ನೀವು ನಿಮ್ಮಿಷ್ಟದ ಕಾರನ್ನು ಖರೀದಿಸಲು ಲೆಕ್ಕಾಚಾರ ( Money Guide ) ಹಾಕುತ್ತಿದ್ದೀರಾ? ಹಾಗಾದರೆ 20/10/4 ಸೂತ್ರವನ್ನು ಅನುಸರಿಸಬಹುದು. ಇದಕ್ಕೂ ಮುನ್ನ ಕೆಲವೊಂದು ವಿಷಯಗಳನ್ನು ತಿಳಿಯೋಣ. ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಸಾಮಾನ್ಯವಾಗಿ ಕಾರಿನ ಆನ್ ರೋಡ್ ಪ್ರೈಸ್ ಮೊತ್ತದ 80% ತನಕ ಸಾಲವನ್ನು ನೀಡುತ್ತವೆ. ಕೆಲವು ಕಂಪನಿಗಳು 100% ಸಾಲ ನೀಡುವುದೂ ಇದೆ. ಲೋನ್ ಟು ವಾಲ್ಯೂ ಅನುಪಾತವು (Loan to Value) ಸಾಲದ ಮೊತ್ತವನ್ನು ನಿರ್ಧರಿಸುತ್ತದೆ.
ಪ್ರಸ್ತುತ ಕಾರು ಸಾಲಗಳ ಬಡ್ಡಿ ದರಗಳೂ ಇತ್ತೀಚಿನ ವರ್ಷಗಳಲ್ಲಿಯೇ ಕಡಿಮೆ ಮಟ್ಟದಲ್ಲಿ ಇದೆ. ಎಸ್‌ಬಿಐ ಕಾರು ಸಾಲದ ಬಡ್ಡಿ ದರ 8.85%ರಿಂದ 9.80% ಇದೆ. ಎಲೆಕ್ಟ್ರಿಕ್ ಕಾರುಗಳಿಗೆ ನೀಡುವ ಸಾಲದ ಬಡ್ಡಿ ದರವು 8.75%ರಿಂದ 9.45% ತನಕ ಇದೆ.
ಇಎಂಐ ಪಾವತಿ: ಕಾರು ಸಾಲ ಖರೀದಿಸುವಾಗ ನಿಮ್ಮ ಮರು ಪಾವತಿಯ ಸಾಮರ್ಥ್ಯಕ್ಕೆ ತಕ್ಕಂತೆ ಸಮಾನ ಮಾಸಿಕ ಕಂತನ್ನು (ಇಎಂಐ) ನಿರ್ಧರಿಸುವುದು ಮುಖ್ಯವಾಗುತ್ತದೆ. ಕಡಿಮೆ ಇಎಂಐ ಮೊತ್ತ ಮತ್ತು ದೀರ್ಘಾವಧಿಯ ಲೆಕ್ಕಾಚಾರವನ್ನು ಕೈಬಿಡಿ. ಕಡಿಮೆ ಇಎಂಐ ಮತ್ತು ದೀರ್ಘಾವಧಿಯ ಆಯ್ಕೆಯನ್ನು ತೆಗೆದುಕೊಣಡರೆ ಅನವಶ್ಯಕವಾಗಿ ಬಡ್ಡಿ ದರದ ರೂಪದಲ್ಲಿ ಹೆಚ್ಚು ಖರ್ಚಾಗುತ್ತದೆ. ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುವಂಥ ಇಎಂಐ ಮಾದರಿಯನ್ನೇ ಅನುಸರಿಸಿ.
ಇದನ್ನೂ ಓದಿ: Money plus : ಶ್ರೀಮಂತರಾಗಲು ಶ್ರೀಮಂತರು ಹೇಳಿರುವ ಸೀಕ್ರೆಟ್ಸ್
ಉದಾಹರಣೆಗೆ ನೀವು 15 ಲಕ್ಷ ರೂ. ಬೆಲೆ ಬಾಳುವ ಕಾರನ್ನು ಖರೀದಿಸುತ್ತಿದ್ದೀರಿ ಎಂದು ಭಾವಿಸಿ. ಕನಿಷ್ಠ 7 ಲಕ್ಷ ರೂ. ಡೌನ್ ಪೇಮೆಂಟ್ ಕೊಡಲು ಸಿದ್ಧರಿದ್ದೀರಾ? ಉಳಿದ 8 ಲಕ್ಷಕ್ಕೆ ಬರುವ ಇಎಂಐ ಅನ್ನು ಕಟ್ಟುವ ಸಾಮರ್ಥ್ಯ ಇದೆಯೇ? ಸಿಬಿಲ್ ಸ್ಕೋರ್ ಚೆನ್ನಾಗಿದ್ದು 750ಕ್ಕಿಂತ ಹೆಚ್ಚು ಇದ್ದರೆ ದೊಡ್ಡ ಅವಧಿಯ ಹಾಗೂ ದೊಡ್ಡ ಮೊತ್ತದ ಸಾಲ ಸಿಗುತ್ತದೆ. ಸಿಬಿಲ್ ಸ್ಕೋರ್ 750ಕ್ಕಿಂತ ಮೇಲಿದ್ದರೆ ಬ್ಯಾಂಕ್ ಗಳು 80%ಗಿಂತ ಹೆಚ್ಚಿನ ಸಾಲ ನೀಡುತ್ತವೆ. ನಿಮ್ಮ ಕಾರು ಸಾಲ ಮತ್ತು ಇತರ ಸಾಲದ ಇಎಂಐ ನಿಮ್ಮ ಟೇಕ್ ಹೋಮ್ ಸ್ಯಾಲರಿಯ 40% ಮೀರದಿರಲಿ. ಹಾಗಾದರೆ 20/10/4 ಸೂತ್ರವೇನು?
- 1. ಇದು ನೀವು ಕಾರು ಸಾಲ ಖರೀದಿಸುವಾಗ ಥಂಬ್ ರೂಲ್ ಆಗಿರಲಿ.
- 2. ಕಾರನ್ನು ಬುಕ್ ಮಾಡುವಾಗ, ಕಾರಿನ ಆನ್ ರೋಡ್ ದರದ 20% ಅನ್ನು ಡೌನ್ ಪೇಮೆಂಟ್ ಆಗಿ ಕೊಡಬೇಕು.
- 3. ನಿಮ್ಮ ಕಾರು ಸಾಲದ ಇಎಂಐ, ನಿಮ್ಮ ಮಾಸಿಕ ಆದಾಯದ 10% ಅನ್ನು ಮೀರದಿರಲಿ.
- 4. ಕಾರು ಸಾಲದ ಅವಧಿ 4 ವರ್ಷ ಮೀರದಿರಲಿ.
- 5. ಮಾಸಿಕ ಆದಾಯ ಮತ್ತು ಇತರ ಸಾಲಗಳನ್ನು ಅವಲಂಬಿಸಿ ಸೂತ್ರವು ಪರಿಷ್ಕರಣೆಯಾಗಬಹುದು.