Site icon Vistara News

Money Guide: 30 ಸಾವಿರ ಸಂಬಳ ಪಡೆಯುವವರೂ ಕೆಲವೇ ವರ್ಷಗಳಲ್ಲಿ ಕೋಟ್ಯಧಿಪತಿ ಆಗಲು ಸಾಧ್ಯ!

Money Guide

ಕೋಟ್ಯಧಿಪತಿ (Crorepati) ಆಗುವ ಕನಸು (dream) ಪ್ರತಿಯೊಬ್ಬರಿಗೂ ಇದೆ. ಆದರೆ ಬರುವ ಸಂಬಳ (salary) ಮನೆ ಖರ್ಚಿಗೂ ಸಾಲುವುದಿಲ್ಲ ಎಂದು ದುಃಖಿಸುವವರೇ ಹೆಚ್ಚು. ಆದರೆ ಸರಿಯಾದ ಯೋಜನೆ (Money Guide ) ರೂಪಿಸಿಕೊಂಡರೆ ಇದು ಕಷ್ಟವೇನಲ್ಲ. ಹಣಕಾಸಿನ ಲೆಕ್ಕಾಚಾರದ ಜೊತೆಜೊತೆಗೆ ಒಂದಷ್ಟು ಯೋಜನೆ ಹಾಕಿಕೊಂಡರೆ ಬಹುತೇಕ ಎಲ್ಲರೂ ಕೋಟ್ಯಧಿಪತಿಗಳಬಹುದು.

ಈಗ ಬಹುತೇಕ ಮಂದಿ ದುಡಿಯುವವರೇ. ಇದರಲ್ಲಿ ಬಹುಪಾಲು ಮಂದಿ ದೊಡ್ಡದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಾಕಷ್ಟು ಹಣವನ್ನೂ ಗಳಿಸುತ್ತಿದ್ದಾರೆ. ಕೆಲವು ವರ್ಗದವರ ಆದಾಯ ಬಹುತೇಕ 1 ಕೋಟಿ ರೂ. ಹತ್ತಿರವೂ ಇದೆ. ತಿಂಗಳಿಗೆ 25 ರಿಂದ 30,000 ರೂಪಾಯಿ ಸಂಬಳ ಪಡೆಯುವವರಿಗೆ ಕೋಟ್ಯಾಧಿಪತಿ ಆಗುವ ಕನಸಿದೆ. ಆದರೆ ಇದು ಅಸಾಧ್ಯ ಎಂದು ಬಹುತೇಕ ಮಂದಿ ಕೈಚೆಲ್ಲುತ್ತಾರೆ. ಆದರೆ ಸರಿಯಾದ ಹಣಕಾಸು ಯೋಜನೆಯನ್ನು ರೂಪಿಸಿದರೆ ಇಂದಿನ ಕಾಲದಲ್ಲಿ ಕೋಟ್ಯಾಧಿಪತಿಯಾಗುವುದು ಕಷ್ಟವೇನಲ್ಲ.

ಕೋಟ್ಯಧಿಪತಿಗಳಾಗುವುದು ಇಂದಿನ ಕಾಲದಲ್ಲಿ ಕಷ್ಟವಲ್ಲ. ಇದಕ್ಕಾಗಿ ಅನೇಕ ಹೂಡಿಕೆಯ ವಿಧಾನಗಳಿವೆ. ಅದರ ಮೂಲಕ ಕಡಿಮೆ ಸಂಬಳ ಪಡೆಯುವ ಜನರೂ ಕೋಟ್ಯಾಧಿಪತಿಯಾಗುವ ತಮ್ಮ ಕನಸನ್ನು ನನಸಾಗಿಸಬಹುದು.
ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್ ಐಪಿ ನಿಮ್ಮ ಕೋಟ್ಯಾಧಿಪತಿಯಾಗುವ ಕನಸನ್ನು ನನಸು ಮಾಡಬಹುದು. ಎಸ್ ಐಪಿ ಮಾಸಿಕ 30,000 ರೂಪಾಯಿಗಳನ್ನು ಗಳಿಸುವ ವ್ಯಕ್ತಿಯನ್ನು ಸಹ ಕೋಟ್ಯಾಧಿಪತಿಯನ್ನಾಗಿ ಮಾಡುತ್ತದೆ.

ಎಸ್ ಐ ಪಿ ಹೇಗೆ ಪ್ರಯೋಜನಕಾರಿ?

