ನಮ್ಮಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಬೆಲೆಯನ್ನು ನಿಗದಿಪಡಿಸುತ್ತೇವೆ. ಹೀಗಾಗಿ ನೀವು ಯಾವುದಾದರೂ ಉತ್ಪನ್ನ ಅಥವಾ ಸೇವೆಯನ್ನು ನೀಡುತ್ತಿದ್ದರೆ, ಅದಕ್ಕೆ ಬೆಲೆಯನ್ನು ನಿರ್ಣಯಿಸಬೇಕು. ಹಾಗೂ ಅದು ಸರಿಯಾಗಿರಬೇಕು. (Business guide) ಯಾವುದೇ ಉತ್ಪನ್ನ ಮತ್ತು ಸೇವೆಗೆ ಕೆಟ್ಟ ಬೆಲೆಯನ್ನು ವಿಧಿಸಿದರೆ ಬಿಸಿನೆಸ್ ವಿಫಲವಾಗುತ್ತದೆ.
ನೀವು ಯಾವುದೇ ಕೆಟಗರಿಯ ಉತ್ಪನ್ನ ಅಥವಾ ಸೇವೆ ನೀಡುತ್ತಿರಬಹುದು. ನೀವು ಯಾವ ದರವನ್ನು ನಿರ್ಣಯಿಸುತ್ತೀರಿ ಎಂಬುದು ಮುಖ್ಯ. ನೀವು ನಿಮ್ಮ ಜೀವನದಲ್ಲಿ ಮೊದಲ ಬಾರಿಗೆ ಬಿಸಿನೆಸ್ ಜಗತ್ತಿಗೆ ಪ್ರವೇಶಿಸುತ್ತಿರಬಹುದು, ಫ್ರೀ ಲ್ಯಾನ್ಸ್ ಸೇವೆಗೆ ಬಂದಿರಬಹುದು, ನಿಮ್ಮ ಪ್ರಾಡಕ್ಟ್ ಅಥವಾ ಸೇವೆಗೆ ಎಷ್ಟು ಬೆಲೆಯನ್ನು ನಿಗದಿಪಡಿಸಬೇಕು ಎಂಬ ಗೊಂದಲ ಕಾಡಬಹುದು. ಇದು ಜಾಸ್ತಿ ಆಯಿತೋ, ಕಡಿಮೆ ಆಯಿತೊ ಎಂಬ ಪ್ರಶ್ನೆ ಕಾಡಬಹುದು. ನೀವು ನಿಮ್ಮ ಈಗಿನ ಉದ್ಯೋಗ ಬಿಟ್ಟು ಮತ್ತೊಂದು ಕಡೆ ಸೇರುತ್ತಿರಬಹುದು. ಆಗ ಎಷ್ಟು ವೇತನ ಕೇಳಬಹುದು ಎಂಬ ಗೊಂದಲ ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ.
ನೀವು ಒಬ್ಬ ಲೇಖಕರಾಗಿದ್ದು, 50,000 ಪದಗಳು ಇರುವ ಪುಸ್ತಕ ಬರೆಯುತ್ತೀರಿ. ಹಾಗೂ ಪ್ರತಿ ಪುಸ್ತಕಕ್ಕೆ 100 ರೂ. ಶುಲ್ಕ ವಿಧಿಸುತ್ತೀರಿ ಎಂದು ಭಾವಿಸಿ. ಇಪ್ಪತ್ತು ಮಂದಿ ನಿಮ್ಮ ಪುಸ್ತಕ ಪ್ರಕಾಶನಕ್ಕೆ ಮುಂದಾಗುತ್ತಾರೆ. ಆಗ ನೀವು ಪ್ರತಿ ಪುಸ್ತಕಕ್ಕೆ 1000 ರೂ. ಶುಲ್ಕ ವಿಧಿಸಲು ನಿರ್ಧರಿಸಬಹುದು. ಇಪ್ಪತ್ತು ಮಂದಿಯೂ ಅಷ್ಟು ಕೊಡಲು ರೆಡಿ ಇದ್ದರೆ ಆಗ ನೀವು 10,000 ರೂ. ಶುಲ್ಕ ಹಾಕಬಹುದು ಎಂದು ಅರ್ಥ ಮಾಡಿಕೊಳ್ಳುತ್ತೀರಿ. ನಿಮ್ಮ ಉತ್ಪನ್ನವನ್ನು ಎಷ್ಟು ಜನ ಖರೀದಿಸಲು ಮುಂದಾಗುತ್ತಾರೆ ಎಂಬುದರ ಮೇಲೆ ಪುಸ್ತಕದ ದರವನ್ನು ನಿರ್ಣಯಿಸುವಿರಿ.
