Site icon Vistara News

Money Guide: ಸುಕನ್ಯಾ ಸಮೃದ್ಧಿ; ತಿಂಗಳಿಗೆ 10 ಸಾವಿರ ರೂ. ಹೂಡಿಕೆ ಮಾಡಿದರೆ 55 ಲಕ್ಷ ರೂ. ರಿಟರ್ನ್!

Money Guide

ಭಾರತದಲ್ಲಿ (india) ಹೆಣ್ಣು ಮಕ್ಕಳ (girls child) ಭವಿಷ್ಯವನ್ನು ಸುರಕ್ಷಿತವಾಗಿ (Money Guide) ಇರಿಸಲು ವಿನ್ಯಾಸಗೊಳಿಲಾದ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯೋಜನೆಯು ಹಲವು ಆಕರ್ಷಕ ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಪೋಷಕರಿಗೆ ಅವಕಾಶ ನೀಡುತ್ತದೆ. ಭಾರತದಾದ್ಯಂತ ಪ್ರತಿ ಮಗುವಿಗೆ ಒಂದು ಖಾತೆಯನ್ನು ಮಾತ್ರ ಅನುಮತಿಸಲಾಗಿದೆ.

ಪ್ರತಿ ಹಣಕಾಸು ವರ್ಷದಲ್ಲಿ ಗರಿಷ್ಠ 1.50 ಲಕ್ಷ ರೂ.ಗಳನ್ನು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ಇಡಬಹುದು. ಇದರಲ್ಲಿ ತೆರಿಗೆ ಪ್ರಯೋಜನಗಳೂ ಇವೆ. ಶೇ. 8.2 ಬಡ್ಡಿ ದರವನ್ನು ಇದು ಒಳಗೊಂಡಿದೆ. ತಿಂಗಳಿಗೆ 10,000 ರೂ ಉಳಿತಾಯ ಮಾಡಿದರೆ 15 ವರ್ಷಗಳಲ್ಲಿ ಎಷ್ಟು ಆರ್ಥಿಕ ಭದ್ರತೆ ಪಡೆಯಬಹುದು ಎಂಬುದನ್ನು ನೋಡೋಣ.

ಎಷ್ಟು ಮೊತ್ತ ಕೈ ಸೇರುತ್ತದೆ?

ಸುಕನ್ಯಾ ಸಮೃದ್ಧಿ ಯೋಜನೆ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು 10,000 ರೂ. ಠೇವಣಿ ಮಾಡುವುದರಿಂದ ಒಬ್ಬರು 15 ವರ್ಷಗಳಲ್ಲಿ ಒಟ್ಟು 18,00,000 ರೂ. ಹೂಡಿಕೆ ಮಾಡುತ್ತಾರೆ. ಶೇ. 8.2 ರ ಬಡ್ಡಿದರದಲ್ಲಿ ಮೆಚ್ಯೂರಿಟಿ ಮೊತ್ತವು 55,46,118 ರೂಪಾಯಿಗಳಾಗುತ್ತದೆ. ಇದರಲ್ಲಿ ಹೂಡಿಕೆಯ ಅವಧಿಯ ಬಡ್ಡಿ 37,46,118 ರೂ. ಗಳಾಗಿರುತ್ತದೆ. ಹೆಣ್ಣು ಮಕ್ಕಳು‌ 18 ವರ್ಷ ತುಂಬುವವರೆಗೆ ಮಾತ್ರ ಹಣ ಹೂಡಿಕೆ ಮಾಡಲು ಅವಕಾಶ ಇರುತ್ತದೆ.

ಎಷ್ಟು ಹೂಡಿಕೆ ಮಾಡಬಹುದು?

ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಆರ್ಥಿಕ ವರ್ಷ ಕನಿಷ್ಠ 250 ರೂ. ನಿಂದ ಗರಿಷ್ಠ 1,50,000 ರೂ. ವರೆಗೆ ಠೇವಣಿ ಮಾಡಬಹುದು. ಒಂದು ತಿಂಗಳು ಅಥವಾ ಆರ್ಥಿಕ ವರ್ಷದಲ್ಲಿ ಒಂದೇ ಬಾರಿಗೆ ಠೇವಣಿಯನ್ನು ಮಾಡಬಹುದು.


ಹಿಂಪಡೆಯುವ ನಿಯಮ

ಭಾರತೀಯ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ಪ್ರತಿ ಹೆಣ್ಣು ಮಗುವಿಗೆ 18 ವರ್ಷಗಳು ತಲುಪುವವರೆಗೆ ಪೋಷಕರು ನಿರ್ವಹಿಸುತ್ತಾರೆ. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಅನಂತರ ಹಿಂಪಡೆಯಲು ಅನುಮತಿ ಇದೆ.

ಹಿಂಪಡೆಯುವಿಕೆಯನ್ನು ಶೈಕ್ಷಣಿಕ ಅಥವಾ ಮದುವೆಯ ವೆಚ್ಚಗಳನ್ನು ಅವಲಂಬಿಸಿ ಐದು ವರ್ಷಗಳವರೆಗೆ ಒಂದನ್ನು ಮೀರದಂತೆ ಒಟ್ಟು ಮೊತ್ತ ಅಥವಾ ಕಂತುಗಳಲ್ಲಿ ಪಡೆಯಬಹುದು.

ಸುಕನ್ಯಾ ಸಮೃದ್ಧಿ ಖಾತೆಯನ್ನು ಅಕಾಲಿಕವಾಗಿ ಮುಚ್ಚುವುದು ಐದು ವರ್ಷಗಳ ಅನಂತರ ಖಾತೆದಾರರ ಮರಣ ಅಥವಾ ತೀವ್ರ ಸಹಾನುಭೂತಿಯಂತಹ ಕೆಲವು ಷರತ್ತುಗಳ ಅಡಿಯಲ್ಲಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಅನುಮತಿ ಇದೆ.

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್; ಯಾವ ಆದಾಯದವರಿಗೆ ಯಾವ ಫಾರ್ಮ್?

ಖಾತೆ ತೆರೆಯಲು ಮತ್ತು ಮುಚ್ಚಲು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಖಾತೆ ತೆರೆಯುವ ದಿನಾಂಕದಿಂದ 21 ವರ್ಷಗಳ ಅನಂತರ ಅಥವಾ 18 ವರ್ಷಗಳನ್ನು ತಲುಪಿದ ಬಳಿಕ ಹುಡುಗಿಯ ಮದುವೆಯ ಸಮಯದಲ್ಲಿ ಮುಕ್ತಾಯಗೊಳ್ಳುತ್ತದೆ.

Exit mobile version