Site icon Vistara News

ವಿಸ್ತಾರ Money Guide | ಈ ಕಿರು ಹಣಕಾಸು ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಗೆ 8% ಬಡ್ಡಿ ದರ

cash

ಇಎಸ್‌ಎಎಫ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ (ESAF Small Finance Bank) ತನ್ನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಜತೆಗೆ ಹೆಚ್ಚಿನ ಬಡ್ಡಿ ದರ ನೀಡುವ ಹೊಸ ಠೇವಣಿ ಯೋಜನೆಯನ್ನೂ (ವಿಸ್ತಾರ Money Guide) ಪ್ರಕಟಿಸಿದೆ.

ಬ್ಯಾಂಕ್‌ ಈಗ ಸಾಮಾನ್ಯ ನಾಗರಿಕರಿಗೆ 4.50%ರಿಂದ 8% ತನಕ ಬಡ್ಡಿ ದರವನ್ನು ನೀಡಲಿದೆ. ಹಿರಿಯ ನಾಗರಿಕರಿಗೆ 4.50%ರಿಂದ 8.50% ತನಕ ಬಡ್ಡಿ ದರ ದೊರೆಯುತ್ತದೆ. 7 ದಿನಗಳಿಂದ 10 ವರ್ಷಗಳ ಅವಧಿಯ ಎಫ್‌ಡಿಗಳಿಗೆ ಇದು ಅನ್ವಯವಾಗಲಿದೆ. ಪರಿಷ್ಕೃತ ಬಡ್ಡಿ ದರಗಳು 2022ರ ನವೆಂಬರ್‌ 1ರಿಂದ ಅನ್ವಯವಾಗಲಿದೆ ಎಂದು ಬ್ಯಾಂಕ್‌ನ ವೆಬ್‌ಸೈಟ್‌ ತಿಳಿಸಿದೆ.

ಇಎಸ್‌ಎಎಫ್ ಎಸ್‌ಎಫ್‌ಬಿ ಎಫ್‌ಡಿ ಬಡ್ಡಿ ದರಗಳು:

ಇಎಸ್‌ಎಎಫ್‌ ಎಸ್‌ಎಫ್‌ಬಿ (ESAF SFB) ನಿಶ್ಚಿತ ಠೇವಣಿಯ ಬಡ್ಡಿ ದರಗಳು 4.00% ರಿಂದ ಆರಂಭವಾಗುತ್ತದೆ. ಈ ಬಡ್ಡಿ ದರವು 7ರಿಂದ 14 ದಿನಗಳಿಗೆ ಲಭ್ಯ. 15ರಿಂದ 59 ದಿನಗಳ ಠೇವಣಿಗೆ 4.50% ಬಡ್ಡಿ ಸಿಗುತ್ತದೆ. 60ರಿಂದ 90 ದಿನಗಳ ಠೇವಣಿಗೆ 5%, ೯೧ರಿಂದ 182 ದಿನಗಳ ಠೇವಣಿಗೆ 5.25% ಬಡ್ಡಿ ಸಿಗುತ್ತದೆ.

ಇಎಸ್‌ಎಎಫ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, 183 ದಿನಗಳಿಂದ ಒಂದು ವರ್ಷ ಅವಧಿಯ ನಿಶ್ಚಿತ ಠೇವಣಿಗಳಿಗೆ 5.50% ಬಡ್ಡಿದರವನ್ನು ನೀಡುತ್ತದೆ. 1 ವರ್ಷ ಅವಧಿಯ ಠೇವಣಿಗೆ 6.60% ಬಡ್ಡಿ ಸಿಗಲಿದೆ. 1,000 ದಿನಗಳಿಂದ 3 ವರ್ಷ ಅವಧಿಯ ಠೇವಣಿಗೆ 7.25% ಬಡ್ಡಿ ಆದಾಯ ಸಿಗಲಿದೆ.

999 ದಿನಗಳ ಅವಧಿಯ ಠೇವಣಿಗಳಿಗೆ 8% ಬಡ್ಡಿ ಆದಾಯ ದೊರೆಯಲಿದೆ. ಇಎಎಸ್‌ಎಎಫ್‌ ವೆಬ್‌ ಸೈಟ್‌ ಪ್ರಕಾರ ಈ 999 ದಿನಗಳ ಠೇವಣಿಗೆ 8% ಬಡ್ಡಿ ದರ ಸೌಲಭ್ಯವು 2022ರ ನವೆಂಬರ್‌ 30 ತನಕ ಸಿಗಲಿದೆ.

Exit mobile version