Lok Sabha Election: ಒಂದೇ ಒಂದು ಕುಟುಂಬಕ್ಕಾಗಿ ಪ್ರತ್ಯೇಕ ಮತಗಟ್ಟೆ! ಹೀಗೂ ಉಂಟು! - Vistara News

Lok Sabha Election 2024

Lok Sabha Election: ಒಂದೇ ಒಂದು ಕುಟುಂಬಕ್ಕಾಗಿ ಪ್ರತ್ಯೇಕ ಮತಗಟ್ಟೆ! ಹೀಗೂ ಉಂಟು!

Lok Sabha Election 2024: ಒಂದೇ ಕುಟುಂಬದ ಐದು ಮಂದಿಗಾಗಿ ಲೇಹ್ ಜಿಲ್ಲೆಯ ವಾಶಿ ಎಂಬ ಹಳ್ಳಿಯಲ್ಲಿಚುನಾವಣಾ ಅಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಚುನಾವಣಾ ಆಯೋಗದ ಪ್ರಯತ್ನಗಳ ಭಾಗವಾಗಿ ಶೇ. 100ರಷ್ಟು ಮತದಾನವಾಗಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಪಾಲ್ಗೊಳ್ಳಬೇಕು. ಇದಕ್ಕಾಗಿ ದೂರದೂರದ ಸ್ಥಳಗಳಲ್ಲೂ, ಅತ್ಯಲ್ಪ ಮತದಾರರು ಇರುವಲ್ಲೂ ಎಲ್ಲರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರವನ್ನು ತೆರೆಯಲಾಗಿದೆ.

VISTARANEWS.COM


on

Lok Sabha Election-2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಲೋಕಸಭಾ ಚುನಾವಣೆ 2024 (Lok Sabha Election-2024) ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಕೇವಲ ಐದು ಮಂದಿ ಮತದಾರರಿಗಾಗಿ (voters) ಮತದಾನ ಕೇಂದ್ರವನ್ನು (voting booth) ತೆರೆದಿರುವುದು ಕೂಡ ಒಂದು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನ (Ladakh) ಲೇಹ್ (Leh) ಜಿಲ್ಲೆಯ ವಾಶಿ (Washi ) ಎಂಬ ದೂರದ ಹಳ್ಳಿಯಲ್ಲಿ ಒಂದು ಕುಟುಂಬದ ಐದು ಸದಸ್ಯರಿಗೆ ಚುನಾವಣಾ ಅಧಿಕಾರಿಗಳು ಮತದಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಡಾಖ್ ನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಯತೀಂದ್ರ ಎಂ. ಮರಾಲ್ಕರ್, ಲೇಹ್‌ನಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ನುಬ್ರಾದ ವಾಶಿ ಎಂಬ ದೂರದ ಹಳ್ಳಿಯಲ್ಲಿ ಟೆಂಟ್ ಅಡಿಯಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ಪ್ರಯತ್ನಗಳ ಭಾಗವಾಗಿ ಶೇ. 100ರಷ್ಟು ಮತದಾನವಾಗಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನೂ ಪಾಲ್ಗೊಳ್ಳಬೇಕು. ಇದಕ್ಕಾಗಿ ದೂರದೂರದ ಸ್ಥಳಗಳಲ್ಲೂ, ಅತ್ಯಲ್ಪ ಮತದಾರರು ಇರುವಲ್ಲೂ ಎಲ್ಲರಿಗೂ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ಮತದಾನ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಎಲೆಕ್ಷನ್‌ ಹೊತ್ತಲ್ಲೇ ಕಾಂಗ್ರೆಸ್‌ಗೆ ಬಿಗ್‌ ಶಾಕ್! ಕನ್ಹಯ್ಯ ಕುಮಾರ್‌ಗೆ ಸ್ವಪಕ್ಷದಲ್ಲೇ ವಿರೋಧ

ಮೇ 20ರಂದು ಮತದಾನ

ಲಡಾಖ್ ಲೋಕಸಭಾ ಸ್ಥಾನಕ್ಕೆ ಮೇ 20ರಂದು 5ನೇ ಹಂತದಲ್ಲಿ ಮತದಾನ ನಡೆಯಲಿದೆ. ಆರ್ಟಿಕಲ್ 370 ಅನ್ನು ರದ್ದುಗೊಳಿಸಿದ ಅನಂತರ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜ್ಯವನ್ನು ಎರಡು ಯುಟಿಗಳಾಗಿ ವಿಭಜಿಸಿದಬಳಿಕ ಶೀತ ಮರುಭೂಮಿ ಪ್ರದೇಶದಲ್ಲಿ ಮೊದಲ ಬಾರಿಗೆ ಮತದಾನ ನಡೆಯಲಿದೆ.


ಐವರು ಮತದಾರರು

ಒಂದೇ ಕುಟುಂಬದ ಐವರು ಗ್ರಾಮದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು, ಟೆಂಟ್‌ ಹಾಕಿದ ಮತಗಟ್ಟೆ ಅವರ ಮನೆ ಬಾಗಿಲಿಗೆ ಬಂದಿದೆ ಎಂದು ಮಾರಲ್ಕರ್ ಹೇಳಿದರು.

ಕುಟುಂಬವು ಆರು ಸದಸ್ಯರನ್ನು ಒಳಗೊಂಡಿದೆ ಮತ್ತು ಅವರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕುಟುಂಬದ ಮುಖ್ಯಸ್ಥ ರೈತನಾಗಿದ್ದಾನೆ.

ಲಡಾಖ್ ನಲ್ಲಿ 1,82,571 ಮತದಾರರು

ಲಡಾಖ್ ಯುಟಿಯು ಎರಡು ಜಿಲ್ಲೆಗಳನ್ನು ಒಳಗೊಂಡಿದೆ. ಮುಸ್ಲಿಂ ಪ್ರಾಬಲ್ಯದ ಕಾರ್ಗಿಲ್ ಮತ್ತು ಬೌದ್ಧ ಪ್ರಾಬಲ್ಯದ ಲೇಹ್. 91,703 ಪುರುಷರು ಮತ್ತು 90868 ಮಹಿಳೆಯರು ಸೇರಿದಂತೆ ಒಟ್ಟು 1,82,571 ಮತದಾರರು ಇಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

577 ಮತಗಟ್ಟೆಗಳು

ಚುನಾವಣಾ ಆಯೋಗವು ಯುಟಿಯಾದ್ಯಂತ 577 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದರಲ್ಲಿ 33 ನಗರ ಮತ್ತು 544 ಗ್ರಾಮೀಣ ಪ್ರದೇಶಗಳಲ್ಲಿ ಸೇರಿವೆ. ಲಡಾಖ್‌ನಲ್ಲಿ ಕೆಲವು ಮತಗಟ್ಟೆಗಳ ದುರ್ಗಮತೆಯನ್ನು ಗಮನದಲ್ಲಿಟ್ಟುಕೊಂಡು ದೂರದ ಹಳ್ಳಿಗಳಿಗೆ ಚುನಾವಣಾ ಸಾಮಗ್ರಿಗಳು ಮತ್ತು ಸಿಬ್ಬಂದಿಯನ್ನು ವಿಮಾನದಲ್ಲಿ ರವಾನಿಸಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ನಾಲ್ಕು ಹಂತಗಳ ಮತದಾನ ಅಂತ್ಯ; ಕಾಂಗ್ರೆಸ್ ಆಂತರಿಕ ವರದಿಯಲ್ಲೇನಿದೆ?

Lok Sabha Election 2024: ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತದ ಮತದಾನ ಈಗಾಗಲೇ ಮುಗಿದಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂಡಿಯಾ’ ಮೈತ್ರಿಕೂಟ ದ ಆಂತರಿಕ ಸಮೀಕ್ಷೆಯ ಫಲಿತಾಂಶಗಳನ್ನು ಬಹಿರಂಗಪಡಿಸಿದ್ದಾರೆ. ʼʼಇಂಡಿಯಾʼ ಬಣಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸೀಟು ದೊರೆಯಲಿದೆ. ನಾಲ್ಕು ಹಂತಗಳ ಮತದಾನದಲ್ಲಿಯೂ ʼಇಂಡಿಯಾʼ ಒಕ್ಕೂಟ ಮುನ್ನಡೆ ಸಾಧಿಸಿದೆʼʼ ಎಂದು ತಿಳಿಸಿದ್ದಾರೆ.

VISTARANEWS.COM


on

Lok Sabha Election 2024
Koo

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ನಾಲ್ಕು ಹಂತದ ಮತದಾನ ಈಗಾಗಲೇ ಮುಗಿದಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ‘ಇಂಡಿಯಾ’ ಮೈತ್ರಿಕೂಟ (I.N.D.I.A bloc)ದ ಆಂತರಿಕ ಸಮೀಕ್ಷೆಯ ಫಲಿತಾಂಶಗಳನ್ನು ಬಹಿರಂಗಪಡಿಸಿದರು. ಮೈತ್ರಿಕೂಟದ ಪಾಲುದಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ʼʼಇಂಡಿಯಾʼ ಬಣಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸೀಟು ದೊರೆಯಲಿದೆ. ನಾಲ್ಕು ಹಂತಗಳ ಮತದಾನದಲ್ಲಿಯೂ ʼಇಂಡಿಯಾʼ ಒಕ್ಕೂಟ ಮುನ್ನಡೆ ಸಾಧಿಸಿದೆʼʼ ಎಂದು ತಿಳಿಸಿದರು.

ಒಬಿಸಿ, ಎಸ್‌ಸಿ / ಎಸ್‌ಟಿ ಸಮುದಾಯಗಳ ಮೀಸಲಾತಿ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮಾತನಾಡಿದ ಖರ್ಗೆ, ʼʼಕೆಲವರು ಮಾತ್ರ ಮೀಸಲಾತಿ ಪಡೆದುಕೊಳ್ಳಬಹುದು. ಆದರೆ ರಾಷ್ಟ್ರದ ಭವಿಷ್ಯಕ್ಕಾಗಿ ಕೆಲಸ ಮಾಡುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿʼʼ ಎಂದು ಹೇಳಿದರು. ʼʼಮೀಸಲಾತಿ ಭಾರತದ ಪ್ರಜಾಪ್ರಭುತ್ವವನ್ನು ಭದ್ರಪಡಿಸುವ ಒಂದು ಭಾಗ. ಕಾಂಗ್ರೆಸ್ ಯಾವಾಗಲೂ ಮೀಸಲಾತಿಯ ಬಗ್ಗೆ ಮಾತನಾಡುತ್ತದೆ. ಆದರೆ ಅದರಿಂದ ನನಗೆ ಪ್ರಯೋಜನವೇನು? ಎಂದು ಅನೇಕರು ಹೇಳುತ್ತಾರೆ. ಮೀಸಲಾತಿ ಪ್ರಯೋಜನಗಳನ್ನು ಕೆಲವರು ಪಡೆಯಬಹುದು, ಆದರೆ ಸಂವಿಧಾನವನ್ನು ಉಳಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದರಲ್ಲಿ ವಿಫಲವಾದರೆ ನಾವು ಗುಲಾಮರಾಗಬೇಕಾಗುತ್ತದೆʼʼ ಎಂದು ವಿವರಿಸಿದರು.

