Lok Sabha Election 2024: ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ; ಮತದಾನಕ್ಕೆ ಬಂದು ಟ್ರೀಟ್‌ ಮಾಡಿದ ಡಾಕ್ಟರ್‌ - Vistara News

Lok Sabha Election 2024

Lok Sabha Election 2024: ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ; ಮತದಾನಕ್ಕೆ ಬಂದು ಟ್ರೀಟ್‌ ಮಾಡಿದ ಡಾಕ್ಟರ್‌

Lok Sabha Election 2024 : ವಿಪರೀತ ಬಿಸಿಲಿಗೆ ಜನರು ಹೈರಣಾಗಿದ್ದಾರೆ. ತಾಪಮಾನ ಏರಿಕೆಯಲ್ಲೂ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆಯು ಕರ್ನಾಕಟದಲ್ಲಿ ಬಿರುಸಿನಿಂದ ನಡೆಯುತ್ತಿದೆ. ಧಾರವಾಡದಲ್ಲಿ ಬಿಸಿ ತಾಪಕ್ಕೆ ಚುನಾವಣಾ ಸಿಬ್ಬಂದಿಯೊಬ್ಬರು ಕುಸಿದು ಬಿದ್ದಿದ್ದಾರೆ.

VISTARANEWS.COM


on

lok sabha Election 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧಾರವಾಡ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚುನಾವಣಾ ಸಿಬ್ಬಂದಿ ಕುಸಿದು ಬಿದ್ದರು. ಧಾರವಾಡದ ಗಾಂಧಿನಗರ ಕನ್ನಡ ಶಾಲೆಯಲ್ಲಿದ್ದ ಮತಗಟ್ಟೆಯಲ್ಲಿ ಘಟನೆ ನಡೆದಿದೆ.

ಮಹಿಳಾ ಅಧಿಕಾರಿಯೊಬ್ಬರು ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಏಕಾಏರಿ ತಲೆ ತಿರುಗಿ ಬಿದ್ದಿದ್ದರು. ಕೂಡಲೇ ಅಲ್ಲಿದ್ದ ಸಿಬ್ಬಂದಿ, ಮತದಾರರು ಸಹಾಯಕ್ಕೆ ಧಾವಿಸಿದರು. ಇದೇ ವೇಳೆ ಮತದಾನ ಮಾಡಲು ಬಂದಿದ್ದ ವೈದ್ಯ ನಿತಿನ್ ಚಂದ್ರ ಹತ್ತಿಕಾಳು ಎಂಬುವವರು ತಲೆ ತಿರುಗಿ ಸುಸ್ತಾಗಿದ್ದ ಮಹಿಳೆಯನ್ನು ಪರಿಶೀಲಿಸಿ ಪ್ರಥಮ ಚಿಕಿತ್ಸೆ ನೀಡಿದರು. ಆ ಬಳಿಕ ಮತದಾನ ಮಾಡಿದರು.

ಅಬುಧಾಬಿಯಿಂದ ಬಂದು ಮತ ಹಾಕಿದ

ಚಿಕ್ಕೋಡಿ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಸುರಜ ಉಪಾಶೆ ಎಂಬ ಯುವಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮತ ಹಕ್ಕು ಚಲಾಯಿಸಿದ್ದಾನೆ. ಕಳೆದ 10 ವರ್ಷದಿಂದ ಅಬುಧಾಬಿಯಲ್ಲಿರುವ ಯುವಕ, ಮತದಾನಕ್ಕಾಗಿಯೇ ಆಗಮಿಸಿದ್ದಾನೆ. ಹುಕ್ಕೇರಿ ಪಟ್ಟಣದ ಗಾಂಧಿ ನಗರ ಶಾಲೆಯಲ್ಲಿ ಮತದಾನ ಮಾಡಿದ್ದು, ಎಲ್ಲರೂ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾನೆ.

