Site icon Vistara News

ವಿಸ್ತಾರ MoneyGuide: ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿ ದರ ಹೆಚ್ಚಳ, ಸಿಬಿಲ್‌ ಸ್ಕೋರ್‌ ಈಗ ನಿರ್ಣಾಯಕ

cibil score

ನವದೆಹಲಿ: ಸಾರ್ವಜನಿಕ ಮತ್ತು ಖಾಸಗಿ ವಲಯದ ಹಲವಾರು ಬ್ಯಾಂಕ್‌ಗಳು ಸಾಲದ ಬಡ್ಡಿ ದರಗಳನ್ನು ಏರಿಸಿವೆ. ವಾಹನ ಸಾಲಗಳ ಬಡ್ಡಿ ದರ ಕೂಡ ಹೆಚ್ಚಳವಾಗಿದೆ. ಹೀಗಾಗಿ ಉತ್ತಮ ಸಿಬಿಲ್ ಸ್ಕೋರ್‌ ಪಡೆಯುವುದು ಈಗ ನಿರ್ಣಾಯಕವಾಗಿದೆ.

ನಿಮಗೆ ‌ಸಿಬಿಲ್‌ ನಲ್ಲಿ ಒಳ್ಳೆಯ ಕ್ರೆಡಿಟ್‌ ಸ್ಕೋರ್‌ ಇದ್ದರೆ ಸಾಲ ಪಡೆಯುವುದು ಸುಲಭವಾಗುತ್ತದೆ. ಅದು ನಿಮ್ಮ ಅರ್ಹತೆಯನ್ನು ಹೆಚ್ಚಿಸುತ್ತದೆ. ಕ್ರೆಡಿಟ್‌ ಸ್ಕೋರ್‌ ಮೂರು ಅಂಕಿಗಳಿರುವ ಸ್ಕೋರ್‌ ಆಗಿದ್ದು, 300 ಮತ್ತು 900ರ ನಡುವೆ ಇರುತ್ತದೆ. ಸಾಲ ಮರು ಪಾವತಿಸುವ ನಿಮ್ಮ ಸಾಮರ್ಥ್ಯವನ್ನು ಆಧರಿಸಿ ಇದು ನಿರ್ಣಯವಾಗುತ್ತದೆ.

ಕ್ರೆಡಿಟ್‌ ಸ್ಕೋರ್‌ ಹೇಗೆ ಪರಿಣಾಮ ಬೀರುತ್ತದೆ?

ಕ್ರೆಡಿಟ್‌ ಸ್ಕೋರ್‌ 750ಕ್ಕಿಂತ ಮೇಲಿದ್ದರೆ ಒಳ್ಳೆಯ ಸ್ಕೋರ್‌ ಎಂದು ಪರಿಗಣನೆಯಾಗುತ್ತದೆ. 750ಕ್ಕಿಂತ ಕೆಳಗಿದ್ದರೆ ನಿಮ್ಮ ಸಾಲ ಪಡೆಯುವ ಅರ್ಹತೆ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು ಎನ್ನುತ್ತಾರೆ ಒನ್‌ ಸ್ಕೋರ್‌ ಒನ್‌ ಕಾರ್ಡ್‌ನ ಸಹ ಸಂಸ್ಥಾಪಕ ಅನುರಾಗ್‌ ಸಿನ್ಹಾ.

ಕ್ರೆಡಿಟ್‌ ಕಾರ್ಡ್‌ ಸಾಲದ ಮರು ಪಾವತಿ, ಕ್ರೆಡಿಟ್‌ ಬಳಕೆ, ಬ್ಯಾಂಕಿಂಗ್‌ ಪರಿಶೀಲನೆಗಳು, ಇತ್ಯರ್ಥವಾದ ಸಾಲಗಳು, ಭಿನ್ನ ಸಾಲಗಳು ಇತ್ಯಾದಿ ಅಂಶಗಳನ್ನು ಆಧರಿಸಿವೆ. ಟ್ರಾನ್ಸ್‌ಯೂನಿಯನ್‌ ಸಿಬಿಲ್‌ ಕ್ರೆಡಿಟ್‌ ಬ್ಯೂರೊ ಸಿಬಿಲ್ ಸ್ಕೋರ್‌ ಅನ್ನು ನಿರ್ವಹಿಸುತ್ತದೆ.

ಸಿಬಿಲ್‌ ಸ್ಕೋರ್‌ನ ಪ್ರಯೋಜನವೇನು?