“ಈ ಹಿಂದೆ ಆರ್‌ಎಸ್‌ಎಸ್‌ ನಾಯಕ ಮೋಹನ್ ಭಾಗವತ್ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನದಲ್ಲಿ ಬದಲಾವಣೆಗಳನ್ನು ತರುವುದಾಗಿ ಘೋಷಿಸಿದ್ದರು. ಜತೆಗೆ ಅನೇಕ ಬಿಜೆಪಿ ನಾಯಕರು ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ. ಈ ಎಲ್ಲದರ ಬಗ್ಗೆ ಪ್ರಧಾನಿ ಮೌನವಾಗಿದ್ದಾರೆʼʼ ಎಂದ ಖರ್ಗೆ, ʼʼಸಂವಿಧಾನ ಬದಲಾವಣೆ ನಿಜವಾಗಿಯೂ ನಿಮ್ಮ ಉದ್ದೇಶವಲ್ಲದಿದ್ದರೆ, ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವವರ ವಿರುದ್ಧ ನೀವು ಏಕೆ ಕ್ರಮ ಕೈಗೊಳ್ಳಬಾರದು?” ಎಂದು ಮೋದಿ ಅವರನ್ನು ಪ್ರಶ್ನಿಸಿದರು. ʼʼನೀವು (ಮೋದಿ) ನಿಮ್ಮ 56 ಇಂಚಿನ ಎದೆಯ ಬಗ್ಗೆ ಪದೇ ಪದೆ ಮಾತನಾಡುತ್ತೀರಿ. ಆದರೆ ಸಂವಿಧಾನದ ವಿರುದ್ಧವಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಯಾಕೆ?ʼʼ ಎಂದು ಕೇಳಿದರು.

ಆಂತರಿಕ ಸಮೀಕ್ಷೆಯಲ್ಲಿ ಏನಿದೆ?

ʼʼನಾಲ್ಕು ಹಂತದ ಮತದಾನ ಮುಗಿದಿದೆ. ಜತೆಗೆ ಪಕ್ಷದ ಆಂತರಿಕ ಸಮೀಕ್ಷೆಯ ವರದಿ ನಮ್ಮ ಕೈ ಸೇರಿದೆ. ಇದು ʼಇಂಡಿಯಾʼ ಒಕ್ಕೂಟ ಉತ್ತಮ ಸಾಧನೆ ಮಾಡಲಿದೆ ಎಂದು ಹೇಳಿದೆ. ಜೂನ್‌ 4ರಂದು ʼಇಂಡಿಯಾʼ ಬಣ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವಿದೆʼʼ ಎಂದು ಖರ್ಗೆ ತಿಳಿಸಿದರು.

ಪ್ರಸ್ತುತ ನಡೆಯುತ್ತಿರುವ ಚುನಾವಣೆಯು ಸಿದ್ಧಾಂತಗಳ ನಡುವಿನ ಕದನ ಎಂದು ಬಣ್ಣಿಸಿರುವ ಕಾಂಗ್ರೆಸ್‌ ಅಧ್ಯಕ್ಷರು, ʼʼಒಂದು ಬಣ ಬಡವರಿಗಾಗಿ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಬಣ ಧರ್ಮದ ಆಧಾರದಲ್ಲಿ ತಮ್ಮ ಶ್ರೀಮಂತ ಗೆಳೆಯರಿಗಾಗಿ ಕಣ್ಣಕ್ಕಿಳಿದಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಕಡಿಮೆ ಮಾಡಲು ನಾವು ಹೋರಾಟ ನಡೆಸುತ್ತಿದ್ದೇವೆʼʼ ಎಂದು ಹೇಳಿದರು. ಜತೆಗೆ ʼʼಆಡಳಿತ ಪಕ್ಷ (ಬಿಜೆಪಿ) ಅಭ್ಯರ್ಥಿಗಳನ್ನು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಬೆದರಿಸುತ್ತಿದೆʼʼ ಎಂದು ಆರೋಪಿಸಿದರು.

ʼʼಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ಮತದಾರರನ್ನು ಬೆದರಿಸಲು ಪ್ರಯತ್ನಿಸುತ್ತಿದೆʼʼ ಎಂದು ಖರ್ಗೆ ದೂರಿದರು. ʼʼತಪಾಸಣೆ ಹೆಸರಿನಲ್ಲಿ ಹೈದರಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮುಸ್ಲಿಂ ಮಹಿಳೆಯರ ಬುರ್ಕಾ ತೆಗೆದುದನ್ನು ನಾವೆಲ್ಲ ನೋಡಿದ್ದೇವೆʼʼ ಎಂದು ಮಾಧವಿ ಲತಾ ಅವರ ನಡೆಯನ್ನು ಖರ್ಗೆ ಪ್ರಸ್ತಾವಿಸಿದರು.