ಶಿವಮೊಗ್ಗದಲ್ಲಿ ಉಚಿತ ತಿಂಡಿ, ಕಾಫಿ- ಟೀ

ಶಿವಮೊಗ್ಗ: ಶಿವಮೊಗ್ಗದ ಶುಭಂ ಹೋಟೆಲ್‌ನಲ್ಲಿ, ಮತದಾನದ ಪ್ರಮಾಣ ಹೆಚ್ಚಿಸಿ, ಜಾಗೃತಿ ಮೂಡಿಸಲು ಸ್ಪೆಷಲ್ ಆಫರ್ ನೀಡಲಾಯಿತು. ಬೆಳಗ್ಗೆ 7ರಿಂದ‌ ಮಧ್ಯಾಹ್ನ 12 ಗಂಟೆವರೆಗೆ ಫ್ರೀ ಟಿಫನ್ ನೀಡಲಾಯಿತು. ಬೆಳಗ್ಗೆಯಿಂದ 5 ಸಾವಿರಕ್ಕೂ ಹೆಚ್ಚು ಮತದಾರರು ಫ್ರೀ ಟಿಫನ್ ಸವಿದರು. ಪಲಾವ್, ದೋಸೆ, ಬಿಸಿಬೇಳೆಬಾತ್, ಕಾಫಿ ತಿಂಡಿ ಫ್ರೀ ನೀಡಲಾಗಿದೆ. ಸುಮಾರು 10 ಸಾವಿರ ಮಂದಿಗೆ ಆಗುವಷ್ಟು ಹೋಟೆಲ್‌ ಮಾಲಿಕರು ಉಚಿತ ತಿಂಡಿಯ ವ್ಯವಸ್ಥೆ ಮಾಡಿದ್ದರು.

ವೋಟ್ ಮಾಡಿದರೆ ಉಚಿತ ಐಸ್‌ಕ್ರೀಂ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಡೈರೀಸ್ ಐಸ್‌ಕ್ರೀಮ್ ಮಾಲಿಕರು ವೋಟ್ ಮಾಡಿದವರಿಗೆ ಉಚಿತವಾಗಿ ಎಲೆಕ್ಷನ್ ಸ್ಪೆಷಲ್ ಐಸ್‌ಕ್ರೀಮ್ ವಿತರಿಸಿದರು. ಉಜ್ವಲ ಭಾರತದ ಭವಿಷ್ಯಕ್ಕಾಗಿ ಮತದಾನ ಪ್ರೋತ್ಸಾಹಿಸಲು ಡೈರಿಸ್ ಐಸ್ಕ್ರೀಮ್‌ ವಿತರಣೆ ನಡೆಯಿತು.

3 ಲಕ್ಷ ರೂ. ವೆಚ್ಚ ಮಾಡಿ ಬಂದ ಅನಿವಾಸಿ ಭಾರತೀಯ!

ರಾಯಚೂರು: ಅನಿವಾಸಿ ಭಾರತೀಯರೊಬ್ಬರು 3 ಲಕ್ಷ ರೂ. ವೆಚ್ಚ ಮಾಡಿ ಮತದಾನ ಮಾಡುವುದಕ್ಕಾಗಿಯೇ ಭಾರತಕ್ಕೆ ಬಂದು ಹಕ್ಕು ಚಲಾಯಿಸಿದರು. ಆ ಮೂಲಕ ಮತದಾನದ ಮಹತ್ವ ಸಾರಿದರು. ಒಮಾನ್ ದೇಶದ ಮಸ್ಕತ್‌ನಲ್ಲಿರುವ ಅನಿವಾಸಿ ಭಾರತೀಯ, ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ನಿವಾಸಿ ಅಮರೇಶ ಈ ವ್ಯಕ್ತಿ. ಕಳೆದ 25 ವರ್ಷಗಳಿಂದ ಮಸ್ಕತ್‌ನಲ್ಲಿ ವಾಸಿಸುತ್ತಿರುವ ಅಮರೇಶ, ವಟಗಲ್ ಗ್ರಾಮದಲ್ಲಿ ಮತದಾನ ಮಾಡಿ, “ಪ್ರತಿಯೊಬ್ಬರೂ ಮತದಾನ ಮಾಡಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Prajwal Revanna Case: ನೀವು ಡಿ.ಕೆ.ಶಿವಕುಮಾರ್‌ ಅವರ ಜತೆ ಕೈಜೋಡಿಸಿದರೆ ಯಾವ ಸಹಾಯ ಬೇಕೋ ಎಲ್ಲವನ್ನೂ ಮಾಡುತ್ತಾರೆ. ಜೆಡಿಎಸ್‌ಅನ್ನು ಎನ್‌ಡಿಎಯಿಂದ ಆಚೆಗೆ ಹಾಕಲು ನಾನೇ ನರೇಂದ್ರ ಮೋದಿ ಅವರಿಗೆ ಒತ್ತಾಯ ಮಾಡುತ್ತೇನೆ. ಇನ್ನೇನು ವಿಡಿಯೊಗಳು ಇವೆಯೋ, ಎಲ್ಲವನ್ನೂ ನಮಗೆ ಕೊಡಿ. ದೇವೇಗೌಡ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂಬುದಾಗಿ ದೇವರಾಜೇಗೌಡ ಅವರಿಗೆ ಶಿವರಾಮೇಗೌಡ ಭರವಸೆ ನೀಡಿದ ಆಡಿಯೊ ಈಗ ಸಂಚಲನ ಮೂಡಿಸಿದೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಡಿಯೊ ಲಭ್ಯವಾಗಿದ್ದು, ಇದು ಈಗ ಸಂಚಲನ ಮೂಡಿಸಿದೆ. ವಕೀಲ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ (LR Shivarame Gowda) ಅವರ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೊ ಬಯಲಾಗಿದ್ದು, “ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಷ್ಟಕ್ಕೂ, ದೇವೇಗೌಡ ಅವರು ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲವಲ್ಲ” ಎಂಬುದಾಗಿ ಶಿವರಾಮೇಗೌಡ ಹೇಳಿದ್ದಾರೆ.

