ನವ ದೆಹಲಿ: ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಅಧಿಕ ಪಿಂಚಣಿಗಾಗಿ ಚಂದಾದಾರರು ಮತ್ತು ಅವರ ಉದ್ಯೋಗದಾತರು ಜಂಟಿಯಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವ ಹೊಸ ವಿಧಾನವನ್ನು ಇಪಿಎಫ್ಒ ಪರಿಚಯಿಸಿದ್ದು, ಇದಕ್ಕಾಗಿ ಆನ್ಲೈನ್ ವ್ಯವಸ್ಥೆಯನ್ನು ಸದ್ಯದಲ್ಲೇ ನೀಡಲಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯು, ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು ಹೊಸ ಮಾರ್ಗಸೂಚಿಗಳನ್ನು ಹೊರತಂದಿದೆ. ಇಪಿಎಸ್ ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವುದಕ್ಕೆ ಮಾರ್ಚ್ 3ನ್ನು ಕೊನೆಯ ದಿನವಾಗಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.
ಉದ್ಯೋಗಿಗಳ ಪಿಂಚಣಿ ಯೋಜನೆ ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಆರಂಭಿಸಿತ್ತು. ಸುಪ್ರೀಂ ಕೋರ್ಟ್ನ ನವೆಂಬರ್ 4, 2022ರ ಆದೇಶಕ್ಕೆ ಅನುಸಾರವಾಗಿ, ತನ್ನ ಎಲ್ಲಾ ಪ್ರಾದೇಶಿಕ ಮತ್ತು ವಲಯ ಕಚೇರಿಗಳಿಗೆ ಹೆಚ್ಚಿನ ಪಿಂಚಣಿಗಾಗಿ ನೌಕರರು ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಇಪಿಎಫ್ಒ ಸೂಚನೆಗಳನ್ನು ನೀಡಿದೆ. ಸದಸ್ಯರು ಮತ್ತು ಅವರ ಉದ್ಯೋಗದಾತರು ಜಂಟಿ ಇಪಿಎಫ್ಒಗೆ ಅರ್ಜಿ ಸಲ್ಲಿಸಬಹುದು.
ಉದ್ಯೋಗಿ ಮತ್ತು ಉದ್ಯೋಗದಾತರು ಮುಂಬರುವ ದಿನಗಳಲ್ಲಿ ಒಟ್ಟಿಗೆ ಸೈನ್ ಅಪ್ ಮಾಡಿ, ಇಪಿಎಫ್ಒಗೆ ಮಾಸಿಕ ವೇತನದ ಶೇಕಡಾ 8.33ರಷ್ಟು ಕಡಿತಗೊಳಿಸುವಂತೆ ವಿನಂತಿಸಬಹುದು. ಇದರಿಂದ ಪಿಂಚಣಿಗೆ ಹೆಚ್ಚಿನ ಹಣ ಸಂಗ್ರಹವಾದಂತಾಗುತ್ತದೆ. ಇದರಿಂದ ಚಂದಾದಾರರಿಗೆ ತಿಂಗಳಿಗೆ ರೂ. 15,000ಕ್ಕೆ ಸೀಮಿತವಾದ ಪಿಂಚಣಿ ವೇತನವನ್ನು ಮೀರಿ ಹೋಗಲು EPFO ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ: EPFO E-Passbook | ಸದಸ್ಯರಿಗೆ ಸಿಗದ ಇ-ಪಾಸ್ಬುಕ್, ಸಂಜೆ 5ರಿಂದ ತಾಂತ್ರಿಕ ಅಡಚಣೆ ಇತ್ಯರ್ಥ: ಇಪಿಎಫ್ಒ