Site icon Vistara News

Income tax return filing : ಐಟಿಆರ್‌ ಸಲ್ಲಿಕೆಗೆ ಮುನ್ನ ಎಐಎಸ್‌ನಲ್ಲಿ ತಿದ್ದುಪಡಿ ಮಾಡೋದು ಹೇಗೆ?

ITR

ಐಟಿಆರ್‌ ಸಲ್ಲಿಸುವ ಸಂದರ್ಭ ಅವಶ್ಯಕವಾಗುವ ದಾಖಲೆಗಳಲ್ಲಿ ವಾರ್ಷಿಕ ಹಣಕಾಸು ವಿವರಗಳ ಹೇಳಿಕೆ ಅಥವಾ ಆನ್ಯುಯಲ್‌ ಇನ್‌ಫಾರ್ಮೇಶನ್‌ ಸ್ಟೇಟ್‌ಮೆಂಟ್‌ ( Annual Information Statement) ಒಂದಾಗಿದೆ. ಇದರಲ್ಲಿ ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌ಗಳು, ಸ್ಟಾಕ್‌ ಬ್ರೋಕರ್‌ಗಳು ಇತ್ಯಾದಿ ಮೂಲಗಳಿಂದ ಲಭಿಸಿದ ವಿವರಗಳನ್ನು ಪ್ರಿ-ಫಿಲ್ಡ್‌ ಮಾಡಿ ಶೇರ್‌ ಮಾಡಲಾಗುತ್ತದೆ. ಜತೆಗೆ ನಿಮ್ಮ ವೇತನ ವಿವರಗಳೂ ಇರುತ್ತದೆ. ಎಐಎಸ್‌ನಲ್ಲಿ ಮಾಹಿತಿಗಳು ಸರಿಯಾಗಿ ಇರುವುದು ಅವಶ್ಯಕ.

ತೆರಿಗೆ ಕಡಿತ ಆಗಿದ್ದರೂ, ಆಗದಿದ್ದರೂ ಎಐಎಸ್‌ ನಿರ್ಣಾಯಕ ದಾಖಲಾತಿ. ತೆರಿಗೆ ಇಲಾಖೆಯು 2021ರಲ್ಲಿ ಎಐಎಸ್‌ ಅನ್ನು ಪರಿಚಯಿಸಿದೆ. ತೆರಿಗೆ ಇಲಾಖೆ ನಾನಾ ಮೂಲಗಳಿಂದ ಸಂಗ್ರಹಿಸಿದ ವಿವರಗಳನ್ನು ಇದು ಒಳಗೊಂಡಿರುತ್ತದೆ. ಆದ್ದರಿಂದ ನೀವು ಇದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಬ್ಯಾಂಕ್‌ಗಳು, ಮ್ಯೂಚುವಲ್‌ ಫಂಡ್‌ ಕಂಪನಿಗಳು, ನಿಮ್ಮ ಉದ್ಯೋಗದಾತರು, ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ವಿಸ್ತಾರ Money Guide: ಹಣ ಗಳಿಕೆಯ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುವು?

ಒಂದು ವೇಳೆ ಎಐಎಸ್‌ನಲ್ಲಿ ಯಾವುದಾದರೂ ಅಸಮರ್ಪಕ ಮಾಹಿ ಇದ್ದರೆ ಅಥವಾ ಸರಿಯಾದ ಮಾಹಿತಿ ಬಿಟ್ಟು ಹೋಗಿದ್ದರೆ ಏನು ಮಾಡಬಹುದು? ಇದಕ್ಕೂ ಪರಿಹಾರ ಇದೆ. ಆನ್‌ಲೈನ್‌ ಮೂಲಕ ಸರಿಯಾದ ಮಾಹಿತಿ ನೀಡಬಹುದು. ಫೀಡ್‌ ಬ್ಯಾಕ್‌ ಕೊಡಬಹುದು ಎಂದು ನೇರ ತೆರಿಗೆಗಳ ಕೇಂದರೀಯ ಮಂಡಳಿ (central board of direct taxes -CBDT) ತಿಳಿಸಿದೆ. ಎಐಎಸ್‌ನಲ್ಲಿ ಕರೆಕ್ಷನ್‌ ಮಾಡುವುದು ಹೇಗೆ? ಈಗ ನೋಡೋಣ.

ಎಐಎಸ್‌ನಲ್ಲಿ ತಪ್ಪಿದ್ದರೆ ಸರಿಪಡಿಸುವುದು ಹೇಗೆ?

  1. ನಿಮ್ಮ ಇ-ಫೈಲಿಂಗ್‌ ವೆಬ್‌ ಪೋರ್ಟಲ್‌ಗೆ ಲಾಗಿನ್‌ ಆಗಿ. www.incometax.gov.in
  2. ಲಾಗಿನ್‌ ಆದ ಬಳಿಕ ಸರ್ವೀಸ್‌ ಟ್ಯಾಬ್‌ಗೆ ಹೋಗಿ annual information statement ಅನ್ನು ಸಿಲೆಕ್ಟ್‌ ಮಾಡಿ
  3. ವೆಬ್‌ ಪೇಜಿನಲ್ಲಿ AIS ಸಿಲೆಕ್ಟ್‌ ಮಾಡಿ, ಆಗ ಸ್ಕ್ರೀನ್‌ನಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ. Taxpayer Information Summary (TIS) ಮತ್ತು Annual Information Statement (AIS) ಅದರಲ್ಲಿ AIS ಅನ್ನು ಕ್ಲಿಕ್ಕಿಸಿ.
  4. ನಿಮ್ಮ ಸ್ಕ್ರೀನ್‌ನಲ್ಲಿ part A ಮತ್ತು part B ಕಾಣಲು ಸಿಗುತ್ತದೆ. ತಪ್ಪಾಗಿರುವ ಮಾಹಿತಿಯನ್ನು ಸಿಲೆಕ್ಟ್‌ ಮಾಡಿ. optional ಸಿಲೆಕ್ಟ್‌ ಮಾಡಿ. ನಿಮ್ಮ ಸರಿಯಾದ ಮಾಹಿತಿ ಭರ್ತಿ ಮಾಡಿ.
  5. ಡ್ರಾಪ್-ಡೌನ್‌ ಮೆನುವಿನಲ್ಲಿ ನಿಮಗೆ ಸೂಕ್ತವೆನ್ನಿಸುವ ಆಯ್ಕೆಯನ್ನು ತೆಗೆದುಕೊಳ್ಳಿ. ಏಳು ಆಯ್ಕೆಗಳು ಹೀಗಿರುತ್ತವೆ. Information is correct. Transfer not in the nature of sale, Income is not taxable, Information is not fully correct, Information relates to other PAN/Year, Information is duplicate in other information , Information denied
  6. submit ಮೇಲೆ ಕ್ಲಿಕ್ಕಿಸಿ

ನೀವು ಫೀಡ್‌ ಬ್ಯಾಕ್‌ ಕೊಟ್ಟ ಮೇಲೆ ಆದಾಯ ತೆರಿಗೆ ಇಲಾಖೆಯು ತಾನಾಗಿಯೇ ಎಐಎಸ್‌ ಅನ್ನು ಸರಿಪಡಿಸುತ್ತದೆ.

Exit mobile version