“ನೀವು ಡಿ.ಕೆ.ಶಿವಕುಮಾರ್‌ ಅವರ ಜತೆ ಕೈಜೋಡಿಸಿದರೆ ಯಾವ ಸಹಾಯ ಬೇಕೋ ಎಲ್ಲವನ್ನೂ ಮಾಡುತ್ತಾರೆ. ಜೆಡಿಎಸ್‌ಅನ್ನು ಎನ್‌ಡಿಎಯಿಂದ ಆಚೆಗೆ ಹಾಕಲು ನಾನೇ ನರೇಂದ್ರ ಮೋದಿ ಅವರಿಗೆ ಒತ್ತಾಯ ಮಾಡುತ್ತೇನೆ. ಇನ್ನೇನು ವಿಡಿಯೊಗಳು ಇವೆಯೋ, ಎಲ್ಲವನ್ನೂ ನಮಗೆ ಕೊಡಿ. ದೇವೇಗೌಡ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನೀವು ಯಾವುದಕ್ಕೂ ಹೆದರಬೇಡಿ. ನಿಮಗೆ ಏನು ಹೆಲ್ಪ್‌ ಬೇಕೋ ಅದನ್ನು ಡಿಕೆಶಿ ಮಾಡುತ್ತಾರೆ” ಎಂಬುದಾಗಿ ಶಿವರಾಮೇಗೌಡ ಭರವಸೆ ನೀಡಿರುವುದು ಆಡಿಯೊದಲ್ಲಿದೆ.

ವಿಡಿಯೊ ಕೊಡಿ ಎಂಬುದಕ್ಕೆ ಉತ್ತರಿಸಿದ ದೇವರಾಜೇಗೌಡ, “ಅಣ್ಣ ಇದು ಹೆಣ್ಣುಮಕ್ಕಳ ಮಾನ ಮರ್ಯಾದೆ ಪ್ರಶ್ನೆ ಅಲ್ಲವೇ? ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದಿದ್ದಾರೆ. ಅದಕ್ಕೆ ಶಿವರಾಮೇಗೌಡ, “ನಿನಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತಾರೆ. ಅಷ್ಟಕ್ಕೂ, ನೀನೇನೂ ಹಾಸನದಲ್ಲಿ ಪೆನ್‌ಡ್ರೈವ್‌ ಹಂಚಿಲ್ಲ. ಹಂಚಿದರೂ ಅದರಲ್ಲಿ ತಪ್ಪೇನಿಲ್ಲ. ನೀನೊಬ್ಬ ವಕೀಲನಾಗಿ ಹೀಗೆ ಹೆದರಿದರೆ ಹೇಗೆ? ಏನೂ ಆಗುವುದಿಲ್ಲ. ಯಾವ ವಿಡಿಯೊ ಇದೆ ನಮಗೆ ಕೊಡು” ಎಂದಿದ್ದಾರೆ.

ಗೌಡರು ಸೂಸೈಡ್‌ ಮಾಡಿಕೊಂಡಿಲ್ವಲ್ಲ

“ಕುಮಾರಸ್ವಾಮಿ ಅವರೇ ವಿಡಿಯೊಗಳನ್ನು ಬಿಟ್ಟಿದ್ದಾರೆ ಎಂಬುದಾಗಿ ಹೇಳು. ಆ ದೇವೇಗೌಡರ ಮಕ್ಕಳು ಏನೂ ಕಡಿಮೆ ಇಲ್ಲ. ದೇವೇಗೌಡರು ಇಷ್ಟಾದರೂ ಆತ್ಮಹತ್ಯೆ ಮಾಡಕೊಂಡಿಲ್ಲವಲ್ಲ. ಪ್ರಜ್ವಲ್‌ ರೇವಣ್ಣ ಬೆಳೆಯುತ್ತಿದ್ದಾನೆ. ಕುಮಾರಸ್ವಾಮಿ ಅವರಿಗೆ ತಮ್ಮ ಮಗ ಮುಂದೆ ಬರಬೇಕು ಎಂಬ ಆಸೆ ಇದೆ. ಹಾಗಾಗಿ, ಕುಮಾರಸ್ವಾಮಿ ಅವರೇ ವಿಡಿಯೊಗಳನ್ನು ಹಂಚಿದ್ದಾರೆ ಎಂಬುದಾಗಿ ಹೇಳಿ” ಎಂದು ದೇವರಾಜೇಗೌಡ ಅವರಿಗೆ ಶಿವರಾಮೇಗೌಡ ಹೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ. ಇದು ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ನೀಡಿದೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Continue Reading

