Site icon Vistara News

Money Guide: ಆನ್‌ಲೈನ್‌ ಸಾಲದ ವಂಚನೆಯ ಕೂಪಕ್ಕೆ ಬೀಳದಿರಲು ಏನು ಮಾಡಬೇಕು?

loan new

loan new

ಬೆಂಗಳೂರು: ಪ್ರಸ್ತುತ ನಮ್ಮ ಕನಸುಗಳನ್ನು ಈಡೇರಿಸಲು ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ. ಮನೆ ನಿರ್ಮಾಣ, ವಾಹನ ಖರೀದಿ, ಕೃಷಿ ಚಟುವಟಿಕೆ ಹೀಗೆ ಮಧ್ಯಮ ವರ್ಗದ ಜನರು ವಿವಿಧ ಕಾರಣಗಳಿಗೆ ಸಾಲದತ್ತ ಮುಖ ಮಾಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ವಂಚಕರು ಆನ್‌ಲೈನ್‌ ಲೋನ್‌ ಹೆಸರಿನಲ್ಲಿ ದುಡ್ಡು ದೋಚುತ್ತಾರೆ. ಹಾಗಾದರೆ ಇಂತಹ ಮೋಸದ ಜಾಲದಿಂದ (Loan Scam) ಹೇಗೆ ಪಾರಾಗಬಹುದು ಎನ್ನುವುದರ ವಿವರ ಮನಿಗೈಡ್‌ (Money Guide)ನಲ್ಲಿದೆ.

ನಮ್ಮ ಅನಿವಾರ್ಯತೆಯನ್ನು ದುರುಪಯೋಗಿಸಿಕೊಂಡು ಅಂತಹ ಕಂಪೆನಿಗಳು ದುಡ್ಡು ದೋಚುತ್ತವೆ. ಹೆಚ್ಚಿನ ಮುಂಗಡ ಶುಲ್ಕಗಳು, ಅವಾಸ್ತವಿಕ ಬಡ್ಡಿದರಗಳು ಮತ್ತು ಷರತ್ತುಗಳ ಹೆಸರಿನಲ್ಲಿ ಹಗಲು ದರೋಡೆಗೆ ಇಳಿಯುತ್ತವೆ. ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಪ್ಲಾಟ್‌ಫಾರ್ಮ್‌ ಫೋನ್‌ ಪೇ ಇಂತಹ ಸಾಲಗಳಿಂದ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದೆ.

ಸಾಲದ ಹೆಸರಿನಲ್ಲಿ ಮೋಸ

ಲೋನ್‌ ಸ್ಕ್ಯಾಮ್‌ ಎಂದು ಕರೆಯಲಾಗುವ ಈ ವಂಚನೆಯ ಜಾಲ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ನೋಡೋಣ: ನೀವು ಬಯಸಿದ ಸಾಲವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯಬಹುದು ಎಂಬ ವಂಚಕರು ಸುಳ್ಳು ಭರವಸೆ ನೀಡುತ್ತಾರೆ. ಉದಾಹರಣೆಗೆ ನೀವು ಬ್ಯಾಂಕ್‌ನಿಂದ ಸಾಲ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ (CIBIL Score) ಹೊಂದಿಲ್ಲದಿದ್ದರೆ ಅಥವಾ ಬಹಳ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣದ ಅಗತ್ಯವಿದ್ದರೆ ಆ ಸಂದರ್ಭವನ್ನು ವಂಚಕರು ಬಳಸಿಕೊಳ್ಳುತ್ತಾರೆ. ಕೆಲವೇ ನಿಮಿಷಗಳಲ್ಲಿ ಸಾಲ ನೀಡುತ್ತೇವೆ ಎಂದು ನಂಬಿಸುತ್ತಾರೆ.

ಈ ಮೋಸದ ಜಾಲ ಮುಖ್ಯವಾಗಿ ಎರಡು ರೀತಿಯಲ್ಲಿ ನಡೆಯುತದೆ. ವಂಚಕರು ಭದ್ರತೆಯಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಮುಂಗಡವಾಗಿ ಕೇಳುತ್ತಾರೆ. ಅದನ್ನು ಎಂದಿಗೂ ಹಿಂದಿರುಗಿಸಲಾಗುವುದಿಲ್ಲ. ಜತೆಗೆ ಪ್ರೊಸೆಸಿಂಗ್‌ ಶುಲ್ಕ, ವಿಳಂಬ ಶುಲ್ಕ, ಬಡ್ಡಿ ಮತ್ತಿತರ ಹೆಸರಿನಲ್ಲಿ ದೊಡ್ಡ ಮೊತ್ತವನ್ನು ಪಡೆಯುತ್ತಾರೆ. ಭಾರೀ ಮೊತ್ತದ ನಷ್ಟವಾಗುತ್ತದೆ.

ಹೇಗೆ ಸಂಪರ್ಕಿಸುತ್ತಾರೆ?