ಸೇವೆಯ ವಿಚಾರದಲ್ಲಿ ಹೇಗೆ ನಿರ್ಣಯಿಸುತ್ತೀರಿ? ನಿಮ್ಮ ಸಮಯದ ಆಧಾರದಲ್ಲಿ ಸೇವೆಯ ಬೆಲೆಯನ್ನು ನಿರ್ಧರಿಸಬೇಕು. ನೀವು ದಿನಕ್ಕೆ 8 ಗಂಟೆಯಂತೆ ದುಡಿಯುತ್ತೀರಿ ಹಾಗೂ ಮಾಸಿಕ 1 ಲಕ್ಷ ರೂ. ಸಂಪಾದಿಸುತ್ತಿದ್ದೀರಿ ಎಂದು ಇಟ್ಟುಕೊಳ್ಳಿ. ಮತ್ತೊಬ್ಬರು ಅಷ್ಟು ಸಂಬಳ ಕೊಡಲು ಒಪ್ಪದಿದ್ದರೆ ಅವರ ಪ್ರಸ್ತಾಪವನ್ನು ತಿರಸ್ಕರಿಸಿ. ಒಂದು ವೇಳೆ ನಿಮ್ಮ ವೇತನ 50,000 ರೂ. ಆಗಿದ್ದರೆ ಒಂದು ಲಕ್ಷದ ಸಂಬಂಧ ಆಫರ್ ಅನ್ನು ಒಪ್ಪಿಕೊಳ್ಳಬಹುದು. ಹೀಗಾಗಿ ಪ್ರಾಡಕ್ಟ್ ಅಥವಾ ಸೇವೆಗೆ ಒಂದು ದರವನ್ನು ನಿರ್ಣಯಿಸಿ. ಅದನ್ನು ಸ್ವಲ್ಪ ಸ್ವಲ್ಪವಾಗಿ ಏರಿಸುತ್ತಾ ಬನ್ನಿ.
ಇದನ್ನೂ ಓದಿ: Money plus : ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ನಲ್ಲಿ ಯಾಕೆ ಹೂಡಬೇಕು?
ಪ್ರತಿಯೊಬ್ಬರೂ ಅವರ ಪ್ರತಿ ಗಂಟೆಯ ದರವನ್ನು ಲೆಕ್ಕ ಹಾಕಬೇಕು. ಉದಾಹರಣೆಗೆ ಮಾಸಿಕ 30,000 ರೂ. ಸಂಬಳಕ್ಕೆ ದುಡಿಯುತ್ತಿದ್ದರೆ, ಪ್ರತಿ ದಿನದ ಕೆಲಸದ ಗಂಟೆ 10 ಆಗಿದ್ದರೆ ಪ್ರತಿ ಗಂಟೆಗೆ ನಿಮ್ಮ ಆದಾಯ 100 ರೂ. ಆಗಿರುತ್ತದೆ. ಆದ್ದರಿಂದ ಬೇರೆ ಯಾರಾದರೂ ಉದ್ಯಫಗ ಕೊಡುವುದಿದ್ದರೆ ಪ್ರತಿ ಗಂಟೆಗೆ 110 ರೂ. ಇರುವಂತೆ ನೋಡಿಕೊಳ್ಳಿ.