Site icon Vistara News

Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

Money Guide

Money Guide

ಬೆಂಗಳೂರು: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ (Employees Provident Fund-EPFಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲಾಗುತ್ತದೆ. ಆ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಾಗ್ಯೂ ಕೆಲವೊಮ್ಮೆ ತೀರಾ ಅನಿವಾರ್ಯ ಸಂದರ್ಭದಲ್ಲಿ ಕೆಲವೊಂದಷ್ಟು ಮೊತ್ತವನ್ನು ಹಿಂಪಡೆಯಬಹುದು. ಹೀಗಾಗಿ ಪಿಎಫ್‌ ಉದ್ಯೋಗಿಗಳ ಪಾಲಿಗೆ ಆಪತ್ಬಾಂಧವ ಎನಿಸಿಕೊಂಡಿದೆ. ಈ ವರ್ಷ ಸರ್ಕಾರ ಪಿಎಫ್‌ ಖಾತೆಗಳಿಗೆ ಸಂಬಂಧಿಸಿದ ನಿಯಮದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಅದೇನು ಎನ್ನುವ ವಿವರ ಮನಿಗೈಡ್‌ (Money Guide)ನಲ್ಲಿದೆ.

ಅಟೋ ಸೆಟಲ್‌ಮೆಂಟ್‌

ಹೊಸದಾಗಿ ಅಟೋ ಸೆಟಲ್‌ಮೆಂಟ್‌ ಸೌಲಭ್ಯವನ್ನು ಇಪಿಎಫ್ಒ ಇತ್ತೀಚೆಗೆ ಪರಿಚಯಿಸಿದೆ. ಅನಾರೋಗ್ಯದ ಕಾರಣಕ್ಕಾಗಿ ಮುಂಗಡ ಕ್ಲೈಮ್ ಮಾಡಲು 2020ರ ಏಪ್ರಿಲ್‌ನಲ್ಲಿ ಅಟೋ ಸೆಟಲ್‌ಮೆಂಟ್‌ ಮೋಡ್ ಅನ್ನು ಪರಿಚಯಿಸಲಾಗಿತ್ತು. ಈಗ ಈ ಮಿತಿಯನ್ನು 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ ಉನ್ನತ ಶಿಕ್ಷಣ ಮತ್ತು ಮದುವೆಯ ಆಯ್ಕೆಯನ್ನೂ ಪರಿಚಯಿಸಲಾಗಿದೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಇದನ್ನು ಸ್ವಯಂ ಪ್ರಕ್ರಿಯೆಗೊಳಿಸಲಾಗುತ್ತದೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಐಟಿ ವ್ಯವಸ್ಥೆಯಿಂದ ಇಂತಹ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.

ಮಲ್ಟಿ ಲೊಕೇಷನ್‌ ಕ್ಲೈಮ್‌ ಸೆಟಲ್‌ಮೆಂಟ್‌

ಇಪಿಎಫ್ ಕ್ಲೈಮ್ ಪ್ರಕ್ರಿಯೆಯನ್ನು ನಿಗದಿತ ಸಮಯದೊಳಗೆ ಮುಗಿಸಲು ಇಪಿಎಫ್ಒ ಬಹು-ಸ್ಥಳ ಇತ್ಯರ್ಥಕ್ಕಾಗಿ ಲಿಂಕ್ ಕಚೇರಿ ಸೆಟಪ್ ಪರಿಚಯಿಸಿದೆ. ಇದರೊಂದಿಗೆ ಕ್ಲೈಮ್‌ಗೆ ಸಂಬಂಧಿಸಿದ ಹೊರೆಯನ್ನು ಕಡಿಮೆ ಮಾಡಬಹುದು. ಇದು ಕ್ಲೈಮ್‌ ಪ್ರಕ್ರಿಯೆಯನ್ನೂ ವೇಗಗೊಳಿಸುತ್ತದೆ.

ಆಧಾರ್ ವಿವರ ಇಲ್ಲದೆ ಇಪಿಎಫ್ ಡೆತ್ ಕ್ಲೈಮ್‌

ಒಂದು ವೇಳೆ ಪಿಎಫ್‌ ಗ್ರಾಹಕ ಮೃತಪಟ್ಟರೆ ಆಧಾರ್ ವಿವರಗಳನ್ನು ನೀಡದೆ ಡೆತ್‌ ಕ್ಲೈಮ್‌ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ಆಯ್ಕೆಯನ್ನು ಪರಿಚಯಿಸಲಾಗಿದೆ. ಇದನ್ನು ತಾತ್ಕಾಲಿಕ ಕ್ರಮವಾಗಿ ಜಾರಿಗೆ ತರಲಾಗಿದೆ. ಜತೆಗೆ ಇದಕ್ಕೆ ಒಐಸಿ (OIC)ಯಿಂದ ಸರಿಯಾದ ಅನುಮೋದನೆಯ ಅಗತ್ಯವಿದೆ.

ಚೆಕ್ ಲೀಫ್ ಕಡ್ಡಾಯ ಅಪ್‌ಲೋಡ್‌ ನಿಯಮ ಸಡಿಲಿಕೆ

2024ರ ಮೇ 28ರ ಸುತ್ತೋಲೆಯಲ್ಲಿ ಇಪಿಎಫ್ಒ ಕೆಲವು ಸಂದರ್ಭಗಳಲ್ಲಿ ಚೆಕ್ ಲೀಫ್ ಇಮೇಜ್ ಅಥವಾ ದೃಢೀಕರಿಸಿದ ಬ್ಯಾಂಕ್ ಪಾಸ್‌ಬುಕ್‌ ಅನ್ನು ಅಪ್‌ಲೋಡ್‌ ಮಾಡುವ ಕಡ್ಡಾಯ ನಿಯಮವನ್ನು ಸಡಿಲಗೊಳಿಸಿದೆ. ಈ ಕ್ರಮವು ಆನ್‌ಲೈನ್ ಕ್ಲೈಮ್ ಪ್ರಕ್ರಿಯೆಯನ್ನು ಹೆಚ್ಚು ತ್ವರಿತವಾಗಿ ಸುಗಮಗೊಳಿಸುತ್ತದೆ. ಜತೆಗೆ ಕ್ಲೈಮ್‌ ವಿಫಲವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆಧರೆ ಇದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇಪಿಎಫ್‌ ಖಾತೆಯ ವೈಶಿಷ್ಟ್ಯ

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Exit mobile version