Site icon Vistara News

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!

ITR Filing

ಆದಾಯ ತೆರಿಗೆ ರಿಟರ್ನ್ (ITR Filing) ಸಲ್ಲಿಸುವ ಮೊದಲು ತಿಳಿದುಕೊಳ್ಳಬೇಕಾದ ಹಲವಾರು ಸಂಗತಿಗಳಿವೆ. ಆದಾಯ ತೆರಿಗೆಯು (Income tax) ಜನರು ಮತ್ತು ಸಂಸ್ಥೆಗಳು ಗಳಿಸುವ ಆದಾಯ ಮತ್ತು ಲಾಭದ ಮೇಲೆ ಪಾವತಿಸುವ ತೆರಿಗೆಯಾಗಿದೆ. ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವುದು ತೆರಿಗೆದಾರರು ಮಾಡಲೇಬೇಕಾದ ವಾರ್ಷಿಕ ಆಥಿಕ ಕಾರ್ಯವಾಗಿದೆ.

ಭಾರತದಲ್ಲಿ (India) ತೆರಿಗೆದಾರರು (taxpayer) ತಮ್ಮ ಆದಾಯ ಮತ್ತು ತೆರಿಗೆಗಳ ವಾರ್ಷಿಕ ಲೆಕ್ಕಾಚಾರವನ್ನು ಸಲ್ಲಿಸುವ ಮೂಲಕ ಸರ್ಕಾರಕ್ಕೆ ವರದಿ ಮಾಡಬೇಕಾಗುತ್ತದೆ. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಇದು ಅತ್ಯಮೂಲ್ಯವಾಗಿದೆ. 2023– 24ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಪ್ರಕ್ರಿಯೆಯು ಸ್ವಲ್ಪ ಸಂಕೀರ್ಣ ಮತ್ತು ಸವಾಲಿನದ್ದಾಗಿರಬಹುದು. ತೆರಿಗೆದಾರರು ತಮ್ಮ ಐಟಿಆರ್ ಅನ್ನು ಸಲ್ಲಿಸುವಾಗ ತಿಳಿದಿರಬೇಕಾದ ಮತ್ತು ಗಮನ ಹರಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ.

ಗಡುವು ತಿಳಿದಿರಿ

ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸುವ ಮೊದಲು ಎಲ್ಲಾ ತೆರಿಗೆದಾರರು ಗಮನಿಸಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾಮಾನ್ಯವಾಗಿ ಪ್ರತಿ ಹಣಕಾಸು ವರ್ಷದ ಜುಲೈ 31 ಕೊನೆಯ ದಿನವಾಗಿದೆ. ಈ ವರ್ಷ ಆದಾಯ ತೆರಿಗೆ ಇಲಾಖೆಯು 2023-24ಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ತೆರಿಗೆ ಪದ್ಧತಿಯನ್ನು ಅರ್ಥಮಾಡಿಕೊಳ್ಳಿ

ತೆರಿಗೆದಾರರು ಈಗ ಹಳೆಯ ತೆರಿಗೆ ಪದ್ಧತಿ ಮತ್ತು ಬಜೆಟ್ 2020ರಲ್ಲಿ ಪರಿಚಯಿಸಲಾದ ಹೊಸ ತೆರಿಗೆ ಪದ್ಧತಿಯ ನಡುವೆ ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿದ್ದಾರೆ. ಎರಡೂ ತನ್ನದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ಹೊಸ ಪದ್ದತಿಯು ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆ. ಆದರೆ ಕೆಲವು ವಿಷಯಗಳ ಮೇಲೆ ಕಡಿತ ಮತ್ತು ವಿನಾಯಿತಿಗಳನ್ನು ಮಿತಿಗೊಳಿಸುತ್ತದೆ.

ಹಳೆಯ ಪದ್ದತಿಯು ತುಲನಾತ್ಮಕವಾಗಿ ಹೆಚ್ಚಿನ ತೆರಿಗೆ ದರಗಳನ್ನು ಹೊಂದಿದೆ. ಆದರೆ ಕಡಿತ ಮತ್ತು ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡುವ ಮೂಲಕ ಹಣವನ್ನು ಉಳಿಸಲು ಜನರಿಗೆ ಅವಕಾಶ ನೀಡುತ್ತದೆ. ಒಬ್ಬರ ಪರಿಸ್ಥಿತಿಗೆ ಅನುಗುಣವಾಗಿ ಯಾವ ಪದ್ಧತಿ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿಕೊಳ್ಳಬೇಕು.

ಯಾವ ತೆರಿಗೆ ವರ್ಗಕ್ಕೆ ಸೇರುತ್ತೀರಿ?

