Site icon Vistara News

ವಿಸ್ತಾರ Money Guide | ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 7.6% ಬಡ್ಡಿ: ಏನು? ಎತ್ತ?

savings

೧/೭ ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ನಿವೃತ್ತರಿಗೆ ಅಚ್ಚುಮೆಚ್ಚಿನ ಹೂಡಿಕೆಯ ಆಯ್ಕೆಯಾಗಿದೆ. ಸರ್ಕಾರದ ಈ ಯೋಜನೆ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಪ್ರಯೋಜನ ಪಡೆಯುವುದು ಹೇಗೆ? ಇಲ್ಲಿದೆ ವಿವರ.

೨/೭ ಯಾರು ಸೇರ್ಪಡೆಯಾಗಬಹುದು?

ಹಿರಿಯ ನಾಗರಿಕರಲ್ಲಿ 60 ಮತ್ತು ಮೇಲಿನ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಹೂಡಬಹುದು. 55 ವರ್ಷಕ್ಕಿಂತ ಮೇಲೆ ಹಾಗೂ 60 ವರ್ಷಕ್ಕಿಂತ ಕೆಳಗಿನ ವ್ಯಕ್ತಿಗಳು, ನಿವೃತ್ತಿಯ ಅನುಕೂಲಗಳು ದೊರಕಿದ ತಿಂಗಳೊಳಗೆ ಈ ಯೋಜನೆಗೆ ಸೇರ್ಪಡೆಯಾಗಬಹುದು.

3/7 ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ನೀವು ಎಷ್ಟು ಹೂಡಿಕೆ ಮಾಡಬಹುದು?

ಕನಿಷ್ಠ 1,000 ರೂ. ಹೂಡಿಕೆ ಮಾಡಬಹುದು, ಗರಿಷ್ಠ 15 ಲಕ್ಷ ರೂ. ತನಕ ಹೂಡಬಹುದು.

೪/೭ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಅವಧಿ ಎಷ್ಟು?

ಈ ಯೋಜನೆಯ ಅವಧಿ ಐದು ವರ್ಷ. ಹೀಗಿದ್ದರೂ ಮೆಚ್ಯೂರಿಟಿ ಆದ ಬಳಿಕ ಮತ್ತೆ ಮೂರು ವರ್ಷಗಳ ಕಾಲ ವಿಸ್ತರಿಸಬಹುದು.

5/7 ಬಡ್ಡಿ ದರ

‌ಈ 2022-23 ರ ಅಕ್ಟೋಬರ್- ಡಿಸೆಂಬರ್‌ ಅವಧಿಯಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ವಾರ್ಷಿಕ 7.6 % ಬಡ್ಡಿ ದರ ನಿಗದಿಯಾಗಿದೆ. ಪ್ರತಿ ಮೂರು ತಿಂಗಳೊಗೊಮ್ಮೆ ಬಡ್ಡಿ ದರ ವಿತರಣೆಯಾಗಲಿದೆ ಹಾಗೂ ಸಂಪೂರ್ಣ ತೆರಿಗೆ ನಿಯಮಗಳ ಚೌಕಟ್ಟಿನಲ್ಲಿ ಬರುತ್ತದೆ.

6/7 ಅವಧಿಗೆ ಮುನ್ನ ಹೂಡಿಕೆಯ ಹಿಂತೆಗೆತ

ಯೋಜನೆಯಡಿಯಲ್ಲಿ ಖಾತೆ ತೆರೆದ ಒಂದು ವರ್ಷದ ಬಳಿಕ ಅವಧಿಗೆ ಮುನ್ನ ಹೂಡಿಕೆಯ ಹಿಂತೆಗೆತಕ್ಕೆ ಅವಕಾಶ ಇದೆ. ಹೂಡಿಕೆಯ 1.5% ಮೊತ್ತವನ್ನು ದಂಡದ ರೂಪದಲ್ಲಿ ಕಡಿತ ಮಾಡಲಾಗುತ್ತದೆ. ಎರಡನೇ ವರ್ಷದ ಬಳಿಕ ಹೂಡಿಕೆ ಹಿಂತೆಗೆತ ಮಾಡುವುದಿದ್ದರೆ, ಹೂಡಿಕೆಯ 1% ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

7/7 ಆದಾಯ ತೆರಿಗೆ ಪ್ರಯೋಜನ

ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರು, ಆದಾಯ ತೆರಿಗೆ ಕಾಯಿದೆ-1961 ಅಡಿಯ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಕಡಿತ ಸೌಲಭ್ಯವನ್ನು ಪಡೆಯಬಹುದು.

Exit mobile version