Site icon Vistara News

PM Narendra Modi: ಪ್ರಧಾನಿ ಮೋದಿ ರ್‍ಯಾಲಿಯಲ್ಲಿ ಜನವೋ…ಜನ! ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ-ವಿಡಿಯೋ ವೈರಲ್‌

PM Narendra Modi

ಉತ್ತರಪ್ರದೇಶ: ಲೋಕಸಭೆ ಚುನಾವಣೆ(Lok Sabha Election 2024) ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಚುನಾವಣೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ರಾಜಕೀಯ ನಾಯಕರು ಒಂದರ ಮೇಲೊಂದರಂತೆ ರ್ಯಾಲಿ, ಸಾರ್ವಜನಿಕ ಸಭೆ ನಡೆಸುವ ಮೂಲಕ ತಮ್ಮ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ನಿನ್ನೆ ಉತ್ತರಪ್ರದೇಶ(Uttara Pradesh)ದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ(PM Narendra Modi) ಪ್ರಚಾರ ಕಾರ್ಯಕ್ರಮದಲ್ಲಿ ದಾಖಲೆ ಪ್ರಮಾಣದಲ್ಲಿ ಜನಸ್ತೋಮ ಸೇರಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉತ್ತರಪ್ರದೇಶದ ಶ್ರವಸ್ಥಿಯಲ್ಲಿ ನಿನ್ನೆ ಪ್ರಧಾನಿ ಮೋದಿ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. ನೆಚ್ಚಿನ ನಾಯಕನನ್ನು ನೋಡಲು ಲಕ್ಷಾಂತರ ಜನ ಆಗಮಿಸಿದ್ದರು. ಸೇರಿದ್ದ ಜನಸ್ತೋಮದ ಏರಿಯಲ್‌ ವ್ಯೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ಆಗಿದೆ. ಈ ದೃಶ್ಯವನ್ನು ಸ್ವತಃ ಪ್ರಧಾನಿ ಮೋದಿಯೇ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರೀ ಜನಸ್ತೋಮದ ಮೂಲಕ ಪ್ರಧಾನಿ ಮೋದಿ ಶಕ್ತಿಪ್ರದರ್ಶನ ನಡೆಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಕೋಮುವಾದ, ಜಾತಿವಾದ ಮತ್ತು ಸ್ವಜನಪಕ್ಷಪಾತ ಕ್ಯಾನ್ಸರ್‌ಗಿಂತಲೂ ಭೀಕರವಾಗಿದ್ದು, ಅದು ದೇಶವನ್ನೇ ಹಾಳು ಮಾಡುತ್ತವೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ. ಇಂಡಿಯಾ ಒಕ್ಕೂಟ ಕ್ಯಾನ್ಸರ್‌ಗೊಂತಲೂ ಭೀಕರವಾದ ಖಾಯಿಲೆಗಳನ್ನು ಹೊಂದಿದೆ. ಅವರು ದೇಶದೆಲ್ಲೆಡೆ ಹರಡಿದರೆ ದೇಶ ನಾಶವಾಗುವುದು ಖಚಿತ. ದೇಶದೆಲ್ಲೆಡೆ ಎಸ್‌ ಮತ್ತು ಕಾಂಗ್ರೆಸ್‌ ಸಂಪೂರಣವಾಗಿ ನಾಶವಾಗಿದೆ. ಇಡೀ ದೇಶವೇ ಮತ್ತೊಮ್ಮೆ ಮೋದಿ ಎಂಬ ಮಂತ್ರ ಪಠಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ರ್ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ

ಕಳೆದ ವಾರ ಉತ್ತರಪ್ರದೇಶದ ಪಡಿಲ ಮಹಾದೇವ್‌ನಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ಮತ್ತು ಅಖಿಲೇಶ್‌ ಯಾದವ್‌(Akhilesh Yadav) ಭಾಗಿಯಾಗಿದ್ದ ಚುನಾವಣಾ ರ್ಯಲಿಯಲ್ಲಿ ದಾಖಲೆ ಪ್ರಮಾಣದಲ್ಲಿ ಜನಸ್ತೋಮ ಸೇರಿ, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಫುಲ್‌ಫುರದಲ್ಲಿ ಸ್ವತಃ ನಾಯಕರೇ ಆಘಾತಕ್ಕೀಡಾಗುವಂತಹ ರೀತಿಯಲ್ಲಿ ಜನ ಭಾಗಿಯಾಗಿದ್ದರು. ನೆರೆದಿರುವ ಜನರನ್ನು ನಿಯಂತ್ರಿಸಲು ಪೊಲೀಸರು, ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಜನ ವೇದಿಕೆ ಮೇಲೆ ಬರಲಿ ಬ್ಯಾರಿಕೇಡ್‌ಗಳನ್ನು ಮುರಿದ ಕಾರಣ, ಗೊಂದಲದ ವಾತಾವರಣ ಉಂಟಾಗಿತ್ತು, ಸಮಾಧಾನದಿಂದ ಇರುವಂತೆ ರಾಹುಲ್ ಗಾಂಧಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಒಟ್ಟಿನಲ್ಲಿ ಒಂದು ಕ್ಷಣಕ್ಕೆ ಕಾಲ್ತುಳಿತದಂತಹ ದುರ್ಘಟನೆ ಸಂಭವಿಸುವ ಎಲ್ಲಾ ಲಕ್ಷಣ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Lok Sabha Election 2024: ಉತ್ತರ ಕನ್ನಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಎಂಇಎಸ್‌ನಿಂದ ನಿರಂಜನ್ ಸರ್ದೇಸಾಯಿ ಸ್ಪರ್ಧೆ

ಭಾರೀ ಜನಸ್ತೋಮ ಕಂಡು ದಂಗಾಗಿದ್ದ ರಾಹುಲ್‌ ಮತ್ತು ಅಖಿಲೇಶ್‌ ವೇದಿಕೆಯಿಂದ ನಿರ್ಗಮಿಸುವುದೇ ಸೂಕ್ತ ಎಂದು ಭಾವಿಸಿದರು. ಕಾರ್ಯಕರ್ತರ ಈ ರೀತಿಯಾದ ಅನುಚಿತ ವರ್ತನೆಯಿಂದ ಕುಪಿತಗೊಂಡ ಇಬ್ಬರೂ ನಾಯಕರು ಏನೂ ಮಾತನಾಡಲಿಲ್ಲ. ತಾವು ಮಾಡಬೇಕಾಗಿದ್ದ ಭಾಷಣವನ್ನೂ ಮಾಡದೇ ಇಬ್ಬರೂ ನಾಯಕರು ವೇದಿಕೆಯಿಂದ ನಿರ್ಗಮಿಸಿದ್ದರು.

Exit mobile version