Site icon Vistara News

Money Guide: ಆನ್‌ಲೈನ್‌ ಸಾಲ ಎಂಬ ಚಕ್ರವ್ಯೂಹಕ್ಕೆ ಸಿಲುಕದಿರಲು ಹೀಗೆ ಮಾಡಿ…

loan scam

loan scam

ಬೆಂಗಳೂರು: ಪ್ರಸ್ತುತ ಜೀವನ ವೆಚ್ಚ ಅಧಿಕವಾಗಿದ್ದು, ಮಧ್ಯಮ ವರ್ಗದವರು ಒಂದಲ್ಲ ಒಂದು ಕಾರಣಕ್ಕೆ ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಉದ್ಯೋಗ ನಷ್ಟ, ಮಕ್ಕಳ ಶೈಕ್ಷಣಿಕ ಉದ್ದೇಶ, ದುಬಾರಿ ವೈದ್ಯಕೀಯ ಖರ್ಚು ಹೀಗೆ ನಾನಾ ಕಾರಣಗಳಿಂದ ಸಾಲ ಪಡೆದುಕೊಳ್ಳಬೇಕಾಗುತ್ತದೆ. ಈ ಮಧ್ಯೆ ಬ್ಯಾಂಕ್‌ಗಳು ಆನ್‌ಲೈನ್‌ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸೌಲಭ್ಯಗಳನ್ನೂ ಪರಿಚಯಿಸಿದೆ. ಇದರಿಂದ ಬ್ಯಾಂಕ್‌ಗೆ ಅಲೆದಾಡುವುದು ತಪ್ಪುತ್ತದೆ. ಕೂತಲ್ಲಿಂದಲೇ ಮೊಬೈಲ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು ಈ ಹೆಸರಿನಲ್ಲಿ ಟೋಪಿ ಹಾಕಲು ಮುಂದಾಗುತ್ತಾರೆ. ಹೀಗಾಗಿ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ವಂಚನೆಯ ಕೂಪಕ್ಕೆ ಬೀಳದಿರಲು ಏನೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು? ಈ ಗೊಂದಲಕ್ಕೆ ಉತ್ತರ ನೀಡಲಿದೆ ಮನಿಗೈಡ್‌ (Money Guide).

ನಮ್ಮ ಪರಿಸ್ಥಿತಿಯನ್ನು, ಅನಿವಾರ್ಯತೆಯನ್ನು ದುರುಪಯೋಗಿಸಿಕೊಂಡು ವಂಚಕರು ದುಡ್ಡಿನ ಆಮಿಷ ಒಡ್ಡಿ ಬಳಿಕ ನಮ್ಮಿಂದಲೇ ದೋಚುತ್ತಾರೆ. ಶೀಘ್ರವಾಗಿ ಆನ್‌ಲೈನ್‌ನಲ್ಲೇ ಸಾಲ ನೀಡುತ್ತೇವೆ ಎಂದು ನಂಬಿಸಿ ಹೆಚ್ಚಿನ ಮುಂಗಡ ಶುಲ್ಕಗಳು, ಅವಾಸ್ತವಿಕ ಬಡ್ಡಿದರಗಳು ಮತ್ತು ಷರತ್ತುಗಳ ಹೆಸರಿನಲ್ಲಿ ಹಗಲು ದರೋಡೆಗೆ ಇಳಿಯುತ್ತಾರೆ. ಇದನ್ನು ಲೋನ್‌ ಸ್ಕ್ಯಾಮ್‌ ಎಂದು ಕರೆಯುತ್ತೇವೆ. ನೀವು ಬಯಸಿದ ಸಾಲವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯಬಹುದು ಎಂಬ ಸುಳ್ಳು ಭರವಸೆಯೊಂದಿಗೆ ವಂಚಕರು ನಿಮ್ಮನ್ನು ಸಂಪರ್ಕಿಸುತ್ತಾರೆ. ಬಳಿಕ ಒಂದೊಂದೇ ಆಮಿಷವೊಡ್ಡಿ ಸುಲಿಗೆಗೆ ಇಳಿಯುತ್ತಾರೆ.

ಮೋಸ ಹೇಗೆ?

ವಂಚಕರು ಸಾಲ ಪಾವತಿಸುವ ಮುನ್ನ ಭದ್ರತೆಗಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಮುಂಗಡವಾಗಿ ಕೇಳುತ್ತಾರೆ. ಅದನ್ನು ಎಂದಿಗೂ ಹಿಂದಿರುಗಿಸುವುದಿಲ್ಲ. ಜತೆಗೆ ಸಂಸ್ಕರಣಾ ಶುಲ್ಕ, ವಿಳಂಬ ಶುಲ್ಕ, ಬಡ್ಡಿ ಮತ್ತಿತರ ಕಾರಣಗಳ ಒಡ್ಡಿ ದೊಡ್ಡ ಮೊತ್ತವನ್ನೇ ಪೀಕಿಸುತ್ತಾರೆ. ಆಧುನಿಕ ತಂತ್ರಜ್ಞಾನದ ನೆರವು ಪಡೆದುಕೊಳ್ಳುವ ವಂಚಕರು ಎಸ್ಎಂಎಸ್, ಇಮೇಲ್ ಅಥವಾ ಫೋನ್ ಮೂಲಕ ಜನರನ್ನು ಸಂಪರ್ಕಿಸುತ್ತಾರೆ. ಹಣದ ಅಗತ್ಯವಿರುವವರು ಬೇಗನೇ ಈ ಕೂಪಕ್ಕೆ ಬೀಳುತ್ತಾರೆ. ಹಾಗಾದರೆ ಮೋಸ ಹೋಗದಂತಿರಲು ಏನು ಮಾಡಬೇಕು ಎನ್ನುವ ನಿಮ್ಮ ಆತಂಕ, ಗೊಂದಲಕ್ಕೆ ಇಲ್ಲಿದೆ ಉತ್ತರ.

ಇವನ್ನು ಗಮನಿಸಿ

ಈ ಮುಂಜಾಗ್ರತಾ ಕ್ರಮ ಕೈಗೊಳ್ಳಿ

ಇದನ್ನೂ ಓದಿ: Money Guide: ಕುಶಲಕರ್ಮಿಗಳಿಗೆ ನೆರವಾಗುವ ಪಿಎಂ ವಿಶ್ವಕರ್ಮ ಯೋಜನೆ; ಅರ್ಹತೆಗಳೇನು? ನೋಂದಣಿ ಹೇಗೆ?

Exit mobile version