Site icon Vistara News

Lok Sabha Election 2024: ಕೋಲಾರ ಕಾಂಗ್ರೆಸ್‌ನಲ್ಲಿ ಒಳಜಾತಿ ಪಾಲಿಟಿಕ್ಸ್;‌ ದಲಿತ ಬಲಗೈ-ಎಡಗೈ ಫೈಟ್!

KH Muniyappa and Ramesh kumar

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಪ್ರತಿ ದಿನ ಕಾವೇರುತ್ತಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿವೆ. ಈ ವೇಳೆ ಸಮುದಾಯವಾರು, ಸಂಘಟನೆವಾರು ಸೇರಿದಂತೆ ಯಾರಿಗೆ ಕೊಟ್ಟರೆ ಗೆಲುವು ಸುಲಭ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಕಾಂಗ್ರೆಸ್‌ ಸಹ ಅಭ್ಯರ್ಥಿ ಆಯ್ಕೆಯಲ್ಲಿ ಜಾತಿ ಸಮೀಕರಣವನ್ನು ಮಾಡುತ್ತಿದೆ. ಇದೇ ರೀತಿಯಾಗಿ ಕೋಲಾರ ಕಾಂಗ್ರೆಸ್‌ನಲ್ಲಿ (Kolara Congress) ಟಿಕೆಟ್‌ ಫೈಟ್‌ ಜೋರಾಗಿಯೇ ನಡೆಯುತ್ತಿದೆ. ಸಚಿವ ಕೆ.ಎಚ್. ಮುನಿಯಪ್ಪ‌ (KH Muniyappa) ಮತ್ತು ರಮೇಶ್ ಕುಮಾರ್ (Ramesh Kumar) ನಡುವೆ ಒಳಜಾತಿ ಪಾಲಿಟಿಕ್ಸ್ (Inter caste politics) ಹೆಚ್ಚಾಗಿದೆ.

ಉಭಯ ಬಣಗಳಿಂದ ಒಳಜಾತಿ ಪಾಲಿಟಿಕ್ಸ್ ಜಾಸ್ತಿಯಾಗಿದ್ದು, ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಮೀಸಲು ಕ್ಷೇತ್ರದಲ್ಲಿ ದಲಿತ ಬಲಗೈ, ಎಡಗೈ ಫೈಟ್‌ ಜೋರಾಗಿಯೇ ನಡೆಯುತ್ತಿದೆ. ಈ ಬಾರಿಯೂ ದಲಿತ ಎಡಗೈಗೆ ಟಿಕೆಟ್ ಕೊಡಬೇಕು ಎಂದು ಸಚಿವ ಕೆ.ಎಚ್. ಮುನಿಯಪ್ಪ‌ ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ದಲಿತ ಬಲಗೈ ಸಮುದಾಯದ ಮತಗಳು ಹೆಚ್ಚಿವೆ. ಆದರೂ ಈವರೆಗೆ ದಲಿತ ಬಲಗೈಗೆ ಈ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿಲ್ಲ. ಹಾಗಾಗಿ ಈ ಬಾರಿ ದಲಿತ ಬಲಗೈಗೆ ಟಿಕೆಟ್ ಕೊಡಬೇಕು ಎಂದು ರಮೇಶ್ ಕುಮಾರ್ ಟೀಮ್ ಪಟ್ಟು ಹಿಡಿದು ಕುಳಿತಿದೆ. ಹಾಗಾಗಿ ಕ್ಷೇತ್ರ ಮತದಾರ ಅಂಕಿ – ಅಂಶಗಳ‌ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರಿಗೆ ನೀಡಲಾಗಿದೆ.

ಟಿಕೆಟ್‌ ಆಕಾಂಕ್ಷಿತ ದಲಿತ ಎಡಗೈ ಸಮುದಾಯದ ನಾಯಕರು

ಟಿಕೆಟ್‌ ಆಕಾಂಕ್ಷಿತ ದಲಿತ ಬಲಗೈ ಸಮುದಾಯದ ಲಿಸ್ಟ್

ಮತದಾರರ ಜಾತಿವಾರು ಅಂದಾಜು ಅಂಕಿ – ಅಂಶಗಳು

ಇದನ್ನೂ ಓದಿ: Lok Sabha Election 2024: ಸೋಮಣ್ಣಗೆ ತುಮಕೂರು ಟಿಕೆಟ್‌ ಖಾತ್ರಿ? ಕೊಬ್ಬರಿ ನಾಡಿನ ಬಗ್ಗೆ ತಮಗೇ ಹೆಚ್ಚು ಗೊತ್ತೆಂದ ಮಾಜಿ ಸಚಿವ!

ಕಾಂಗ್ರೆಸ್‌ ಭಯಕ್ಕೆ ಏನು ಕಾರಣ?

ಈಗಾಗಲೇ ರಾಜ್ಯ ಕಾಂಗ್ರೆಸ್‌ ನಾಯಕರು ಬಾಕಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಸೋಮವಾರ ನಡೆದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಬಹುದು ಎಂಬ ಲಿಸ್ಟ್‌ ನೀಡಿದ್ದಾರೆ. ಇವರಲ್ಲಿ ಭಾರಿ ಫೈಟ್‌ ಇರುವ ಕೆಲವು ಕ್ಷೇತ್ರಗಳಲ್ಲಿ 2 – 3 ಅಭ್ಯರ್ಥಿಗಳ ಹೆಸರನ್ನು ಸೂಚಿಸಲಾಗಿದೆ. ಆದರೆ, ಅಂತಿಮವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಯಾರನ್ನು ಆಯ್ಕೆ ಮಾಡಲಿದೆ ಎಂಬುದು ಸದ್ಯದ ಕುತೂಹಲವಾಗಿದೆ. ಇದಕ್ಕಾಗಿಯೇ ಈಗ ಕೋಲಾರದಲ್ಲಿ ದಲಿತ ಬಲಗೈ – ಎಡಗೈ ಸಮುದಾಯದ ನಾಯಕರ ನಡುವೆ ಒಳಜಗಳ ಶುರುವಾಗಿದೆ. ತಮ್ಮ ವರಿಗೇ ಟಿಕೆಟ್‌ ಕೊಡಬೇಕು ಎಂದು ಲಾಬಿಯನ್ನು ಶುರು ಮಾಡಿದ್ದಾರೆ. ಈಗ ಯಾರಿಗೇ ಟಿಕೆಟ್‌ ಕೊಟ್ಟರೂ ಮತ್ತೊಂದು ಬಣದ ಸಿಟ್ಟನ್ನು ಚುನಾವಣೆಯಲ್ಲಿ ಎದುರಿಸಬೇಕಾದೀತು ಎಂಬುದೇ ಕಾಂಗ್ರೆಸ್‌ ಭಯಕ್ಕೆ ಕಾರಣವಾಗಿದೆ.

Exit mobile version