Site icon Vistara News

Money Guide: ಸಾಲಕ್ಕಾಗಿ ಅಲೆದಾಡುತ್ತಿದ್ದೀರಾ? ಚಿಂತೆ ಬಿಡಿ; ಮನೆಯಲ್ಲೇ ಕೂತು ಎಲ್‌ಐಸಿಯಿಂದ ಲೋನ್‌ ಪಡೆಯಿರಿ

Money Guide

Money Guide

ಬೆಂಗಳೂರು: ಮಿತಿ ಮೀರಿದ ಜೀವನ ವೆಚ್ಚ, ಬೆಲೆ ಏರಿಕೆ ಮುಂತಾದ ಕಾರಣಗಳಿಂದ ಪ್ರಸ್ತುತ ಮಧ್ಯಮ ವರ್ಗದ ಪ್ರತಿಯೊಬ್ಬರು ಒಂದಲ್ಲ ಒಂದು ಕಾರಣಕ್ಕೆ ಸಾಲದ ಮೊರೆ ಹೋಗಲೇ ಬೇಕಾಗುತ್ತದೆ. ಯಾವುದೇ ಸಾಲ ಮಾಡದೆ ಜೀವನ ಸಾಗಿಸುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಆದರೆ ಬ್ಯಾಂಕ್‌ನಿಂದ ಪರ್ಸನಲ್‌ ಲೋನ್‌ (Personal loan) ತೆಗೆದುಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಇನ್ನು ಖಾಸಗಿಯಾಗಿ ಸಾಲ ಪಡೆದುಕೊಂಡರೆ ಬಡ್ಡಿ, ಚಕ್ರಬಡ್ಡಿ ಸೇರಿ ಅಸಲಿಗಿಂತ ಬಡ್ಡಿ ಕಟ್ಟುವಾಗಲೇ ಹೈರಾಣಾಗಬೇಕಾಗುತ್ತದೆ. ಹೀಗಾಗಿ ಇದಕ್ಕೇನು ಪರಿಹಾರ ಎಂಬ ಗೊಂದಲ ಮೂಡುವುದು ಸಹಜ. ಇಂದಿನ ಮನಿಗೈಡ್‌ (Money Guide)ನಲ್ಲಿ ಈ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಇದೆ ಉತ್ತರ.

ಎಲ್‌ಐಸಿ ಪಾಲಿಸಿ ಇದ್ದರೆ ಸಾಕು

ನಿಮ್ಮ ಬಳಿ ಎಲ್‌ಐಸಿ ಪಾಲಿಸಿ ಇದ್ದರೆ ಸಾಕು. ಸಾಲ ಸುಲಭವಾಗಿ ದೊರೆಯುತ್ತದೆ. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರಿಡೀ ಅಲೆಯಬೇಕಾಗಿಲ್ಲ. ಗೋಲ್ಡ್ ಲೋನ್‌ ಸಂದರ್ಭದಲ್ಲಿ ನೀವು ಸೆಕ್ಯೂರಿಟಿ ರೂಪದಲ್ಲಿ ಚಿನ್ನಾಭರಣ ಇಡುವಂತೆ ಇಲ್ಲಿ ನಿಮ್ಮ ಎಲ್ಐಸಿ ಪಾಲಿಸಿ ಇಟ್ಟರೆ ಸಾಕು. ಒಂದು ವೇಳೆ ಸಾಲ ಕಟ್ಟಲು ಸಾಧ್ಯವಾಗದೇ ಇದ್ದಲ್ಲಿ ಸಂಸ್ಥೆ ಎಲ್ಐಸಿ ಪಾಲಿಸಿಯಲ್ಲಿರುವ ಹಣವನ್ನು ಕಡಿತಗೊಳಿಸುತ್ತದೆ. ಸಾಮಾನ್ಯವಾಗಿ ನಿಮ್ಮ ಪಾಲಿಸಿಯ ಮೌಲ್ಯದ 90 ಪ್ರತಿಶತ ಹಣ ಸಾಲದ ರೂಪದಲ್ಲಿ ಲಭಿಸುತ್ತದೆ.

