Site icon Vistara News

Kompella Madhavi Latha: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಆಸ್ತಿ ಎಷ್ಟಿದೆ ನೋಡಿ!

Madhavi Latha

ಹೈದರಾಬಾದ್: ತೆಲಂಗಾಣದ (Telangana) ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ಹೈದರಾಬಾದ್ (Hyderabad) ಲೋಕಸಭಾ (lok sabha) ಕ್ಷೇತ್ರದ ಬಿಜೆಪಿ (bjp) ಅಭ್ಯರ್ಥಿ ಕೊಂಪೆಲ್ಲಾ ಮಾಧವಿ ಲತಾ (Kompella Madhavi Latha) ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 221.37 ಕೋಟಿ ರೂ. ಎಂಬುದಾಗಿ ಬುಧವಾರ ನಾಮಪತ್ರ (nomination) ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ( Election Commission) ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಮಾಧವಿ ಲತಾ ಮತ್ತು ಅವರ ಪತಿ ಕೊಂಪೆಲ್ಲಾ ವಿಶ್ವನಾಥ್ ಇಬ್ಬರೂ ವ್ಯಾಪಾರಿಗಳು. ಅವರ ಮೂವರು ಅವಲಂಬಿತ ಮಕ್ಕಳು, 165.46 ಕೋಟಿ ರೂಪಾಯಿಗಳ ಚರ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಮಾಧವಿ ಲತಾ ದಂಪತಿ 55.91 ಕೋಟಿ ರೂಪಾಯಿಗಳ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

ತೆಲಂಗಾಣದ ಅವಳಿ ನಗರವಾದ ಸಿಕಂದರಾಬಾದ್‌ನಲ್ಲಿ ನೆಲೆಸಿರುವ 49 ವರ್ಷದ ಮಾಧವಿ ಲತಾ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡರು. ಮೊದಲ ಬಾರಿಗೆ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ: Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

ಮಾಧವಿ ಲತಾ ಅವರು ಲಿಸ್ಟೆಡ್ ಮತ್ತು ಅನ್ ಲಿಸ್ಟೆಡ್ ಕಂಪನಿಗಳಲ್ಲಿ 25.20 ಕೋಟಿ ಹೂಡಿಕೆ ಸೇರಿದಂತೆ 31.31 ಕೋಟಿ ರೂ.ಗಳ ಚರ ಆಸ್ತಿಯನ್ನು ಹೊಂದಿದ್ದಾರೆ ಎಂದು ಅವರು ಘೋಷಿಸಿದರು.


ವಿರಿಂಚಿ ಲಿಮಿಟೆಡ್‌ನಲ್ಲಿ 7.80 ಕೋಟಿ ರೂಪಾಯಿ ಹೂಡಿಕೆಯನ್ನು ಹೊಂದಿರುವ ಅವರು 3.78 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ.

ಮಾಧವಿ ಲತಾ ಅವರ ಪತಿ ವಿರಿಂಚಿ ಲಿಮಿಟೆಡ್‌ನಲ್ಲಿ 52.36 ಕೋಟಿ ರೂ. ಮೌಲ್ಯದ ಷೇರುಗಳನ್ನು ಒಳಗೊಂಡಂತೆ 88.31 ಕೋಟಿ ರೂ. ಚರ ಆಸ್ತಿಯನ್ನು ಹೊಂದಿದ್ದಾರೆ. ಅವರ ಮೂವರು ಅವಲಂಬಿತ ಮಕ್ಕಳು ಸಹ 45 ಕೋಟಿ ರೂ. ಗೂ ಹೆಚ್ಚು ಒಟ್ಟು ಚರ ಆಸ್ತಿ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು 6.32 ಕೋಟಿ ಸ್ಥಿರಾಸ್ತಿ ಹೊಂದಿದ್ದು, ಪತಿಯ ಸ್ಥಿರಾಸ್ತಿ ಮೌಲ್ಯ 49.59 ಕೋಟಿ ರೂ. ಗಳಾಗಿದೆ.

ಆಸ್ತಿಗಳಲ್ಲಿ ಕೃಷಿಯೇತರ ಭೂಮಿ, ಹೈದರಾಬಾದ್ ಮತ್ತು ಸುತ್ತಮುತ್ತಲಿನ ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿವೆ.
ಮಾಧವಿ ಲತಾ ಅವರು 90 ಲಕ್ಷ ರೂ., ಅವರ ಪತಿಯು 26.13 ಕೋಟಿ ರೂ. ಇಕ್ವಿಟಿ ಹೊಂದಿದ್ದಾರೆ. 2022-23ರಲ್ಲಿ ಅವರ ಆದಾಯ 3.76 ಲಕ್ಷ ರೂ.ಗಳಾಗಿದ್ದರೆ, 2021-22ರಲ್ಲಿ 1.22 ಕೋಟಿ ರೂ. ಗಳಾಗಿತ್ತು. 2022-23ರಲ್ಲಿ ವಿಶ್ವನಾಥ್ ಅವರ ಆದಾಯ 2.82 ಕೋಟಿ ರೂ. ಗಳಾಗಿದ್ದರೆ, 2021- 22ರಲ್ಲಿ 6.86 ಕೋಟಿ ರೂ.

ಒಂದು ಕ್ರಿಮಿನಲ್ ಕೇಸ್

ಬಿಜೆಪಿ ಅಭ್ಯರ್ಥಿ ಒಂದು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಕಳೆದ ವಾರ ಆಕೆಯ ವಿರುದ್ಧ ಬೇಗಂ ಬಜಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295-ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದಿ ಅಂಬರ್ ಬಜಾರ್ ವೃತ್ತದಲ್ಲಿರುವ ಮಸೀದಿಯಲ್ಲಿ ಕಾಲ್ಪನಿಕ ಬಾಣದ ಚಿತ್ರ ಬಿಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

Exit mobile version