Site icon Vistara News

Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?

Money Guide

Money Guide

ಬೆಂಗಳೂರು: ವಿದೇಶ ಪ್ರವಾಸ ಅಂದುಕೊಂಡಷ್ಟು ಸುಲಭ ಅಲ್ಲ. ಪಾಸ್‌ಪೋರ್ಟ್‌, ವೀಸಾ ಹೊಂದಿಸುವುದರಿಂದ ಹಿಡಿದು ಟಿಕೆಟ್‌ ಬುಕ್‌ ಮಾಡುವುದು, ಅಲ್ಲಿನ ಪ್ರವಾಸ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕುವುದು, ಉಳಿದುಕೊಳ್ಳುವ ವ್ಯವಸ್ಥೆ, ಶಾಪಿಂಗ್‌ ಮಾಡುವ ರೀತಿ ಹೀಗೆ ಎಲ್ಲ ವಿಚಾರದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಸೂಕ್ತ ಪ್ಲಾನ್‌ ಮಾಡಬೇಕಾಗುತ್ತದೆ. ಜತೆಗೆ ಅಲ್ಲಿ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡುವುದು ಎನ್ನುವ ವಿಚಾರವೂ ಮುಖ್ಯವಾಗುತ್ತದೆ. ತೆರಿಗೆಯನ್ನು ತಪ್ಪಿಸಲು ವಿದೇಶಿ ವಿನಿಮಯ ಕಾರ್ಡ್‌ (forex cards)ಗಳನ್ನು ಬಳಸಬೇಕೆ ಅಥವಾ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಬೇಕೆ ಎನ್ನುವ ಗೊಂದಲ ಕಾಡುವುದು ಸಹಜ. ಈ ಪ್ರಶ್ನೆಗೆ ಇಂದಿನ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ಕ್ರೆಡಿಟ್‌ ಕಾರ್ಡ್‌

ಗ್ರಾಹಕರು ಮೊದಲು ಸರಕು ಅಥವಾ ಸೇವೆಗಳನ್ನು ಖರೀದಿಸಿ ಬಳಿಕ ಪಾವತಿಸುವ ವ್ಯವಸ್ಥೆ ಕ್ರೆಡಿಟ್‌ ಕಾರ್ಡ್‌ನಲ್ಲಿದೆ. ಈ ಕಾರ್ಡ್ ಮೂಲಕ ನೀವು ನಿಮ್ಮ ಅಗತ್ಯಗಳನ್ನು ಸೀಮಿತ ಪ್ರಮಾಣದಲ್ಲಿ ಪೂರೈಸಿಕೊಳ್ಳಬಹುದು. ತೀರ ಬೇಕೆಂದಾಗ ನೀವು ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಕೂಡ ಪಡೆಯಬಹುದು. ಈ ರೀತಿಯಾಗಿ ಕ್ರೆಡಿಟ್ ಕಾರ್ಡ್ ಹೊಂದಿರುವವರು ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೂ ಯಾವುದೇ ತೊಂದರೆಯಿಲ್ಲದೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಕಡಿಮೆ ಬ್ಯಾಂಕ್ ಬ್ಯಾಲೆನ್ಸ್‌ನ ಸಂದರ್ಭದಲ್ಲಿಯೂ ಸಹ ಖರೀದಿ ಮಾಡಲು ಕ್ರೆಡಿಟ್ ಕಾರ್ಡ್ ನೆರವಾಗುತ್ತದೆ. ಇಲ್ಲಿ ನೀವು ಅನೇಕ ಬಡ್ಡಿ ರಹಿತ ಕ್ರೆಡಿಟ್‌ಗಳ ಪ್ರಯೋಜನವನ್ನು ಸಹ ಪಡೆಯಬಹುದು. ಕ್ರೆಡಿಟ್ ಕಾರ್ಡ್‌ಗಳನ್ನು ಆನ್‌ಲೈನ್ ಶಾಪಿಂಗ್, ಶಾಪಿಂಗ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಪಾವತಿ ಮಾಡಲು ಬಳಸಬಹುದು.

ಫೊರೆಕ್ಸ್‌ ಕಾರ್ಡ್‌

ಫೊರೆಕ್ಸ್‌ ಕಾರ್ಡ್ ಒಂದು ರೀತಿಯ ಪ್ರಿಪೇಯ್ಡ್ ಟ್ರಾವೆಲ್ ಕಾರ್ಡ್ ಆಗಿದ್ದು, ಇದು ವಿದೇಶಿ ಹಣವನ್ನು ಲೋಡ್ ಮಾಡಿ ಅದನ್ನು ಖರ್ಚು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಕಾರ್ಡ್ ಅನ್ನು ಬ್ಯಾಂಕುಗಳು ನೀಡುತ್ತವೆ. ನೀವು ಇದರಲ್ಲಿ ನಿಮ್ಮ ಆಯ್ಕೆಯ ಕರೆನ್ಸಿಯನ್ನು ಮುಂಚಿತವಾಗಿಯೇ ಲೋಡ್ ಮಾಡಬಹುದು ಮತ್ತು ನೀವು ಭೇಟಿ ನೀಡುವ ವಿದೇಶಿ ರಾಷ್ಟ್ರದಲ್ಲಿ ನಗದು ಹಿಂಪಡೆಯಲು, ಶಾಪಿಂಗ್ ಮಾಡಲು ಬಳಸಬಹುದು. ವಿದೇಶದಲ್ಲಿ ಅಧ್ಯಯನ ಮಾಡುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಡ್ ಬಳಸುತ್ತಾರೆ.

ಯಾವುದು ಉತ್ತಮ?

ಒಟ್ಟಿನಲ್ಲಿ ವಿದೇಶ ಪ್ರವಾಸದ ಸಂದರ್ಭದಲ್ಲಿ ಕ್ರೆಡಿಟ್‌ ಕಾರ್ಡ್‌ಗಿಂತ ಫೊರೆಕ್ಸ್‌ ಕಾರ್ಡ್‌ ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ: Money Guide: ಕ್ರೆಡಿಟ್‌ ಕಾರ್ಡ್‌ ಹೊಂದಿದ್ದೀರಾ? ವಂಚಕರ ಬಲೆಗೆ ಬೀಳದಿರಲು ಈ ಟಿಪ್ಸ್‌ ಫಾಲೋ ಮಾಡಿ

Exit mobile version