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ತೆರಿಗೆ ವರ್ಗಕ್ಕೆ ಸೇರುತ್ತೀರಿ ಎಂಬುದನ್ನು ತಿಳಿದುಕೊಂಡಿರಬೇಕು. ತೆರಿಗೆಯ ಆದಾಯವನ್ನು ತಿಳಿದುಕೊಳ್ಳುವುದು ತೆರಿಗೆ ಹೊಣೆಗಾರಿಕೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಇದು ಭರ್ತಿ ಮಾಡಲು ಅರ್ಹವಾದ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಹಣಕಾಸು ಮತ್ತು ಹೂಡಿಕೆಗಳನ್ನು ಯೋಜಿಸಲು ಆದಾಯ ತೆರಿಗೆ ರಿಟರ್ನ್ ಅನ್ನು ಸಮರ್ಥ ಮತ್ತು ದೋಷ-ಮುಕ್ತ ರೀತಿಯಲ್ಲಿ ಸಲ್ಲಿಸುವುದನ್ನು ಖಚಿತಪಡಿಸುತ್ತದೆ.

ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಿ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆ ದಾಖಲೆಗಳನ್ನು ಪರಿಶೀಲಿಸುವುದು ಬಹುಮುಖ್ಯವಾಗಿದೆ. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರು ತಮ್ಮ ಆದಾಯ, ಕಡಿತಗಳು ಮತ್ತು ತೆರಿಗೆ ಪಾವತಿಗಳನ್ನು ದೃಢೀಕರಿಸಲು ವಿವಿಧ ದಾಖಲೆಗಳನ್ನು ಸಲ್ಲಿಸಬೇಕು. ಆದ್ದರಿಂದ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯು ಹೆಚ್ಚು ಸುವ್ಯವಸ್ಥಿತ ಮತ್ತು ಡಿಜಿಟೈಸ್ ಆಗಿರುವುದರಿಂದ ಡಿಜಿಟಲ್ ಸಾಧನದಲ್ಲಿ ಅಗತ್ಯ ದಾಖಲೆಗಳನ್ನು ಸಂಘಟಿಸುವುದು ಮತ್ತು ಉಳಿಸುವುದು ಫೈಲಿಂಗ್ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಮಾಡಲು ಸಹಾಯ ಮಾಡುತ್ತದೆ.


ಸರಿಯಾದ ಐಟಿಆರ್ ಅರ್ಜಿಯನ್ನು ಆಯ್ಕೆ ಮಾಡಿ

ಆದಾಯದ ಮೂಲ ಮತ್ತು ಒಟ್ಟು ಆದಾಯದ ಆಧಾರದ ಮೇಲೆ ಅನ್ವಯವಾಗುವ ಐಟಿಆರ್ ಫಾರ್ಮ್ ಅನ್ನು ಗುರುತಿಸುವುದು ಮತ್ತು ಆಯ್ಕೆ ಮಾಡುವುದು ಮುಖ್ಯವಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ತೆರಿಗೆದಾರರಿಂದ ಆರಂಭಿಕ ರಿಟರ್ನ್ ಫೈಲಿಂಗ್ ಅನ್ನು ಉತ್ತೇಜಿಸಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಐಟಿಆರ್ ಫಾರ್ಮ್‌ಗಳು ಲಭ್ಯವಾಗುವಂತೆ ಮಾಡಿತು.

ಐಟಿಆರ್-1 ಆದಾಯದ ಮೂಲ ಸಂಬಳವಾಗಿದ್ದು, ಮನೆ ಆಸ್ತಿ ಮತ್ತು ಇತರ ಮೂಲಗಳಿಂದ ಬಡ್ಡಿ, ಲಾಭಂಶ ಸೇರಿ ಒಟ್ಟು 50 ಲಕ್ಷ ರೂ. ಆದಾಯವಿದ್ದವರು ಇದರಲ್ಲಿ ಅರ್ಜಿ ಸಲ್ಲಿಸಬೇಕು.

ಐಟಿಆರ್ -2 ಬಂಡವಾಳ ಅಥವಾ ವಿದೇಶಿ ಆಸ್ತಿಗಳಿಂದ ಆದಾಯದ ಮೂಲ ಹೊಂದಿರುವ ಹಿಂದೂ ಅವಿಭಜಿತ ಕುಟುಂಬಗಳು ಇದರಲ್ಲಿ ಅರ್ಜಿ ಸಲ್ಲಿಸಬೇಕು.

ಐಟಿಆರ್- 3 ವ್ಯಾಪಾರ ಅಥವಾ ಸ್ವಯಂ ವೃತ್ತಿಯಿಂದ ಆದಾಯ ಹೊಂದಿರುವ ವ್ಯಕ್ತಿಗಳು, ಐಟಿಆರ್- 4 ವ್ಯಾಪಾರ ಅಥವಾ ಸ್ವಂತ ವೃತ್ತಿಯಿಂದ ಆದಾಯ ಹೊಂದಿರುವವರು ಇದರಲ್ಲಿ ಅರ್ಜಿ ಸಲ್ಲಿಸಬಹುದು.