ಮ್ಯೂಚುವಲ್ ಫಂಡ್‌ಗಳು ಎಸ್ ಐ ಪಿ ಮಾರುಕಟ್ಟೆ- ಸಂಯೋಜಿತ ಯೋಜನೆಯಾಗಿದೆ. ಆದ್ದರಿಂದ ಅದರಲ್ಲಿ ಲಾಭದ ಗ್ಯಾರಂಟಿ ಇಲ್ಲ. ಆದರೆ ನೇರವಾಗಿ ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಹೋಲಿಸಿದರೆ ಅಪಾಯವು ಕಡಿಮೆ. ದೀರ್ಘಾವಧಿಯಲ್ಲಿ ಅದರ ಸರಾಸರಿ ಆದಾಯವು ಸುಮಾರು ಶೇ. 12ರಷ್ಟು ಇದೆ ಎಂದು ತಜ್ಞರು ಹೇಳುತ್ತಾರೆ.


ಇದು ಯಾವುದೇ ಇತರ ಯೋಜನೆಗಳಿಗಿಂತ ಹೆಚ್ಚು ಲಾಭಕರ. ಕೆಲವೊಮ್ಮೆ ಅದರಿಂದ ಉತ್ತಮ ಆದಾಯ ಪಡೆಯುವ ಅವಕಾಶವಿರುತ್ತದೆ. ಈ ಸಂಯೋಜನೆಯಿಂದಾಗಿ ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವು ವೇಗವಾಗಿ ಬೆಳೆಯುತ್ತದೆ. ಆದ್ದರಿಂದ, ಇಂದಿನ ಸಮಯದಲ್ಲಿ ಜನರು ಇದನ್ನು ಲಾಭದಾಯಕ ವ್ಯವಹಾರವೆಂದು ಪರಿಗಣಿಸುತ್ತಾರೆ ಮತ್ತು ಹೆಚ್ಚಿನ ತಜ್ಞರು ಅದನ್ನು ಪೋರ್ಟ್ ಫೋಲಿಯೋದಲ್ಲಿ ಸೇರಿಸಲು ಹೇಳುತ್ತಾರೆ.

ಮಿಲಿಯನೇರ್ ಆಗುವುದು ಹೇಗೆ?

ತಿಂಗಳಿಗೆ 30,000 ರೂ. ಸಂಬಳ ಪಡೆಯುವವರೂ ಮಿಲಿಯನೇರ್ ಆಗಬಹುದು. ಇದಕ್ಕಾಗಿ 50- 30- 20 ನಿಯಮವನ್ನು ಅನುಸರಿಸಬೇಕು. ಅಂದರೆ ಆದಾಯದ ಶೇ. 20ರಷ್ಟನ್ನು ಎಸ್ ಐ ಪಿಯಲ್ಲಿ ಹೂಡಿಕೆ ಮಾಡಬೇಕು. 30,000 ರೂ. ಶೇ. 20ರಷ್ಟು ಎಂದರೆ 6,000 ರೂ. ಆಗಿರುತ್ತದೆ. ಎಸ್ ಐಪಿಯಲ್ಲಿ ಪ್ರತಿ ತಿಂಗಳು 6,000 ರೂ. ಹೂಡಿಕೆ ಮಾಡಿದರೆ 24 ವರ್ಷಗಳಲ್ಲಿ ಕೋಟ್ಯಧಿಪತಿ ಆಗಬಹುದು.

ಇದನ್ನೂ ಓದಿ: GST Council Meet : ನಕಲಿ ಬಿಲ್​ ತಡೆಗೆ ಬಯೋಮೆಟ್ರಿಕ್​ ವ್ಯವಸ್ಥೆ; ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಹಲವು ನಿರ್ಧಾರಗಳು ಪ್ರಕಟ

24 ವರ್ಷಗಳಲ್ಲಿ ಒಟ್ಟು 17,28,000 ರೂ. ಅಂದರೆ ಶೇ.12ರಷ್ಟು ಬಡ್ಡಿ ದರದಲ್ಲಿ 83,08,123 ರೂ. ಆಗುತ್ತದೆ. ಸಮಯದೊಂದಿಗೆ ಆದಾಯವೂ ಹೆಚ್ಚಾಗುವುದರಿಂದ ಹೂಡಿಕೆಯನ್ನು ಹೆಚ್ಚಿಸಿ 24 ವರ್ಷಗಳಲ್ಲಿ 1,00,36,123 ರೂ. ಗಳಿಸಿ 24 ವರ್ಷಗಳ ಮುಂಚೆಯೇ ಮಿಲಿಯನೇರ್ ಆಗಬಹುದು!

Exit mobile version