Site icon Vistara News

Home loan interest rate : ಈ ಐದು ಬ್ಯಾಂಕ್‌ಗಳಲ್ಲಿ ಗೃಹಸಾಲ ಬಡ್ಡಿ ದರ ಕಡಿಮೆ

home loan

ಗೃಹ ಸಾಲದ ಬಡ್ಡಿ ದರಗಳಲ್ಲಿ ಬ್ಯಾಂಕ್‌ಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಆದರೆ ಅಲ್ಪ ಸ್ವಲ್ಪ ವ್ಯತ್ಯಾಸ ಇದ್ದರೂ ದೀರ್ಘಾವಧಿಗೆ ಪರಿಣಾಮ ಬೀರುತ್ತದೆ. ಆದ್ದರಿಂದ ಈಗ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡುವ ಐದು ಬ್ಯಾಂಕ್‌ಗಳ ಬಗ್ಗೆ ತಿಳಿದುಕೊಳ್ಳೋಣ. ( Home loan interest rate) ಆರ್‌ಬಿಐ ತನ್ನ ರೆಪೊ ದರವನ್ನು ಏರಿಕೆ ಅಥವಾ ಇಳಿಕೆ ಮಾಡಿದಾಗ ಬ್ಯಾಂಕ್‌ಗಳ ಗೃಹ ಸಾಲದಲ್ಲಿ ಏರಿಳಿತ ಉಂಟಾಗುತ್ತದೆ. ಇದನ್ನು ಗ್ರಾಹಕರು ಗಮನಿಸಬೇಕಾಗುತ್ತದೆ.

ಬಹುತೇಕ ಬ್ಯಾಂಕ್‌ಗಳು ಆರ್‌ಬಿಐ ರೆಪೊ ದರ ಆಧರಿಸಿದ ಫ್ಲೋಟಿಂಗ್‌ ಬಡ್ಡಿ ದರ ಪದ್ಧತಿಯನ್ನು ಬಳಸುತ್ತವೆ. ಹೀಗಾಗಿ ಆರ್‌ಬಿಐ ರೆಪೊ ದರ ಏರಿಸಿದಾಗ ಅಥವಾ ಕಡೊತಗೊಳಿಸಿದಾಗ ಬ್ಯಾಂಕ್‌ ಸಾಲದ ಬಡ್ಡಿ ದರ ಕೂಡ ವ್ಯತ್ಯಾಸವಾಗುತ್ತದೆ. ಆರ್‌ಬಿಐ ಯಾವಾಗ ತನ್ನ ರೆಪೊ ದರವನ್ನು ಪರಿಷ್ಕರಿಸುತ್ತದೆ ಎನ್ನುತ್ತೀರಾ, ಸಾಮಾನ್ಯವಾಗೊ ಪ್ರತಿ ಮೂರು ತಿಂಗಳಿಗೊಮ್ಮೆ ಆರ್‌ಬಿಐ ತನ್ನ ಹಣಕಾಸು ಪರಾಮರ್ಶೆಯನ್ನು ಪ್ರಕಟಿಸುತ್ತದೆ. ಅದೇ ಸಂದರ್ಭ ರೆಪೊ ದರವನ್ನು ಕೂಡ ಆರ್‌ಬಿಐ ಪರಿಷ್ಕರಿಸುತ್ತದೆ. ಕೆಲವೊಮ್ಮೆ ಏರಿಕೆ, ಇಳಿಕೆ ಇಲ್ಲವೇ ಯಥಾಸ್ಥಿತಿಯನ್ನು ಪ್ರಕಟಿಸುತ್ತದೆ. ಹಣದುಬ್ಬರವನ್ನು ನಿಯಂರಿಸಲು ಸಾಧನವಾಗಿ ರೆಪೊ ದರವನ್ನು ಆರ್‌ಬಿಐ ಬಳಸುತ್ತದೆ.

ಗೃಹ ಸಾಲದ ಬಡ್ಡಿಯನ್ನು ನಿರ್ಧರಿಸುವಾಗ ಸಿಬಿಲ್‌ ಸ್ಕೋರ್‌, ಸಾಲದ ಮೊತ್ತ, ಅವಧಿ, ಆದಾಯ ಇತ್ಯಾದಿಗಳು ಪರಿಗಣನೆಯಾಗುತ್ತದೆ. ಗೃಹ ಸಾಲದ ಅವಧಿ ಸಾಮಾನ್ಯವಾಗಿ 3ರಿಂದ 30 ವರ್ಷ ಇರುತ್ತದೆ. ಕೆಳಗೆ 5 ಬ್ಯಾಂಕ್‌ಗಳು ಗೃಹ ಸಾಲಕ್ಕೆ ವಿಧಿಸುವ ಬಡ್ಡಿ ದರ ಇವರ ಇದೆ.