ವೈಯಕ್ತಿಕ ಮತ್ತು ಬ್ಯಾಂಕ್ ಖಾತೆ ವಿವರ ಪರಿಶೀಲಿಸಿ

ಐಟಿಆರ್ ಅನ್ನು ಸಲ್ಲಿಸುವ ಮೊದಲು ತೆರಿಗೆ ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಪ್ಪಿಸಲು ತೆರಿಗೆದಾರರು ತಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಬೇಕು. ಹೆಸರು, ವಿಳಾಸ, ಇಮೇಲ್ ಮತ್ತು ಪಾನ್ ನಂತಹ ವಿವರಗಳನ್ನು ಲಿಂಕ್ ಮಾಡಲಾಗಿದೆ ಮತ್ತು ತೆರಿಗೆ ರಿಟರ್ನ್‌ನಲ್ಲಿ ನಿಖರವಾಗಿ ನಮೂದಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸರಿಯಾದ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ

ತೆರಿಗೆ ರಿಟರ್ನ್‌ನಲ್ಲಿ ಸರಿಯಾದ ಮೌಲ್ಯಮಾಪನ ವರ್ಷವನ್ನು ನಮೂದಿಸಿ. ಇದರಲ್ಲಿ ತಪ್ಪುಗಳಾದರೆ ಹೆಚ್ಚು ತೆರಿಗೆ ಮತ್ತು ಅನಗತ್ಯ ದಂಡಗಳಿಗೆ ಕಾರಣವಾಗಬಹುದು.

ಫಾರ್ಮ್ 16ರಲ್ಲಿ ವಿವರಗಳನ್ನು ಪರಿಶೀಲಿಸಿ

ಫಾರ್ಮ್ 16ರಲ್ಲಿನ ಸಂಬಳದ ಭಾಗಗಳು, ಟಿಡಿಎಸ್ ಕಡಿತ ಮತ್ತು ತೆರಿಗೆ-ಉಳಿತಾಯ ಹೂಡಿಕೆಗಳಂತಹ ವಿವರಗಳು ಸರಿಯಾಗಿವೆಯೇ ಎಂದು ಮುಂಚಿತವಾಗಿ ಖಚಿತಪಡಿಸಿಕೊಳ್ಳಿ. ಪೇ ಸ್ಲಿಪ್‌ ಮತ್ತು ಹೂಡಿಕೆ ಹೇಳಿಕೆಗಳೊಂದಿಗೆ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಿ. ಯಾವುದೇ ವ್ಯತ್ಯಾಸಗಳನ್ನು ಸರಿಪಡಿಸಲು ಉದ್ಯೋಗದಾತರಿಗೆ ವರದಿ ಮಾಡಬೇಕು.

ಹಣಕಾಸು ವರ್ಷದಲ್ಲಿ ಒಬ್ಬರು ಬಹು ಉದ್ಯೋಗದಾತರನ್ನು ಹೊಂದಿದ್ದರೆ ರಿಟರ್ನ್ ಸಲ್ಲಿಸುವ ಮೊದಲು ನಿಮ್ಮ ಎಲ್ಲಾ ಫಾರ್ಮ್ 16ರಿಂದ ಆದಾಯವನ್ನು ಒಟ್ಟುಗೂಡಿಸಿರುವುದು ಖಚಿತಪಡಿಸಿಕೊಳ್ಳಿ. ಸರಿಯಾದ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ಒಟ್ಟು ಆದಾಯವನ್ನು ನಿಖರವಾಗಿ ವರದಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ನಿಖರ ವರದಿ ಖಚಿತಪಡಿಸಿ

ಫಾರ್ಮ್ 26ಎಎಸ್ (ತೆರಿಗೆ ಕ್ರೆಡಿಟ್ ಸ್ಟೇಟ್‌ಮೆಂಟ್) ಮತ್ತು ಎಐಎಸ್ /ಟಿಐಎಸ್ (ವಾರ್ಷಿಕ ಮಾಹಿತಿ ಹೇಳಿಕೆ/ತೆರಿಗೆ ಮಾಹಿತಿ ಹೇಳಿಕೆ) ನಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಒಟ್ಟು ಆದಾಯವನ್ನು ಸಂಪೂರ್ಣವಾಗಿ ಸಮನ್ವಯಗೊಳಿಸಿ. ಯಾಕೆಂದರೆ ಇದು ಯಾವುದೇ ವ್ಯತ್ಯಾಸಗಳನ್ನು ಗುರುತಿಸಲು ಮತ್ತು ಎಲ್ಲಾ ಆದಾಯ ಮೂಲಗಳನ್ನು ನಿಖರವಾಗಿ ವರದಿ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

Exit mobile version