Site icon Vistara News

Lok Sabha Election: ಒಂದೇ ಒಂದು ಕುಟುಂಬಕ್ಕಾಗಿ ಪ್ರತ್ಯೇಕ ಮತಗಟ್ಟೆ! ಹೀಗೂ ಉಂಟು!

Lok Sabha Election-2024

ಶ್ರೀನಗರ: ಲೋಕಸಭಾ ಚುನಾವಣೆ 2024 (Lok Sabha Election-2024) ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಕೇವಲ ಐದು ಮಂದಿ ಮತದಾರರಿಗಾಗಿ (voters) ಮತದಾನ ಕೇಂದ್ರವನ್ನು (voting booth) ತೆರೆದಿರುವುದು ಕೂಡ ಒಂದು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ (Ladakh) ಲೇಹ್ (Leh) ಜಿಲ್ಲೆಯ ವಾಶಿ (Washi ) ಎಂಬ ದೂರದ ಹಳ್ಳಿಯಲ್ಲಿ ಒಂದು ಕುಟುಂಬದ ಐದು ಸದಸ್ಯರಿಗೆ ಚುನಾವಣಾ ಅಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಡಾಖ್ ನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಯತೀಂದ್ರ ಎಂ. ಮರಾಲ್ಕರ್, ಲೇಹ್‌ನಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ನುಬ್ರಾದ ವಾಶಿ ಎಂಬ ದೂರದ ಹಳ್ಳಿಯಲ್ಲಿ ಟೆಂಟ್ ಅಡಿಯಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ಪ್ರಯತ್ನಗಳ ಭಾಗವಾಗಿ ಶೇ. 100ರಷ್ಟು ಮತದಾನವಾಗಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಪಾಲ್ಗೊಳ್ಳಬೇಕು. ಇದಕ್ಕಾಗಿ ದೂರದೂರದ ಸ್ಥಳಗಳಲ್ಲೂ, ಅತ್ಯಲ್ಪ ಮತದಾರರು ಇರುವಲ್ಲೂ ಎಲ್ಲರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಎಲೆಕ್ಷನ್‌ ಹೊತ್ತಲ್ಲೇ ಕಾಂಗ್ರೆಸ್‌ಗೆ ಬಿಗ್‌ ಶಾಕ್! ಕನ್ಹಯ್ಯ ಕುಮಾರ್‌ಗೆ ಸ್ವಪಕ್ಷದಲ್ಲೇ ವಿರೋಧ

ಮೇ 20ರಂದು ಮತದಾನ

ಲಡಾಖ್ ಲೋಕಸಭಾ ಸ್ಥಾನಕ್ಕೆ ಮೇ 20ರಂದು 5ನೇ ಹಂತದಲ್ಲಿ ಮತದಾನ ನಡೆಯಲಿದೆ. ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಅನಂತರ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯವನ್ನು ಎರಡು ಯುಟಿಗಳಾಗಿ ವಿಭಜಿಸಿದಬಳಿಕ ಶೀತ ಮರುಭೂಮಿ ಪ್ರದೇಶದಲ್ಲಿ ಮೊದಲ ಬಾರಿಗೆ ಮತದಾನ ನಡೆಯಲಿದೆ.


ಐವರು ಮತದಾರರು

ಒಂದೇ ಕುಟುಂಬದ ಐವರು ಗ್ರಾಮದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು, ಟೆಂಟ್‌ ಹಾಕಿದ ಮತಗಟ್ಟೆ ಅವರ ಮನೆ ಬಾಗಿಲಿಗೆ ಬಂದಿದೆ ಎಂದು ಮಾರಲ್ಕರ್ ಹೇಳಿದರು.

ಕುಟುಂಬವು ಆರು ಸದಸ್ಯರನ್ನು ಒಳಗೊಂಡಿದೆ ಮತ್ತು ಅವರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕುಟುಂಬದ ಮುಖ್ಯಸ್ಥ ರೈತನಾಗಿದ್ದಾನೆ.

ಲಡಾಖ್ ನಲ್ಲಿ 1,82,571 ಮತದಾರರು

ಲಡಾಖ್ ಯುಟಿಯು ಎರಡು ಜಿಲ್ಲೆಗಳನ್ನು ಒಳಗೊಂಡಿದೆ. ಮುಸ್ಲಿಂ ಪ್ರಾಬಲ್ಯದ ಕಾರ್ಗಿಲ್ ಮತ್ತು ಬೌದ್ಧ ಪ್ರಾಬಲ್ಯದ ಲೇಹ್. 91,703 ಪುರುಷರು ಮತ್ತು 90868 ಮಹಿಳೆಯರು ಸೇರಿದಂತೆ ಒಟ್ಟು 1,82,571 ಮತದಾರರು ಇಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

577 ಮತಗಟ್ಟೆಗಳು

ಚುನಾವಣಾ ಆಯೋಗವು ಯುಟಿಯಾದ್ಯಂತ 577 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದರಲ್ಲಿ 33 ನಗರ ಮತ್ತು 544 ಗ್ರಾಮೀಣ ಪ್ರದೇಶಗಳಲ್ಲಿ ಸೇರಿವೆ. ಲಡಾಖ್‌ನಲ್ಲಿ ಕೆಲವು ಮತಗಟ್ಟೆಗಳ ದುರ್ಗಮತೆಯನ್ನು ಗಮನದಲ್ಲಿಟ್ಟುಕೊಂಡು ದೂರದ ಹಳ್ಳಿಗಳಿಗೆ ಚುನಾವಣಾ ಸಾಮಗ್ರಿಗಳು ಮತ್ತು ಸಿಬ್ಬಂದಿಯನ್ನು ವಿಮಾನದಲ್ಲಿ ರವಾನಿಸಲಾಗುತ್ತದೆ.

Exit mobile version