ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPF Withdraw Rule) ಶಿಕ್ಷಣ, ಮದುವೆ ಮತ್ತು ವಸತಿಗೆ ಸಂಬಂಧಿಸಿ ಮುಂಗಡ ಕ್ಲೈಮ್‌ಗಳಿಗಾಗಿ (advance claims) ಸ್ವಯಂ-ಮೋಡ್ ಸೆಟಲ್‌ಮೆಂಟ್ (auto-mode settlement ) ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಈ ವ್ಯವಸ್ಥೆಯಲ್ಲಿ ಯಾರದೇ ಹಸ್ತಕ್ಷೇಪವಿಲ್ಲದೆ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೇಳಿಕೆಯ ಪ್ರಕಾರ, ಅನಿರುದ್ಧ್ ಪ್ರಸಾದ್ ಎಂಬುವರು 2024ರ ಮೇ 9ರಂದು ಪ್ಯಾರಾ 68J ಅಡಿಯಲ್ಲಿ ಅನಾರೋಗ್ಯಕ್ಕಾಗಿ ಮುಂಗಡವಾಗಿ ಅರ್ಜಿ ಸಲ್ಲಿಸಿದ್ದರು. ಅವರ ಮುಂಗಡ ಕ್ಲೈಮ್ ಅನ್ನು 2024ರ ಮೇ 11 ರಂದು 92,143 ರೂ. ಅನ್ನು ಮೂರು ದಿನಗಳ ಒಳಗೆ ಇತ್ಯರ್ಥಪಡಿಸಲಾಗಿದೆ. ಇಂತಹ ಹಲವು ಮಂದಿ ಇಪಿಎಫ್‌ಒನಲ್ಲಿ ಮುಂಗಡ ಕ್ಲೈಮ್ ಪಾವತಿಯ ಪ್ರಯೋಜನವನ್ನು ಪಡೆದಿದ್ದಾರೆ.
ಇಪಿಎಫ್‌ಒ ಆಟೋ ಮೋಡ್ ಸೆಟಲ್ಮೆಂಟ್
ಅನಾರೋಗ್ಯದ ಕಾರಣಕ್ಕಾಗಿ ಮುಂಗಡ ಕ್ಲೈಮ್ ಮಾಡಲು 2020ರ ಏಪ್ರಿಲ್ ನಲ್ಲಿ ಕ್ಲೈಮ್ ಸೆಟ್ಲ್ ಮೆಂಟ್ ಸ್ವಯಂ ಮೋಡ್ ಅನ್ನು ಪರಿಚಯಿಸಲಾಯಿತು. ಈಗ ಈ ಮಿತಿಯನ್ನು 1 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 2.25 ಕೋಟಿ ಸದಸ್ಯರು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.
2023- 24ರ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ. ಅದರಲ್ಲಿ ಶೇ. 60ಕ್ಕಿಂತ ಹೆಚ್ಚು ಮಂದಿ ಒಟ್ಟು 2.84 ಕೋಟಿ ಕ್ಲೈಮ್‌ಗಳು ಮುಂಗಡ ಕ್ಲೈಮ್‌ಗಳಾಗಿವೆ. ವರ್ಷದಲ್ಲಿ ಇತ್ಯರ್ಥವಾದ ಒಟ್ಟು ಮುಂಗಡ ಕ್ಲೇಮ್‌ಗಳಲ್ಲಿ ಸುಮಾರು 89.52 ಲಕ್ಷ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ.
ಪಿಎಫ್ ಹಿಂಪಡೆಯುವುದು ಹೇಗೆ?
ಇಪಿಎಫ್ ಸದಸ್ಯರು ನಿಯಮ 68J ಅಡಿಯಲ್ಲಿ ವೈದ್ಯಕೀಯ ಕಾಯಿಲೆಗಳಿಗೆ ಇಪಿಎಫ್ ಹಿಂತೆಗೆದುಕೊಳ್ಳುವಿಕೆಗೆ ಅನ್ವಯಿಸಲು ನಿಯಮಗಳನ್ನು ತಿಳಿದಿರಬೇಕು, ನಿಯಮ 68K ಅಡಿಯಲ್ಲಿ ಮದುವೆ ಅಥವಾ ಉನ್ನತ ಶಿಕ್ಷಣ ಮತ್ತು ನಿಯಮ 68B ಅಡಿಯಲ್ಲಿ ವಸತಿ ಸೌಲಭ್ಯಕ್ಕಾಗಿ ಮುಂಗಡವನ್ನು ಪಡೆಯಬಹುದು.
ನಿಯಮ 68 ಜೆ
ಇಪಿಎಫ್ ಸದಸ್ಯರು ಉದ್ಯೋಗದಾತ ಅಥವಾ ವೈದ್ಯರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ವೈದ್ಯಕೀಯ ಕ್ಲೈಮ್‌ಗಾಗಿ, ಇಪಿಎಫ್ ಯೋಜನೆಗೆ ಎಷ್ಟು ವರ್ಷಗಳವರೆಗೆ ಅನ್ವಯಿಸಲಾಗಿದೆ ಎಂಬ ನಿಯಮವಿಲ್ಲ.
ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ
ನಿಯಮ 68K
ಮದುವೆ ಅಥವಾ ಉನ್ನತ ಶಿಕ್ಷಣದ ಉದ್ದೇಶಗಳಿಗಾಗಿ ಪಿಎಫ್ ಹಣವನ್ನು ಹಿಂಪಡೆಯಲು ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ 7 ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್ ಸದಸ್ಯರು ಅದನ್ನು ಆನ್‌ಲೈನ್ ಸ್ವರೂಪದಲ್ಲಿ ಘೋಷಿಸಬೇಕಾಗುತ್ತದೆ. ಆದ್ದರಿಂದ ಅವರು ತಮ್ಮ ಷೇರಿನ ಗರಿಷ್ಠ ಶೇ. 50ರಷ್ಟನ್ನು ಬಡ್ಡಿಯೊಂದಿಗೆ ಹಿಂತೆಗೆದುಕೊಳ್ಳಬಹುದು.
ನಿಯಮ 68B
ಫ್ಲಾಟ್/ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು, ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್‌ಒ ಮನೆಯ ದುರಸ್ತಿ ಮತ್ತು ನವೀಕರಣಕ್ಕಾಗಿ ಮುಂಗಡ ಹಿಂತೆಗೆದುಕೊಳ್ಳುವಿಕೆಯನ್ನು ಸಹ ಅನುಮತಿಸುತ್ತದೆ. ಇದನ್ನು ಎರಡು ಬಾರಿ ಮಾಡಬಹುದು. ಹಿಂಪಡೆಯಬಹುದಾದ ಮೊತ್ತವು ಉದ್ದೇಶವನ್ನು ಅವಲಂಬಿಸಿರುತ್ತದೆ. ಶೇ.90ರವರೆಗೂ ಹಣ ಹಿಂಪಡೆಯಲು ಸಾಧ್ಯ.