ನೀವು ಯಾವುದಾದರೂ ಒಂದು ವಿಷಯವನ್ನು 10% ಸುಧಾರಿಸುವುದಿದ್ದರೆ ಈಗ ಇರುವ ಟೂಲ್ಸ್‌ಗಳು ಮತ್ತು ಗ್ರಹಿಕೆಗಳನ್ನು ಬಳಸಲು ಆದ್ಯತೆ ಮತ್ತು ಫೋಕಸ್ ನೀಡುತ್ತೀರಿ. (Business Guide) ಈಗಾಗಲೇ ಇರುವ ಐಡಿಯಾಗಳನ್ನೇ ಬಳಸಿದರೆ ಅನೇಕ ಜನ ಅದನ್ನು ಸಾಕಷ್ಟು ಸಲ ಬಳಸಿ ಬಿಟ್ಟಿರುವಂಥದ್ದೇ ಆಗಿರುತ್ತದೆ. ಹೆಚ್ಚುವರಿ ಪ್ರಯತ್ನ, ಹೆಚ್ಚುವರಿ ಹಣ ಮತ್ತು ಹೆಚ್ಚುವರಿ ಸಂಪನ್ಮೂಲ ಈಗಾಗಲೇ ಬಳಕೆಯಾಗಿರುತ್ತದೆ. ಹಾಗಾದರೆ 10 ಪಟ್ಟು ಫಲಿತಾಂಶ ಹೇಗೆ? ಅದು ಹೇಗೆ ವಿಭಿನ್ನವಾಗಿರುತ್ತದೆ? ಅದಕ್ಕೆ ಬೇಕು ಕ್ರಿಯೇಟಿವಿಟಿ ಅಥವಾ ಸೃಜನಶೀಲತೆ. ಇದು ಕೇವಲ ಸಾಹಿತ್ಯ, ಕಲೆ, ಸಂಗೀತಕ್ಕೆ ಸೀಮಿತವಾದದ್ದಲ್ಲ. ಬಿಸಿನೆಸ್ ಲೈಫ್‌ನಲ್ಲೂ ಯಶಸ್ಸಿಗೆ ಅಗತ್ಯ.
ಪ್ರಾಚೀನ ಗ್ರೀಸ್‌ನಲ್ಲಿ ಆರ್ಕಿಮಿಡಿಸ್ ಎಂಬ ವಿಜ್ಞಾನಿ ಇದ್ದ. ಆತನ ಕೆಲ ಜನಪ್ರಿಯ ದಂತಕತೆಗಳನ್ನು ನಾವೆಲ್ಲ ಕೇಳಿದ್ದೇವೆ. ಈಗ ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಆರ್ಕಿಮಿಡಿಸ್ ರಾಜನ ಆಸ್ಥಾನದಲ್ಲಿ ಮನ್ನಣೆ ಗಳಿಸಿದ್ದ. ಅಸಾಧ್ಯ ಸವಾಲುಗಳಿಗೆ ಆರ್ಕಿಮಿಡಿಸ್ ವೈಜ್ಞಾನಿಕವಾಗಿ ಪರಿಹಾರಗಳನ್ನು ಸೂಚಿಸುತ್ತಿದ್ದ. ಅಷ್ಟೇ ಅಲ್ಲ ತನ್ನ ಸಂಶೋಧನೆಗಳನ್ನು ಸಾಬೀತುಪಡಿಸುತ್ತಿದ್ದ.
ಒಂದು ದಿನ ಹಲವರ ಎದುರು ಆರ್ಕಿಮಿಡಿಸ್, ತಾನು ಭೂಮಿಯನ್ನು ನೂಕಬಲ್ಲೆ ಎಂದು ಹೇಳಿದ. ಇದು ಜನರ ಕಲ್ಪನೆಗೂ ನಿಲುಕದ ಸಂಗತಿಯಾಗಿತ್ತು. ಈ ಸುದ್ದಿ ರಾಜನ ಕಿವಿಗೂ ಬಿತ್ತು. ಅಚ್ಚರಿಗೊಂಡ ದೊರೆ, ಆರ್ಕಿಮಿಡಿಸ್‌ನನ್ನು ಕರೆಸಿ, ಹೌದಾ, ನೀವು ಹೀಗೆ ಹೇಳಿದ್ದು ನಿಜವೇ ಎಂದ. ಅದಕ್ಕೆ ಆರ್ಕಿಮಿಡಿಸ್ ಹೌದು ಎಂದ. ಮತ್ತಷ್ಟು ಅಚ್ಚರಿಯಿಂದ ರಾಜ ಕೇಳಿದ, ಅದು ಹೇಗೆ ಸಾಧ್ಯ? ಆಗ ಆರ್ಕಿಮಿಡಿಸ್ ಹೇಳಿದ. ನನಗೆ ಸರಿಯಾದ ಜಾಗ ಮತ್ತು ಸಲಿಕೆಯನ್ನು ಕೊಟ್ಟರೆ ಭೂಮಿಯನ್ನು ನೂಕಬಲ್ಲೆ.