ಇದನ್ನೂ ಓದಿ: Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

ಪ್ರಧಾನಿ ಮಟನ್‌, ಮಂಗಳಸೂತ್ರದ ಬಗ್ಗೆ ಮಾತ್ರ ಮಾತನಾಡುತ್ತಾರೆ

ʼʼಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಮಟನ್‌, ಚಿಕನ್‌ ಮತ್ತು ಮಂಗಳಸೂತ್ರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಮಣಿಪುರದಲ್ಲಿನ ಸಂಘರ್ಷದ ಬಗ್ಗೆ ತುಟಿ ಬಿಚ್ಚುತ್ತಿಲ್ಲʼʼ ಎಂದು ಖರ್ಗೆ ಟೀಕಿಸಿದರು. ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಮೋದಿ ಸುಳ್ಳು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದ ಖರ್ಗೆ “ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ನಾವು ಎಕ್ಸ್-ರೇ ಮಾಡುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ನಿಮ್ಮ ಮನೆಯಲ್ಲಿ ಎರಡು ಎಮ್ಮೆಗಳಿದ್ದರೆ, ಒಂದನ್ನು ಮುಸ್ಲಿಮರಿಗೆ ನೀಡಬೇಕಾಗುತ್ತದೆ ಎಂದು ಅವರು ಎಲ್ಲೋ ಹೇಳಿದರು. ಪ್ರಧಾನಿ ಇಷ್ಟು ಸುಳ್ಳು ಹೇಳಿದರೆ ನಾವೇನು ಮಾಡಲು ಸಾಧ್ಯ?ʼʼ ಎಂದು ತಿಳಿಸಿದರು.

Continue Reading

Lok Sabha Election 2024

Kangana Ranaut: ಬಾಲಿವುಡ್‌ ʼಕ್ವೀನ್‌ʼ ಕಂಗನಾ ಹೆಸರಿನಲ್ಲಿದೆ 50 ಎಲ್ಐಸಿ ಪಾಲಿಸಿ; ಏಜೆಂಟ್‌ ಅತ್ಯಂತ ಲಕ್ಕಿ ಎಂದ ನೆಟ್ಟಿಗರು

Kangana Ranaut: ಬಾಲಿವುಡ್‌ ʼಕ್ವೀನ್‌ʼ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ ರಣಾವತ್​ ಈಗ ರಾಜಕೀಯದತ್ತ ಮುಖ ಮಾಡಿದ್ದಾರೆ. ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸುತ್ತಿದ್ದಾರೆ. ಮೇ 14ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅವರು ತಮ್ಮ ಬಳಿ 91 ಕೋಟಿ ರೂ.ಗಳ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಅವರ ಹೆಸರಿನಲ್ಲಿ 50 ಜೀವ ವಿಮಾ ನಿಗಮ (ಎಲ್ಐಸಿ) ಪಾಲಿಸಿಗಳಿವೆ. ಸದ್ಯ ಇದು ನೆಟ್ಟಿಗರ ಗಮನ ಸೆಳೆದಿದೆ. ಈ ಬಗ್ಗೆ ನಾನಾ ರೀತಿಯ ಕಮೆಂಟ್‌ ಮಾಡುತ್ತಿದ್ದಾರೆ.

VISTARANEWS.COM


on

Kangana Ranaut
Koo

ಧರ್ಮಶಾಲಾ: ಒಂದಲ್ಲ ಒಂದು ವಿವಾದದ ಮೂಲಕವೇ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್​ (Kangana Ranaut) ಈಗ ರಾಜಕೀಯದತ್ತ ಮುಖ ಮಾಡಿದ್ದಾರೆ. ಅವರು ಈ ಬಾರಿಯ ಲೋಕಸಭಾ ಚುನಾವಣೆ (Lok Sabha Election 2024)ಯಲ್ಲಿ ಸ್ಪರ್ಧಿಸುತ್ತಿದ್ದು, ಹಿಮಾಚಲ ಪ್ರದೇಶದ ಮಂಡಿಯಿಂದ ಮೇ 14ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅವರು ತಮ್ಮ ಬಳಿ 91 ಕೋಟಿ ರೂ.ಗಳ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಅವರ ಆಸ್ತಿಯಲ್ಲಿ 28.7 ಕೋಟಿ ರೂ.ಗಳ ಚರಾಸ್ತಿ ಮತ್ತು 62.9 ಕೋಟಿ ರೂ.ಗಳ ಸ್ಥಿರಾಸ್ತಿ ಸೇರಿವೆ. ಜತೆಗೆ ಅವರ ಹೆಸರಿನಲ್ಲಿ 50 ಜೀವ ವಿಮಾ ನಿಗಮ (ಎಲ್ಐಸಿ) ಪಾಲಿಸಿಗಳಿವೆ. ಸದ್ಯ ಇದು ನೆಟ್ಟಿಗರ ಗಮನ ಸೆಳೆದಿದೆ. ಈ ಬಗ್ಗೆ ನಾನಾ ರೀತಿಯ ಕಮೆಂಟ್‌ ಮಾಡುತ್ತಿದ್ದಾರೆ.

ನೆಟ್ಟಿಗರು ಏನಂದ್ರು?

