Site icon Vistara News

Lok Sabha Election 2024: ಜಯಪ್ರಕಾಶ್ ಹೆಗ್ಡೆ 16 ಕೋಟಿ ರೂ. ಒಡೆಯ; ಕೋಟ ಶ್ರೀನಿವಾಸ್‌ ಪೂಜಾರಿ ಆಸ್ತಿ ಎಷ್ಟು?

Lok Sabha Election 2024 Jayaprakash Hegde have Rs 16 crore asset and what is Kota Srinivas Poojary asset worth

ಉಡುಪಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Udupi Chikkamagaluru Lok Sabha constituency) ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (Jayaprakash Hegde) ಹಾಗೂ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್‌ ಪೂಜಾರಿ (Kota Srinivas Poojary) ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ಇದೇ ವೇಳೆ ಅಫಿಡವಿಟ್‌ನಲ್ಲಿ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಇಬ್ಬರ ಆಸ್ತಿ ಮೌಲ್ಯವನ್ನು ತುಲನೆ ಮಾಡಿದಾಗ ಜಯಪ್ರಕಾಶ್‌ ಹೆಗ್ಡೆ ಅವರ ಆಸ್ತಿಯು ಕೋಟ ಶ್ರೀನಿವಾಸ್‌ ಪೂಜಾರಿ ಅವರಿಗಿಂತ ಸರಿಸುಮಾರು 5 ಪಟ್ಟು ಜಾಸ್ತಿ ಇದೆ.

ಜಯಪ್ರಕಾಶ್‌ ಹೆಗ್ಡೆ ಆಸ್ತಿ ವಿವರ

ಚರಾಸ್ತಿ

ಜಯಪ್ರಕಾಶ್ ಹೆಗ್ಡೆ- ನಗದು- 85,000 ರೂ.
ಶೋಭಾ ಜೆ. ಹೆಗ್ಡೆ – ನಗದು- 92,000 ರೂ.

ವಿವಿಧ ಬ್ಯಾಂಕ್‌ಗಳಲ್ಲಿ

ಜಯಪ್ರಕಾಶ್ ಹೆಗ್ಡೆ – 31,02, 324
ಪತ್ನಿ ಶೋಭಾ – 6,34,219

ಶೇರು – ಬಾಂಡ್‌ಗಳ ಹೂಡಿಕೆ
ಹೆಗ್ಡೆ – 34,000 ರೂ.
ಪತ್ನಿ – 7,79,136 ರೂ.

ವಿಮೆ- ಪತ್ನಿ – 2,27,188 ರೂ.
ಇಬ್ಬರಿಗೂ ಸಾಲ ಇಲ್ಲ

ಚಿನ್ನ- ಬೆಳ್ಳಿ

ಜಯಪ್ರಕಾಶ್ ಹೆಗ್ಡೆ- (ಚಿನ್ನ- 3,13,000 ರೂ.), (ಬೆಳ್ಳಿ – 35,34,326 ರೂ.)
ಶೋಭಾ – (ಚಿನ್ನ – 64,41,000 ರೂ.) (ಬೆಳ್ಳಿ- 81,46,544)

ಜಯಪ್ರಕಾಶ್ ಹೆಗ್ಡೆ ಮತ್ತು ಪತ್ನಿ ಮೇಲೆ ಯಾವುದೇ ಕ್ರಿಮಿನಲ್ ಎಫ್ಐಆರ್‌ ಇಲ್ಲ

ಸ್ಥಿರ ಆಸ್ತಿ

ಭೂಮಿ, ಕೃಷಿ ಭೂಮಿ ಮತ್ತು ಕಟ್ಟಡ ಸೇರಿ ಸದ್ಯದ ಮಾರುಕಟ್ಟೆ ದರ

ಹೆಗ್ಡೆ – 13,12,61, 587 ರೂ.
ಪತ್ನಿ – 1,05,00,180 ರೂ.

ಹೆಗ್ಡೆ ಲೀಸ್ ಪಡೆದ ಹಣ 15,00,000

ಒಟ್ಟು – 16,66,50,504

ಕೋಟ ಶ್ರೀನಿವಾಸ್‌ ಪೂಜಾರಿ ಆಸ್ತಿ ವಿವರ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಅವರು, ಒಂದು ಕೋಟಿ ರೂಪಾಯಿ ಸಾಲದಲ್ಲಿದ್ದಾರೆ.

ಚರಾಸ್ಥಿ

ಕೋಟ- 31,95,082 ರೂ.
ಶಾಂತಾ- 10,29,027 ರೂ.
ಮೂವರು ಮಕ್ಕಳು- 21,96,401 ರೂ.
ಒಟ್ಟು- 64,20,510 ರೂ.

ಸ್ಥಿರಾಸ್ತಿ

ಕೋಟ ಶ್ರೀನಿವಾಸ್ ಪೂಜಾರಿ- 79,95,082 ರೂ.
ಶಾಂತಾ- 1,62,79,027 ರೂ.
ಮಕ್ಕಳು- 51,96,401 ರೂ.
ಒಟ್ಟು- 2,94,70,510 ರೂ.

ಸ್ಥಿರ ಮತ್ತು ಚರಾಸ್ತಿ ಒಟ್ಟು ಮೌಲ್ಯ 3,58,91,020 ರೂಪಾಯಿ ಆಗಿದೆ.

ಸಾಲ

ಕೋಟ ಶ್ರೀನಿವಾಸ್ ಪೂಜಾರಿ- 40,64924 ರೂ.
ಶಾಂತ – 35,43,757 ರೂ.
ಮಗ – 28,35,964 ರೂ.
ಒಟ್ಟು ಸಾಲ: 1,04,44,645

ಚಿನ್ನಾಭರಣ ಎಷ್ಟು?

ಮಾರುತಿ ಆಲ್ಟೋ – (2006 ಮಾಡೆಲ್)- ಮೌಲ್ಯ 1,50,000 ರೂ.
ಇನ್ನೋವಾ ಕಾರು (2016 ಮಾಡೆಲ್) 22,00,000 ರೂ.
ಹೋಂಡಾ ಸಿಟಿ ಮಗನ ಹೆಸರಲ್ಲಿ 16.5 ಲಕ್ಷ ರೂಪಾಯಿ

ಇದನ್ನೂ ಓದಿ: Lok Sabha Election 2024: ದಕ್ಷಿಣ ಕನ್ನಡ ಕಾಂಗ್ರೆಸ್‌ ಅಭ್ಯರ್ಥಿಗೆ ಮೈತುಂಬಾ ಸಾಲ!

ಕೋಟ ಬಳಿ ಇರುವ ಜಮೀನು

ಕೋಟ- 13 ಸೆಂಟ್ಸ್
ಶಾಂತಾ- 56 ಸೆಂಟ್ಸ್
ಶಶಿಧರ್- ಮಗ- 20 ಸೆಂಟ್ಸ್

Exit mobile version