ವಂಚಕರು ನಿಮ್ಮನ್ನು ಎಸ್ಎಂಎಸ್, ಇಮೇಲ್ ಅಥವಾ ಫೋನ್ ಮೂಲಕ ಸಂಪರ್ಕಿಸುತ್ತಾರೆ. ನಿಮ್ಮ ವಿವರಗಳನ್ನು ಭರ್ತಿ ಮಾಡಲು ಮತ್ತು ತ್ವರಿತ ಲೋನ್ ಅನುಮೋದನೆ ಪಡೆಯಲು ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಲು ಪದೇ ಪದೆ ಒತ್ತಾಯಿಸುತ್ತಾರೆ. ಒಂದು ವೇಳೆ ನೀವು ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿದ್ದೀರಿ ಅಂತಿಟ್ಟುಕೊಳ್ಳೋಣ. ನಿಮ್ಮ ಸಂಪೂರ್ಣ ಸಂಪರ್ಕ ಪಟ್ಟಿ, ಫೋಟೊ ಮತ್ತು ವೀಡಿಯೊಗಳಿಗೆ ಅಕ್ಸೆಸ್‌ ಕೇಳುತ್ತದೆ. ಇನ್ನು ನೀವು ಆಧಾರ್, ಪ್ಯಾನ್, ವಿಳಾಸ ಮತ್ತು ನಿಮಗೆ ಅಗತ್ಯವಿರುವ ಮೊತ್ತದಂತಹ ಮೂಲ ವಿವರಗಳನ್ನು ಭರ್ತಿ ಮಾಡಿದ ಕೂಡಲೇ ನಿಮ್ಮ ಖಾತೆಗೆ ನಗದು ಕ್ರೆಡಿಟ್ ಆಗುತ್ತದೆ.

ಮೊದಲೇ ಹೇಳಿದಂತೆ ಈ ಸಾಲಗಳನ್ನು ಸಂಕೀರ್ಣ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿರುತ್ತವೆ. ಅದನ್ನು ಮೊದಲೇ ತಿಳಿಸಲಾಗುವುದಿಲ್ಲ. ಕಡಿಮೆ ಬಡ್ಡಿದರದ ಭರವಸೆಯೊಂದಿಗೆ ಮೋಸಗೊಳಿಸುತ್ತಾರೆ. ನಂತರ ಕಡಿಮೆ ಬಡ್ಡಿದರವು ಸೀಮಿತ ಅವಧಿಗೆ ಮಾತ್ರ ಎಂದು ವರಾತ ಬದಲಾಯಿಸುತ್ತಾರೆ. ಅದರ ನಂತರ ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ. ಗಮನಿಸಿ ಇದನ್ನು ಮೊದಲೇ ಉಲ್ಲೇಖಿಸುವುದಿಲ್ಲ.

ಇದನ್ನೂ ಓದಿ: Money Guide: ಆಧಾರ್‌ ಅಪ್‌ಡೇಟ್‌ನಿಂದ ಎಫ್‌ಡಿ ಹೂಡಿಕೆವರೆಗೆ; ತಿಂಗಳಾಂತ್ಯಕ್ಕೆ ಮುಗಿಸಲೇಬೇಕಾದ ಕೆಲಸಗಳಿವು

ಹೊಡೆತದ ಮೇಲೆ ಹೊಡೆತ

ಹೆಚ್ಚಿನ ಬಡ್ಡಿದರಗಳ ಜತೆಗೆ ಸಾಲಗಳನ್ನು ಮರುಪಾವತಿಸದಿರುವುದಕ್ಕೆ ಪ್ರತಿದಿನ ಭಾರೀ ದಂಡವನ್ನು ವಿಧಿಸುತ್ತವೆ. ಅದಕ್ಕೆ ಹೆಚ್ಚಿನ ಪ್ರೊಸೆಸಿಂಗ್‌ ಶುಲ್ಕ ಸೇರಿದಂತೆ ಇತರ ದಂಡಗಳನ್ನು ಸೇರಿಸುತ್ತಾರೆ. ಮಾತ್ರವಲ್ಲ ಈ ಅಪ್ಲಿಕೇಷನ್‌ಗಳು ನಿಮ್ಮ ಫೋನ್‌ನ ಎಲ್ಲ ಮಾಹಿತಿಗಳನ್ನು ಕದ್ದು ಬ್ಲ್ಯಾಕ್‌ ಮೇಲ್‌ ಮಾಡುವ ಸಾಧ್ಯತೆಯೂ ಇದೆ. ಸಾಲ ವಸೂಲಾತಿ ಏಜೆಂಟರು ನಿರಂತರ ಕಿರುಕುಳ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದೇ ಕಾರಣದಿಂದ ಇತ್ತೀಚೆಗೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.

ನೀವೇನು ಮಾಡಬೇಕು?

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version