Site icon Vistara News

Lok Sabha Election 2024: ಮಂಡ್ಯ ಕ್ಷೇತ್ರದ ಮೈತ್ರಿ ಟಿಕೆಟ್ 100% ನನಗೇ ಸಿಗ್ತದೆ ಎಂದ ಸುಮಲತಾ

bjp-jds padayatra Sumalatha ambareesh

ಮಂಡ್ಯ: ಯಾವುದೇ ಅನುಭವ ಇಲ್ಲದೇ ಕಳೆದ ಬಾರಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದೆ. ನನಗೆ ಬೇಕಾದವರು ನಿಮ್ಮ ಜೊತೆ ಇರುತ್ತೇವೆ ಎಂದು ಗಟ್ಟಿಯಾಗಿ ನಿಂತಿದ್ದರು. ಈಗಿನ ಸಂದರ್ಭ ಬೇರೆಯೇ ಇದೆ. ಈ ಬಾರಿ ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ನೆನ್ನೆಯ ಲಿಸ್ಟ್ ನೋಡಿದರೆ ರಾಜ್ಯವಾರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಹಾಗೆ ಕರ್ನಾಟಕದ್ದು ಬಂದಾಗ ನಮ್ಮ ಎಲ್ಲರ ಹೆಸರು ಬರಬಹುದು. ಅಭ್ಯರ್ಥಿಗಳ ಘೋಷಣೆಗೂ ಮೊದಲು ದೆಹಲಿಗೆ ಹೋಗುವ ಅಗತ್ಯವಿಲ್ಲ. ಒಂದು ವೇಳೆ ನನ್ನು ಬರಲು ಹೇಳಿದರೆ ಹೋಗುತ್ತೇನೆ ಎಂದು ಹೇಳಿದರು.

ಈ ಬಾರಿಯ ಚುನಾವಣೆಯ ಪ್ರಚಾರ, ಹೋರಾಟ ಡಿಫೆರೆಂಟ್ ಆಗಿ ಇರುತ್ತೆ. ಯಶ್, ದರ್ಶನ್ ಬಂದ್ರೆ ಬಲ ಇರುತ್ತೆ, ಎಲ್ಲರ ಸಪೋರ್ಟ್ ಇದೆ. ಅವರು ನನಗೋಸ್ಕರ ಬರಿ ಸಪೋರ್ಟ್ ಅಲ್ಲ. ತ್ಯಾಗ ಮಾಡಿದ್ದಾರೆ. ಇಬ್ಬರೂ 25 ದಿನ ಸ್ವಾರ್ಥವಿಲ್ಲದೆ ನನ್ನ ಪರ ನಿಂತಿದ್ದರು. ಪದೇ ಪದೇ ಎಲ್ಲಾ ಬಿಟ್ಟು ಬನ್ನಿ ಎಂದು ಕರೆಯಲು ನನ್ನ ಮನಸ್ಸು ಒಪ್ಪಲ್ಲ.
ಯಶ್, ದರ್ಶನ್ ಸಿನಿಮಾಗಳಲ್ಲಿ ಬ್ಯುಸಿ ಇರುತ್ತಾರೆ. ಅವರು ಬಂದರೆ ಖಂಡಿತವಾಗಿ ಸ್ವಾಗತಿಸುವೆ ಎಂದು ತಿಳಿಸಿದರು.

ಇದನ್ನೂ ಓದಿ | BJP Candidates List: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್‌ ನಕಾರ!

