Site icon Vistara News

Money Guide: ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಉಳಿತಾಯ ಯೋಜನೆ

World Senior Citizens Day

ಹಿರಿಯ ನಾಗರಿಕರ (Senior Citizen) ಉಳಿತಾಯ ಯೋಜನೆಯು (SCSS) 60 ವರ್ಷಕ್ಕಿಂತ ಮೇಲ್ಪಟ್ಟವರು ಹೂಡಿಕೆ (Money Guide) ಮಾಡಬಹುದಾದ ಖಾತ್ರಿ ಮರುಪಾವತಿ (guaranteed return) ನೀಡುವ ಯೋಜನೆಯಾಗಿದೆ. ಇದರಲ್ಲಿ ಜಂಟಿ ಖಾತೆಯನ್ನು ಸಂಗಾತಿಯೊಂದಿಗೆ ಮಾತ್ರ ತೆರೆಯಬಹುದು.

ಅಂಚೆ ಇಲಾಖೆಯು (post office) ಈ ಸಣ್ಣ ಉಳಿತಾಯ ಯೋಜನೆಗೆ (small savings scheme) ವಾರ್ಷಿಕ ಶೇ. ಶೇ. 8.2 ಬಡ್ಡಿ ದರವನ್ನು (interest rate) ನೀಡುತ್ತಿದೆ. ನೀವು ಈ ಯೋಜನೆಯನ್ನು 5 ವರ್ಷಗಳವರೆಗೆ ತೆರೆಯಬಹುದು. ಆದರೆ ಮೆಚ್ಯೂರಿಟಿಯ ದಿನಾಂಕದಿಂದ ಮುಂದಿನ 3 ವರ್ಷಗಳವರೆಗೆ ಇದನ್ನು ವಿಸ್ತರಿಸಬಹುದು.

ಎಷ್ಟು ಹೂಡಿಕೆ ಮಾಡಬಹುದು?

ಒಂದು ಬಾರಿಯ ಮೊತ್ತದ ಹೂಡಿಕೆಯನ್ನು ಮಾಡಬೇಕು. ಇದರಲ್ಲಿ ಕನಿಷ್ಠ 1,000 ರೂ. ನಿಂದ ಗರಿಷ್ಠ 30 ಲಕ್ಷ ರೂ. ವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಇದರಲ್ಲಿ ಮಾಡಿದ ಠೇವಣಿಗಳ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ಬಡ್ಡಿ ದರ

ತ್ರೈಮಾಸಿಕ ಆಧಾರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ. ಠೇವಣಿ ಮಾಡಿದ ದಿನಾಂಕದಿಂದ ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30, ಡಿಸೆಂಬರ್ 31ರಂದು ಬಡ್ಡಿಯನ್ನು ಪಾವತಿಸಲಾಗುತ್ತದೆ. ಯಾವುದೇ ತ್ರೈಮಾಸಿಕದಲ್ಲಿ ಬಡ್ಡಿಯನ್ನು ಕ್ಲೈಮ್ ಮಾಡದಿದ್ದರೆ ಹೆಚ್ಚುವರಿ ಬಡ್ಡಿಯನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಉಳಿತಾಯ ಖಾತೆಗೆ ಸ್ವಯಂ ಕ್ರೆಡಿಟ್ ಮೂಲಕ ಬಡ್ಡಿಯನ್ನು ಡ್ರಾ ಮಾಡಬಹುದು.


ಬಡ್ಡಿಗೆ ತೆರಿಗೆ

ಎಲ್ಲಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಖಾತೆಗಳಲ್ಲಿನ ಒಟ್ಟು ಬಡ್ಡಿಯು 50,000 ರೂ. ಗಳನ್ನು ಮೀರಿದರೆ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಅನಂತರ ಬಡ್ಡಿಯ ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಫಾರ್ಮ್ 15 ಜಿ /15ಹೆಚ್ ಅನ್ನು ಸಲ್ಲಿಸಿದರೆ ಮತ್ತು ಸಂಚಿತ ಬಡ್ಡಿಯು 50,000 ರೂ. ಗಿಂತ ಹೆಚ್ಚಿಲ್ಲದಿದ್ದರೆ ಯಾವುದೇ ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ.

