ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ನ (Reserve Bank of India-RBI) ಮಾಹಿತಿ ಪ್ರಕಾರ 2024ರ ಮೊದಲಾರ್ಧದಲ್ಲಿ 14,000ಕ್ಕಿಂತ ಹೆಚ್ಚಿನ ಬ್ಯಾಂಕಿಂಗ್ ಸಂಬಂಧಿತ ಸ್ಕ್ಯಾಮ್‌ಗಳು ನಡೆದಿದೆ. ಈ ಆತಂಕದ ನಡುವೆಯೂ ಒಂದು ಸಿಹಿ ಸುದ್ದಿ. ಸ್ಮಾರ್ಟ್ ಫೋನ್ ಮೂಲಕ ಹಣ ಪಾವತಿ ಸೌಲಭ್ಯವನ್ನು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷತೆಯಿಂದ ನಿರ್ವಹಿಸಲು ಅತ್ಯಾಧುನಿಕ ಕ್ರಮಗಳನ್ನು ಮೊಬಿಕ್ವಿಕ್ ಪಾಕೆಟ್ ಯುಪಿಐ (MobiKwik Pocket UPI) ಮೂಲಕ ಫಿನ್‌ಟೆಕ್ ಪರಿಚಯಿಸಿದೆ.
ಸ್ಕ್ಯಾಮ್‌ಗಳು ಹೆಚ್ಚಾಗುತ್ತಿರುವುದರಿಂದ ಫಿನ್‌ಟೆಕ್ ಸಂಸ್ಥೆಗಳು ತಮ್ಮ ಬಳಕೆದಾರರಿಗೆ ಭದ್ರತೆ ಮತ್ತು ವಿಶ್ವಾಸವನ್ನು ಹೆಚ್ಚಿಸಲು ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ.
ಫಿನ್‌ಟೆಕ್ ಸಂಸ್ಥೆಯಾದ ಮೊಬಿಕ್ವಿಕ್ ಪಾಕೆಟ್ ಯುಪಿಐನೊಂದಿಗೆ ವ್ಯವಹಾರಗಳನ್ನು ಸುರಕ್ಷಿತಗೊಳಿಸಲು ಬಳಕೆದಾರರಿಗೆ ನೆರವಾಗುವ ಸಲುವಾಗಿ ತನ್ನ ಯುಪಿಐ ಶಕ್ತಿಯನ್ನು ವರ್ಧಿಸುತ್ತಿದೆ. ಪಾಕೆಟ್ ಯುಪಿಐ ಎಂಬುದು ಅದರ ಡಿಜಿಟಲ್ ವಾಲೆಟ್‌ನ ಕಾರ್ಯಕ್ಷಮತೆಯನ್ನು ವರ್ಧಿಸುವ ಒಂದು ಶಕ್ತಿಶಾಲಿ ಅಂಶ. ಇದಕ್ಕೆ ಪಾಕೆಟ್ ಯುಪಿಐ ಬಳಕೆದಾರರು ಬ್ಯಾಂಕ್ ಖಾತೆಯನ್ನು ನೇರವಾಗಿ ಸಂಪರ್ಕಗೊಳಿಸುವ ಅಗತ್ಯವಿಲ್ಲ. ಎಲ್ಲಾ ಆಪರೇಟರುಗಳ QRs ಮತ್ತು UPI ಐಡಿ ಗಳಿಂದ ಯಾವುದೇ ಅಡೆತಡೆಯಿಲ್ಲದೆ ಪಾವತಿ ಮಾಡಲು ನೆರವಾಗುತ್ತದೆ.
