ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ (Vistara News) ಮಂಗಳವಾರ (ಮಾ. 12) ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್ ಬೂತ್‌ನಲ್ಲಿ (Vistara news polling booth) ಜನ ಬಿಜೆಪಿಯನ್ನೇ ಬೆಂಬಲಿಸಿದ್ದಾರೆ. ಅಚ್ಚರಿ ಬೆಳವಣಿಗೆ ಎಂದರೆ ಬಿಜೆಪಿಯಿಂದ ಬಂಡಾಯ ಸಾರಿ ಅಂತರ ಕಾಯ್ದುಕೊಂಡಿರುವ ಅರುಣ್ ಪುತ್ತಿಲ (Arun Puthila) ಅವರನ್ನೇ ಅತಿ ಹೆಚ್ಚು ಮಂದಿ ಮೆಚ್ಚಿದ್ದಾರೆ. ಅವರಿಗೇ ಅತಿ ಹೆಚ್ಚು ಮತಗಳು ಬಂದಿದ್ದು, ಬ್ರಿಜೇಶ್ ಚೌಟ (Brijesh Chauta) ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
“ವಿಸ್ತಾರ ಪೋಲಿಂಗ್ ಬೂತ್”ಗೆ 2ನೇ ದಿನವೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕರೆಗಳ ಮೇಲೆ ಕರೆಗಳು ಬಂದಿವೆ. ಒಟ್ಟು 21000 ಕರೆಗಳು ಬಂದಿದ್ದು, ಅವುಗಳಲ್ಲಿ 6009 ಕರೆಗಳನ್ನು ಸ್ವೀಕರಿಸಲಾಗಿದೆ. ಇವರಲ್ಲಿ ಬಿಜೆಪಿ ಪರವಾಗಿ 4,716 ಮಂದಿ ಮತ ಚಲಾಯಿಸಿದ್ದಾರೆ. ಆದರೆ, ಕಾಂಗ್ರೆಸ್ ಪರವಾಗಿ ಕೇವಲ 1,293 ಮತಗಳು ಚಲಾವಣೆಯಾಗಿದೆ.
2ನೇ ಸ್ಥಾನದಲ್ಲಿ ಕಾಂಗ್ರೆಸ್
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಯಾರು ಎಂಪಿ ಆಗಬೇಕು ಎಂಬ ಬಗ್ಗೆಯೂ ದಕ್ಷಿಣ ಕನ್ನಡ ಜಿಲ್ಲೆಯ ಮತದಾರ ಹೇಳಿದ್ದು, ಬಹುತೇಕ ಮಂದಿ ಅರುಣ್ ಪುತ್ತಿಲ ಅವರನ್ನೇ ಬೆಂಬಲಿಸಿದ್ದಾರೆ. ಆದರೆ, ಬ್ರಿಜೇಶ್ ಚೌಟ ಪರವೂ ಕೆಲವು ಮತದಾರರು ಒಲವು ತೋರಿದ್ದಾರೆ. ಇನ್ನು ಸತ್ಯಜಿತ್ ಸುರತ್ಕಲ್ ಸಹ ರೇಸ್‌ನಲ್ಲಿದ್ದು, ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಡೇ ಸ್ಥಾನದಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಆದರೆ, ಒಟ್ಟಾರೆ ಸಾರಾಂಶ ಎಂದರೆ ಅಭ್ಯರ್ಥಿ ಯಾರೇ ಆದರೂ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ 2ನೇ ಸ್ಥಾನದಲ್ಲಿದೆಯಾದರೂ, ಗೆಲ್ಲಬೇಕೆಂದರೆ ಸಾಕಷ್ಟು ಶ್ರಮವನ್ನು ಹಾಕಬೇಕಾಗುತ್ತದೆ ಎಂಬ ಸಂದೇಶವನ್ನು ಮತದಾರ ಇಲ್ಲಿ ಸಾರಿ ಹೇಳಿದ್ದಾನೆ.
ಒಟ್ಟು ಕರೆಗಳು ಏನು? ಪಕ್ಷಗಳ ಶೇಕಡಾವಾರು ಮತ ಎಷ್ಟು?
- ಒಟ್ಟು ಕರೆಗಳು : 21000
- ಸ್ವೀಕರಿಸಿದ ಕರೆಗಳು : 6009
- ಬಿಜೆಪಿ – 4,716 – 78%
- ಕಾಂಗ್ರೆಸ್ – 1,293 – 22%
- ಅರುಣ್ ಪುತ್ತಿಲ – 1211
- ಬ್ರಿಜೇಶ್ ಚೌಟ – 911
- ಸತ್ಯಜಿತ್ ಸುರತ್ಕಲ್ – 695
- ನಳಿನ್ಕುಮಾರ್ ಕಟೀಲ್ – 400
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಇದನ್ನೂ ಓದಿ: Vistara News Polling Booth : ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್: ವಿನೂತನ ಪ್ರಯೋಗಕ್ಕೆ ಡಾ. ಮಂಜುನಾಥ್ ಚಾಲನೆ
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488