ʼʼಕಂಗನಾ ರಾಣಾವತ್‌ 50 ಎಲ್‌ಐಸಿ ಪಾಲಿಸಿ ಹಿಂದಿದ್ದಾರೆ. ಏಜೆಂಟ್‌ ಉತ್ತಮ ಕೆಲಸ ಮಾಡಿದ್ದಾರೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಕಂಗನಾ ರಾಣಾವತ್‌ 50 ಎಲ್ಐಸಿ ಪಾಲಿಸಿಗಳನ್ನು ಹೊಂದಿದ್ದಾರೆ! ಇದು ಭಾರತದಲ್ಲಿ ಆರ್ಥಿಕ ಸಾಕ್ಷರತೆಯ ವ್ಯಾಪಕ ಕೊರತೆಯನ್ನು ಎತ್ತಿ ತೋರಿಸುತ್ತದೆ. ಅನೇಕ ಎಲ್ಐಸಿ ಪಾಲಿಸಿಗಳನ್ನು ಖರೀದಿಸುವ ಮನಸ್ಥಿತಿಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ ಎನ್ನುವುದು ಈ ಮೂಲಕ ಸಾಬೀತಾಗಿದೆ. ನಿಮ್ಮ ಸುತ್ತಮುತ್ತ ಇದೇ ರೀತಿಯ ಅನೇಕ ಪಾಲಿಸಿ ಖರೀದಿಗಳ ಪ್ರಕರಣಗಳನ್ನು ಗಮನಿಸಿದ್ದೀರಾ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ʼʼಕಂಗನಾ ಅವರ ಎಲ್‌ಐಸಿ ಏಜೆಂಟ್‌ ಅದೃಷ್ಟವಂತ. ಅವರು ಫುಲ್‌ ಖುಷಿಯಾಗಿರಬಹುದು. ಬಹುಶಃ ಏಜೆಂಟ್‌ ಅವರ ಸಂಬಂಧಿಕರಿರಬಹುದುʼʼ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. ʼʼಕಂಗನಾ ರಾಣಾವತ್‌ 50 ಎಲ್‌ಐಸಿ ಪಾಲಿಸಿ ಮಾಡಿಸುವ ಮೂಲಕ ಆರ್ಥಿಕ ಸಾಕ್ಷರತೆಯ ಉತ್ತುಂಗದಲ್ಲಿದ್ದಾರೆʼʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಕಂಗನಾ ಅವರ ಆಸ್ತಿ ಮೌಲ್ಯ 90 ಕೋಟಿ ರೂ. ಅವರು ಯಾವುದೇ ಸ್ಟಾಕ್‌ ಅಥವಾ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿಲ್ಲ. ಆದರೆ 50 ಎಲ್‌ಐಸಿ ಪಾಲಿಸಿ ಹೊಂದಿದ್ದಾರೆʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿದೆ.

5 ಕೋಟಿ ರೂ. ಮೌಲ್ಯದ ಚಿನ್ನಾಭರಣ

ಬಾಲಿವುಡ್‌ನ ಟಾಪ್‌ ನಟಿಯಲ್ಲಿ ಒಬ್ಬರೆನಿಸಿಕೊಂಡಿರುವ ಕಂಗನಾ ಪ್ರತೀ ಚಿತ್ರಕ್ಕೆ ದುಬಾರಿ ಸಂಭಾವನೆ ಪಡೆಯುತ್ತಾರೆ. ಇತ್ತೀಚಿನ ಅವರ ಚಿತ್ರಗಳು ಹಿಟ್‌ ಆಗದಿದ್ದರೂ ಅವರ ಬೇಡಿಕೆ ಒಂದಿನಿತೂ ಕಡಿಮೆ ಆಗಲಿಲ್ಲ. ಜಾಹೀರಾತು ಮೂಲಕವೂ ಅವರು ಆದಾಯ ಗಳಿಸುತ್ತಿದ್ದಾರೆ. ಅವರ ಬಳಿ 5 ಕೋಟಿ ರೂ. ಮೌಲ್ಯದ 6.7 ಕೆಜಿ ಚಿನ್ನ, 50 ಲಕ್ಷ ರೂ. ಮೌಲ್ಯದ 60 ಕೆಜಿ ಬೆಳ್ಳಿ, 3 ಕೋಟಿ ರೂ. ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳಿವೆ. 2 ಲಕ್ಷ ರೂ. ನಗದು ಮತ್ತು ಸುಮಾರು 1.35 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವುದಾಗಿ ಕಂಗನಾ ತಿಳಿಸಿದ್ದಾರೆ.