ದೇಶ

Congress Manifesto: ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಅಪಪ್ರಚಾರ; ವ್ಯಕ್ತಿ ಅರೆಸ್ಟ್‌-ಬಿಜೆಪಿ ಕಿಡಿ

Congress Manifesto: ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದ ಬಲಪಂಥೀಯ ವಿಚಾರಧಾರೆ ಹೊಂದಿರುವ ವಿನೀತ್‌, ಕಾಂಗ್ರೆಸ್‌ ಹಿಂದೂಗಳ ಸಂಪತ್ತನ್ನು ಕಸಿದು ಕೇವಲ ಮುಸ್ಲಿಮರಿಗೆ ಹಂಚಲು ಸಂಚು ರೂಪಿಸಿದೆ. ಕಾಂಗ್ರೆಸ್‌ ಎಸ್‌ಸಿ/ಎಸ್‌ಟಿ ಸೇರಿದಂತೆ ಎಲ್ಲಾ ಹಿಂದೂಗಳನ್ನು ದ್ವೇಷಿಸುತ್ತದೆ. ಎಸ್‌ಸಿ, ಎಸ್‌ಟಿಗಳ ಅಭಿವೃದ್ಧಿಗಾಗಿ ಶ್ರಮಿಸುವ ಬಗ್ಗೆ ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ. ಹೀಗಾಗಿ ಕಾಂಗ್ರೆಸ್‌ನವರ ಮುಖಕ್ಕೆ ಅವರ ಪ್ರಣಾಳಿಕೆಯನ್ನು ಎಸೆಯಿರಿ ಎಂದು ವಿಡಿಯೋ ಸಮೇತ ಟ್ವೀಟ್‌ ಮಾಡಿದ್ದರು.

VISTARANEWS.COM


on

Congress Manifesto
Koo

ಗೋವಾ: ಕೈ-ಕಮಲ ಪಾಳಯದಲ್ಲಿ ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿರುವ ಕಾಂಗ್ರೆಸ್‌ ಪ್ರಣಾಳಿಕೆ (Congress Manifesto) ವಿಚಾರಕ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ ಪ್ರಣಾಳಿಕೆಯನ್ನು ಟೀಕಿಸಿ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದ ವ್ಯಕ್ತಿಯೊಬ್ಬನನ್ನು ಕರ್ನಾಟಕ ಪೊಲೀಸರು(Congress Police) ಗೋವಾದಲ್ಲಿ ಅರೆಸ್ಟ್‌ ಮಾಡಿದ್ದು, ಬಿಜೆಪಿ ಕಾಂಗ್ರೆಸ್‌ ನಡುವೆ ಮತ್ತೆ ವಾಕ್ಸಮರಕ್ಕೆ ಕಾರಣವಾಗಿದೆ. ವಿನೀತ್‌ ನಾಯ್ಕ್‌ ಎಂಬಾತನನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ. ವಿನೀತ್‌ ವಿರುದ್ಧ ಸುಳ್ಳು ಮಾಹಿತಿ ಹರಡಿ ಕೋಮು ಘರ್ಷಣೆ (Communal disturbance)ಗೆ ಕುಮ್ಮಕ್ಕು ನೀಡಿಡ ಆರೋಪ ಕೇಳಿ ಬಂದಿದ್ದು, ಕರ್ನಾಟಕ ಶ್ರೀರಾಮಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಏನಿದು ಪ್ರಕರಣ?

ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದ ಬಲಪಂಥೀಯ ವಿಚಾರಧಾರೆ ಹೊಂದಿರುವ ವಿನೀತ್‌, ಕಾಂಗ್ರೆಸ್‌ ಹಿಂದೂಗಳ ಸಂಪತ್ತನ್ನು ಕಸಿದು ಕೇವಲ ಮುಸ್ಲಿಮರಿಗೆ ಹಂಚಲು ಸಂಚು ರೂಪಿಸಿದೆ. ಕಾಂಗ್ರೆಸ್‌ ಎಸ್‌ಸಿ/ಎಸ್‌ಟಿ ಸೇರಿದಂತೆ ಎಲ್ಲಾ ಹಿಂದೂಗಳನ್ನು ದ್ವೇಷಿಸುತ್ತದೆ. ಎಸ್‌ಸಿ, ಎಸ್‌ಟಿಗಳ ಅಭಿವೃದ್ಧಿಗಾಗಿ ಶ್ರಮಿಸುವ ಬಗ್ಗೆ ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ. ಹೀಗಾಗಿ ಕಾಂಗ್ರೆಸ್‌ನವರ ಮುಖಕ್ಕೆ ಅವರ ಪ್ರಣಾಳಿಕೆಯನ್ನು ಎಸೆಯಿರಿ ಎಂದು ವಿಡಿಯೋ ಸಮೇತ ಟ್ವೀಟ್‌ ಮಾಡಿದ್ದರು. ಇದಾದ ಬಳಿಕ ಏ. 22 ಮತ್ತು ಏ. 29ರಂದು ವಿನೀತ್‌ ನಾಯ್ಕ್‌ ವಿರುದ್ಧ ದೂರು ದಾಖಲಾಗಿತ್ತು.

