ಭಾರತೀಯ ಜೀವ ವಿಮಾ ನಿಗಮವು (Life Insurance Corporation of India) ಯುವಕರಿಗಾಗಿ (LIC New Plan For Youths) ಎರಡು ಹೊಸ ಅವಧಿಯ ವಿಮಾ ಉತ್ಪನ್ನಗಳನ್ನು (Insurance product) ಪರಿಚಯಿಸಿದೆ. ಇದರಲ್ಲಿ ಯುವ ಟರ್ಮ್ ಅಥವಾ ಡಿಜಿ ಟರ್ಮ್ ( LIC’s Yuva Term/Digi Term) ಮತ್ತು ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್ ಲೈಫ್ (LIC’s Yuva Credit Life/Digi Credit Life) ಸೇರಿದೆ. ಇದು ಸಾಲ ಮರುಪಾವತಿಯ ಅಪಾಯಗಳ ವಿರುದ್ಧ ರಕ್ಷಣೆ ನೀಡಲು ಪರಿಚಯಿಸಲಾದ ವಿಮಾ ಯೋಜನೆಯಾಗಿದೆ.
ಯುವ ಟರ್ಮ್ ಅಥವಾ ಡಿಜಿ ಟರ್ಮ್
ಇದರಲ್ಲಿ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನ ಮರಣ ಸಂಭವಿಸಿದರೆ ಪಾಲಿಸಿದಾರನ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ನೀಡಲಾಗುತ್ತದೆ. ಸಾವಿನ ಬಳಿಕ ನೀಡುವ ಪ್ರಯೋಜನಗಳನ್ನು ಖಾತರಿಪಡಿಸುತ್ತದೆ. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಇದನ್ನು ಪಡೆಯಬಹುದಾಗಿದೆ.
ಎಲ್‌ಐಸಿಯ ಯುವ ಟರ್ಮ್ ಏಜೆಂಟರ ಮೂಲಕ ಲಭ್ಯವಿದ್ದು, ಎಲ್ಐಸಿ ಡಿಜಿ ಟರ್ಮ್ ಎಲ್ಐಸಿಯ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.
ಇದು ನಿರ್ದಿಷ್ಟವಾಗಿ ಯುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಫ್‌ಲೈನ್ ಮತ್ತು ಆನ್‌ಲೈನ್ ಖರೀದಿ ಆಯ್ಕೆ ಮಾಡುವ ವೈಶಿಷ್ಟ್ಯವನ್ನು ಇದು ಒದಗಿಸುತ್ತದೆ.
18ರಿಂದ 45 ವರ್ಷಗಳ ಒಳಗಿನವರು ಇದನ್ನು ಪಡೆಯಬಹುದು. ಯೋಜನೆಯ ಮೆಚುರಿಟಿ ಅವಧಿ 33ರಿಂದ 75 ವರ್ಷಗಳು. ವಿಮಾ ಮೊತ್ತ 50 ಲಕ್ಷ ರೂ.ನಿಂದ 5 ಕೋಟಿ ರೂ.ವರೆಗಿದೆ.
ಆಕರ್ಷಕವಾದ ಹೆಚ್ಚಿನ ಮೊತ್ತದ ವಿಮಾ ರಿಯಾಯಿತಿ, ಮಹಿಳೆಯರಿಗೆ ಕಡಿಮೆ ಪ್ರೀಮಿಯಂ ದರಗಳು ಇದರಲ್ಲಿ ಲಭ್ಯವಿದೆ.
ಪ್ರಯೋಜನ ಏನು?
ವಾರ್ಷಿಕ ಪ್ರೀಮಿಯಂನ ಏಳು ಪಟ್ಟು ಅಥವಾ ಸಾವಿನ ದಿನಾಂಕದವರೆಗೆ ಪಾವತಿಸಿದ ಒಟ್ಟು ಪ್ರೀಮಿಯಂಗಳ ಶೇ. 1೦5ರಷ್ಟು ಸಂಪೂರ್ಣ ಮೊತ್ತದ ಭರವಸೆ ನೀಡುತ್ತದೆ. ಏಕ ಪ್ರೀಮಿಯಂನ ಶೇ. 125ರಷ್ಟು ಖಚಿತವಾದ ಸಂಪೂರ್ಣ ಮೊತ್ತದ ಭರವಸೆಯನ್ನು ನೀಡುತ್ತದೆ.
ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್
ಯುವ ಕ್ರೆಡಿಟ್ ಲೈಫ್ ಅಥವಾ ಡಿಜಿ ಕ್ರೆಡಿಟ್ ಲೈಫ್ ಯೋಜನೆಗಳು ಸಾಲದ ಹೊಣೆಗಾರಿಕೆಗಳಿಗೆ ಕವರೇಜ್ ನೀಡುತ್ತವೆ. ವಸತಿ, ಶಿಕ್ಷಣ ಅಥವಾ ವಾಹನಗಳಂತಹ ಅಗತ್ಯಗಳಿಗಾಗಿ ಮರುಪಾವತಿಯ ವಿರುದ್ಧ ಸುರಕ್ಷತೆ ಒದಗಿಸುತ್ತವೆ.
ಯುವ ಅವಧಿಯ ಯೋಜನೆಗಳಂತೆಯೇ ಇವುಗಳು ಆಫ್‌ಲೈನ್ ಮತ್ತು ಆನ್‌ಲೈನ್ ಸ್ವರೂಪಗಳಲ್ಲಿ ಲಭ್ಯ ಇವೆ. 18ರಿಂದ 45 ವರ್ಷಗಳ ಒಳಗಿನವರು ಇದರ ಪ್ರಯೋಜನ ಪಡೆಯಬಹುದು. ಇದರ ಮೆಚ್ಯುರಿಟಿ ವಯಸ್ಸು 23ರಿಂದ 75 ವರ್ಷ.
ಪ್ರಯೋಜನ ಏನು?
ವಿಮಾ ಮೊತ್ತವು 50 ಲಕ್ಷ ರೂ.ನಿಂದ 5 ಕೋಟಿ ರೂ.ಗಳವರೆಗೆ ಇರುತ್ತದೆ. ಬಾಕಿ ಇರುವ ಸಾಲದ ಮೊತ್ತಕ್ಕೆ ಅನುಗುಣವಾಗಿ ಪಾಲಿಸಿ ಅವಧಿಯಲ್ಲಿ ಮರಣದ ಪ್ರಯೋಜನವು ಕಡಿಮೆಯಾಗುತ್ತದೆ.
ಎರಡೂ ಯೋಜನೆಯಲ್ಲಿ ಕನಿಷ್ಠ 18 ರಿಂದ ಗರಿಷ್ಠ 45 ವರ್ಷಗಳ ಒಳಗಿನವರು ಇದನ್ನು ಪಡೆಯಬಹುದು. ಮೆಚುರಿಟಿ ಅವಧಿ 33 ರಿಂದ 75 ವರ್ಷ ಮತ್ತು 33 ರಿಂದ 75 ವರ್ಷಗಳು.
ಇದನ್ನೂ ಓದಿ: Money Guide: ಆನ್‌ಲೈನ್ ಶಾಪಿಂಗ್ ವೇಳೆ ಮೋಸ ಹೋಗದಿರಲು ಈ ಟಿಪ್ಸ್ ಪಾಲೋ ಮಾಡಿ
ಕನಿಷ್ಠ ವಿಮಾ ಮೊತ್ತ 50 ಲಕ್ಷ ರೂ. ಮತ್ತು ಗರಿಷ್ಠ ವಿಮಾ ಮೊತ್ತ 5 ಕೋಟಿ ರೂ. ವರೆಗೆ ಆಯ್ಕೆ ಮಾಡಬಹುದು. ಮಹಿಳೆಯರಿಗೆ ವಿಶೇಷ ಕಡಿಮೆ ಪ್ರೀಮಿಯಂ ದರಗಳು ಲಭ್ಯವಿದೆ.
ಪಾಲಿಸಿಯ ಪ್ರಾರಂಭದಲ್ಲಿ ಪಾಲಿಸಿದಾರರಿಗೆ ಸೂಕ್ತ ಸಾಲದ ಬಡ್ಡಿ ದರದ ಆಯ್ಕೆ, ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪಾಲಿಸಿ ಜಾರಿಯಲ್ಲಿದ್ದರೆ ಮತ್ತು ಕ್ಲೈಮ್ ಸ್ವೀಕಾರಾರ್ಹವಾಗಿದ್ದರೆ ಸಾವಿನ ಮೇಲೆ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ.