Site icon Vistara News

Money Guide: ಹೆಚ್ಚಿನ ಬಡ್ಡಿ ಮಾತ್ರವಲ್ಲ, ಪಿಪಿಎಫ್ ನಿಂದ ಇನ್ನೂ ಏನೇನು ಪ್ರಯೋಜನ?

Money Guide

ಹೂಡಿಕೆ (investment) ಮಾಡುವಾಗ ಹೆಚ್ಚಿನ ಲಾಭ (Money Guide) ಪಡೆಯುವ ನಿರೀಕ್ಷೆಯಂತೂ ಇದ್ದೇ ಇರುತ್ತದೆ. ಹೀಗಾಗಿ ಹೆಚ್ಚಿನವರು ಆಯ್ಕೆ ಮಾಡುವುದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund). ಇದರಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭವಂತೂ ಇದ್ದೇ ಇದೆ. ಯಾಕೆಂದರೆ ಇದು ಶೇ. 7.1 ರಷ್ಟು ಬಡ್ಡಿ ದರವನ್ನು (interest rate) ಹೊಂದಿದೆ. ಹೀಗಾಗಿ ಹೂಡಿಕೆ ಮೇಲೆ ನಿರ್ಧಿಷ್ಟ ಮೊತ್ತ ಮರಳಿ ಕೈ ಸೇರುವ ಖಚಿತತೆ ಇರುತ್ತದೆ.

ಆದರೂ ಕೆಲವರು ಪಿಪಿಎಫ್ (PPF) ಮೇಲೆ ಹೂಡಿಕೆ ಮಾಡಲು ಆಸಕ್ತಿ ವಹಿಸುವುದಿಲ್ಲ. ಬದಲಿಗೆ ಅವರು ಈಕ್ವಿಟಿ ಅಥವಾ ಮ್ಯೂಚುವಲ್ ಫಂಡ್‌, ಬ್ಯಾಂಕ್ ಸ್ಥಿರ ಠೇವಣಿ ಅಥವಾ ಹಣಕಾಸು ಸಂಸ್ಥೆಗಳು ಹೊರತಂದಿರುವ ವಿವಿಧ ಯೋಜನೆಗಳ ಮೂಲಕ ನೇರ ಹೂಡಿಕೆಯತ್ತ ಗಮನ ಹರಿಸುತ್ತಾರೆ. ಈ ಯೋಜನೆಗಳು ಉತ್ತಮವಾಗಿದ್ದರೂ ಪಿಪಿಎಫ್ ತನ್ನದೇ ಆದ ಹಲವಾರು ಕಾರಣಗಳಿಂದ ಅತ್ಯುತ್ತಮ ಆಯ್ಕೆ ಎಂಬುದನ್ನು ಖಚಿತಪಡಿಸುತ್ತದೆ. ಅವು ಯಾವುದು ಗೊತ್ತೇ?

ಪಿಪಿಎಫ್ ಸುರಕ್ಷಿತ

ಪಿಪಿಎಫ್ ಅನ್ನು 1968ರಲ್ಲಿ ಭಾರತ ಸರ್ಕಾರವು ಪ್ರಾರಂಭಿಸಿತು. ಇದರರ್ಥ ಪಿಪಿಎಫ್ ಖಾತೆಯ ಮಾಲೀಕರ ಹಣ ಮತ್ತು ಆದಾಯವನ್ನು ಸರ್ಕಾರವು ಖಾತರಿಪಡಿಸುತ್ತದೆ.

ಪಿಪಿಎಫ್ ಬಡ್ಡಿ ದರ

ಪಿಪಿಎಫ್ ಬಡ್ಡಿದರವು ಮೊದಲಿನಷ್ಟು ಹೆಚ್ಚಿಲ್ಲದಿರಬಹುದು. ಆದರೆ ಈಗ ಶೇ. 7.1ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ. ಹಣಕಾಸು ಸಚಿವಾಲಯವು ಈ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ.

ಪಿಪಿಎಫ್ ಅವಧಿ

ಪಿಪಿಎಫ್ ಅವಧಿಯು 15 ವರ್ಷಗಳು. ಈ ವರ್ಷಗಳಲ್ಲಿ ಹೂಡಿಕೆ ಮಾಡುವ ಸಂಪೂರ್ಣ ಮೊತ್ತವು ಲಾಕ್ ಆಗಿರುತ್ತದೆ. ಲಾಕ್-ಇನ್ ಅವಧಿಯು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೂ ಪಿಪಿಎಫ್ ಖಾತೆದಾರರು ಇದನ್ನು ಶಿಸ್ತಿನಿಂದ ನಿರ್ವಹಿಸುತ್ತಾರೆ ಎಂದು ಖಚಿತಪಡಿಸುತ್ತದೆ. ಈ ಅವಧಿಯ ಕೊನೆಯಲ್ಲಿ ದೊಡ್ಡ ಮೊತ್ತದ ಪಾವತಿಯ ರೂಪದಲ್ಲಿ ಅದರಿಂದ ಅವರು ಪ್ರಯೋಜನವನ್ನು ಪಡೆಯುತ್ತಾರೆ.

