Site icon Vistara News

Lok Sabha Election 2024: ಚುನಾವಣೆ ಅಕ್ರಮ ತಡೆಯಲು ವೆಬ್‌ ಕಾಸ್ಟಿಂಗ್‌, ಡಿಸಿಯಿಂದಲೇ ನೇರ ವೀಕ್ಷಣೆ

web casting lok sabha election 2024

ದೇವನಹಳ್ಳಿ: ಲೋಕಸಭೆ ಚುನಾವಣೆ (Lok Sabha Election 2024) ಕಣದಲ್ಲಿ ಆಮಿಷ, ಅಕ್ರಮಗಳನ್ನು ತಡೆಯಲು ಮುಂದಾಗಿರುವ ಚುನಾವಣಾ ಆಯೋಗ (Election commission), ಇನ್ನಷ್ಟು ಹದ್ದಿನ ಕಣ್ಣುಗಳನ್ನು ನೆಡಲು ಮುಂದಾಗಿದೆ. ಅದಕ್ಕಾಗಿ ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ 21 ಚೆಕ್ ಪೋಸ್ಟ್‌ಗಳಲ್ಲಿ (check post) ವೆಬ್ ಕಾಸ್ಟಿಂಗ್ ಮಾಡಿಸುತ್ತಿದೆ.

ಹೈ ಪ್ರೊಫೈಲ್‌ ಕ್ಷೇತ್ರಗಳಲ್ಲಿ ಒಂದಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರದ 21 ಚೆಕ್ ಪೋಸ್ಟ್‌ಗಳಲ್ಲಿ ಎಲ್ಲ ಕಡೆ ವೆಬ್ ಕಾಸ್ಟಿಂಗ್ ಕ್ಯಾಮರಾಗಳನ್ನು ಅಳವಡಿಕೆ ಮಾಡಿ ವೀಕ್ಷಣೆ ಮಾಡಿಸಲಾಗುತ್ತಿದೆ. ಪ್ರತಿ ವಾಹನದ ತಪಾಸಣೆ ಹೇಗೆ ನಡೆಯುತ್ತದೆ ಎಂದು ಸ್ವತಃ ಜಿಲ್ಲಾಧಿಕಾರಿ ಶಿವಶಂಕರ್ ವೀಕ್ಷಣೆ ಮಾಡಲಿದ್ದಾರೆ.

ಡಿ.ಸಿ, ಎ.ಡಿ.ಸಿ, ಸಿ.ಇ.ಓ ಸ್ವತಃ ತಮ್ಮ ಕಚೇರಿಯಲ್ಲೇ ಕುಳಿತು ಇದರ ವೀಕ್ಷಣೆ ಮಾಡಬಹುದಾಗಿದೆ. ಮ್ಯಾನುವಲ್ ವಿಡಿಯೋಗ್ರಫಿ ಮಾಡಿದರೆ ನಿರಂತರ ರೆಕಾರ್ಡ್ ಮಾಡಲಾಗುವುದಿಲ್ಲ. ಆದ್ದರಿಂದ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. 24 ಗಂಟೆ ನಿರಂತರ ರೆಕಾರ್ಡ್ ಆಗಿರುತ್ತದೆ. ಜೊತೆಗೆ ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲಿ ಕೂಡ ವೀಕ್ಷಿಸಲು ಅವಕಾಶವಿದೆ.

ಇದುವರೆಗೆ ಈ ಚೆಕ್‌ಪೋಸ್ಟ್‌ಗಳಲ್ಲಿ 9 ಲಕ್ಷ ರೂಪಾಯಿ ಹಣ ಮತ್ತು ಎಲ್ಇಡಿ ಟಿವಿಗಳನ್ನು ಎಸ್‌ಎಸ್‌ಟಿ ತಂಡ ಸೀಜ್‌ ಮಾಡಿದೆ. ಸುಮಾರು ಎಂಟು ಕೋಟಿ ರೂಪಾಯಿ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದಿದೆ. ಪ್ರತಿ ಚೆಕ್ ಪೋಸ್ಟ್‌ನಲ್ಲೂ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ ಮೂವರು ಅಧಿಕಾರಿಗಳು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಇಂದು ಕುರುಡು ಮಲೆ ದೇವಾಲಯದಿಂದ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಆರಂಭ

ಕೋಲಾರ: ರಾಜಕಾರಣಿಗಳ ಅದೃಷ್ಟ ದೈವ ಎಂದೇ ಖ್ಯಾತಿಯಾಗಿರುವ ಕೋಲಾರದ ಕುರುಡು ಮಲೆ ವಿನಾಯಕ ದೇವಾಲಯದಿಂದ ಇಂದು ಕಾಗ್ರೆಸ್‌ ನಾಯಕರ ತಂಡ ಪ್ರಚಾರ ಅಭಿಯಾನ ಆರಂಭಿಸಲಿದೆ.

ಇಂದು ಕುರುಡು ಮಲೆ ವಿನಾಯಕ ದೇವಾಲಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ತಂಡ ಭೇಟಿ ನೀಡಲಿದೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಹಿನ್ನಲೆ ಕಾಂಗ್ರೆಸ್‌ನ ಪ್ರಣಾಳಿಕೆ ಬಿಡುಗಡೆ ಹಾಗೂ ಕಾಂಗ್ರೆಸ್ ಮತ ಪ್ರಚಾರಕ್ಕಾಗಿ ಪ್ರಜಾಧ್ವನಿ ಯಾತ್ರೆಗೆ ಸಿಎಂ ರಿಂದ ಚಾಲನೆ ನೀಡಲಿದ್ದಾರೆ.

ಇಂದು ಬೆಳಿಗ್ಗೆ 11.30ಕ್ಕೆ ಹೆಲಿಕಾಪ್ಟರ್ ಮೂಲಕ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗದಲ್ಲಿ ಮುಳಬಾಗಿಲಿನ ಕುರುಡುಮಲೆ ದೇವಾಲಯಕ್ಕೆ ಭೇಟಿ ಕೊಡಲಿದ್ದಾರೆ. ವಿನಾಯಕ ದೇವರಿಗೆ ಪೂಜೆ ಸಲ್ಲಿಸಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ಕೊಡಲಿದ್ದಾರೆ.

ಕುರುಡುಮಲೆಯಿಂದ ಮುಳಬಾಗಿಲು ಪಟ್ಟಣಕ್ಕೆ ಆಗಮಿಸಿ ದರ್ಗಾಗೆ ಸಿಎಂ ಭೇಟಿ ಕೊಡಲಿದ್ದಾರೆ. ಡಾ.ಬಿಆರ್ ಅಂಬೇಡ್ಕರ್ ವೃತ್ತದಿಂದ ಸೌಂದರ್ಯ ಸರ್ಕಲ್‌ವರೆಗೂ ರೋಡ್ ಶೋ ನಡೆಲಿದ್ದಾರೆ. ಸೌಂದರ್ಯ ಸರ್ಕಲ್ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಸಿಎಂ ಭಾಷಣ ಮಾಡಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಪರ ಸಿಎಂ, ಡಿಸಿಎಂ ಹಾಗೂ ಸಚಿವರ ತಂಡ ಮತ ಯಾಚನೆ ಮಾಡಲಿದೆ. ಜಿಲ್ಲೆಯ ಎಲ್ಲ ಶಾಸಕರು ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ಆಗಮನ ಹಿನ್ನೆಲೆಯಲ್ಲಿ ಎಲ್ಲ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ:Lok Sabha Election : ಭಾರತದ ಚುನಾವಣೆ ವೇಳೆ ಕುತಂತ್ರಿ ಚೀನಾ ಸೈಬರ್ ಅಟ್ಯಾಕ್​; ಮೈಕ್ರೊಸಾಫ್ಟ್​ ಆರೋಪ

Exit mobile version