ಇದನ್ನೂ ಓದಿ: Kangana Ranaut: ವಿಶೇಷ ಗೆಟಪ್ ನಲ್ಲಿ ಮತದಾರರ ಸೆಳೆಯುತ್ತಿರುವ ಕಂಗನಾ ರಣಾವತ್

17 ಕೋಟಿ ರೂ. ಸಾಲ

ಕಂಗನಾ ಚಂಡೀಗಢದಲ್ಲಿ ನಾಲ್ಕು ವಾಣಿಜ್ಯ ಸಂಕೀರ್ಣಗಳು, ಮುಂಬೈನಲ್ಲಿ ವಾಣಿಜ್ಯ ಆಸ್ತಿ ಮತ್ತು ಮನಾಲಿಯಲ್ಲಿ ವಾಣಿಜ್ಯ ಕಟ್ಟಡ ಸೇರಿದಂತೆ ದೇಶಾದ್ಯಂತ ವಿವಿಧ ಆಸ್ತಿಗಳನ್ನು ಹೊಂದಿದ್ದಾರೆ. ಅವರು ಮುಂಬೈನಲ್ಲಿ 16 ಕೋಟಿ ರೂ ಮೌಲ್ಯದ ಮೂರು ಫ್ಲ್ಯಾಟ್ ಗಳನ್ನು ಮತ್ತು ಮನಾಲಿಯಲ್ಲಿ 15 ಕೋಟಿ ರೂ ಮೌಲ್ಯದ ಬಂಗಲೆಯನ್ನು ಹೊಂದಿದ್ದಾರೆ. ಅಲ್ಲದೆ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 98 ಲಕ್ಷ ರೂ ಮೌಲ್ಯದ ಬಿಎಂಡಬ್ಲ್ಯು, 58 ಲಕ್ಷ ರೂ ಮೌಲ್ಯದ ಮರ್ಸಿಡಿಸ್ ಬೆಂಜ್ ಮತ್ತು 3.91 ಕೋಟಿ ರೂ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಅವರಲ್ಲಿದೆ. ಜತೆಗೆ 17 ಕೋಟಿ ರೂ.ಗಳ ಸಾಲ ಇರುವುದಾಗಿಯೂ ಘೋಷಿಸಿಕೊಂಡಿದ್ದಾರೆ.

Continue Reading

ಪ್ರಮುಖ ಸುದ್ದಿ

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳಲ್ಲಿಯೇ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಸೇರಿ ಹಲವೆಡೆ ಹಲವು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ. ಕೆಲವು ಕಡೆಯಂತೂ, ಇಂಡಿಯಾ ಒಕ್ಕೂಟದ ಪಕ್ಷಗಳ ಮಧ್ಯೆಯೇ ಪೈಪೋಟಿ ಇದೆ. ಇದರ ಮಧ್ಯೆಯೇ, ಮಮತಾ ಬ್ಯಾನರ್ಜಿ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ.

VISTARANEWS.COM


on

Mamata Banerjee
Koo

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನ ಮುಕ್ತಾಯವಾಗಿದೆ. ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗ (Election Commission Of India) ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿವೆ. ಅಭ್ಯರ್ಥಿಗಳೂ ಇದೇ ಲೆಕ್ಕಾಚಾರದಲ್ಲಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರದ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಬೇಕು ಎಂದೇ ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಶಾಕ್‌ ನೀಡಿದ್ದಾರೆ. “ಇಂಡಿಯಾ ಒಕ್ಕೂಟಕ್ಕೆ ನಮ್ಮದೇನಿದ್ದರೂ ಬಾಹ್ಯ ಬೆಂಬಲ” ಎಂದಿದ್ದಾರೆ.

“ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಟಿಎಂಸಿಯು ನಾಯಕತ್ವದ ಸಹಕಾರ ನೀಡುತ್ತದೆ. ಬಾಹ್ಯವಾಗಿಯೇ ಇಂಡಿಯಾ ಒಕ್ಕೂಟಕ್ಕೆ ಟಿಎಂಸಿಯು ಬೆಂಬಲ ನೀಡಲಿದೆ. ಪ್ರತಿಯೊಂದು ವಿಚಾರದಲ್ಲಿಯೂ ಇಂಡಿಯಾ ಒಕ್ಕೂಟಕ್ಕೆ ನಾವು ಸಹಕಾರ ನೀಡುತ್ತೇವೆ. ಅಷ್ಟೇ ಅಲ್ಲ, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳದ ಜನರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಅದರಲ್ಲೂ, 100 ದಿನಗಳ ಉದ್ಯೋಗ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗಂತೂ ಯಾವುದೇ ಸಮಸ್ಯೆ ಆಗುವುದಿಲ್ಲ” ಎಂದು ಹೇಳಿದ್ದಾರೆ.

ಇದೇ ವೇಳೆ, ಇಂಡಿಯಾ ಒಕ್ಕೂಟಕ್ಕೂ ಮಮತಾ ಬ್ಯಾನರ್ಜಿ ಅವರು ವ್ಯಾಖ್ಯಾನ ನೀಡಿದರು. “ಯಾವುದು ಇಂಡಿಯಾ ಒಕ್ಕೂಟ, ಎಲ್ಲಿ ಮೈತ್ರಿ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಅಥವಾ ಸಿಪಿಎಂ ಬಗ್ಗೆ ಯೋಚನೆ ಮಾಡದಿರಿ. ಈ ಪಕ್ಷಗಳ ಲೆಕ್ಕಾಚಾರ ತೆಗೆದುಕೊಳ್ಳದಿರಿ. ಈ ಎರಡೂ ಪಕ್ಷಗಳು ಬಿಜೆಪಿ ಜತೆಗಿವೆ. ನಾನು ಮಾತನಾಡುತ್ತಿರುವುದು ದೆಹಲಿ ಮೈತ್ರಿಯ ಬಗ್ಗೆ ಮಾತ್ರ” ಎಂದು ಹೇಳಿದರು. ಆ ಮೂಲಕ ಚುನಾವಣೆ ಫಲಿತಾಂಶದ ಬಳಿಕದ ಮೈತ್ರಿಯ ಬಗ್ಗೆ ಸೂಚನೆ ನೀಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರದವನ್ನು ಅಧಿಕಾರದಿಂದ ಕೆಳಗಿಳಿಸುವ ಏಕಮಾತ್ರ ಉದ್ದೇಶದಿಂದ ಹಲವು ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ರಚಿಸಿವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳಲ್ಲಿಯೇ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಸೇರಿ ಹಲವೆಡೆ ಹಲವು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ. ಕೆಲವು ಕಡೆಯಂತೂ, ಇಂಡಿಯಾ ಒಕ್ಕೂಟದ ಪಕ್ಷಗಳ ಮಧ್ಯೆಯೇ ಪೈಪೋಟಿ ಇದೆ. ಇದರ ಮಧ್ಯೆಯೇ, ನಮ್ಮದೇನಿದ್ದರೂ ಬಾಹ್ಯ ಬೆಂಬಲ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ಅವರು ಶಾಕ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Continue Reading