ಎಷ್ಟು ಲಾಭ?

ಪ್ರಸ್ತುತ ಪೋಸ್ಟ್ ಆಫೀಸ್ ಎಸ್‌ಸಿಎಸ್‌ಎಸ್‌ನಲ್ಲಿ ತಲಾ 1 ಲಕ್ಷ, 2 ಲಕ್ಷ, 5 ಲಕ್ಷ ಮತ್ತು 10 ಲಕ್ಷ ರೂ. ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ. ಯೋಜನೆಯ ಒಟ್ಟು ಅವಧಿಯು 5 ವರ್ಷಗಳು ಮತ್ತು ಬಡ್ಡಿ ದರವು ವಾರ್ಷಿಕ ಶೇ. 8.2. ಗಳಾದರೆ 1 ಲಕ್ಷ ರೂ. ಹೂಡಿಕೆ ಮಾಡಿದರೆ ಒಟ್ಟು ಬಡ್ಡಿ 41,000, 2,050 ತ್ರೈಮಾಸಿಕ ಬಡ್ಡಿ ಹಾಗೂ ಐದು ವರ್ಷಗಳಲ್ಲಿ ಮುಕ್ತಾಯದ ಮೊತ್ತ 1,41,000 ರೂ. ಅನ್ನು ಪಡೆಯಬಹುದು. ಅದೇ ರೀತಿ 2 ಲಕ್ಷ ರೂ. ಹೂಡಿಕೆ ಮಾಡಿದರೆ 82,000, 4,100, 2,82,000, 3 ಲಕ್ಷ ಹೂಡಿಕೆ ಮಾಡಿದರೆ 1,23,000, 6,150, 4,23,000, 4 ಲಕ್ಷ ಹೂಡಿಕೆ ಮಾಡಿದರೆ 1,64,000, 8,200, 5,64,000, 5 ಲಕ್ಷ ರೂ. ಹೂಡಿಕೆ ಮಾಡಿದರೆ 2,05,000, 10,250, 7,05,000, 10 ಲಕ್ಷ ರೂ. ಹೂಡಿಕೆ ಮಾಡಿದರೆ 4,10,000, 20500, 14,10,000, 20 ಲಕ್ಷ ರೂ. ಹೂಡಿಕೆ ಮಾಡಿದರೆ 8,20,000, 41,000, 28,20,000, 30 ಲಕ್ಷ ಹೂಡಿಕೆ ಮಾಡಿದರೆ 12,30,000, 61,500, 42,30,000 ಪಡೆಯಬಹುದು.

ಇದನ್ನೂ ಓದಿ: Money Guide: ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಪಡೆಯಲು ಹೀಗೆ ಮಾಡಿ

ಅಕಾಲಿಕ ಮುಚ್ಚುವಿಕೆ

ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ಯಾವುದೇ ಸಮಯದಲ್ಲಿ ಅಕಾಲಿಕವಾಗಿ ಮುಚ್ಚಬಹುದು. ಆದರೂ ಖಾತೆಯನ್ನು ತೆರೆಯುವ 1 ವರ್ಷದ ಮೊದಲು ಮುಚ್ಚಿದ್ದರೆ ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಅಂಚೆ ಕಚೇರಿಯು ಒಟ್ಟು ಮೊತ್ತದಿಂದ ಪಾವತಿಸಿದ ಬಡ್ಡಿಯನ್ನು ಸಹ ಪಡೆಯುತ್ತದೆ. 1 ವರ್ಷದಿಂದ 2 ವರ್ಷಗಳ ಅವಧಿಯಲ್ಲಿ ಖಾತೆಯನ್ನು ಮುಚ್ಚಿದ್ದರೆ, ಮೊತ್ತದ ಶೇ. 1.5ರಷ್ಟನ್ನು ಕಡಿತಗೊಳಿಸಿದ ಅನಂತರ ಮೂಲ ಮೊತ್ತವನ್ನು ಪಾವತಿಸಲಾಗುತ್ತದೆ.

Exit mobile version