Site icon Vistara News

Money Guide: ಎಫ್‌ಡಿ V/S ಆರ್‌ಡಿ; ಯಾವುದು ಉತ್ತಮ? ಯಾವುದರಲ್ಲಿ ಹೂಡಿಕೆ ಮಾಡಬೇಕು?

Money Guide

Money Guide

ಬೆಂಗಳೂರು: ಇಂದಿನ ಉಳಿತಾಯವೇ ನಾಳೆಯ ಆದಾಯ ಎನ್ನುವ ಮಾತಿದೆ. ಅಂದರೆ ನಾವು ಎಷ್ಟು ಉಳಿತಾಯ ಮಾಡುತ್ತೇವೆಯೋ ಭವಿಷ್ಯದಲ್ಲಿ ಅಷ್ಟು ನೆಮ್ಮದಿ ಇರುತ್ತದೆ ಎನ್ನುವುದು ಇದಕ್ಕೆ ಕಾರಣ. ಇದಕ್ಕಾಗಿಯೇ ಆರ್ಥಿಕ ತಜ್ಞರು ಉಳಿತಾಯದತ್ತ ಗಮನ ಹರಿಸುವಂತೆ ಸಲಹೆ ನೀಡುತ್ತಾರೆ. ಉಳಿತಾಯವು ಅನಿರೀಕ್ಷಿತ ಆಘಾತ, ಆರ್ಥಿಕ ಸಮಸ್ಯೆಗಳಿಂದ ನಿಮ್ಮನ್ನು ಕುಗ್ಗದಂತೆ ಕಾಪಾಡುತ್ತದೆ. ಹೀಗಾಗಿ ನೀವು ಭವಿಷ್ಯದ ದೃಷ್ಟಿಯಿಂದ ವಿವಿಧ ಯೋಜನೆಗಳಲ್ಲಿ ನಿಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಈ ಪೈಕಿ ನಿಶ್ಚಿತ ಠೇವಣಿ (Fixed Deposits) ಮತ್ತು ರಿಕರಿಂಗ್‌ ಠೇವಣಿ (Recurring Deposits) ಪ್ರಮುಖವಾದುದು. ಹಾಗಾದರೆ ಈ ಎರಡು ಯೋಜನೆಗಳ ವೈಶಿಷ್ಟ್ಯಗಳೇನು ಎನ್ನುವುದನ್ನು ನೋಡೋಣ (Money Guide).

ಎಫ್‌ಡಿ ಮತ್ತು ಆರ್‌ಡಿ ಇವೆರಡೂ ಭಾರತದಲ್ಲಿನ ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಗಳು ಎನಿಸಿಕೊಂಡಿವೆ. ವಿಶೇಷವಾಗಿ ಯಾವುದೇ ರಿಸ್ಕ್‌ಗಳನ್ನು ತೆಗೆದುಕೊಳ್ಳದೆ ಇರುವ ಹೂಡಿಕೆದಾರರಿಗೆ ಇವು ಉತ್ತಮ ಆಯ್ಕೆ. ಇದರಿಂದ ಯಾವುದೇ ಅಪಾಯವಿಲ್ಲದೆ ಸ್ಥಿರ ಆದಾಯವನ್ನು ಗಳಿಸಬಹುದು ಎನ್ನುವ ಕಾರಣಕ್ಕೆ ಇದನ್ನು ಬಹುತೇಕರು ನೆಚ್ಚಿಕೊಂಡಿದ್ದಾರೆ.

ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. 

ರಿಕರಿಂಗ್ ಡೆಪಾಸಿಟ್ ಯೋಜನೆಯಲ್ಲಿ ನೀವು ನಿರ್ದಿಷ್ಟ ಮೊತ್ತಗಳನ್ನು ಠೇವಣಿ ಇಡಬಹುದು. ಇದು 6 ತಿಂಗಳಿಂದ 10 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯಲ್ಲಿರಬಹುದು. ರಿಕರಿಂಗ್ ಡೆಪಾಸಿಟ್‌ನಲ್ಲಿ ನೀವು ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತವು ಸಾಮಾನ್ಯವಾಗಿ ಕೇವಲ ರೂ. 100 ಅಥವಾ ಅದಕ್ಕೂ ಕಡಿಮೆ ಇರುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಬಡ್ಡಿಯೊಂದಿಗೆ ಅಸಲನ್ನು ಪಡೆಯಬಹುದು.

ಎಫ್‌ಡಿಯ ವೈಶಿಷ್ಟ್ಯ

ಆರ್‌ಡಿಯ ವೈಶಿಷ್ಟ್ಯ

ಯಾವುದು ಉತ್ತಮ?

ಮೊದಲೇ ಹೇಳಿದಂತೆ ಎಫ್‌ಡಿ ಮತ್ತು ಆರ್‌ಡಿ ಎರಡೂ ಉತ್ತಮ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಎಫ್‌ಡಿಯಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿರಬೇಕಾಗುತ್ತದೆ. ಆದರೆ ಮಾಸಿಕ ಆದಾಯದಿಂದ ಸಣ್ಣ ಭಾಗವನ್ನು ಹೂಡಿಕೆ ಮಾಡುವವರಿಗೆ ಆರ್‌ಡಿ ಉತ್ತಮ. ಆರ್‌ಡಿ ಮತ್ತು ಎಫ್‌ಡಿ ಎರಡೂ ಕಡಿಮೆ ತೆರಿಗೆ ಸ್ಲ್ಯಾಬ್‌ನಲ್ಲಿರುವ ರಿಸ್ಕ್‌ಗಳನ್ನು ತೆಗೆದುಕೊಳ್ಳದ ಹೂಡಿಕೆದಾರರಿಗೆ ಹೆಚ್ಚು ಸೂಕ್ತವಾಗಿವೆ. ನಿಮಗೆ ಯಾವುದು ಉತ್ತಮ ಎಂಬುದು ನಿಮ್ಮ ಆರ್ಥಿಕ ಗುರಿಗಳು ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ. ನೀವು ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿದ್ದರೆ ಮತ್ತು ದ್ರವ್ಯತೆ ಅಗತ್ಯವಿಲ್ಲದಿದ್ದರೆ ಎಫ್‌ಡಿ ಸೂಕ್ತವಾಗಬಹುದು. ಮತ್ತೊಂದೆಡೆ ನೀವು ನಿಯಮಿತವಾಗಿ ಉಳಿತಾಯ ಮಾಡಲು ಮತ್ತು ದ್ರವ್ಯತೆಗೆ ಆದ್ಯತೆ ನೀಡಲು ಬಯಸಿದರೆ ಆರ್‌ಡಿ ಉತ್ತಮ ಆಯ್ಕೆಯಾಗಿದೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸುವುದು ಮತ್ತು ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Exit mobile version