Site icon Vistara News

Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

Money Guide

Money Guide

ಬೆಂಗಳೂರು: ಬದಲಾದ ಜೀವನ ಶೈಲಿ, ಬೆಲೆ ಹೆಚ್ಚಳ ಇತ್ಯಾದಿ ಕಾರಣಗಳಿಂದ ಪ್ರತಿಯೊಬ್ಬರು ಒಂದಲ್ಲ ಒಂದು ಸಲ ಸಾಲದ ಮೊರೆ ಹೋಗಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಬ್ಯಾಂಕ್‌ಗಳೂ ವಿವಿಧ ರೂಪದಲ್ಲಿ ಸಾಲ ಒದಗಿಸುತ್ತವೆ. ಆದರೆ ಕೆಲವೊಂದು ಸಂದರ್ಭದಲ್ಲಿ ಬ್ಯಾಂಕ್‌ನಿಂದ ಸಾಲ ದೊರೆಯಲು ತಡವಾಗಬಹುದು ಅಥವಾ ನಿಮ್ಮ ಅರ್ಜಿ ತಿರಸ್ಕೃತಗೊಳ್ಳಬಹುದು. ಈ ವೇಳೆ ಖಾಸಗಿ ವ್ಯಕ್ತಿಗಳ ಬಳಿಯಿಂದ ಲೋನ್‌ ಪಡೆಯುವುದು ಸುರಕ್ಷಿತವಲ್ಲ. ಇದರಲ್ಲಿನ ಅತಿಯಾದ ಬಡ್ಡಿ ಮುಂದೊಂದು ದಿನ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಹಾಗಾದರೆ ಏನು ಮಾಡಬೇಕು? ಚಿನ್ನ ಅಡವಿಡಬಹುದು, ನಿಮ್ಮ ಎಲ್‌ಐಸಿ ಪಾಲಿಸಿ ಮೇಲೆ ಸಾಲ ಪಡೆಯಬಹುದು, ಇಪಿಎಫ್‌ ಅಕೌಂಟ್‌ ಇದ್ದರೆ ಅದರಿಂದಲೂ ಹಣ ವಿತ್‌ಡ್ರಾ ಮಾಡಬಹುದು. ಇದ್ಯಾವುದೂ ಬೇಡ ಎಂದರೆ ನೀವು ಷೇರು ಹೊಂದಿದ್ದರೆ ಅದರ ಆಧಾರದಲ್ಲಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಹಣ ಪಡೆದುಕೊಳ್ಳಹುದು. ಅದು ಹೇಗೆ ಎನ್ನುವುದರ ಮಾಹಿತಿ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಷೇರುಗಳ ಮೇಲಿನ ಸಾಲ (Loan against shares)ವನ್ನು ಲೋನ್‌ ಅಗೈಸ್ಟ್‌ ಸೆಕ್ಯುರಿಟೀಸ್(LAS) ಎಂದೂ ಕರೆಯಲಾಗುತ್ತದೆ. ನಿಮ್ಮ ಷೇರುಗಳನ್ನು ಆಧಾರವಾಗಿ ಬಳಸಿಕೊಂಡು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಹಣವನ್ನು ಪಡೆಯುವ ವಿಧಾನ ಇದು. ಸಾಲ ಪಡೆಯಲು ನೀವು ಸೆಕ್ಯುರಿಟಿಗಳನ್ನು (ಸ್ಟಾಕ್‌, ಮ್ಯೂಚುವಲ್ ಫಂಡ್, ಬಾಂಡ್ ಇತ್ಯಾದಿ) ಅಡವಿಡಬೇಕಾಗುತ್ತದೆ.

ಸಾಲದ ಮೊತ್ತ

ಸಾಲದ ಮೊತ್ತವು ಸಾಮಾನ್ಯವಾಗಿ ಅಡವಿಟ್ಟ ಸೆಕ್ಯುರಿಟಿಗಳ ಮಾರುಕಟ್ಟೆ ಮೌಲ್ಯದ ಮೇಲೆ ನಿರ್ಧರಿಸಲಾಗುತ್ತದೆ. ಗಮನಿಸಬೇಕಾದ ಅಂಶ ಎಂದರೆ ಇದು ಸಾಲ ನೀಡುವ ಸಂಸ್ಥೆಯ ಷರತ್ತುಗಳನ್ನು ಅವಲಂಬಿಸಿ ಬದಲಾಗುತ್ತದೆ. ಸಾಮಾನ್ಯವಾಗಿ ನೀವು ಅಡವಿಟ್ಟ ಸೆಕ್ಯುರಿಟಿಗಳ ಮಾರುಕಟ್ಟೆ ಮೌಲ್ಯದ ಶೇ. 50ರಿಂದ ಶೇ. 70ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಸಾಲವಾಗಿ ನಿಮ್ಮ ಕೈ ಸೇರುತ್ತದೆ. ಉದಾಹರಣೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮ್ಮ ಷೇರುಗಳ ಮೇಲೆ 20 ಲಕ್ಷ ರೂ.ಗಳವರೆಗೆ ಸಾಲವನ್ನು ನೀಡುತ್ತದೆ. ಡಿಮ್ಯಾಟ್ ಖಾತೆಯಲ್ಲಿ ಷೇರುಗಳನ್ನು ಹೊಂದಿರುವ ವ್ಯಕ್ತಿಗಳು ಈ ರೀತಿಯ ಸಾಲಕ್ಕೆ ಅರ್ಹರಾಗಿರುತ್ತಾರೆ.

ಇದನ್ನು ಗಮನಿಸಿ

ಸಾಲ ಪಡೆಯುವ ವಿಧಾನ

ಗಮನಿಸಿ, ಷೇರುಗಳ ಮೇಲಿನ ಸಾಲವನ್ನು ಆಯ್ಕೆ ಮಾಡುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿ, ಸಾಲದ ನಿಯಮಗಳು ಮತ್ತು ಸಂಬಂಧಿತ ಅಪಾಯಗಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿ. ಇದಕ್ಕಾಗಿ ಹಣಕಾಸು ಸಲಹೆಗಾರರಿಂದ ಸಲಹೆ ಪಡೆಯುವುದು ಸೂಕ್ತ.

ಇದನ್ನೂ ಓದಿ: EPFO Pension: ಇಪಿಎಫ್ ಒ ಪಿಂಚಣಿ ಮೊತ್ತ ಹೆಚ್ಚು ಸಿಗಲು ಏನು ಮಾಡಬೇಕು?

Exit mobile version