ಬೆಂಗಳೂರಿನ ನಿವಾಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತ ಜೆ ಸರವಣನ್ ಅವರು ಏಪ್ರಿಲ್ 29 ರಂದು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸರು ಎಕ್ಸ್ ಬಳಕೆದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ತಿರುಚಿ ಪೋಸ್ಟ್​ ಮಾಡಲಾಗಿದೆ ಎಂದು ದೂರಲಾಗಿತ್ತು. ಇನ್ನು ವಿನೀತ್‌ ಟ್ವೀಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಅದನ್ನು ಡಿಲೀಟ್‌ ಮಾಡಿದ್ದ.

ಪ್ರಕರಣ ದಾಖಲಿಸಿಕೊಂಡು ವಿನೀತ್‌ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತ್ತೊಂದೆಡೆ ನನ್ನ ತಂದೆಯನ್ನು ಬೆಂಗಳೂರು ಪೊಲೀಸರು ಇದ್ದಕ್ಕಿದ್ದಂತೆ ಬಂಧಿಸಿ ಕರೆದೊಯ್ದಿದ್ದಾರೆ, ಅವರನ್ನು ಬಿಡುಗಡೆ ಮಾಡಿ ಎಂದು ಮಗ ನಾಗೇಶ್​ ನಾಯ್ಕ್​ ಟ್ವೀಟ್​ ಮಾಡಿದ್ದಾರೆ.

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್‌ನಲ್ಲಿ, ಕರ್ನಾಟಕ ಪೊಲೀಸರು ಗೋವಾದಲ್ಲಿ ವಿನೀತ್‌ನನ್ನು ಬಂಧಿಸಿದ್ದಾರೆ. ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರು ಎಲ್ಲಾ ಕಾನೂನು ಬೆಂಬಲವನ್ನು ನೀಡುತ್ತೇವೆ, ಕಾಂಗ್ರೆಸ್ ಅರಾಜಕತೆಯನ್ನು ಹೊರಹಾಕಿದೆ ಎಂದು ಬರೆದಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಪೋಸ್ಟ್​ ಮಾಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಅಧಿಕಾರ ದುರ್ಬಳಕೆಯಾಗಿದೆ. ನಾವು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಹೋರಾಡಲು ಸಿದ್ಧರಿದ್ದೇವೆ ಎಂದು ಬರೆದಿದ್ದಾರೆ. ಮತ್ತೊಂದೆಡೆ ಕೇಂದ್ರ ಸಚಿವ ಸ್ಮೃತಿ ಇರಾನಿ ಕೂಡ ವಿನೀತ್‌ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ:ಮೋದಿಯವರೇ, 3ನೇ ಬಾರಿ ಪ್ರಧಾನಿಯಾಗಿ ದೇಶ ಮುನ್ನಡೆಸಿ; ಜನುಮ ದಿನದ ಶುಭಾಶಯ ಕೋರಿದ ಪ್ರಧಾನಿಗೆ ದೇವೇಗೌಡರ ಕೃತಜ್ಞತೆ

Continue Reading

ದೇಶ

Narendra Modi: ಗುರಿ ದೊಡ್ಡದಿದೆ, 3ನೇ ಅವಧಿಯ ಆಡಳಿತಕ್ಕೆ ಪ್ಲಾನ್‌ ರೆಡಿ ಇದೆ; ಮೋದಿ ವಿಶ್ವಾಸ

Narendra Modi: ದೇಶದ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರನ್ನು ನಾನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಕೈ ಖಂಡಿತವಾಗಿಯೂ ಮೇಲಾಗಲಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿಯಾಗಿದೆ. ಹಾಗಾಗಿ, ನಾವು ಮೂರನೇ ಅವಧಿಯ ಆಡಳಿತಕ್ಕೆ ಸಿದ್ಧವಾಗುತ್ತಿದ್ದೇವೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನ ಮುಗಿದಿದೆ. ಇನ್ನೂ ಮೂರು ಹಂತದ ಮತದಾನ ಬಾಕಿ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಸೇರಿ ಎಲ್ಲ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