ಹೆಚ್ಚಿನ ಸ್ಕೋರ್‌ ಇದ್ದಾಗ ನೀವು ಬ್ಯಾಂಕ್‌ ಜತೆಗೆ ಕಡಿಮೆ ಬಡ್ಡಿ ದರಕ್ಕೆ ಸಾಲ ಪಡೆಯಲು ಚೌಕಾಸಿ ಮಾಡಬಹುದು. ಬ್ಯಾಂಕ್‌ ಗಳೂ ಹೆಚ್ಚಿನ ಸ್ಕೋರ್‌ ಇರುವವರಿಗೆ ಸಾಲ ಕೊಡಲು ಮುಂದಾಗುತ್ತವೆ. ಬ್ಯಾಂಕ್‌ ಬಾಜಾರ್‌ ಪ್ರಕಾರ ಗೃಹ ಸಾಲ ಮತ್ತು ಕಾರು ಸಾಲಗಳ ಬಡ್ಡಿ ದರಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿದ್ದರೂ, ಗರಿಷ್ಠ ಸಿಬಿಲ್‌ ಸ್ಕೋರ್‌ ಇದ್ದರೆ ನೀವು ಬಡ್ಡಿ ದರದಲ್ಲಿ ರಿಯಾಯಿತಿ ಪಡೆಯುವ ಸಾಧ್ಯತೆ ಇದೆ. ಉದಾಹರಣೆಗೆ ಎಸ್‌ಬಿಐನಲ್ಲಿ ಸಿಬಿಲ್‌ ಕ್ರೆಡಿಟ್‌ ಸ್ಕೋರ್‌ 800ಕ್ಕಿಂತ ಮೇಲಿದ್ದವರಿಗೆ 7.05% ಬಡ್ಡಿ ದರದಲ್ಲಿ ಗೃಹ ಸಾಲ ಸಿಗುತ್ತದೆ. ಸ್ಕೋರ್‌ 650-690 ಇದ್ದವರಿಗೆ 7.35%ರ ಬಡ್ಡಿ ದರ ಇರುತ್ತದೆ. ಸ್ಕೋರ್‌ 550-649 ಇದ್ದವರಿಗೆ 7.55 % ಬಡ್ಡಿ ದರ ನಿಗದಿಯಾಗಿದೆ.

ಉತ್ತಮ ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಉತ್ತಮ ಕ್ರೆಡಿಟ್‌ ಕಾರ್ಡ್‌ ಆಫರ್‌ಗಳೂ ಲಭಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕ್‌ಗಳು ನೀವು ಈ ಹಿಂದೆ ಯಾವುದಾದರೂ ಸಾಲವನ್ನು ಮರು ಪಾವತಿಸದೆ ಸುಸ್ತಿ ಸಾಲಗಾರರಾಗಿದ್ದೀರಾ ಎಂಬುದನ್ನು ಸಿಬಿಲ್‌ ಮೂಲಕ ತಿಳಿದುಕೊಳ್ಳುತ್ತವೆ. ಆದ್ದರಿಂದ ಸಿಬಿಲ್‌ ಸ್ಕೋರ್‌ ಚೆನ್ನಾಗಿರುವಂತೆ ನೋಡಿಕೊಳ್ಳಿ.

ಸ್ಕೋರ್‌ ಹೆಚ್ಚಿಸುವುದು ಹೇಗೆ?

ಇದನ್ನೂ ಓದಿ: ವಿಸ್ತಾರ Money Guide: ವಯಸ್ಸಾದಾಗ ಆರಾಮವಾಗಿರಲು ಪಿಂಚಣಿ ಪಡೆಯುವುದು ಹೇಗೆ? ನಿಮಗೆ ಗೊತ್ತಿರಬೇಕಾದ ಸಂಗತಿ

ನಿಮ್ಮ ಸಿಬಿಲ್‌ ಸ್ಕೋರ್‌ ತಿಳಿಯುವುದು ಹೇಗೆ?

ಸಿಬಿಲ್‌ ವೆಬ್‌ ಸೈಟ್‌ ತೆರೆಯಿರಿ-https://www.cibil.com

Get your CIBIL score ಆಯ್ಕೆ ಮಾಡಿರಿ. ನಿಮ್ಮ ಹೆಸರು, ಇಮೇಲ್‌ ಐಡಿ, ಪಾಸ್‌ ವರ್ಡ್, ಐಡಿ ಪೂಫ್‌ ಸಲ್ಲಿಸಿ ಕ್ರೆಡಿಟ್‌ ಸ್ಕೋರ್‌ ಮಾಹಿತಿ ಪಡೆಯಬಹುದು.‌

ಇದನ್ನೂ ಓದಿ: HDFC, ICICI, PNB ಸಾಲದ ಬಡ್ಡಿ ದರಗಳಲ್ಲಿ ಏರಿಕೆ, ಗೃಹಸಾಲಗಾರರ ಇಎಂಐ ಹೆಚ್ಚಳ ಗ್ಯಾರಂಟಿ!

Exit mobile version