ಹಾಗಾದರೆ ಹತ್ತು ಪಟ್ಟು ಹೆಚ್ಚಿನ ಫಲಿತಾಂಶವನ್ನು ಪಡೆಯುವುದು ಹೇಗೆ? ನಾವೂ ಸರಿಯಾದ ಸಲಿಕೆಯನ್ನು ಬಳಸಬೇಕು. ಇಲ್ಲಿ ಸಲಿಕೆ ಎಂದರೆ ಸರಿಯಾದ ಟೂಲ್ಸ್ ಎನ್ನಬಹುದು. ಸೃಜನಶೀಲತೆ ಅಥವಾ ಕ್ರಿಯೇಟಿವಿಟಿ ಎನ್ನುವುದು ಅಂಥ ಟೂಲ್. ಹೊಸ ಜಗತ್ತಿನ ಕರೆನ್ಸಿ ಯಾವುದು ಎಂದರೆ ಐಡಿಯಾಗಳು ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ರಿಚರ್ಡ್ ಫ್ಲೋರಿಡಾ. ನಿಸ್ಸಂದೇಹವಾಗಿ ಬಿಸಿನೆಸ್ ಲೈಫ್‌ನಲ್ಲಿಯೂ ಭಾರಿ ಯಶಸ್ಸು ನಿಮ್ಮದಾಗಲು ಕ್ರಿಯೇಟಿವಿಟಿ ಅತ್ಯವಶ್ಯಕ.
ಕ್ರಿಯೇಟಿವಿಟಿಗೆ ಹಿಂದೆಂದೂ ಕಂಡರಿಯದಷ್ಟು ಬೇಡಿಕೆ ಇದೆ. ಆದರೆ ಅದರ ಪೂರೈಕೆ ಎಷ್ಟು? ಪೂರೈಕೆಯ ಬದಿಯಲ್ಲಿ ಭಿನ್ನ ಕಥೆ ಇದೆ. ಅಡೋಬ್ ಕಂಪನಿಯು 2012ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಆರ್ಥಿಕ ಬೆಳವಣಿಗೆಗೆ ಸೃಜನಶೀಲತೆಯ ಅಗತ್ಯ ಇದೆ ಎಂದು 80% ಹೇಳಿದ್ದರು. ಆದರೆ 75% ಮಂದಿ ಕೆಲಸದದಲ್ಲಿ ಕ್ರಿಯೇಟಿವಿಟಿಗಿಂತಲೂ ಉತ್ಪಾದಕತೆ ಅಥವಾ ಪ್ರಾಡಕ್ಟಿವಿಟಿಗೆ ಒತ್ತಡ ಹಾಕಲಾಗುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದರು. ಸೃಜನಶೀಲತೆಯಲ್ಲಿ ನೀವು ನಿಷ್ಠಾತರಾದಂತೆಲ್ಲ ಕ್ರಿಯೇಟಿವ್ ಆಗಿ ಆಲೋಚಿಸಬಲ್ಲ 1% ಮಂದಿಯಲ್ಲಿ ನೀವೂ ಒಬ್ಬರಾಗುತ್ತೀರಿ. ಅದು ಸ್ಪರ್ಧಾತ್ಮಕವಾಗಿ ನಿಮಗೆ ಭಾರಿ ಅಡ್ವಾಂಟೇಜ್ ಅನ್ನು ಕೊಡುತ್ತದೆ. ನಿಮ್ಮಲ್ಲಿ ಸೃಜನಶೀಲತೆ ಪ್ರಬಲವಾಗಿಲ್ಲ, ಅದು ನಿಮ್ಮ ಕೋರ್ ಸ್ಟ್ರೆಂತ್ ಆಗಿಲ್ಲ ಎಂದು ಅನ್ನಿಸಿದ್ದರೆ, ಎಲ್ಲದನ್ನೂ ಬಿಟ್ಟು ಬಿಡಿ. ದೊಡ್ಡ ಸಾಹಸಕ್ಕೆ ಮುಂದಾಗಿ. ಕ್ರಿಯೇಟಿವಿಟಿಗಿಂತ ದೊಡ್ಡದು ಇನ್ನಾವುದೂ ಇಲ್ಲ.