Site icon Vistara News

Money Guide: ಎಫ್‌ಡಿ ಯಾವ ಬ್ಯಾಂಕ್‌ನಲ್ಲಿಟ್ಟರೆ ಉತ್ತಮ? ಬಡ್ಡಿ ದರ ಎಲ್ಲಿ, ಎಷ್ಟಿದೆ?

Money Guide

ಕಡಿಮೆ ಅಪಾಯ ಹೊಂದಿರುವ ಸ್ಥಿರ (fixed deposit), ನಿಗದಿತ ಅವಧಿಯ ಠೇವಣಿಯಲ್ಲಿ (term deposit) ಹೂಡಿಕೆ (investment) ಮಾಡಲು (Money Guide) ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಇದರಲ್ಲಿ ಬಡ್ಡಿ (interest rates) ಅಷ್ಟಾಗಿ ಸಿಗದೇ ಇದ್ದರೂ ನಾವು ಹೂಡಿಕೆ ಮಾಡಿರುವ ಹಣ ಮಾತ್ರ ಸುರಕ್ಷಿತವಾಗಿ ನಿಗದಿತ ಸಮಯದಲ್ಲಿ ನಮ್ಮ ಕೈ ಸೇರುತ್ತದೆ.

ತಮ್ಮಲ್ಲಿರುವ ಹಣವನ್ನು ಹೂಡಿಕೆದಾರರು ಪೂರ್ವನಿರ್ಧರಿತ ಅವಧಿಗೆ ಸುರಕ್ಷಿತವಾಗಿ ಇಡಲು ಮತ್ತು ಆಯ್ಕೆ ಮಾಡಿದ ಅವಧಿಯ ಉದ್ದಕ್ಕೂ ಅಥವಾ ಮುಕ್ತಾಯದ ಅನಂತರ ನಿಯಮಿತ ಮಧ್ಯಂತರಗಳಲ್ಲಿ ಸ್ಥಿರ ಬಡ್ಡಿ ಪಾವತಿಗಳನ್ನು ಪಡೆಯಲು ಸ್ಥಿರ ಠೇವಣಿ ಅತ್ಯುತ್ತಮ ಆಯ್ಕೆಯಾಗಿದೆ.

ಸ್ಥಿರ ಠೇವಣಿಗೆ ವಿವಿಧ ಬ್ಯಾಂಕ್‌ಗಳು ಶೇ. 3ರಿಂದ 7.50ರಷ್ಟು ಬಡ್ಡಿ ದರಗಳನ್ನು ಪಾವತಿ ಮಾಡುತ್ತದೆ. ಇದು ಹೂಡಿಕೆಯ ಅವಧಿಯನ್ನು ಅವಲಂಬಿಸಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ. 0.5ರಷ್ಟು ಬಡ್ಡಿ ದರವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ:Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವ ಮೊದಲು ವಿವಿಧ ಬ್ಯಾಂಕ್‌ಗಳು ನೀಡುವ ಸ್ಥಿರ ಠೇವಣಿ (ಎಫ್‌ಡಿ) ದರಗಳನ್ನು ಹೋಲಿಸುವುದು ಸೂಕ್ತ. ಇದಕ್ಕಾಗಿ ಎಫ್‌ಡಿಗಳನ್ನು ಒದಗಿಸುವ ನಾಲ್ಕು ಬ್ಯಾಂಕ್‌ಗಳ ಕುರಿತು ಮಾಹಿತಿ ಇಲ್ಲಿದೆ.


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ (ಎಫ್‌ಡಿ) ಎರಡು ಕೋಟಿಗಿಂತ ಕಡಿಮೆ ಠೇವಣಿ ಹೂಡಿಕೆ ಮಾಡುವ ಗ್ರಾಹಕರಿಗೆ ಶೇ. 3ರಿಂದ 7ರವರೆಗೆ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರು ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಪಡೆಯುತ್ತಾರೆ. ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಎಫ್ ಡಿಗಳಿಗೆ ಬ್ಯಾಂಕ್ ಶೇ. 6.80ರಷ್ಟು ಬಡ್ಡಿದರವನ್ನು ಒದಗಿಸುತ್ತದೆ. ಇದಲ್ಲದೆ, ಎರಡು ವರ್ಷಗಳಿಂದ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯವರೆಗೆ ಠೇವಣಿ ಮಾಡುವವರಿಗೆ ಬ್ಯಾಂಕ್ ಶೇ. 7ರಷ್ಟು ಬಡ್ಡಿ ದರವನ್ನು ನೀಡುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)

2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 3.50ರಿಂದ 7.50ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ. ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ಸ್ಥಿರ ಠೇವಣಿಗಳಿಗೆ, ಸಾಮಾನ್ಯ ಹೂಡಿಕೆದಾರರಿಗೆ ಬಡ್ಡಿ ದರವು ಶೇ. 6.75ರಷ್ಟು ಇರುತ್ತದೆ. ಆದರೆ ಹಿರಿಯ ನಾಗರಿಕರು ಒಂದು ವರ್ಷದ ಯೋಜನೆಯಲ್ಲಿ ಶೇ. 7.25ರಷ್ಟು ಬಡ್ಡಿ ದರವನ್ನು ಪಡೆಯುತ್ತಾರೆ.

ಐಸಿಐಸಿಐ ಬ್ಯಾಂಕ್ (ICICI)

5 ಕೋಟಿಗಿಂತ ಕಡಿಮೆ ಠೇವಣಿ ಮಾಡುವ ಗ್ರಾಹಕರಿಗೆ ಐಸಿಐಸಿಐ ಶೇ. 3ರಿಂದ 7.50ರಷ್ಟು ಬಡ್ಡಿ ದರಗಳನ್ನು ಒದಗಿಸುತ್ತದೆ. ಹಿರಿಯ ನಾಗರಿಕರು ಹೆಚ್ಚುವರಿಯಾಗಿ ಶೇ. 0.5ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. ದರಗಳು 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳಲ್ಲಿ ಶೇ. 3.50 ರಿಂದ 7.50 ರವರೆಗೆ ಹೆಚ್ಚಳವಾಗುತ್ತದೆ. ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಶೇ. 6.70 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್ (HDFC)

ಹೆಚ್‌ಡಿಎಫ್‌ಸಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಒಂದು ವರ್ಷದ ಸ್ಥಿರ ಠೇವಣಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ನಿಯಮಿತ ಹೂಡಿಕೆದಾರರು ಶೇ. 6.60 ರಷ್ಟು ಬಡ್ಡಿ ದರವನ್ನು ಪಡೆಯಬಹುದು. ಆದರೆ ಹಿರಿಯ ನಾಗರಿಕರು ಅಂತಹ ಠೇವಣಿಗಳ ಮೇಲೆ ಶೇ. 7.10 ರಷ್ಟು ಬಡ್ಡಿ ದರವನ್ನು ಪಡೆಯುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ. 3ರಿಂದ 7.75 ರಷ್ಟು ಬಡ್ಡಿದರಗಳನ್ನು ಒದಗಿಸುತ್ತದೆ. ಇದು ಮುಕ್ತಾಯದ ಅವಧಿಗೆ ಅನುಗುಣವಾಗಿ ಬದಲಾಗುತ್ತದೆ.

Exit mobile version