Site icon Vistara News

Lok sabha election: 2019ರಲ್ಲಿ 77 ಕ್ಷೇತ್ರಗಳಲ್ಲಿ ಪ್ರಯಾಸದ ಗೆಲುವು ಕಂಡಿದ್ದ ಬಿಜೆಪಿ; ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ

Lok Sabha Elections-2024

ಲೋಕಸಭಾ ಚುನಾವಣೆ- 2019ರಲ್ಲಿ (Lok sabha election) ಭರ್ಜರಿ ಜಯಭೇರಿ ಸಾಧಿಸಿದ್ದ ಬಿಜೆಪಿ (BJP) ದೇಶದ ಅತೀ ದೊಡ್ಡ ರಾಷ್ಟ್ರೀಯ ಪಕ್ಷವಾಗಿ (national party) ಹೊರಹೊಮ್ಮಿದ್ದರೂ 40 ಲೋಕಸಭಾ ಸ್ಥಾನಗಳನ್ನು 50,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಹಾಗೂ 77 ಸ್ಥಾನಗಳನ್ನು ಒಂದು ಲಕ್ಷಕ್ಕಿಂತ ಕಡಿಮೆ ಮತಗಳ (vote) ಅಂತರದಲ್ಲಿ ಗೆದ್ದುಕೊಂಡಿತ್ತು.

ಇದರಲ್ಲಿ ತೀವ್ರ ಪೈಪೋಟಿಗೆ ಕಾರಣವಾಗಿದ್ದ ಕ್ಷೇತ್ರ ಉತ್ತರಪ್ರದೇಶದ (uttarpradesh) ಮಚ್ಲಿಶಹರ್. ಇಲ್ಲಿ ಬಿಜೆಪಿ ಅಭ್ಯರ್ಥಿಯು ಕೇವಲ 181 ಮತಗಳ ಅಂತರದಿಂದ ಗೆಲುವು ದಾಖಲಿಸಿತ್ತು. 2019 ರಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದುಕೊಂಡಿತು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದ 303 ಲೋಕಸಭಾ ಕ್ಷೇತ್ರದಲ್ಲಿ 40 ಸ್ಥಾನಗಳಲ್ಲಿ 50,000 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದೆ. ಇದನ್ನು ಸಾಮಾನ್ಯವಾಗಿ ರಿವರ್ಸಿಬಲ್ ಮಾರ್ಜಿನ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಅದು ಕಡಿಮೆ ನಷ್ಟವನ್ನು ಹೊಂದಿದೆ. ಈ ಸ್ಥಾನಗಳಲ್ಲಿ ವಿಪಕ್ಷಗಳ ಪಾಲಾಗಿದ್ದರೆ ಅದರ ಸಾಮರ್ಥ್ಯ 263ಕ್ಕೆ ಇಳಿಸಬಹುದಿತ್ತು. 543 ಸದಸ್ಯರನ್ನು ಹೊಂದಿರುವ ಲೋಕಸಭೆಯಲ್ಲಿ 272 ಬಹುಮತ ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: Lok sabha election: 2019ರ ಅವಲೋಕನ; ಗರಿಷ್ಠ- ಕನಿಷ್ಠ ಮತಗಳ ಅಂತರದಿಂದ ಗೆದ್ದವರು


ಯಾವ ಪಕ್ಷಗಳ ವಿರುದ್ಧ ?

2019ರ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ಸಿಕ್ಕಿರುವ 40 ಸಣ್ಣ ವಿಜಯಗಳಲ್ಲಿ 11 ಕಾಂಗ್ರೆಸ್ ಪಕ್ಷದ ವಿರುದ್ಧವಾಗಿತ್ತು. ಆರು ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ ಮತ್ತು ಬಿಜು ಜನತಾ ದಳ ವಿರುದ್ಧ, ನಾಲ್ಕು ತೃಣಮೂಲ ಕಾಂಗ್ರೆಸ್ ವಿರುದ್ಧ, ಎರಡು ವಿರುದ್ಧ ರಾಷ್ಟ್ರೀಯ ಲೋಕದಳ ಮತ್ತು ತಲಾ ಒಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಜಾರ್ಖಂಡ್ ಮುಕ್ತಿ ಮೋರ್ಚಾ, ಜನತಾ ದಳ (ಜಾತ್ಯತೀತ) ಮತ್ತು ಸ್ವತಂತ್ರ ಅಭ್ಯರ್ಥಿಯ ವಿರುದ್ಧವಾಗಿತ್ತು.

ಎಲ್ಲಿ ಹೆಚ್ಚಿನ ಸಣ್ಣ ಗೆಲುವು?

ಬಿಜೆಪಿಗೆ ಸಿಕ್ಕಿದ್ದ 40 ಸಣ್ಣ ಗೆಲುವುಗಳಲ್ಲಿ ಹದಿನಾಲ್ಕು ಲೋಕಸಭಾ ಚುನಾವಣೆ ಫಲಿತಾಂಶದ ನಿರ್ಣಾಯಕ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಸಿಕ್ಕಿದೆ.

ಯಾವ ಕ್ಷೇತ್ರದಲ್ಲಿ ಯಾರು ?

ಒಂದು ಲಕ್ಷಕ್ಕಿಂತ ಕಡಿಮೆ ಮತಗಳ ಅಂತರ ಪಡೆದ ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ 10 ಸ್ಥಾನಗಳಲ್ಲಿ ಮಚ್ಲಿಶಹರ್ ನ ಬಿ.ಪಿ. ಸರೋಜ್ -181, ಕುಂತಿಯಲ್ಲಿ- ಅರ್ಜುನ್ ಮುಂಡ- 1,445, ಚಾಮರಾಜನಗರದಲ್ಲಿ- ಶ್ರೀನಿವಾಸ್ ಪ್ರಸಾದ್- 1,817, ಬರ್ಧಮಾನ್-ದುರ್ಗಾಪುರದಲ್ಲಿ-2,439 , ಮೀರತ್ ನಲ್ಲಿ ರಾಜೇಂದ್ರ ಅಗರ್ವಾಲ್ -4,729, ಮುಜಾಫರ್ ನಗರ್ ದಲ್ಲಿ ಸಂಜೀವ್ ಕುಮಾರ್ ಬಲ್ಯಾನ್-6,526, ಕಾಂಕೇರ್ ನಲ್ಲಿ- ಮೋಹನ್ ಮಾಂಡವಿ-6,914 , ರೊಹ್ತಾಕ್ ನಲ್ಲಿ- ಅರವಿಂದ್ ಕುಮಾರ್ ಶರ್ಮ- 7,503, ಸಂಬಲ್ಪುರ್ ನಲ್ಲಿ ನಿತೀಶ್ ಗಂಗದೇವ್-9,162 , ದಾಮನ್ ಆಂಡ್ ದಿಯು ನಲ್ಲಿ ಲಾಲ್ ಬಾಯ್ ಬಾಬು ಬಾಯ್ ಪಟೇಲ್-9,942 ಈ ಹತ್ತು ಕ್ಷೇತ್ರಗಳಲ್ಲಿ ೧೦ ಸಾವಿರಕ್ಕಿಂತಲೂ ಕಡಿಮೆ ಅಂತರದಲ್ಲಿ ಬಿಜೆಪಿ ಜಯಗಳಿಸಿತ್ತು.

Exit mobile version