ಪಿಪಿಎಫ್ ವಿಸ್ತರಣೆ

ಪಿಪಿಎಫ್ ಆರಂಭದಲ್ಲಿ 15 ವರ್ಷಗಳವರೆಗೆ ಲಭ್ಯವಿದ್ದರೆ ಖಾತೆದಾರರು ಅದನ್ನು ಐದು ವರ್ಷಗಳ ಬ್ಯಾಚ್‌ನಲ್ಲಿ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬಹುದು.


ಪಿಪಿಎಫ್ ತೆರಿಗೆ ಉಳಿತಾಯ

ಪಿಪಿಎಫ್ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಉಳಿಸುವ ಸಾಧನವಾಗಿದೆ. ಅಂದರೆ ಈ ಉಪಕರಣದ ಮೂಲಕ ಉಳಿಸಿದ ಹಣಕ್ಕೆ ಯಾವುದೇ ಸಮಯದಲ್ಲಿ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ, ಇದು ಬ್ಯಾಂಕ್ ಎಫ್‌ಡಿಗಳು ಮತ್ತು ಇತರ ಹಲವು ಆಧುನಿಕ, ಹೂಡಿಕೆ ಮಾರ್ಗಗಳಿಗಿಂತ ಭಿನ್ನವಾಗಿದೆ.

ಪಿಪಿಎಫ್ ಹೂಡಿಕೆ ಮಿತಿ

ಖಾತೆದಾರರು ಪ್ರತಿ ವರ್ಷ 1,50,000 ರೂ. ಹೂಡಿಕೆ ಮಾಡಬಹುದಾದರೂ ಈ ಮಿತಿಯನ್ನು ತಲುಪಬೇಕು ಎಂಬ ಯಾವುದೇ ಒತ್ತಾಯವಿಲ್ಲ. ವಾಸ್ತವವಾಗಿ, ಅವರು ಪ್ರತಿ ವರ್ಷ 500 ರೂ.ಗಳಷ್ಟು ಕಡಿಮೆ ಹೂಡಿಕೆ ಮಾಡಬಹುದು. ಪಿಪಿಎಫ್‌ನಲ್ಲಿ ಒಬ್ಬ ವ್ಯಕ್ತಿಗೆ ಸಾಧ್ಯವಾದಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದು ಯಾವಾಗಲೂ ಉತ್ತಮ ಎಂದು ಹೇಳುವುದಾದರೆ ಅದು ಗ್ರಾಹಕನ ಉಳಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: Stock Market News: ಮೋದಿ ಪ್ರಮಾಣ ವಚನದ ಬಳಿಕ ಷೇರು ಮಾರುಕಟ್ಟೆ ಜಿಗಿತ; ಸೆನ್ಸೆಕ್ಸ್‌ ಹೊಸ ದಾಖಲೆ

ಪಿಪಿಎಫ್ ಸಾಲ

ಪಿಪಿಎಫ್ ಖಾತೆದಾರರು ಹೂಡಿಕೆ ಮಾಡಿದ ಮೊತ್ತಕ್ಕೆ ಸಾಲವನ್ನು ತೆಗೆದುಕೊಳ್ಳಬಹುದು. ಆದರೆ ಅದನ್ನು ತೆರೆದ 3 ವರ್ಷಗಳ ಅನಂತರ ಮಾತ್ರ ಆಗಬಹುದು.

ಶಿಸ್ತು ಬದ್ದ ಠೇವಣಿ, ಬಡ್ಡಿ

ಪಿಪಿಎಫ್ ಹೂಡಿಕೆಯಲ್ಲಿ ಯಾವುದೇ ಗೌಪ್ಯತೆ ಇಲ್ಲ. ಪಿಪಿಎಫ್ ಖಾತೆದಾರರು ಮಾಡಬೇಕಾಗಿರುವುದು ಹಣವನ್ನು ಸಾಧ್ಯವಾದಷ್ಟು ಶಿಸ್ತುಬದ್ಧವಾಗಿ ಠೇವಣಿ ಮಾಡುವುದು ಮಾತ್ರ. ಆಗ ನಿರ್ಧಿಷ್ಟ ಬಡ್ಡಿಯನ್ನು ಆನಂದಿಸಬಹುದು.

Exit mobile version