Site icon Vistara News

Lok Sabha Election 2024: ಇಂದಿನಿಂದ 3 ದಿನ ಬೆಂಗಳೂರಲ್ಲಿ ಮದ್ಯ ಮಾರಾಟ ಇಲ್ಲ; ಮತ್ತೂ 1 ದಿನ ಸಿಗಲ್ಲ ಎಣ್ಣೆ!

Lok Sabha Election 2024 No sale of liquor in Bengaluru for 3 days from today

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ (First phase of polling) ನಡೆಯಲಿದೆ. ಈ ವೇಳೆ 14 ಲೋಕಸಭಾ ಕ್ಷೇತ್ರಗಳಿಗೆ ಕೆಲವು ನಿಯಮಗಳು ಅನ್ವಯವಾಗಲಿದೆ. ಈ ಸಂಬಂಧ ಈಗ ಬೆಂಗಳೂರು ನಗರದಲ್ಲಿ ಬುಧವಾರ (ಏಪ್ರಿಲ್‌ 24) ಸಂಜೆ 5 ಗಂಟೆಯಿಂದ ಏಪ್ರಿಲ್‌ 26ರ ಮಧ್ಯರಾತ್ರಿ ವರೆಗೆ ಎಲ್ಲ ರೀತಿಯ ಮದ್ಯ ಮಾರಾಟವನ್ನು (Sale of liquor) ನಿಷೇಧಿಸಿ ಆದೇಶಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಇಲಾಖೆ ಈ ನಿರ್ದೇಶನವನ್ನು ನೀಡಿದೆ. ಏಪ್ರಿಲ್ 24ರ ಬುಧವಾರ ಸಂಜೆ 5 ರಿಂದ ಏಪ್ರಿಲ್ 26 ರ ಮಧ್ಯರಾತ್ರಿವರೆಗೆ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ.

ಮತ ಎಣಿಕೆ ದಿನವೂ ಬೆಂಗಳೂರಲ್ಲಿ ಇಲ್ಲ ಮದ್ಯ ಮಾರಾಟ

ಬೆಂಗಳೂರಿನಲ್ಲಿ ಮತ ಎಣಿಕೆ ದಿನವೂ ಒಂದಿಡೀ ದಿನ ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿದೆ. ಜೂನ್ 3ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 4 ರ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಿ ಆದೇಶಿಸಲಾಗಿದೆ.

ಈ ಸಮಯದಲ್ಲಿ ಅಂಗಡಿಗಳು, ಬಾರ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸೇರಿದಂತೆ ಯಾವುದೇ ಸಂಸ್ಥೆಗಳು ಮದ್ಯ ಮಿಶ್ರಿತ ಪಾನೀಯಗಳನ್ನು ಮಾರಾಟ ಮಾಡುವಂತಿಲ್ಲ. ಈ ಎಲ್ಲದಕ್ಕೂ ನಿರ್ಬಂಧವನ್ನು ವಿಧಿಸಲಾಗಿದೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಆಹಾರ ಮತ್ತು ಆಲ್ಕೊಹಾಲ್‌ಯುಕ್ತವಲ್ಲದ ಪಾನೀಯಗಳನ್ನು ನೀಡಲು ಅನುಮತಿ ಇದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಆದೇಶದಲ್ಲೇನಿದೆ?

“ನಾನು, ಡೆಪ್ಯುಟಿ ಕಮಿಷನರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು, ಸರ್ಕಾರದ ಕರ್ನಾಟಕ ಅಬಕಾರಿ ಕಾಯಿದೆಗಳ (ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ನಿಯಮ-10 (ಬಿ) ಸೆಕ್ಷನ್ 135 (ಸಿ) ಮೂಲಕ ಪ್ರದಾನ ಮಾಡಲಾದ ಅಧಿಕಾರಗಳನ್ನು ಚಲಾಯಿಸುವಾಗ ಮತ್ತು ಪ್ರಜಾಪ್ರತಿನಿಧಿ ಕಾಯಿದೆ, 1951 ಮತದಾನದ ದಿನಾಂಕ: 24-04-2024 ರಿಂದ ಸಂಜೆ 5.00 ರವರೆಗೆ ದಿನಾಂಕ: 26-04-2024 12.00 ಮಧ್ಯರಾತ್ರಿ ಮತ್ತು ಎಣಿಕೆ ದಿನಾಂಕ: 03-06-2024 12.00 ಮಧ್ಯರಾತ್ರಿಯಿಂದ 12.04-4 ಮಧ್ಯರಾತ್ರಿ 6 ರಂದು 24-04-2024 ರವರೆಗೆ ಬೆಂಗಳೂರು ನಗರ ಜಿಲ್ಲೆ (ಪೊಲೀಸ್ ಕಮಿಷನರೇಟ್ ಪ್ರದೇಶ ಹೊರತುಪಡಿಸಿ) ಎಲ್ಲ ರೀತಿಯ ಮದ್ಯ ಉತ್ಪಾದನೆ, ಮಾರಾಟ, ವಿತರಣೆ, ಸಾಗಣೆ, ಸಂಗ್ರಹಣೆ ಇತ್ಯಾದಿಗಳನ್ನು ನಿಷೇಧಿಸಿ ಆದೇಶವನ್ನು ಜಾರಿಗೊಳಿಸಿ ಮತ್ತು ‘ಡ್ರೈ ಡೇಸ್’ ಎಂದು ಘೋಷಿಸಲಾಗಿದೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 26ಕ್ಕೆ ಮೊದಲ ಹಂತದ ಮತದಾನ; ಸಾರ್ವತ್ರಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಏಪ್ರಿಲ್ 24 ರಂದು ಸಂಜೆ 6 ರಿಂದ ಏಪ್ರಿಲ್ 26 ರ ಮಧ್ಯರಾತ್ರಿಯವರೆಗೆ ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version