ದೇಶ

Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

Amit Shah: ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿದ ಕೋರ್ಟ್‌ ತೀರ್ಮಾನದ ಕುರಿತೂ ಅಮಿತ್‌ ಶಾ ವಿಶ್ಲೇಷಣೆ ಮಾಡಿದರು. “ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಎಲ್ಲ ಸಾಮಾನ್ಯ ಪ್ರಕರಣದಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿಲ್ಲ. ಕೇಜ್ರಿವಾಲ್‌ ಅವರಿಗೆ ವಿಶೇಷ ಕೇಸ್‌ ಎಂದು ಪರಿಗಣಿಸಿ ಜಾಮೀನು ನೀಡಲಾಗಿದೆ” ಎಂದು ಹೇಳಿದರು.

VISTARANEWS.COM


on

Amit Shah
Koo

ನವದೆಹಲಿ: ಅಬಕಾರಿ ನೀತಿ ಜಾರಿ ಹಗರಣದಲ್ಲಿ (Delhi Excise Policy Case) ತಿಹಾರ ಜೈಲು ಸೇರಿ, ಮಧ್ಯಂತರ ಜಾಮೀನಿನ ಬಿಡುಗಡೆಯಾಗಿರುವ, ಬಿಡುಗಡೆಯಾಗಿ ಬರುತ್ತಲೇ ಅಬ್ಬರದ ಚುನಾವಣೆ ಪ್ರಚಾರದ ಜತೆಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. “ಚುನಾವಣೆ ಪ್ರಚಾರದ ವೇಳೆ ಅರವಿಂದ್‌ ಕೇಜ್ರಿವಾಲ್‌ ನೀಡಿದ ಹೇಳಿಕೆಯು ನ್ಯಾಯಾಂಗ ನಿಂದನೆಯ ಪ್ರಕರಣವಾಗಿದೆ” ಎಂದಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅಮಿತ್‌ ಶಾ, ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಹರಿಹಾಯ್ದರು. “ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಬ್ಯಾಡ್‌ ನ್ಯೂಸ್‌ ಇದೆ. 2029ರವರೆಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಆಡಳಿತ ನಡೆಸಲಿದ್ದಾರೆ. ಇನ್ನು, ಯಾರಾದರೂ ಬಿಜೆಪಿಗೆ ಮತ ನೀಡಿದರೆ, ಕಮಲದ ಗುರುತಿಗೆ ಮತ ಹಾಕಿದರೆ, ಮತ್ತೆ ನನ್ನನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂಬುದಾಗಿ ಕೇಜ್ರಿವಾಲ್‌ ಹೇಳಿರುವುದು ಸಂಪೂರ್ಣವಾಗಿ ನ್ಯಾಯಾಂಗ ನಿಂದನೆಯ ಕೇಸ್‌ ಆಗಿದೆ. ಇದು ಸುಪ್ರೀಂ ಕೋರ್ಟ್‌ ತೀರ್ಪಿಗೆ ಮಾಡಿದ ಅಗೌರವ” ಎಂದು ಹೇಳಿದರು.

ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿದ ಕೋರ್ಟ್‌ ತೀರ್ಮಾನದ ಕುರಿತೂ ಅಮಿತ್‌ ಶಾ ವಿಶ್ಲೇಷಣೆ ಮಾಡಿದರು. “ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಎಲ್ಲ ಸಾಮಾನ್ಯ ಪ್ರಕರಣದಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿಲ್ಲ. ಕೇಜ್ರಿವಾಲ್‌ ಅವರಿಗೆ ವಿಶೇಷ ಕೇಸ್‌ ಎಂದು ಪರಿಗಣಿಸಿ ಜಾಮೀನು ನೀಡಲಾಗಿದೆ. ಅಷ್ಟಕ್ಕೂ, ಅರವಿಂದ್‌ ಕೇಜ್ರಿವಾಲ್‌ ಅಪರಾಧಿ ಎಂದು ಸಾಬೀತಾದರೂ ಕೋರ್ಟ್‌ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ. ತಮ್ಮ ತೀರ್ಪು ಸದ್ಬಳಕೆಯಾಗಿದೆಯೋ, ದುರ್ಬಳಕೆ ಮಾಡಿಕೊಳ್ಳಲಾಗಿದೆಯೋ ಎಂಬುದನ್ನು ತಿಳಿಯಲು ಕೋರ್ಟ್‌ ಜಾಮೀನು ನೀಡಿದೆ” ಎಂದರು.

