ನ್ಯಾಶನಲ್ ಪೆನ್ಷನ್ ಸಿಸ್ಟಮ್‌ಗೆ (National Pension System -NPS) ಸಂಬಂಧಿಸಿ ಹೊಸ ನಿಯಮಾವಳಿಗಳು 2024ರ ಫೆಬ್ರವರಿಯಿಂದ ಜಾರಿಯಾಗಿದೆ. ಅದರ ಪ್ರಕಾರ ಹೂಡಿಕೆದಾರರು (Money Guide) ನಿರ್ದಿಷ್ಟ ಕಾರಣಗಳಿಗೆ ಎನ್‌ಪಿಎಸ್‌ನಿಂದ ಹೂಡಿಕೆಯನ್ನು ಭಾಗಶಃ ಹಿಂತೆಗೆದುಕೊಳ್ಳಬಹುದು. ಈ ಸಂಬಂಧ 2024ರ ಜನವರಿ 12ರಂದು ಪಿಎಫ್‌ಆರ್‌ಡಿಎ ಸುತ್ತೋಲೆ ಹೊರಡಿಸಿತ್ತು. ಹೂಡಿಕೆದಾರರು ಉನ್ನತ ಶಿಕ್ಷಣ, ವಿವಾಹ, ಮನೆ ಖರೀದಿ, ವೈದ್ಯಕೀಯ ವೆಚ್ಚದ ಸಲುವಾಗಿ ಎನ್‌ಪಿಎಸ್‌ನಿಂದ ಭಾಗಶಃ ಹೂಡಿಕೆ ಹಿಂತೆಗೆತ ಮಾಡಿಕೊಳ್ಳಬಹುದು. ಹೊಸ ನಿಯಮಗಳೇನು? ಇದಕ್ಕೆ ಯಾರು ಅರ್ಹರು? ಇದು ಉತ್ತಮ ಡೀಲ್ ಆಗಬಹುದೇ? ಅಥವಾ ನಿವೃತ್ತಿ ಉಳಿತಾಯವನ್ನು ಭಾಗಶಃ ವಿತ್ ಡ್ರಾವಲ್ ಮಾಡದೆ ಉಳಿಸುವುದು ಸೂಕ್ತವೇ?
2024ರ ಫೆಬ್ರವರಿ 1 ರಿಂದ ಎನ್‌ಪಿಎಸ್ ಹೂಡಿಕೆದಾರರು ತಮ್ಮ ಪಿಂಚಣಿ ಖಾತೆ ಮೂರು ವರ್ಷಗಳನ್ನು ಪೂರ್ಣಗೊಳಿಸಿದ್ದರೆ, ಭಾಗಶಃ ಹಿಂತೆಗೆದುಕೊಳ್ಳಬಹುದು. ಆದರೆ ಹಿಂತೆಗೆತಕ್ಕೆ ನಿರ್ದಿಷ್ಟ ಮಿತಿ ಇರುತ್ತದೆ. ಎನ್‌ಪಿಎಸ್ ಖಾತೆದಾರರು ತಮ್ಮ ಕಾಂಟ್ರಿಬ್ಯೂಷನ್‌ನ 25% ತನಕ ವಿತ್ ಡ್ರಾವಲ್ ಮಾಡಬಹುದು. ಆದರೆ ಉದ್ಯೋಗದಾತರು ಅಥವಾ ಎಂಪ್ಲಾಯರ್ ನೀಡುವ ಪಾಲಿನಿಂದ ವಿತ್ ಡ್ರಾವಲ್ ಮಾಡುವಂತಿಲ್ಲ. ಹಾಗೆಯೇ ಕಾಂಟ್ರಿಬ್ಯೂಷನ್‌ಗೆ ಪ್ರತಿಯಾಗಿ ಸಿಗುವ ರಿಟರ್ನ್ ಅನ್ನು ಕೂಡ ಭಾಗಶಃ ವಿತ್ ಡ್ರಾವಲ್ ಮಾಡುವಂತಿಲ್ಲ.
ಇದನ್ನೂ ಓದಿ: Intelligent Birds: Most Intelligent Birds In The World
ಇಲ್ಲೊಂದು ಉದಾಹರಣೆ ನೋಡೋಣ. ನೀವು ಎನ್‌ಪಿಎಸ್‌ನಲ್ಲಿ 4 ಲಕ್ಷ ರೂ. ಹೂಡಿಕೆ ಮಾಡಿದ್ದೀರಿ ಹಾಗೂ ಅದು 10 ಲಕ್ಷ ರೂ.ಗೆ ಬೆಳೆದಿದೆ ಎಂದು ಭಾವಿಸಿ. ನಿಯಮಗಳ ಪ್ರಕಾರ ನೀವು 4 ಲಕ್ಷ ರೂ.ಗಳ 25% ಅಂದರೆ 1 ಲಕ್ಷ ರೂ. ವಿತ್ ಡ್ರಾವಲ್ ಮಾಡಬಹುದು. ಇಡೀ 10 ಲಕ್ಷ ರೂ.ಗಳನ್ನು ವಿತ್ ಡ್ರಾವಲ್ ಮಾಡುವಂತಿಲ್ಲ.
ಕೆಳಕಂಡ ಉದ್ದೇಶಗಳಿಗೆ ಎನ್‌ಪಿಎಸ್ ಭಾಗಶಃ ವಿತ್ ಡ್ರಾವಲ್ಸ್ ಸಾಧ್ಯ:
- 1. ಮಕ್ಕಳ ಉನ್ನತ ಶಿಕ್ಷಣ
- 2. ಮಕ್ಕಳ ವಿವಾಹ
- 3. ಮೊದಲ ಮನೆ ಖರೀದಿ
- 4. ನಿರ್ದಿಷ್ಟ ಕಾಯಿಲೆಗಳಿಗೆ ಚಿಕಿತ್ಸೆ, ಆಸ್ಪತ್ರೆ ಖರ್ಚು ವೆಚ್ಚ, ಕ್ಯಾನ್ಸರ್, ಕಿಡ್ನಿ ವೈಫಲ್ಯ ಇತ್ಯಾದಿ ಕಾಯಿಲೆಗೆ ಚಿಕಿತ್ಸೆ.
- 5. ಕೌಶಲ ಕಲಿಕೆ, ತರಬೇತಿಗೆ
- 6. ಸ್ಟಾರ್ಟಪ್, ಹೊಸ ಬಿಸಿನೆಸ್
- ಹಾಗಾದರೆ ಎಷ್ಟು ಸಲ ಹೂಡಿಕೆದಾರರು ಭಾಗಶಃ ವಿತ್ ಡ್ರಾವಲ್ ಮಾಡಬಹುದು. ಇಡೀ ಅವಧಿಯಲ್ಲಿ ಮೂರು ಸಲ ವಿತ್ ಡ್ರಾವಲ್ ಮಾಡಬಹುದು. ವಿತ್ ಡ್ರಾವಲ್ ರಿಕ್ವೆಸ್ಟ್ ಹಾಗೂ ಸೆಲ್ಫ್ ಡಿಕ್ಲರೇಶನ್ ಅನ್ನು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಗೆ ಸಲ್ಲಿಸಬೇಕು. ಭಾಗಶಃ ಎನ್‌ಪಿಎಸ್ ವಿತ್ ಡ್ರಾವಲ್‌ಗೆ ತೆರಿಗೆ ಇರುವುದಿಲ್ಲ.
ಭಾಗಶಃ ವಿತ್ ಡ್ರಾವಲ್ಸ್ ಸೂಕ್ತವೇ?: ಎನ್‌ಪಿಎಸ್ ಅನ್ನು ನಿವೃತ್ತಿಯ ಕಾಲಕ್ಕೆ ಗರಿಷ್ಠ ಮಟ್ಟದ ಉಳಿತಾಯವನ್ನು ಸಾಧಿಸಲು ಸೂಕ್ತವಾಗುವಂತೆ ರೂಪಿಸಲಾಗಿದೆ. ಆದ್ದರಿಂದ ಭಾಗಶಃ ವಿತ್ ಡ್ರಾವಲ್ ಮಾಡಿದರೆ, ಆ ಉದ್ದೇಶಕ್ಕೆ ಅಡಚಣೆಯಾಗಬಹುದು. ಹೀಗಾಗಿ ತೀರಾ ಅಗತ್ಯ ಇದ್ದರೆ ಮಾತ್ರ ಭಾಗಶಃ ವಿತ್ ಡ್ರಾವಲ್ ಮಾಡಿರಿ.