“ನಮ್ಮ ಗುರಿ ತುಂಬ ದೊಡ್ಡದಿದೆ. ಇಷ್ಟೊಂದು ದೊಡ್ಡ ದೇಶದಲ್ಲಿ ಜನರ ಯಾರಿಗೆ ಮತ ಹಾಕಬೇಕು ಎಂಬುದನ್ನು ಸುಲಭವಾಗಿ ತೀರ್ಮಾನಿಸುತ್ತಾರೆ. ಜನರಿಗೆ ಇರುವ ಅನುಭವವು ಅವರು ಸುಲಭವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ದೇಶದ ಜನರಿಗೆ ಎಲ್ಲವೂ ಗೊತ್ತಿದೆ. ಯಾವುದೇ ಪಕ್ಷ, ವ್ಯಕ್ತಿ ಇರಲಿ, ಜನರು ಯಾರನ್ನು ಗೆಲ್ಲಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಹಾಗಾಗಿಯೇ, ನಾವು ಮುಂದಿನ ದಿನಗಳಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದೇವೆ. ದೇಶದ ಆಡಳಿತ, ಅಭಿವೃದ್ಧಿಯ ನೀಲನಕ್ಷೆ ನಮ್ಮ ಬಳಿ ಇದೆ” ಎಂದು ಮೋದಿ ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

“ದೇಶದ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರನ್ನು ನಾನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಕೈ ಖಂಡಿತವಾಗಿಯೂ ಮೇಲಾಗಲಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ಸಂಗತಿಯಾಗಿದೆ. ಹಾಗಾಗಿ, ನಾವು ಮೂರನೇ ಅವಧಿಯ ಆಡಳಿತಕ್ಕೆ ಸಿದ್ಧವಾಗುತ್ತಿದ್ದೇವೆ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಏನೆಲ್ಲ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಕಾರ್ಯಸೂಚಿಯನ್ನು ಹಾಕಿಕೊಂಡು ಬನ್ನಿ ಎಂಬುದಾಗಿ ನಮ್ಮ ಸಚಿವರಿಗೆ ಸೂಚಿಸಿದ್ದೇನೆ” ಎಂದು ಮೋದಿ ತಿಳಿಸಿದರು.

“ನಮ್ಮ ಮುಂದಿನ ಆಡಳಿತವು ಒಂದು ಪ್ರದೇಶ, ಕೆಲವು ಭಾಗಗಳಿಗೆ ಸೀಮಿತವಾಗಿರುವುದಿಲ್ಲ. ದೊಡ್ಡ ಗುರಿಯನ್ನು ಕ್ಷಿಪ್ರವಾಗಿ ಸಾಧಿಸುವ ಛಲವನ್ನು ನಾವು ಹೊಂದಿದ್ದೇವೆ. ಗುರಿ ದೊಡ್ಡದಾಗಿ ಇಟ್ಟುಕೊಂಡು, ಅದರ ವೇಗಕ್ಕೆ ತಕ್ಕಂತೆ ಮುನ್ನಡೆಯುವುದು ನಮ್ಮ ಉದ್ದೇಶವಾಗಿದೆ. ಗುರಿ, ಉದ್ದೇಶ ಹಾಗೂ ವೇಗದ ಜತೆ ಸಾಗುವುದು ಕೂಡ ಒಂದು ಕೌಶಲವಾಗಿದೆ. ಆ ದಿಸೆಯಲ್ಲಿ ನಾವು ಮಹತ್ವದ ಸಂಗತಿಗಳನ್ನು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ” ಎಂದು ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: ಹಿಂದು ಧರ್ಮದ ಆಶಯದಂತೆ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು ಎಂದ ಪ್ರಿಯಾಂಕಾ ವಾದ್ರಾ!

Continue Reading

ಪ್ರಮುಖ ಸುದ್ದಿ

ಹಿಂದು ಧರ್ಮದ ಆಶಯದಂತೆ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು ಎಂದ ಪ್ರಿಯಾಂಕಾ ವಾದ್ರಾ!