ಫಾರೂಕ್‌ ಅಬ್ದುಲ್ಲಾಗೆ ಚಾಟಿ

ಪಾಕಿಸ್ತಾನವನ್ನು ಗೌರವಿಸಬೇಕು ಎಂದು ಹೇಳಿದ ಫಾರೂಕ್‌ ಅಬ್ದುಲ್ಲಾ ಅವರಿಗೆ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನ ಅಣುಬಾಂಬ್‌ ಹೊಂದಿದೆ. ಅದಕ್ಕೆ ಭಾರತ ಗೌರವ ನೀಡಬೇಕು ಎಂಬುದಾಗಿ ಫಾರೂಕ್‌ ಅಬ್ದುಲ್ಲಾ ಹಾಗೂ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಅದರೆ, ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ, 130 ಕೋಟಿ ಜನಸಂಖ್ಯೆಯ ಭಾರತವು ತನ್ನ ಹಕ್ಕನ್ನು ಪ್ರತಿಪಾದಿಸಲು ಪಾಕಿಸ್ತಾನಕ್ಕೆ ಹೆದರಬೇಕೇ? ರಾಹುಲ್‌ ಗಾಂಧಿ ಅವರು ಇದಕ್ಕೆ ಉತ್ತರ ನೀಡಬೇಕು. ಪಾಕಿಸ್ತಾನವನ್ನು ಗೌರವಿಸಬೇಕಾ? ಪಾಕ್‌ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಡಬೇಕಾ ಎಂಬುದರ ಕುರಿತು ರಾಹುಲ್‌ ಗಾಂಧಿ ಉತ್ತರಿಸಲಿ” ಎಂದರು.

ಇದನ್ನೂ ಓದಿ: Narendra Modi: 75 ವರ್ಷ ದಾಟಿದರೂ ಮೋದಿ ಪ್ರಧಾನಿ ಸ್ಥಾನದಲ್ಲಿರುತ್ತಾರಾ? ಅಮಿತ್‌ ಶಾ ಹೇಳಿದ್ದಿಷ್ಟು

Continue Reading
Advertisement
Murder case
ದಾವಣಗೆರೆ7 mins ago

Murder Case : ಚಾಕುವಿನಿಂದ ಇರಿದು ಯುವಕನ ಕೊಲೆ; ಹಂತಕರಿಗಾಗಿ ಪೊಲೀಸರ ಹುಡುಕಾಟ

Amruthadhaare Serial bhoomika in birthday chaya singh
ಕಿರುತೆರೆ9 mins ago

Amruthadhaare Serial: ಇಂದು ಭೂಮಿಕಾಗೆ ಹುಟ್ಟು ಹಬ್ಬ: ರೀಲ್‌ ಗಂಡ ಎಸ್ಟೇಟ್​ ಬರೆದು ಕೊಟ್ರು! ರಿಯಲ್‌ ಗಂಡ ಕೊಟ್ಟ ಗಿಫ್ಟ್‌ ಏನು?

Theft in two houses in Kudligi taluk
ವಿಜಯನಗರ12 mins ago

Theft Case: ಕೂಡ್ಲಿಗಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು

Prajwal Revanna Case Lawyer DevarajeGowda sent to police custody for another day
ಕ್ರೈಂ20 mins ago

Prajwal Revanna Case: ವಕೀಲ ದೇವರಾಜೇಗೌಡ ಮತ್ತೊಂದು ದಿನ ಪೊಲೀಸ್‌ ಕಸ್ಟಡಿಗೆ!

Lok Sabha Election 2024
Lok Sabha Election 202430 mins ago

Lok Sabha Election 2024: ನಾಲ್ಕು ಹಂತಗಳ ಮತದಾನ ಅಂತ್ಯ; ಕಾಂಗ್ರೆಸ್ ಆಂತರಿಕ ವರದಿಯಲ್ಲೇನಿದೆ?

isis link ummer abdul rehman mariyam
ಕ್ರೈಂ33 mins ago

ISIS link: ಐಸಿಸ್‌ ಲಿಂಕ್ ಕೇಸ್‌ನಲ್ಲಿ ಮಾಜಿ ಶಾಸಕ ಇದಿನಬ್ಬ ಮೊಮ್ಮಗನಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು; ಕೋರ್ಟ್‌ ಕೊಟ್ಟ ಕಾರಣ ನೋಡಿ!

Murder case in davangere
ದಾವಣಗೆರೆ34 mins ago

Murder case : ಕೊಳೆತ ಶವದಲ್ಲಿದ್ದ ಕಿವಿಯೋಲೆಯಿಂದಲೇ ಸಿಕ್ಕಿಬಿದ್ದರು ಹಂತಕರು

Terrorists Killed
ದೇಶ41 mins ago

Terrorists Killed: ಸೇನೆಯ ಭರ್ಜರಿ ಬೇಟೆ; ಎಲೆಕ್ಷನ್‌ ಹಾಳುಗೆಡವಲು ಗಡಿ ನುಸುಳುತ್ತಿದ್ದ ನಾಲ್ವರು ಉಗ್ರರ ಹತ್ಯೆ

Startup Investment
ವಾಣಿಜ್ಯ44 mins ago

Startup Investment : ಡ್ರಿಂಕ್​​ಪ್ರೈಮ್​ ವಿಸ್ತರಣಾ ಯೋಜನೆಯಲ್ಲಿ ಎಸ್​​ಐಡಿಬಿಐ ಹಣಕಾಸು ಸಂಸ್ಥೆಯ ಹೂಡಿಕೆ

Virat Kohli
ಕ್ರೀಡೆ49 mins ago

Virat Kohli: ನಿವೃತ್ತಿಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ ವಿರಾಟ್​ ಕೊಹ್ಲಿ; ಅಭಿಮಾನಿಗಳಿಗೆ ಆತಂಕ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