ಇದನ್ನೂ ಓದಿ: Money Guide: ಹೆಲ್ತ್ ಇನ್ಶೂರೆನ್ಸ್ ಖರೀದಿಗೆ ಮುನ್ನ ಈ ಅಂಶ ನಿಮ್ಮ ಗಮನದಲ್ಲಿರಲಿ
ಸಾಮಾನ್ಯವಾಗಿ ಯುಪಿಐ ಪಾವತಿ ಮಾಡುವಾಗ ಬ್ಯಾಂಕ್ ಖಾತೆಗೆ ಪದೇಪದೇ ತೆರೆದುಕೊಳ್ಳುವ ಸಂದರ್ಭವನ್ನು ಕಡಿಮೆ ಮಾಡಿ ಪಾಕೆಟ್ ಯುಪಿಐ ಭದ್ರತೆಯನ್ನು ಹೆಚ್ಚಿಸುತ್ತದೆ. ಸಣ್ಣ ಹಾಗೂ ಪದೇ ಪದೇ ಮಾಡುವ ವೆಚ್ಚಗಳನ್ನು ಇದು ಕ್ರೋಢೀಕರಿಸಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸರಳಗೊಳಿಸುತ್ತದೆ. ಬ್ಯಾಂಕ್ ಡೌನ್‌ಟೈಮ್ ಇದ್ದಾಗಲೂ ಇದು 24/7 ಕೆಲಸ ಮಾಡುತ್ತದೆ.
ಪಾಕೆಟ್ ಯುಪಿಐ ಪ್ರಾರಂಭಿಸುವುದು ಹೇಗೆ?
ಮೊಬಿಕ್ವಿಕ್ ಆಪ್ ಮೇಲೆ ಸ್ಕ್ರೋಲ್ ಡೌನ್ ಮಾಡಿ ಪಾಕೆಟ್ ಯುಪಿಐ (Pocket UPI) ಆಯ್ಕೆ ಮಾಡಿಕೊಳ್ಳಿ. ಇಲ್ಲಿ ಐಡಿ ರಚಿಸಲು ಕೆವೈಸಿ (KYC) ಪೂರ್ಣಗೊಳಿಸಬೇಕಾಗುತ್ತದೆ
ಬಳಿಕ ಮೊಬಿಕ್ವಿಕ್ ವಾಲೆಟ್ ಲೋಡ್ ಮಾಡಿಕೊಂಡು ಯುಪಿಐ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸಿ ವಾಲೆಟ್‌ಗೆ ಬ್ಯಾಲೆನ್ಸ್ ಹಾಕಬಹುದು.
ಒಮ್ಮೆ ಬ್ಯಾಲೆನ್ಸ್ ಅನ್ನು ಟಾಪ್ ಅಪ್ ಮಾಡಿದ ಮೇಲೆ ಯಾವುದೇ QR ಕೋಡ್, ಕಾಂಟ್ಯಾಕ್ಟ್ ಮತ್ತು ಯುಪಿಐ ಐಡಿಗೆ ವಾಲೆಟ್ ಮೂಲಕ ಯುಪಿಐ ಪಾವತಿಗಳನ್ನು ಮಾಡಬಹುದಾಗಿದೆ.
ಪಾವತಿ ಮಾಡುವುದು ಹೇಗೆ?
ಸ್ಕ್ಯಾನ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಸ್ವೀಕರಿಸುವವರ QR ಕೋಡ್ ಸ್ಕ್ಯಾನ್ ಮಾಡಿ ಅಥವಾ ಕೆಳಗಿನ ಬಾರ್ ನಲ್ಲಿ ಹೆಸರು, ದೂರವಾಣಿ ಸಂಖ್ಯೆ,, ಯುಪಿಐ ಐಡಿಯನ್ನು ಟೈಪ್ ಮಾಡಿ, ಬೇಕಾದ ಮೊತ್ತ ನಮೂದಿಸಿ, ಡ್ರಾಪ್ ಡೌನ್ ಮೆನುವಿನಿಂದ ಪಾಕೆಟ್ ಯುಪಿಐ ಆಯ್ಕೆ ಮಾಡಿಕೊಂಡು ಕನ್ಫರ್ಮ್ ಪೇಮೆಂಟ್ ಮೇಲೆ ಟ್ಯಾಪ್ ಮಾಡಿದರೆ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಪಾವತಿ ಮಾಡಿದ ಬಳಿಕ ಮೊಬಿಕ್ವಿಕ್ ವಾಲೆಟ್‌ನಲ್ಲಿರುವ ಉಳಿದ ಬಾಕಿ ಮೊತ್ತದ ಜೊತೆಗೆ ಪಾವತಿ ಖಾತ್ರಿಗಾಗಿ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ.