Site icon Vistara News

First Time Voters: ಮೊದಲ ಬಾರಿ ಮತದಾನ ಮಾಡುತ್ತಿದ್ದೀರಾ? ಈ ಸಂಗತಿಗಳನ್ನು ಗಮನಿಸಿ

lok sabha election

ದೇಶಾದ್ಯಂತ ಲೋಕಸಭಾ ಚುನಾವಣೆ (loksabha election-2024) ತಯಾರಿ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ. ಒಂದೆಡೆ (First Time Voters)ವಿವಿಧ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೆ, ಚುನಾವಣಾ ಆಯೋಗವು (election commission) ಹೆಚ್ಚಿನ ಮತದಾರರನ್ನು ಮತಗಟ್ಟೆಗೆ (Election booth) ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇನ್ನು ಮತದಾರರು ಯಾರಿಗೆ ಈ ಬಾರಿ ಮತ ನೀಡಬಹುದು ಎಂಬ ಲೆಕ್ಕಾಚಾರದಲ್ಲಿದ್ದರೆ, ಹೊಸ ಮತದಾರರು (voters) ತಮ್ಮ ಮೊದಲ ಮತದಾನದ ಅನುಭವ ಹೇಗಿರಬಹುದು ಎನ್ನುವ ಕುತೂಹಲದಿಂದ ಕಾಯುತ್ತಿದ್ದಾರೆ.

ಭಾರತವು (india) ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಲೋಕಸಭಾ ಚುನಾವಣಾ ದಿನಾಂಕವನ್ನು ಭಾರತದ ಮುಖ್ಯ ಚುನಾವಣಾ ಅಧಿಕಾರಿಯು 2024ರ ಏಪ್ರಿಲ್ 16ರಂದು ಘೋಷಿಸಿದ್ದಾರೆ. 18 ವರ್ಷ ಮೇಲ್ಪಟ್ಟ ಭಾರತದ ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವ ಹಕ್ಕಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಯುವಕರು ದೇಶದ ಉಜ್ವಲ ಭವಿಷ್ಯಕ್ಕಾಗಿ ಹೆಚ್ಚು ಒಳ್ಳಗೊಳ್ಳಬೇಕು ಮಾತ್ರವಲ್ಲ ಮೊದಲ ಬಾರಿ ಮತದಾನ ಮಾಡುವ ಯುವ ಶಕ್ತಿ ಮತದಾನದ ಪ್ರಾಮುಖ್ಯವನ್ನು ಅರಿತು ತಿಳುವಳಿಕೆಯಿಂದ ಭಾಗವಹಿಸಬೇಕು ಎನ್ನುವ ಎನ್ನುವ ಆಶಯದೊಂದಿಗೆ ಈ ಬಾರಿ ಮೊದಲ ಬಾರಿಗೆ ಮತದಾನ ಮಾಡುವವರಿಗಾಗಿ ಕೆಲವು ಸಲಹೆಗಳು ಇಲ್ಲಿವೆ.

ಇದನ್ನೂ ಓದಿ: Hema Malini: ಪ್ರಚಾರದ ಮಧ್ಯೆಯೇ ಗದ್ದೆಗೆ ಇಳಿದು ಗೋಧಿ ಕಟಾವು ಮಾಡಿದ ಹೇಮಾಮಾಲಿನಿ!

1. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ?

ಮತಗಟ್ಟೆಗೆ ತೆರಳುವ ಮುನ್ನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇದರ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಅರ್ಹತೆ ಮತ್ತು ನೋಂದಣಿ ಸ್ಥಿತಿಯನ್ನು ಇದರಲ್ಲಿ ತಿಳಿದುಕೊಳ್ಳಬಹುದು.


2. ಎಲ್ಲಿ, ಹೇಗೆ ?

ಮತದಾನ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇದಕ್ಕಾಗಿ ಮತದಾನ ಕೇಂದ್ರದ ಸ್ಥಳ, ಮತದಾರರ ಗುರುತಿನ ಅವಶ್ಯಕತೆಗಳು ಮತ್ತು ನಿಮ್ಮ ಮತವನ್ನು ಹೇಗೆ ಚಲಾಯಿಸುವುದು ಸೇರಿದಂತೆ ಮತದಾನ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ತಿಳಿದವರಿಂದ ಕೇಳಿ ಪಡೆಯಿರಿ.

3. ಮಾಹಿತಿ ಪರಿಶೀಲಿಸಿ

ಮತದಾನ ಮಾಡುವ ಬಗ್ಗೆ ಯಾವುದೇ ಅಭಿಪ್ರಾಯವನ್ನು ತೆಗೆದುಕೊಳ್ಳುವ ಮೊದಲು ಬಹು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿಯನ್ನು ಪರಿಶೀಲಿಸಿಕೊಳ್ಳಿ. ವಿಭಿನ್ನ ದೃಷ್ಟಿಕೋನಗಳಿಗೆ ತೆರೆದುಕೊಳ್ಳಿ. ಸ್ನೇಹಿತರು, ಕುಟುಂಬ ಮತ್ತು ಸಮುದಾಯದ ಸದಸ್ಯರೊಂದಿಗೆ ಗೌರವಯುತವಾಗಿ ರಾಜಕೀಯದ ಬಗ್ಗೆ ಚರ್ಚೆ ನಡೆಸಿ.

4. ಸುಳ್ಳು ಮಾಹಿತಿ ಬಗ್ಗೆ ಎಚ್ಚರ

ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಸುಳ್ಳು ಮಾಹಿತಿ ಗಳು ಪ್ರಚಾರವಾಗುತ್ತಿರುತ್ತದೆ. ಮತಗಟ್ಟೆಗಳ ಬಳಿ ಸುಳ್ಳು ಮಾಹಿತಿಗಳಿಗೆ ಅವಕಾಶ ನೀಡಬೇಡಿ. ಯಾವುದೇ ರೀತಿಯ ಸುಳ್ಳು ಮಾಹಿತಿ ಹರಡದಂತೆ ಎಚ್ಚರಿಕೆ ವಹಿಸಬೇಕು. ಅಧಿಕೃತಭಾರತೀಯ ಚುನಾವಣಾ ಆಯೋಗ ನೀಡುವ ಮಾಹಿತಿ ಮತ್ತು ಮತಗಟ್ಟೆ ಅಧಿಕಾರಿಗಳು ನೀಡುವ ಮಾಹಿತಿಯನ್ನು ಮಾತ್ರ ನಂಬಿ.


5. ಮತದಾರರನ್ನು ಪ್ರೋತ್ಸಾಹಿಸಿ

ವಿಶ್ವಾಸಾರ್ಹ ಮಾಹಿತಿಯನ್ನು ಹಂಚಿಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಇತರರನ್ನು ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುವವರಿಗೆ ಮತದಾನದ ಅಗತ್ಯವನ್ನು ತಿಳಿಸಿ, ಅವರು ಮತದಾನ ಮಾಡಿ, ಇತರರಿಗೂ ಮತದಾನ ಮಾಡಲು ಪ್ರೋತ್ಸಾಹಿಸುವಂತೆ ತಿಳಿಸಿ.

6. ಗುರುತು ಚೀಟಿ ಇರಲಿ

ಮತಗಟ್ಟೆಗೆ ತೆರಳುವಾಗ ನಿಮಗೆ ನೀಡಿರುವ ಮತ ಪತ್ರ, ಮತದಾರರ ಗುರುತು ಚೀಟಿ, ಆಧಾರ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಹೆಚ್ಚುವರಿ ಗುರುತು ಚೀಟಿಯನ್ನು ಇಟ್ಟುಕೊಂಡಿರಿ. ಅವಶ್ಯಕವಿದ್ದಾಗ ಇದನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

7. ಸರತಿ ಪಾಲಿಸಿ

ಮತಗಟ್ಟೆಯಲ್ಲಿ ಸರತಿಯನ್ನು ತಪ್ಪಿಸಬೇಡಿ. ಸರದಿಯನ್ನು ಪಾಲಿಸದೇ ಇರುವುದು ಇತರರಿಗೆ ಕಿರಿಕಿರಿ ಉಂಟು ಮಾಡಬಹುದು. ಅವಶ್ಯಕ ಕಾರ್ಯಗಳಿದ್ದರೆ ಬೇಗನೆ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬನ್ನಿ.

8. ಮೊಬೈಲ್ ಕೊಂಡೊಯ್ಯಬೇಡಿ

ಮತದಾನ ಮಾಡುವ ಕೇಂದ್ರದೊಳಗೆ ಮುಖ್ಯವಾಗಿ ಎವಿಎಂ ಕೊಠಡಿಯೊಳಗೆ ಮೊಬೈಲ್ ಫೋನ್ ಅನ್ನು ಒಯ್ಯಬೇಡಿ. ಇವಿಎಂ ಬಟನ್ ಒತ್ತಿದಾಗ ಸೆಲ್ಫಿ ಕ್ಲಿಕ್ಕಿಸಬೇಡಿ. ಇಲ್ಲವಾದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಕಾಗಬಹುದು.


9.ಇವಿಎಂ ಬಳಕೆ ಬಗ್ಗೆ ತಿಳಿಯಿರಿ

ಪ್ರತಿಯೊಂದು ಮತವೂ ಮುಖ್ಯವಾಗಿದೆ ಇದು ರಾಷ್ಟ್ರದ ಕಲ್ಯಾಣಕ್ಕಾಗಿ ಎಂಬುದನ್ನು ಮರೆಯದಿರಿ. ಇವಿಎಂ ನಲ್ಲಿ ಒಂದಕ್ಕಿಂತ ಹೆಚ್ಚು ಬಟನ್‌ಗಳನ್ನು ಒತ್ತಬೇಡಿ. ಯಾರಿಗೆ ಮತ ಚಲಾಯಿಸಬೇಕು ಎಂದುಕೊಂಡಿದ್ದೀರೋ ಆ ಅಭ್ಯರ್ಥಿಗಾಗಿ ಬಟನ್ ಅನ್ನು ಒತ್ತುವ ಸಂದರ್ಭದಲ್ಲಿ ಜಾಗರೂಕರಾಗಿರಿ.

Exit mobile version