ಸ್ವಾತಂತ್ರ್ಯ ಹೋರಾಟದ ವೇಳೆ ದೇಶಕ್ಕಾಗಿ ಎಲ್ಲರೂ ತ್ಯಾಗ ಮಾಡಿದರು. ಜವಾಹರ ಲಾಲ್‌ ನೆಹರು ಸೇರಿ ಹಲವು ನಾಯಕರು 13-14 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಮಹಾತ್ಮ ಗಾಂಧೀಜಿ ಅವರಿಗೆ ಗುಂಡು ತಗುಲಿ, ಅವರು ಇನ್ನೇನು ಪ್ರಾಣ ಬಿಡಬೇಕು ಎನ್ನುವ ಮೊದಲು, ಅವರು ಹೇ ರಾಮ್‌ ಎಂದು ಹೇಳಿದ್ದರು ಎಂಬುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್‌ ಪಕ್ಷವು ಹಿಂದು ವಿರೋಧಿ ಎನ್ನುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

VISTARANEWS.COM


on

Priyanka Vadra
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಧರ್ಮ, ಜಾತಿ, ರಾಮಮಂದಿರ, ಮೀಸಲಾತಿ ಸೇರಿ ಹತ್ತಾರು ವಿಷಯಗಳು ಮುನ್ನೆಲೆಗೆ ಬಂದಿವೆ. ಅದರಲ್ಲೂ, ಕಾಂಗ್ರೆಸ್‌ ಹಿಂದು ವಿರೋಧಿ ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ (Priyanka Vadra) ತಿರುಗೇಟು ನೀಡಿದ್ದಾರೆ. “ಮಹಾತ್ಮ ಗಾಂಧೀಜಿ (Mahatma Gandhi) ಅವರು ಕೊನೆಯುಸಿರೆಳೆಯುವ ಮೊದಲೂ ಹೇ ರಾಮ್‌ ಎಂದಿದ್ದರು. ಕಾಂಗ್ರೆಸ್‌ ಹೇಗೆ ಹಿಂದು ವಿರೋಧಿಯಾಗುತ್ತದೆ? ಹಾಗೆಯೇ, ಹಿಂದು ಧರ್ಮದ ಆಶಯಗಳಂತೆ ಸ್ವಾತಂತ್ರ್ಯ ಹೋರಾಟ ಮಾಡಲಾಗಿದೆ” ಎಂದಿದ್ದಾರೆ.

ಇಂಡಿಯಾ ಟುಡೇಗೆ ಸಂದರ್ಶನ ನೀಡಿದ ವೇಳೆ ಅವರು ಈ ರೀತಿಯ ಪ್ರಸ್ತಾಪ ಮಾಡಿದ್ದಾರೆ. “ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್‌ ಹಿಂದು ವಿರೋಧಿ ಎಂಬಂತೆ ಬ್ರ್ಯಾಂಡ್‌ ಮಾಡಲಾಗುತ್ತಿದೆ. ಅಷ್ಟಕ್ಕೂ ನಮ್ಮ ಪಕ್ಷದ ದೊಡ್ಡ ನಾಯಕ ಯಾರು? ಮಹಾತ್ಮ ಗಾಂಧೀಜಿ ಅವರು ನಮ್ಮ ಪಕ್ಷದ ಧುರೀಣರು. ಸತ್ಯ ಹಾಗೂ ಅಹಿಂಸೆಯ ಆಧಾರದ ಮೇಲೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯಿತು. ಸತ್ಯಮೇವ ಜಯತೆ ಎಂಬ ತತ್ವದಂತೆ ಹೋರಾಟ ಮಾಡಲಾಯಿತು. ಹಿಂದು ಧರ್ಮದ ಬೋಧನೆ, ಆಶಯಗಳಂತೆ ಹೋರಾಟ ಮಾಡಲಾಯಿತು” ಎಂದು ಹೇಳಿದರು.

“ಸ್ವಾತಂತ್ರ್ಯ ಹೋರಾಟದ ವೇಳೆ ದೇಶಕ್ಕಾಗಿ ಎಲ್ಲರೂ ತ್ಯಾಗ ಮಾಡಿದರು. ಜವಾಹರ ಲಾಲ್‌ ನೆಹರು ಸೇರಿ ಹಲವು ನಾಯಕರು 13-14 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಮಹಾತ್ಮ ಗಾಂಧೀಜಿ ಅವರಿಗೆ ಗುಂಡು ತಗುಲಿ, ಅವರು ಇನ್ನೇನು ಪ್ರಾಣ ಬಿಡಬೇಕು ಎನ್ನುವ ಮೊದಲು, ಅವರು ಹೇ ರಾಮ್‌ ಎಂದು ಹೇಳಿದ್ದರು. ಇಷ್ಟೆಲ್ಲ ಇರುವಾಗ ಕಾಂಗ್ರೆಸ್‌ ಹೇಗೆ ಹಿಂದು ವಿರೋಧಿಯಾಗುತ್ತದೆ? ಖಂಡಿತವಾಗಿಯೂ ನಾವು ಹಿಂದು ವಿರೋಧಿಗಳು ಅಲ್ಲ. ರಾಹುಲ್‌ ಗಾಂಧಿ ಅವರು ಬೇರೆಯವರಿಗಿಂತ ಹಿಂದುತ್ವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ” ಎಂದು ಸಂದರ್ಶನದ ವೇಳೆ ಪ್ರಿಯಾಂಕಾ ವಾದ್ರಾ ಸ್ಪಷ್ಟಪಡಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ತೆರಳದಿರುವ ಕುರಿತು ಬಿಜೆಪಿ ಆರೋಪಗಳ ಬಗೆಗಿನ ಪ್ರಶ್ನೆಗೂ ಪ್ರಿಯಾಂಕಾ ವಾದ್ರಾ ಉತ್ತರಿಸಿದರು. “ಬಿಜೆಪಿಯು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯಿತು. ಇದಾದ ಬಳಿಕ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳಲಾಯಿತು. ಹಾಗಾಗಿ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಹೋಗದಿರುವುದು ತಪ್ಪು ನಿರ್ಧಾರ ಎಂಬುದಾಗಿ ಹೇಳಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. “ದೇಶದಲ್ಲಿ ಧರ್ಮ ಸೇರಿ ಹಲವು ಸೂಕ್ಷ್ಮ ವಿಚಾರಗಳನ್ನು ಬಿಜೆಪಿ, ನರೇಂದ್ರ ಮೋದಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಧರ್ಮರಹಿತವಾಗಿ ಎಲ್ಲರಿಗೂ ಯೋಜನೆಗಳನ್ನು ಕಲ್ಪಿಸುವುದು ಕಾಂಗ್ರೆಸ್‌ ಗ್ಯಾರಂಟಿಯಾಗಿದೆ” ಎಂದರು.