ಯಶ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಪ್ಯಾನ್ ಇಂಡಿಯಾ ಸ್ಟಾರ್‌ ಆಗಿದ್ದಾರೆ, ಅವರಿಂದ ಹೆಚ್ಚು ನಿರೀಕ್ಷೆ ಮಾಡುವುದು ಸರಿಯಲ್ಲ. ಅವರು ಬಂದರೆ ಸಂತೋಷಪಡುತ್ತೇನೆ. ಕಳೆದ ಚುನಾವಣೆಯಲ್ಲಿ ನನ್ನ ಮನೆಯ ಮಕ್ಕಳು ತರ ಓಡಾಡಿದ್ದಾರೆ. ಆವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಈ ಬಾರಿ ಅವರು ಬರದಿದ್ದರೂ ನಾನು ಬೇಜಾರು ಮಾಡಿಕೊಳ್ಳಲ್ಲ ಎಂದು ತಿಳಿಸಿದರು.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಇದು ಅತ್ಯಂತ ಭಯಾನಕ‌ ವಿಚಾರ. ಇದನ್ನು ಎಲ್ಲರೂ ಖಂಡಿಸಬೇಕು. ತಪ್ಪಿತಸ್ಥರಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕು. ಈ ಪ್ರಕರಣದಲ್ಲಿ ಬೇರೆ ಬೇರೆ ಹೇಳಿಕೆ ಕೊಡೋದು ಮಹಾಪರಾಧ. ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಬೇಗ ಬಂಧಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕಿಂತ ಹೆಚ್ಚಾಗಿ ಉಗ್ರವಾದಿ ಅಥವಾ ಆತಂಕವಾದಿಗಳು ಈ ರೀತಿಯ ಕೃತ್ಯಗಳನ್ನು ಮಾಡಬಹುದು ಎಂಬಂತೆ ಪ್ರೋತ್ಸಾಹವಂತೂ ಇದೆ. ಯಾರೇ ಆದರೂ ಇದನ್ನು ಉತ್ತೇಜನ ನೀಡುವಂತಹ ಹೇಳಿಕೆ‌ ಕೊಡಬಾರದು ಎಂದು ಹೇಳಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ‌ ಪರ ‌ಘೋಷಣೆ ವಿಚಾರಕ್ಕೆ ಸ್ಪಂದಿಸಿ, ಎಫ್‌ಎಸ್‌ಎಲ್ ವರದಿಯಲ್ಲೂ ಅದು ಫೇಕ್ ಅಲ್ಲ ಎಂಬಂತೆ ಬಂದಿದೆ. ಪಕ್ಷಗಳು ಒಂದು ಸಮುದಾಯವನ್ನು ಯಾವುದೇ ತಪ್ಪು ಮಾಡಿದರೂ ಖಂಡಿಸದೇ, ರಕ್ಷಣೆ ಮಾಡಿಕೊಂಡು ಬರಬರಬಾರದು. ಎಲ್ಲಾ‌‌ ಚಾನೆಲ್‌ಗಳೂ ಆ ವಿಚಾರವನ್ನ ಪ್ರಚಾರ ಮಾಡಿವೆ. ಒಂದೆರಡು ಚಾನೆಲ್ ಆದ್ರೆ ತಪ್ಪು ಮಾಡಬಹುದು. ಎಲ್ಲಾ ಚಾನೆಲ್‌ಗಳು ತಪ್ಪು ಮಾಡುತ್ತವೆಯೇ ಎಂದು ಪ್ರಶ್ನಿಸಿದರು.

ಮಂಡ್ಯದಲ್ಲಿ ಮನೆ ಕಟ್ಟುವ ಬಗ್ಗೆ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ನನ್ನ ಮನೆ ಇದೆ, ಅದು ಬಾಡಿಗೆ ಮನೆ. ಅಂಬರೀಶ್ ಇದ್ದ ಕಾಲದಿಂದಲೂ ಈ ಮನೆಯಲ್ಲಿ ಬಾಡಿಗೆಗೆ ಇದ್ದೇವೆ. ಹನಕೆರೆ ಬಳಿ ಲ್ಯಾಂಡ್ ತೆಗೆದುಕೊಂಡು ಮನೆಕಟ್ಟುವ ಆಸೆ ಇತ್ತು.
ಆದ್ರೆ ಅದರಲ್ಲಿ ರಾಜಕಾರಣ ನಡೆಯಿತು. ಮನೆ ಕಟ್ಟುವಾಗ ಅಡಚಣೆಗಳು ಉಂಟಾದವು. ದೇವರು ಆಶೀರ್ವಾದ ಮಾಡಿದ್ರೆ ಮುಂದೆ ಮನೆ ಕಟ್ಟೋಣ., ನನಗಿಂತ ಅಭಿಗೆ ಮಂಡ್ಯದಲ್ಲಿ ಮನೆ ಕಟ್ಟಲು ತುಂಬಾ ಆಸೆ ಇದೆ‌ ಎಂದು ತಿಳಿಸಿದರು.

ಇದನ್ನೂ ಓದಿ | R Ashok : ಸರ್ಕಾರಕ್ಕೆ ಬುದ್ಧಿ ಬರಲು ಇನ್ನೆಷ್ಟು ಬಾಂಬ್‌ ಬ್ಲಾಸ್ಟ್‌ ಆಗಬೇಕು; ಆರ್‌ ಅಶೋಕ್‌ ಪ್ರಶ್ನೆ

ಮಂಡ್ಯದಲ್ಲಿ ಹೊಸ ಸಕ್ಕರೆ‌ ಕಾರ್ಖಾನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೈಷುಗರ್ ಕಾರ್ಖಾನೆಯನ್ನು ಯಾರು ಟಚ್ ಮಾಡಬಾರದು, ಈ ಹಿಂದೆ ಭ್ರಷ್ಟಾಚಾರ ಆಗಿರುವುದು ಗೊತ್ತಿದೆ. ಇದರಿಂದ ನೂರಾರು ಕೋಟಿ ನಷ್ಟವಾಗಿದೆ. ಈ ಹಿಂದೆ ಯಡಿಯೂರಪ್ಪ ಮಾತು ಕೊಟ್ಟು, ಬೊಮ್ಮಾಯಿ ಅವರು 50 ಕೋಟಿ ಕೊಟ್ಟು ಕಾರ್ಖಾನೆ ಶುರು ಮಾಡಿಸಿದ್ದರು. ಈಗಿನ ಸರ್ಕಾರ 100 ಕೋಟಿ ಕೊಟ್ಟಿದೆ. ಇನ್ನೂ ಕೂಡ ಕಬ್ಬು ಅರೆಯುತ್ತಿಲ್ಲ, ಮತ್ತೆ 500 ಕೋಟಿಯ ಹೊಸ ಕಾರ್ಖಾನೆ ಅಂದ್ರೆ ಅರ್ಥ ಏನು? ಒಂದಲ್ಲ 5 ಕಾರ್ಖಾನೆ ಮಾಡಿ. ಮೈಷುಗರ್ ಕಾರ್ಖಾನೆ ಮಂಡ್ಯಕ್ಕೆ ಪ್ರತಿಷ್ಠೆಯಾಗಿದೆ. ಹಳೆಯ ಕಾರ್ಖಾನೆ ಏನು ಮಾಡ್ತೀರಾ? ಮತ್ತೆ ಕ್ಲೋಸ್ ಮಾಡ್ತೀರಾ? ಐತಿಹಾಸಿಕ ಕಾರ್ಖಾನೆ ಎಂದು ನಾವು ಕಾಪಾಡಲು ಹೋರಾಟ ಮಾಡಿದ್ದು ವ್ಯರ್ಥನಾ? ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಯಾಗಿದ್ದು, ಭಾವನಾತ್ಮಕ ಸಂಬಂಧ ಇದೆ. 500 ಕೋಟಿಯನ್ನು ಈ ಕಾರ್ಖಾನೆಗೆ ಹಾಕಿ ಸರಿಪಡಿಸಬೇಕು. ಮೈಷುಗರ್ ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

Exit mobile version