ಬ್ಯಾಂಕಿನ ಹೆಸರುಆರ್‌ಎಲ್‌ಎಲ್‌ಆರ್(%)ಕನಿಷ್ಠ ಬಡ್ಡಿ ದರ (%)ಗರಿಷ್ಠ ಬಡ್ಡಿ ದರ(%)
ಎಚ್‌ಡಿಎಫ್‌ಸಿ ಬ್ಯಾಂಕ್8.459.85
ಇಂಡಸ್‌ಇಂಡ್‌ ಬ್ಯಾಂಕ್8.59.75
ಇಂಡಿಯನ್‌ ಬ್ಯಾಂಕ್9.208.59.9
ಪಿಎನ್‌ಬಿ9.258.69.45
ಬ್ಯಾಂಕ್‌ ಆಫ್‌ ಮಹಾರಾಷ್ಟ್ರ9.308.610.3

ನಿಶ್ಚಿತ ಬಡ್ಡಿ ದರದ ಪದ್ಧತಿಯಲ್ಲಿ ಮಾರುಕಟ್ಟೆಯ ಪರಿಸ್ಥಿತಿ ಹೇಗಿದ್ದರೂ ಒಂದೇ ರೀತಿಯ ಬಡ್ಡಿ ಇರುತ್ತದೆ. ಫ್ಲೋಟಿಂಗ್‌ ರೇಟ್‌ ಅಡಿಯಲ್ಲಿ ಮಾರುಕಟ್ಟೆಯ ಪರಿಸ್ಥಿತಿಗೆ ಹೊಂದಿಕೊಂಡು ಬದಲಾಗುತ್ತಿರುತ್ತದೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಕಾರ ಎರಡು ವಿಧದ ವಿಮೆ ಗೃಹ ಸಾಲ ಮತ್ತು ಪ್ರಾಪರ್ಟಿ ಇನ್ಷೂರೆನ್ಸ್‌ ಆಗಿ ಲಭ್ಯವಿದೆ. ಪ್ರಾಪರ್ಟಿ ಇನ್ಷೂರೆನ್ಸ್‌ ಪಡೆಯುವುದರಿಂದ ಪ್ರಾಪರ್ಟಿಗೆ ಅಕಸ್ಮಾತ್‌ ನೈಸರ್ಗಿಕ ವಿಕೋಪದಿಂದ ಹಾನಿ ಆದರೆ ವಿಮೆ ಪರಿಹಾರ ಸಿಗುತ್ತದೆ. ಜೀವ ವಿಮೆ ತೆಗೆದುಕೊಳ್ಳುವುದು ಸಾಲಗಾರರ ವಿವೇಚನೆಗೆ ಬಿಟ್ಟದ್ದು. ಆದರೆ ವಿಮೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: Stock trading : ಸ್ಟಾಕ್‌ ಟ್ರೇಡಿಂಗ್‌ ಎಷ್ಟು ಸೇಫ್?‌ ಎಷ್ಟು ರಿಸ್ಕ್?‌ ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಇಎಂಐ ಬಗ್ಗೆ: ಇಎಂಐ ಎಂದರೆ equated monthly installment ಮಾಸಿಕ ಸಮಾನ ಕಂತು. ಪ್ರತಿ ತಿಂಗಳು ಬ್ಯಾಂಕಿಗೆ ಸಾಲದ ಬಾಬ್ತು ಕಟ್ಟಬೇಕಿರುವ ಹಣ. ಅಸಲು ಮೊತ್ತ ಹಾಗೂ ಬಡ್ಡಿ ದರ ಎರಡೂ ಇಎಂಐನ ಭಾಗವಾಗಿದೆ. ಆರಂಭದ ಅವಧಿಗಳಲ್ಲಿ principal component ಗಿಂತ ಬಡ್ಡಿ ಮೊತ್ತ ಹೆಚ್ಚು ಇರುತ್ತದೆ. ದ್ವಿತೀಯಾರ್ಧದಲ್ಲಿ principal component ಹೆಚ್ಚು ಇರುತ್ತದೆ.

ನೀವು ಗೃಹ ಸಾಲದ ಮೂಲಕ ಮನೆ ಕಟ್ಟಿದ್ದರೆ 2 ಲಕ್ಷ ರೂ. ತನಕ ಬಡ್ಡಿಯ ಮೇಲೆ ತೆರಿಗೆ ಕಡಿತದ ಅನುಕೂಲ ಪಡೆಯಬಹುದು ಎಂದು ಎಸ್‌ಬಿಐ ವೆಬ್‌ಸೈಟ್‌ ತಿಳಿಸಿದೆ.

Exit mobile version