ಇದನ್ನೂ ಓದಿ: Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

Continue Reading
Advertisement
PBKS vs SRH
ಕ್ರೀಡೆ9 mins ago

PBKS vs SRH: ಸೋಲಿನ ಮೂಲಕ ಅಭಿಯಾನ ಮುಗಿಸಿದ ಪಂಜಾಬ್​; ಹೈದರಾಬಾದ್​​ಗೆ 4 ವಿಕೆಟ್​ ಜಯ

West Nile fever Health department on alert
ಆರೋಗ್ಯ40 mins ago

West Nile fever : ಕೇರಳದಲ್ಲಿ ವೆಸ್ಟ್‌ ನೈಲ್ ಭೀತಿ; ಮೈಸೂರು ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

Great Khali
ದೇಶ43 mins ago

Great Khali: ಜಗತ್ತಿನ ಕುಬ್ಜ ಮಹಿಳೆಯನ್ನು ಮಗುವಿನಂತೆ ಎತ್ತಿ ಆಡಿಸಿದ ಗ್ರೇಟ್‌ ಖಲಿ; ಜನ ಕೆಂಡವಾಗಿದ್ದು ಏಕೆ?

Kalki 2898 AD
ಪ್ರಮುಖ ಸುದ್ದಿ47 mins ago

Kalki 2898 AD: ಮೇ 22ಕ್ಕೆ ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ; ಕಲ್ಕಿ ಚಿತ್ರದ 5ನೇ ಸೂಪರ್ ಸ್ಟಾರ್ ಯಾರು?

RCB vs CSK
ಕ್ರೀಡೆ1 hour ago

RCB vs CSK: ಆನ್​ಲೈನ್​ ವೀಕ್ಷಣೆಯಲ್ಲೂ ದಾಖಲೆ ಬರೆದ ಆರ್​ಸಿಬಿ-ಚೆನ್ನೈ ಪಂದ್ಯ

Rain News
ಕರ್ನಾಟಕ1 hour ago

Rain News: ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು, ಯುವಕನಿಗೆ ಗಂಭೀರ ಗಾಯ

Prajwal Revanna Case
ಕರ್ನಾಟಕ2 hours ago

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Rohit Sharma
ಕ್ರೀಡೆ2 hours ago

Rohit Sharma: ಐಪಿಎಲ್ ಪ್ರಸಾರಕರ ವಿರುದ್ಧ ಕಿಡಿ ಕಾರಿದ ಹಿಟ್​ಮ್ಯಾನ್​ ರೋಹಿತ್​

R Ashok
ರಾಜಕೀಯ2 hours ago

R Ashok: ರಾಜ್ಯದಲ್ಲಿ ಮಳೆಗಿಂತ ಹೆಚ್ಚಾಗಿ ಕೊಲೆಗಳೇ ನಡೆಯುತ್ತಿವೆ: ಆರ್‌.ಅಶೋಕ್‌ ಕಿಡಿ

Thailand Open 2024
ಬ್ಯಾಡ್ಮಿಂಟನ್3 hours ago

Thailand Open 2024: ಥಾಯ್ಲೆಂಡ್‌ ಓಪನ್‌ ಗೆದ್ದ ಭಾರತದ ಚಿರಾಗ್‌-ಸಾತ್ವಿಕ್‌ ಜೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ3 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು3 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