ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯ ಒಳ ಹೊರಗುಗಳನ್ನು (Money plus ) ಅರಿತು ಹೂಡಿಕೆ ಮಾಡುವುದು ಅವಶ್ಯಕ. ಇದಕ್ಕೊಂದು ವೈಜ್ಞಾನಿಕ ವಿಧಾನವೂ ಇದೆ. ಏನದು ಎಂಬುದನ್ನು ಸರಳವಾಗಿ, ಅರ್ಥಪೂರ್ಣವಾಗಿ ವಿಸ್ತಾರ ಮನಿಪ್ಲಸ್ ವಿಡಿಯೊದಲ್ಲಿ ವಿಸ್ತಾರ ನ್ಯೂಸ್ ಎಕ್ಸಿಕ್ಯುಟಿವ್ ಎಡಿಟರ್ ಎಂ.ಎಸ್ ಶರತ್ ಅವರು ತಿಳಿಸಿದ್ದಾರೆ.
ಒಬ್ಬ ಸ್ಟಾಕ್ ಮಾರ್ಕೆಟ್‌ನಲ್ಲಿ ಹೇಗೆ ತನ್ನ ಜರ್ನಿಯನ್ನು ಆರಂಭಿಸಬಹುದು ಎಂಬುದನ್ನು ನನ್ನ ಉದಾಹರಣೆ ನೀಡುತ್ತೇನೆ. ಆರಂಭದಲ್ಲಿ ಸ್ಟಾಕ್ ಮಾರ್ಕೆಟ್‌ನಲ್ಲಿ ಭಾರಿ ರಿಸ್ಕ್ ಇದ್ದು, ದುಡ್ಡು ಹಾಕಿದರೆ ಕಳೆದುಕೊಳ್ಳಬಹುದು ಎಂಬ ಭೀತಿ ಇತ್ತು. ಮ್ಯೂಚುವಲ್ ಫಂಡ್‌ಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್, ಷೇರುಗಳಲ್ಲಿ ಇನ್ವೆಸ್ಟ್ ಮಾಡುತ್ತದೆ. ಆರಂಭದಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ 500 ರೂ. ಹಾಕಿದೆ. ಅದು 515 ಆಯಿತು. ಬಳಿಕ 500 ರೂ.ಗೆ ಇಳಿಯಿತು. ಮತ್ತೆ ಎಂಟು ರೂ. ಇಳಿಯಿತು.
ಆಮೇಲೆ ಲಾರ್ಜ್ ಕ್ಯಾಪ್. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕೆಟಗರಿಯ ಮ್ಯೂಚುವಲ್ ಫಂಡ್‌ಗಳಲ್ಲಿ ಎರಡೆರಡು ರೂ. ಹೂಡಿಕೆ ಮಾಡಿದೆ. ಒಮ್ಮೆ ಲಾರ್ಜ್ ಕ್ಯಾಪ್ ಮತ್ತೊಮ್ಮೆ ಮಿಡ್ ಕ್ಯಾಪ್, ಮತ್ತೊಮ್ಮೆ ಸ್ಮಾಲ್ ಕ್ಯಾಪ್ ಏರುತ್ತಿತ್ತು. ಆಗ ಒಂದು ವಿಷಯ ಗೊತ್ತಾಯಿತು. ಲಾರ್ಜ್ ಕ್ಯಾಪ್ ನಲ್ಲಿ ಹೆಚ್ಚು ಏರಿಳ ಇರಲ್ಲ. ಮಿಡ್ ಕ್ಯಾಪಲ್ಲಿ ಲಾರ್ಜ್ ಕ್ಯಾಪಿಗಿಂತ ಹೆಚ್ಚು ಲಾಭದಾಯು ಎಂಬುದು ಗೊತ್ತಾಯಿತು. ಮಿಡ್ ಕ್ಯಾಪಿಗಿಂತಲೂ ಸ್ಮಾಲ್ ಕ್ಯಾಪ್ ಲಾಭದಾಯಕ, ಆದರೂ ನಷ್ಟ ಸಾಧ್ಯತೆ ಹೆಚ್ಚು. ಇದು ಷೇರು ಮಾರುಕಟ್ಟೆಗೆ ಪ್ರವೇಶಿಸುವುದಕ್ಕಿಂತ ಮೊದಲಿನ ಹೆಜ್ಜೆ. ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದರ ಲಾಭ ಏನೆಂದರೆ, ನಿಮ್ಮ ಪರವಾಗಿ ಫಂಡ್ ಮ್ಯಾನೇಜರ್ ಹೂಡಿಕೆಯನ್ನು ನಿರ್ವಹಿಸುತ್ತಾರೆ.
ಆರಂಭದಲ್ಲಿ ಎರಡು ಸಾವಿರ ರೂ.ಗೆ ಒಂದಷ್ಟು ಷೇರುಗಳನ್ನು ತೆಗೆದುಕೊಂಡೆ. ಕೆಲವು ಷೇರುಗಳು ಲಾಭದಲ್ಲಿ ಇದ್ದರೆ ಕೆಲವು ನಷ್ಟದಲ್ಲಿ ಇರುತ್ತಿತ್ತು. ಕೋವಿಡ್, ರಷ್ಯಾ-ಉಕ್ರೇನ್ ಬಿಕ್ಕಟ್ಟು ಉಂಟಾದಾಗ ಮಾರ್ಕೆಟ್ ಬಿದ್ದಿತ್ತು. ಅಂಥ ವಿಪತ್ತಿನ ಸಂದರ್ಭ ಜನ ಭೀತರಾಗಿ ಷೇರುಗಳನ್ನು ಮಾರಾಟ ಮಾಡುತ್ತಾರೆ. ಅದೇ ಅವರು ಮಾಡುವ ತಪ್ಪು.
ನಿಮ್ಮ ಮನೆಯಲ್ಲಿ ನೀವು ಅತಿ ಹೆಚ್ಚು ಬಳಕೆ ಮಾಡುವ ವಸ್ತುಗಳ ಉತ್ಪಾದಕ ಕಂಪನಿಗಳು ಷೇರುಗಳು ವಿನಿಯ ಕೇಂದ್ರದಲ್ಲಿ ದಾಖಲಾಗಿವೆ, ನಿಮ್ಮ ಮನೆಯಲ್ಲಿ ಇರುವ ಪದಾರ್ಥಗಳನ್ನು ಗಮನಿಸಿ, ಬ್ರಿಟಾನಿಯಾ ಬಿಸ್ಕತ್, ಟಿಟಿಕೆ ಪ್ರೆಸ್ಟೀಜ್, ಬಾಡಾ ಚಪ್ಪಲಿ ಲಿಸ್ಟೆಡ್ ಕಂಪನಿ ಮೊದಲಾದ ಕಂಪನಿಗಳು ಷೇರು ವಿನಿಮಯ ಕಂದ್ರದಲ್ಲಿ ದಾಖಲಾಗಿವೆ. ಕಂಪನಿಗಳ ಬಗ್ಗೆ ಸಾಕಷ್ಟು ತಿಳಿದುಕೊಂಡು ಮನ್ನಡಿ ಇಡಬೇಕು. ಸಂಪತ್ತಿನ ಗಳಿಕೆಗೆ ನಿಧಾನವಾದ ಹೆಜ್ಜೆ ಸ್ಟಾಕ್ ಮಾರ್ಕೆಟ್ ತಜ್ಞ ವಾರೆನ್ ಬಫೆಟ್ ಒಂದು ಮಾತನ್ನು ಹೇಳುತ್ತಾರೆ-ನಿಮಗೆ ಗೊತ್ತಿಲ್ಲದ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡದಿರಿ.