ನವದೆಹಲಿ: ಬಹುಮತ ಪಡೆದ ಎನ್‌ಡಿಎ (NDA) ಮತ್ತೊಂದು ಅವಧಿಗೆ ಸರ್ಕಾರ ರಚಿಸಲಿದೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ನಾಳೆ (ಜೂನ್ 9) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಯಾರಿಗೆಲ್ಲ ಸಚಿವ ಸ್ಥಾನ ಭಾಗ್ಯ ಸಿಗಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಸಂಪುಟ ದರ್ಜೆ ಸಚಿವರನ್ನು ತೀರ್ಮಾನಿಸುವ ನಿಟ್ಟಿನಲ್ಲಿ ಎನ್‌ಡಿಎ ಸಂಸದರ ಸಭೆ ಕರೆದಿದೆ (Modi 3.0 Cabinet).
ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ಪಟ್ಟಾಭಿಷೇಕಕ್ಕೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ ಹಲವು ಕ್ಯಾಬಿನೆಟ್ ದರ್ಜೆಯ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜವಾಹರಲಾಲ್ ನೆಹರೂ ನಂತರ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದು, ಈ ಐತಿಹಾಸಿಕ ಸಮಾರಂಭಕ್ಕೆ ವಿವಿಧ ದೇಶಗಳ ಗಣ್ಯರೂ ಹಾಜರಾಗಲಿದ್ದಾರೆ.
The President will administer the oath of office and secrecy to the Prime Minister and other members of the Union Council of Ministers at 7.15 pm on June 09, 2024, at Rashtrapati Bhavan.
— President of India (@rashtrapatibhvn) June 7, 2024
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ. ಇನ್ನು ಚಂದ್ರಬಾಬು ನಾಯ್ಡು ಅವರ ಟಿಡಿಪಿ 16 ಸ್ಥಾನಗಳನ್ನು, ನಿತೀಶ್ ಕುಮಾರ್ ಅವರ ಜೆಡಿಯು (12), ಏಕನಾಥ್ ಶಿಂಧೆ ಅವರ ಶಿವಸೇನೆ (7) ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) (5) ಸ್ಥಾನಗಳನ್ನು ಗೆದ್ದುಕೊಂಡು ಸರ್ಕಾರ ರಚಿಸಲು ಎನ್‌ಡಿಎಗೆ ಬೆಂಬಲ ನೀಡಿವೆ. ಹೀಗಾಗಿ ಇದೀಗ ಮೋದಿ ಸಂಪುಟದಲ್ಲಿ ಯಾರಿಗೆಲ್ಲ ಸಚಿವ ಸ್ಥಾನ ಭಾಗ್ಯ ಲಭಿಸಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.
ಮೋದಿ ಸಂಪುಟ ಸೇರುವ ಸಂಭ್ಯಾವ ಸಚಿವರು
ಬಿಜೆಪಿ
- ಅಮಿತ್ ಶಾ (ಗುಜುರಾತ್ )
- ರಾಜನಾಥ್ ಸಿಂಗ್ (ಉತ್ತರ ಪ್ರದೇಶ)
- ನಿತಿನ್ ಗಡ್ಕರಿ (ಮಹಾರಾಷ್ಟ್ರ )
- ನಿರ್ಮಲಾ ಸೀತರಾಮನ್ (ರಾಜ್ಯಸಭೆ )
- ಜೈ ಶಂಕರ್ (ರಾಜ್ಯಸಭೆ )
- ಶಿವರಾಜ್ ಸಿಂಗ್ ಚೌಹಾನ್ (ಮಧ್ಯಪ್ರದೇಶ )
- ಪಿಯೂಷ್ ಗೋಯಲ್ (ಮಹಾರಾಷ್ಟ್ರ )
- ಸ್ಮೃತಿ ಇರಾನಿ (ಸೋಲು, ರಾಜ್ಯಸಭೆಗೆ ಆಯ್ಕೆಯಾಗಬಹುದು)
- ಜ್ಯೋತಿರಾದಿತ್ಯ ಸಿಂಧಿಯಾ (ಮಧ್ಯಪ್ರದೇಶ )
- ಅರ್ಜುನ್ ಮುಂಡಾ (ಜಾರ್ಖಂಡ್ )
- ಹರ್ದೀಪ್ ಸಿಂಗ್ ಪುರಿ (ರಾಜ್ಯಸಭೆ )
- ಅನುರಾಗ್ ಠಾಕೂರ್ (ಹಿಮಾಚಲ ಪ್ರದೇಶ )
- ಪರಶೋತ್ತಮ್ ರೂಪಲಾ (ರಾಜ್ಯಸಭೆ )
- ಪ್ರಹ್ಲಾದ್ ಜೋಶಿ (ಕರ್ನಾಟಕ )
- ಗಿರಿರಾಜ್ ಸಿಂಗ್ (ಬಿಹಾರ)
- ಬಾನ್ಸೂರಿ ಸ್ವರಾಜ್ (ದೆಹಲಿ)
- ಗಜೇಂದ್ರ ಸಿಂಗ್ ಶೇಖಾವತ್ (ರಾಜಸ್ಥಾನ)
- ಭೂಪೇಂದ್ರ ಯಾದವ್ (ರಾಜಸ್ಥಾನ)
ಮೈತ್ರಿ ಪಕ್ಷದ ನಾಯಕರು
- ಚಿರಾಗ್ ಪಾಸ್ವಾನ್ ( ಎಲ್ಜೆಪಿ- ಬಿಹಾರ)
- ಲಾಲನ್ ಸಿಂಗ್ (ಜೆಡಿಯು- ಬಿಹಾರ)
- ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್- ಕರ್ನಾಟಕ)
- ಅನುಪ್ರಿಯಾ ಪಟೇಲ್ (ಅಪ್ನಾದಳ್- ಉತ್ತರಪ್ರದೇಶ)
- ಜಿತನ್ ರಾಮ್ ಮಾಂಝಿ (ಎಚ್ಎಎಂ- ಬಿಹಾರ)
ಇದನ್ನೂ ಓದಿ: Narendra Modi: ಭಾನುವಾರ ಸಂಜೆ 7.15ಕ್ಕೆ ಮೋದಿ ಪ್ರಮಾಣವಚನ; ಹಲವು ಸಂಸದರಿಗೂ ಮಂತ್ರಿ ಭಾಗ್ಯ!
ಎನ್‌ಡಿಎ ಮೈತ್ರಿಕೂಟದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ (ಜೂನ್ 7) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ನೂತನ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಬೆಂಬಲ ನೀಡಿರುವ ಪತ್ರದೊಂದಿಗೆ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾದ ಅವರು ಹಕ್ಕು ಮಂಡಿಸಿದ್ದಾರೆ. ಇನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಅವರಿಗೆ ದ್ರೌಪದಿ ಮುರ್ಮು ಅವರು ಸಕ್ಕರೆ ಮಿಶ್ರಣ ಆಗಿರುವ ಮೊಸರನ್ನು ತಿನ್ನಿಸಿ, ಶುಭ ಕೋರಿದ್ದಾರೆ.