ಧಾರವಾಡ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚುನಾವಣಾ ಸಿಬ್ಬಂದಿ ಕುಸಿದು ಬಿದ್ದರು. ಧಾರವಾಡದ ಗಾಂಧಿನಗರ ಕನ್ನಡ ಶಾಲೆಯಲ್ಲಿದ್ದ ಮತಗಟ್ಟೆಯಲ್ಲಿ ಘಟನೆ ನಡೆದಿದೆ.
ಮಹಿಳಾ ಅಧಿಕಾರಿಯೊಬ್ಬರು ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಏಕಾಏರಿ ತಲೆ ತಿರುಗಿ ಬಿದ್ದಿದ್ದರು. ಕೂಡಲೇ ಅಲ್ಲಿದ್ದ ಸಿಬ್ಬಂದಿ, ಮತದಾರರು ಸಹಾಯಕ್ಕೆ ಧಾವಿಸಿದರು. ಇದೇ ವೇಳೆ ಮತದಾನ ಮಾಡಲು ಬಂದಿದ್ದ ವೈದ್ಯ ನಿತಿನ್ ಚಂದ್ರ ಹತ್ತಿಕಾಳು ಎಂಬುವವರು ತಲೆ ತಿರುಗಿ ಸುಸ್ತಾಗಿದ್ದ ಮಹಿಳೆಯನ್ನು ಪರಿಶೀಲಿಸಿ ಪ್ರಥಮ ಚಿಕಿತ್ಸೆ ನೀಡಿದರು. ಆ ಬಳಿಕ ಮತದಾನ ಮಾಡಿದರು.
ಅಬುಧಾಬಿಯಿಂದ ಬಂದು ಮತ ಹಾಕಿದ
ಚಿಕ್ಕೋಡಿ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಸುರಜ ಉಪಾಶೆ ಎಂಬ ಯುವಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮತ ಹಕ್ಕು ಚಲಾಯಿಸಿದ್ದಾನೆ. ಕಳೆದ 10 ವರ್ಷದಿಂದ ಅಬುಧಾಬಿಯಲ್ಲಿರುವ ಯುವಕ, ಮತದಾನಕ್ಕಾಗಿಯೇ ಆಗಮಿಸಿದ್ದಾನೆ. ಹುಕ್ಕೇರಿ ಪಟ್ಟಣದ ಗಾಂಧಿ ನಗರ ಶಾಲೆಯಲ್ಲಿ ಮತದಾನ ಮಾಡಿದ್ದು, ಎಲ್ಲರೂ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾನೆ.
ಶಿವಮೊಗ್ಗದಲ್ಲಿ ಉಚಿತ ತಿಂಡಿ, ಕಾಫಿ- ಟೀ
ಶಿವಮೊಗ್ಗ: ಶಿವಮೊಗ್ಗದ ಶುಭಂ ಹೋಟೆಲ್‌ನಲ್ಲಿ, ಮತದಾನದ ಪ್ರಮಾಣ ಹೆಚ್ಚಿಸಿ, ಜಾಗೃತಿ ಮೂಡಿಸಲು ಸ್ಪೆಷಲ್ ಆಫರ್ ನೀಡಲಾಯಿತು. ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಫ್ರೀ ಟಿಫನ್ ನೀಡಲಾಯಿತು. ಬೆಳಗ್ಗೆಯಿಂದ 5 ಸಾವಿರಕ್ಕೂ ಹೆಚ್ಚು ಮತದಾರರು ಫ್ರೀ ಟಿಫನ್ ಸವಿದರು. ಪಲಾವ್, ದೋಸೆ, ಬಿಸಿಬೇಳೆಬಾತ್, ಕಾಫಿ ತಿಂಡಿ ಫ್ರೀ ನೀಡಲಾಗಿದೆ. ಸುಮಾರು 10 ಸಾವಿರ ಮಂದಿಗೆ ಆಗುವಷ್ಟು ಹೋಟೆಲ್ ಮಾಲಿಕರು ಉಚಿತ ತಿಂಡಿಯ ವ್ಯವಸ್ಥೆ ಮಾಡಿದ್ದರು.
ವೋಟ್ ಮಾಡಿದರೆ ಉಚಿತ ಐಸ್‌ಕ್ರೀಂ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಡೈರೀಸ್ ಐಸ್‌ಕ್ರೀಮ್ ಮಾಲಿಕರು ವೋಟ್ ಮಾಡಿದವರಿಗೆ ಉಚಿತವಾಗಿ ಎಲೆಕ್ಷನ್ ಸ್ಪೆಷಲ್ ಐಸ್‌ಕ್ರೀಮ್ ವಿತರಿಸಿದರು. ಉಜ್ವಲ ಭಾರತದ ಭವಿಷ್ಯಕ್ಕಾಗಿ ಮತದಾನ ಪ್ರೋತ್ಸಾಹಿಸಲು ಡೈರಿಸ್ ಐಸ್ಕ್ರೀಮ್ ವಿತರಣೆ ನಡೆಯಿತು.
3 ಲಕ್ಷ ರೂ. ವೆಚ್ಚ ಮಾಡಿ ಬಂದ ಅನಿವಾಸಿ ಭಾರತೀಯ!
ರಾಯಚೂರು: ಅನಿವಾಸಿ ಭಾರತೀಯರೊಬ್ಬರು 3 ಲಕ್ಷ ರೂ. ವೆಚ್ಚ ಮಾಡಿ ಮತದಾನ ಮಾಡುವುದಕ್ಕಾಗಿಯೇ ಭಾರತಕ್ಕೆ ಬಂದು ಹಕ್ಕು ಚಲಾಯಿಸಿದರು. ಆ ಮೂಲಕ ಮತದಾನದ ಮಹತ್ವ ಸಾರಿದರು. ಒಮಾನ್ ದೇಶದ ಮಸ್ಕತ್‌ನಲ್ಲಿರುವ ಅನಿವಾಸಿ ಭಾರತೀಯ, ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ನಿವಾಸಿ ಅಮರೇಶ ಈ ವ್ಯಕ್ತಿ. ಕಳೆದ 25 ವರ್ಷಗಳಿಂದ ಮಸ್ಕತ್‌ನಲ್ಲಿ ವಾಸಿಸುತ್ತಿರುವ ಅಮರೇಶ, ವಟಗಲ್ ಗ್ರಾಮದಲ್ಲಿ ಮತದಾನ ಮಾಡಿ, “ಪ್ರತಿಯೊಬ್ಬರೂ ಮತದಾನ ಮಾಡಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