ಅರ್ಹತೆಗಳೇನು?

ಎಲ್‌ಐಸಿ ಸಾಲ ಪಡೆಯಲು ನೀವು ಕನಿಷ್ಠ ಪಕ್ಷ ಮೂರು ವರ್ಷಗಳ ಪ್ರೀಮಿಯಂ ಕಟ್ಟಿರಬೇಕು. ಎಲ್ಐಸಿ ಗ್ರಾಹಕರು ಮಾತ್ರ ಈ ಲೋನ್ ಪಡೆದುಕೊಳ್ಳಬಹುದಾಗಿದ್ದು, ಅವರ ಪಾಲಿಸಿ ಲೋನ್ ಅರ್ಹತೆಯನ್ನು ಹೊಂದಿರುವುದು ಮುಖ್ಯ. ಎಲ್ಐಸಿ ಮೂಲಕ ಲೋನ್ ಪಡೆದುಕೊಳ್ಳುವವರಿಗೆ ವಾರ್ಷಿಕ 9 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. ಜತೆಗೆ ಬಡ್ಡಿದರವನ್ನು ಎಲ್ಐಸಿ ಪಾಲಿಸಿಯ ಪ್ರೊಫೈಲ್ ಮೇಲೆ ನಿರ್ಧರಿಸಲಾಗುತ್ತದೆ. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು. ಸಾಲದ ಮರುಪಾವತಿಯ ಅವಧಿ ಕನಿಷ್ಠ ಆರು ತಿಂಗಳಿಂದ ಪ್ರಾರಂಭಿಸಿ ಗರಿಷ್ಠ ಐದು ವರ್ಷಗಳವರೆಗೆ ಇರುತ್ತದೆ. ಒಂದು ವೇಳೆ ಸಾಲದ ಮೊತ್ತವನ್ನು ಮರುಪಾವತಿ ಮಾಡುವ ಮುನ್ನವೇ ಪಾಲಿಸಿಯು ಮೆಚ್ಯೂರ್ ಆದರೆ ಸಾಲದ ಬಾಕಿಯನ್ನು ಕಡಿತ ಮಾಡಿ ಉಳಿದ ಮೊತ್ತ ನೀಡಲಾಗುತ್ತದೆ.

ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವುದು ಹೇಗೆ?

ವಿಶೇಷ ಎಂದರೆ ಆಫ್‌ಲೈನ್‌ ಮತ್ತು ಆನ್‌ಲೈನ್‌ ಎರಡೂ ವಿಧಾನಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಆಫ್‌ಲೈನ್‌

ನೀವು ಪಾಲಿಸಿ ಹೊಂದಿರುವ ಎಲ್ಐಸಿ ಶಾಖೆಗೆ ತೆರಳಿ ಸಾಲಕ್ಕಾಗಿ ಇರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಪ್ಲಿಕೇಷನ್‌ ಫಾರಂ ಜತೆಗೆ ಪಾಲಿಸಿ ಬಾಂಡ್ ಮತ್ತು ಇತರ ದಾಖಲೆಗಳನ್ನು ಸಲ್ಲಿಸಿ. 3ರಿಂದ 5 ದಿನಗಳಲ್ಲಿ ನಿಮ್ಮ ಸಾಲ ಮಂಜೂರಾಗುತ್ತದೆ.

ಆನ್‌ಲೈನ್‌

ಇದನ್ನೂ ಓದಿ: Money Guide: ನಿಮ್ಮ ಸಮಸ್ಯೆಗೆ ಬ್ಯಾಂಕ್‌ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆ? ಆರ್‌ಬಿಐಗೆ ಹೀಗೆ ದೂರು ನೀಡಿ

Exit mobile version