Site icon Vistara News

Money Guide: ಎನ್‌ಪಿಎಸ್‌ನಲ್ಲಿ ಸಿಪ್‌; ನಿವೃತ್ತಿ ಜೀವನಕ್ಕೆ ಉತ್ತಮ ಕೊಡುಗೆ; ನೋಂದಣಿಯ ಸಂಪೂರ್ಣ ವಿವರ ಇಲ್ಲಿದೆ

nps

nps

ಬೆಂಗಳೂರು: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System)ಯಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆಗಳು (Systematic Investment Plans) ಚಂದಾದಾರರಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತವೆ. ಮ್ಯೂಚುವಲ್ ಫಂಡ್‌ನಂತೆ ಇದು ಕೂಡ ಸರಾಸರಿ ಲಾಭ ಒದಗಿಸುತ್ತದೆ. ಹೀಗಾಗಿ ನಿವೃತ್ತಿ ಜೀವನದ ಆದಾಯದ ಬಗ್ಗೆ ಯೋಚಿಸುವವರು ಇದರತ್ತ ಗಮನ ಹರಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ. ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2004ರಲ್ಲಿ ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆ ಇದಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ (Money Guide).

ಕಾರ್ಯ ನಿರ್ವಹಣೆ ಹೇಗೆ?

ಎನ್‌ಪಿಎಸ್‌ ನಿರ್ದಿಷ್ಟ ಕೊಡುಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಚಂದಾದಾರರು ತಮ್ಮ ಎನ್‌ಪಿಎಸ್‌ ಖಾತೆಗೆ ನಿಯಮಿತವಾಗಿ ಕೊಡುಗೆ ನೀಡುತ್ತಾರೆ. ಈ ಕೊಡುಗೆಗಳನ್ನು ಈಕ್ವಿಟಿಗಳು, ಸರ್ಕಾರಿ ಸೆಕ್ಯುರಿಟಿಗಳು, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಪರ್ಯಾಯ ಸ್ವತ್ತುಗಳಂತಹ ವಿವಿಧ ಹಣಕಾಸು ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ನಿವೃತ್ತಿಯ ನಂತರ ಚಂದಾದಾರರು ಸಂಗ್ರಹವಾದ ಕಾರ್ಪಸ್‌ನ ಒಂದು ಭಾಗವನ್ನು ಒಟ್ಟು ಮೊತ್ತವಾಗಿ ಹಿಂಪಡೆಯಬಹುದು. ಉಳಿದ ಮೊತ್ತವನ್ನು ನಿಯಮಿತ ಪಿಂಚಣಿ ಆದಾಯವನ್ನು ಒದಗಿಸಲು ವಿನಿಯೋಗಿಸಲಾಗುತ್ತದೆ. ಎನ್‌ಪಿಎಸ್‌ ತೆರಿಗೆ ಪ್ರಯೋಜನಗಳು ಮತ್ತು ಹೂಡಿಕೆ ಆಯ್ಕೆಗಳಲ್ಲಿ ನೀಡುವ ಮೂಲಕ ಭಾರತದಲ್ಲಿ ಜನಪ್ರಿಯವಾಗಿದೆ.

ಎನ್‌ಪಿಎಸ್‌ನಲ್ಲಿ ಸಿಪ್‌ ನೋಂದಣಿ ಹೇಗೆ?

ಸಿಪ್‌ನ ಪ್ರಯೋಜನಗಳು

ಇದನ್ನೂ ಓದಿ: Money Guide: ಗಮನಿಸಿ; ಏ. 1ರಿಂದ ಎನ್‌ಪಿಎಸ್ ವಹಿವಾಟಿಗೆ ಆಧಾರ್ ದೃಢೀಕರಣ ಕಡ್ಡಾಯ: ಏನಿದು ಹೊಸ ನಿಯಮ ? ಯಾಕಾಗಿ ?

Exit mobile version