ಪಕ್ಷದ ಮುಖಂಡರು, ಯುವ ನಾಯಕರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ, ಇದರ ಸತ್ಯಾನ್ವೇಷಣೆಗೆ ಇಳಿದ ಜೆಡಿಎಸ್‌, ಕಾಂಗ್ರೆಸ್‌ ಸೇರ್ಪಡೆಯಾದ ಆ ಯುವ ನಾಯಕನ ಫೋಟೊವನ್ನು ಹುಡುಕಾಡಿದೆ. ಅವರು ರಾಮನಗರ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಗೌಡ ಎಂಬುದು ತಿಳಿದುಬಂದಿದೆ. ಅಲ್ಲದೆ, ಸಚಿನ್‌ ಗೌಡ ಅವರು ಈ ಹಿಂದೆ ಡಿ.ಕೆ ಸುರೇಶ್‌ ಹಾಗೂ ಡಿ.ಕೆ. ಶಿವಕುಮಾರ್‌ ಜತೆ ನಿಂತುಕೊಂಡಿರುವ ಫೋಟೊವನ್ನು ಸಹ ಹಾಕಿ ಜೆಡಿಎಸ್‌ ಪೋಸ್ಟ್‌ ಮಾಡಿದೆ. ಹೀಗಾಗಿ ಇದೊಂದು ಸೋಲಿನ ಹತಾಶೆ ಎಂದು ಜೆಡಿಎಸ್‌ ಕುಟುಕಿದೆ. ಆದರೆ, ಕಾಂಗ್ರೆಸ್‌ ಆಗಲೀ, ಡಿಕೆ ಬ್ರದರ್ಸ್‌ ಆಗಲಿ ಇದುವರೆಗೆ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Exit mobile version