Site icon Vistara News

Money plus : ಮ್ಯೂಚುವಲ್‌ ಫಂಡ್‌ನಲ್ಲಿ ಹೀಗೆ ಹೂಡಿಕೆ ಮಾಡಿ, ಲಾಭ ಗಳಿಸಿ

mutualfund

ಬೆಂಗಳೂರು: ಅನೇಕ ಮಂದಿಗೆ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು (Money plus) ಎಂಬ ಬಯಕೆ ಇರುತ್ತದೆ. ಆದರೆ ಅದರಲ್ಲಿ ಹೇಗೆ ಹೂಡಿಕೆ ಮಾಡಬಹುದು ಎಂಬುದು ಗೊತ್ತಿರುವುದಿಲ್ಲ. ಮ್ಯೂಚುವಲ್‌ ಫಂಡ್‌ಗಳಲ್ಲಿ ನೂರಾರು ವಿಧಗಳಿವೆ. ಅದರಲ್ಲಿ ಯಾವುದನ್ನು ಆಯ್ಕೆ ಮಾಡುವುದು? ಅಂಥವರಿಗೆ ಸರಳವಾಗಿ ಹಾಗೂ ವಿವರವಾಗಿ ವಿಸ್ತಾರ ಮನಿ ಪ್ಲಸ್‌ ವಿಡಿಯೊದಲ್ಲಿ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್‌ ಎಡಿಟರ್‌ ಶರತ್‌ ಎಂ.ಎಸ್‌ ಅವರು ತಿಳಿಸಿಕೊಟ್ಟಿದ್ದಾರೆ.

ಇಂಡೆಕ್ಸ್‌ ಮ್ಯೂಚುವಲ್‌ ಫಂಡ್‌ ಎಂದರೇನು? ಇಂಡೆಕ್ಸ್‌ ಫಂಡ್‌ ಎಂದರೆ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿಯನ್ನು ಆಧರಿಸಿರುವಂಥ ಮ್ಯೂಚುವಲ್‌ ಫಂಡ್‌ಗಳು. ಉದಾಹರಣೆಗೆ ನಿಫ್ಟಿ 50 ಸೂಚ್ಯಂಕ ಎಂದರೆ ದೇಶದ ಟಾಪ್‌ 50‌ ಅಗ್ರಮಾನ್ಯ ಕಂಪನಿಗಳ ಷೇರುಗಳನ್ನು ಆಧರಿಸಿರುವಂಥ ಮ್ಯೂಚುವಲ್‌ ಫಂಡ್. ಈ ಕಂಪನಿಗಳ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ಗಳೇ ಇಂಡೆಕ್ಸ್‌ ಮ್ಯೂಚುವಲ್‌ ಫಂಡ್‌ಗಳಾಗಿವೆ.

ಕೋವಿಡ್‌ ಸಂದರ್ಭ ಸೂಚ್ಯಂಕ ಸೆನ್ಸೆಕ್ಸ್ 25 ಸಾವಿರ ಅಂಕಗಳ ಆಸುಪಾಸಿನಲ್ಲಿ ಇತ್ತು. ಈಗ 70 ಸಾವಿರದ ಆಸುಪಾಸಿನಲ್ಲಿದೆ. ಅಂದರೆ ಆವಾಗ ಇಂಡೆಕ್ಸ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದವರಿಗೆ ಅಷ್ಟೇ ಲಾಭ ಆಗಿರುತ್ತದೆ. ಇಂಡೆಕ್ಸ್‌ ಫಂಡ್‌ ಮತ್ತು ಇತರ ಮ್ಯೂಚುವಲ್‌ ಫಂಡ್‌ ಬಗ್ಗೆ ತಿಳಿದುಕೊಳ್ಳಲು ಶರತ್‌ ಎಂ.ಎಸ್‌ ಅವರ ದುಡ್ಡು ಬಿತ್ತಿ ದುಡ್ಡು ಬೆಳೆಯಿರಿ… ಮ್ಯೂಚುವಲ್‌ ಫಂಡ್‌ ಮ್ಯಾಜಿಕ್‌ ಕೃತಿಯನ್ನು ಓದಬಹುದು.

Exit mobile version